ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿ ಆಸ್ತಿ ಹೆಚ್ಚಾಗಿದ್ದು ಹೇಗೆ? ಅವರೇ ನೀಡಿದ್ದಾರೆ ಉತ್ತರ

By Manjunatha
|
Google Oneindia Kannada News

Recommended Video

ತಮ್ಮ ಆಸ್ತಿ 5 ವರ್ಷದಲ್ಲಿ ಹೇಗೆ ಹೆಚ್ಚಾಯ್ತು ಅಂತ ಡಿ ಕೆ ಶಿವಕುಮಾರ್ ಹೇಳ್ತಾರೆ| Oneindia Kannada

ಎಲ್ಲಡೆ ಅಭ್ಯರ್ಥಿಗಳು ಚುನಾವಣೆಗಾಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ, ರಾಜ್ಯದ ಪ್ರಮುಖ ನಾಯಕರುಗಳೆಂದು ಗುರುತಿಸಿಕೊಂಡವರ ಚುನಾವಣಾ ನಾಮಪತ್ರದ ಮೇಲೆ ಎಲ್ಲ ಸುದ್ದಿ ಮಾಧ್ಯಮದವರ ಕಣ್ಣು ಬಿದ್ದಿದೆ ಇದಕ್ಕೆ ಕಾರಣ ಅವರ ಆಸ್ತಿ ವಿವರಗಳು.

ಮೊನ್ನೆ (ಏಪ್ರಿಲ್ 19)ರಂದು ಕನಕಪುರ ಕ್ಷೇತ್ರದಿಂದ ಡಿಕೆ ಶಿವಕುಮಾರ್ ನಾಮಪತ್ರ ಸಲ್ಲಿಸಿದರು, ಅವರ ನಾಮಪತ್ರ ಸಲ್ಲಿಕೆಗಿಂತಲೂ ಹೆಚ್ಚು ಸುದ್ದಿಯಾಗಿದ್ದು ಅವರ ಆಸ್ತಿ ವಿವರ. ಡಿಕೆ ಶಿವಕುಮಾರ್ ಅವರು ಕಳೆದ ಚುನಾವಣೆಯಲ್ಲಿ ಸಲ್ಲಿಸಿದ್ದ ಆಸ್ತಿ ವಿವರ ಮತ್ತು ಈ ಬಾರಿ ಸಲ್ಲಿಸಿರುವ ಆಸ್ತಿ ವಿವರಕ್ಕೆ ತಾಳೆ ಹಾಕಿ ಎಷ್ಟು ಹೆಚ್ಚಾಗಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಡಿಕೆ ಶಿವಕುಮಾರ್ ಆಸ್ತಿ ವಿವರ ಬಹಿರಂಗ, 600 ಕೋಟಿ ಪ್ಲಸ್! ಡಿಕೆ ಶಿವಕುಮಾರ್ ಆಸ್ತಿ ವಿವರ ಬಹಿರಂಗ, 600 ಕೋಟಿ ಪ್ಲಸ್!

2013ರಲ್ಲಿ ಡಿ.ಕೆ.ಶಿವಕುಮಾರ್ ಅವರು ಚುನಾವಣೆಗೆ ಸ್ಪರ್ಧಿಸಿದಾಗ ಸಲ್ಲಿಸಿದ್ದ ನಾಮಪತ್ರದಲ್ಲಿ ಅವರ ಒಟ್ಟು ಆಸ್ತಿಯ ಮೌಲ್ಯ 251 ಕೋಟಿ ಇತ್ತು. ಈ ಬಾರಿ ಅವರ ಅವರು ಸಲ್ಲಿಸಿರುವ ಆಸ್ತಿ ವಿವರದಲ್ಲಿ ಅವರ ಸ್ಥಿರಾಸ್ತಿಯ ಆಸ್ತಿಯ ಮೌಲ್ಯ 548 ಕೋಟಿ ರೂಪಾಯಿ ಎಂದು ನಮೂದಿಸಲಾಗಿದೆ. ಐದು ವರ್ಷದಲ್ಲಿ ಅವರ ಆಸ್ತಿ ಎರಡು ಪಟ್ಟು ಹೆಚ್ಚಾಗಿರುವುದು ಚರ್ಚೆಗೆ ಕಾರಣವಾಗಿದೆ.

DK Shivakumar answerd how his assets double in 5 years

ಐದು ವರ್ಷದಲ್ಲಿ ಡಿಕೆ ಶಿವಕುಮಾರ್ ಅವರ ಆಸ್ತಿ ಎಷ್ಟು ಪಟ್ಟು ಹೆಚ್ಚಳವಾಗಿದೆ ಎಂಬ ಲೆಕ್ಕಾಚಾರಗಳು ಎಲ್ಲೆಡೆ ನಡೆಯುತ್ತಿದೆ, ಬಿಜೆಪಿ ಕೆಲವು ಮುಖಂಡರು ಈ ಬಗ್ಗೆ ಈಗಾಗಲೇ ಹೇಳಿಕೆಗಳನ್ನೂ ನೀಡಿದ್ದಾರೆ ತನಿಖೆಗೆ ಸಹ ಒತ್ತಾಯಿಸಿದ್ದಾರೆ.

ಬೊಮ್ಮನಹಳ್ಳಿಯ ಕೋಟ್ಯಧಿಪತಿ ಅಭ್ಯರ್ಥಿ ಚಾಯ್ ವಾಲ ಅನಿಲ್ಬೊಮ್ಮನಹಳ್ಳಿಯ ಕೋಟ್ಯಧಿಪತಿ ಅಭ್ಯರ್ಥಿ ಚಾಯ್ ವಾಲ ಅನಿಲ್

ಈ ಬಗ್ಗೆ ಡಿಕೆ ಶಿವಕುಮಾರ್ ಅವರೇ ಉತ್ತರ ನೀಡಿದ್ದು, 'ನನ್ನ ಆಸ್ತಿಯಲ್ಲಿ ಹೆಚ್ಚಳ ಆಗಿಲ್ಲ, ಅಥವಾ ನಾನು ಯಾವುದೇ ಹೊಸ ವ್ಯವಹಾರವನ್ನೋ, ವ್ಯಾಪಾರವನ್ನೋ ಪ್ರಾರಂಭ ಮಾಡಿಲ್ಲ, ಆದರೆ ಚುನಾವಣಾ ಆಯೋಗವೇ ಕೇಳಿರುವ ಪ್ರಕಾರ ನನ್ನ ಆಸ್ತಿಯ ಇಂದಿನ ಮಾರುಕಟ್ಟೆ ದರ ನಮೂದಿಸಿದ್ದೇನೆ ಹಾಗಾಗಿ ಕಳೆದ ಬಾರಿಗಿಂತಲೂ ಆಸ್ತಿ ಮೌಲ್ಯದಲ್ಲಿ ಹೆಚ್ಚಳವಾಗಿದೆ' ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಡಿಕೆ ಶಿವಕುಮಾರ್ ಅವರು, 'ಐದು ವರ್ಷದಲ್ಲಿ ಯಾವ ರೀತಿ ಎಲ್ಲಾ ದರಗಳ ಏರಿಕೆ ಆಗಿದೆ ಎಂದು ಎಲ್ಲರಿಗೂ ಅರಿವಿದೆ, ಯಾರು ಬೇಕಾದರೂ ಈ ಬಗ್ಗೆ ತನಿಖೆ ಮಾಡಬಹದು' ಎಂದರು.

'ನನ್ನ ಆಸ್ತಿಯ ಬಗ್ಗೆ ಬಿಜೆಪಿ ತನಿಖೆ ನಡೆಸುವುದಿದ್ದರೆ ನನ್ನದೇನೂ ಅಭ್ಯಂತರವಿಲ್ಲ, ಅವರ ತನಿಖೆಯನ್ನು ನಾನು ಸ್ವಾಗತಿಸುತ್ತೇನೆ, ಈಗಾಗಲೇ ಕೆಲವು ತಿಂಗಳಿಂದ ಅವರು ನನಗೆ ವೈಯಕ್ತಿಕವಾಗಿ ತೊಂದರೆ ಕೊಡಲು ಪ್ರಾರಂಭ ಮಾಡಿದ್ದಾರೆ' ಎಂದಿದ್ದಾರೆ.

English summary
As per Minister DK Shivakumar's Nomination documents his asset rise double in 5 years. question has been raised about this. Now DK Shivakumar gave answer that how his asset double in 5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X