ಎಲ್ಲ ವರ್ಗದವರ ಧ್ವನಿಯಾಗಿ ನಿಲ್ಲುವ ನಾಡಾಗಲಿ-ಪಾಲಿಕೆ ಸದಸ್ಯ ಆರ್.ವಿ. ಯುವರಾಜ್
Recommended Video

ಕರ್ನಾಟಕ ಎಲ್ಲ ವರ್ಗದ ಜನರ ಧ್ವನಿಯಾಗಬೇಕು ಎನ್ನುವುದು ತಮ್ಮ ಕನಸು ಎನ್ನುತ್ತಾರೆ ಯುವ ಮುಖಂಡ ಆರ್.ವಿ. ಯುವರಾಜ್.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸುಧಾಮನಗರ ಕಾರ್ಪೊರೇಟರ್ ಆಗಿರುವ ಆರ್.ವಿ. ಯುವರಾಜ್, ಚಿಕ್ಕಪೇಟೆ ಶಾಸಕ, ಕಾಂಗ್ರೆಸ್‌ನ ಆರ್.ವಿ. ದೇವರಾಜ್ ಅವರ ಮಗ.
ಕರ್ನಾಟಕವನ್ನು ಹಸಿವುಮುಕ್ತವನ್ನಾಗಿಸಬೇಕು ಎಂಬುದು ತಮ್ಮ ಮೊದಲ ಕನಸು ಎಂದು ಅವರು ಕನಸು ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿನ ಬಡವರಿಗೆ ಹೊಟ್ಟೆತುಂಬ ಊಟ ಸಿಗುವಂತಾದರೆ ಸಮೃದ್ಧಿ ಸಾಧ್ಯ ಎನ್ನುವುದು ಅವರ ಅಭಿಪ್ರಾಯ.

ಜತೆಗೆ ಸಮಾಜದ ಏಳಿಗೆಯ ಕನಸನ್ನು ಸಹ ಅವರು ಹಂಚಿಕೊಂಡಿದ್ದಾರೆ. ದೀನದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳ ಪರವಾದ ಧ್ವನಿಯಾಗಿ ಕನ್ನಡ ನಾಡು ಬೆಳೆದುನಿಲ್ಲಬೇಕು. ಸಮಾಜದ ತಳವರ್ಗದ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿದ್ದಾರೆ.
ಈ ಎಲ್ಲ ಕನಸುಗಳು ಸಾಕಾರವಾಗಬೇಕಾದರೆ ಅದನ್ನು ಈಡೇರಿಸುವಂತಹ ನಾಯಕರು ನಮಗೆ ಮುಂದಿನ ದಿನಗಳಲ್ಲಿ ಬೇಕು ಎನ್ನುತ್ತಾರೆ ಅವರು. ಈಗಿನ ಕಾಂಗ್ರೆಸ್ ಸರ್ಕಾರ ಅದಕ್ಕೆ ಪೂರಕವಾಗಿ ಕೆಲಸ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಎಲ್ಲ ಗುರಿಗಳನ್ನು ಈಡೇರಿಸುವ ಪ್ರಯತ್ನ ಮಾಡಿದ್ದಾರೆ ಎನ್ನುವ ಯುವರಾಜ್ ಅವರು ತಮ್ಮ ತಂದೆ, ಶಾಸಕ ಆರ್.ವಿ. ದೇವರಾಜ್ ಅವರು ಸಹ ಎಲ್ಲ ವರ್ಗಗಳ ಜನರ ಪರವಾದ ಧ್ವನಿಯಾಗಿದ್ದಾರೆ ಎಂದಿದ್ದಾರೆ.











Click it and Unblock the Notifications