ಶಾಸಕ ವಸಂತ ಬಂಗೇರ ಮೇಲೆ ಕಾಂಗ್ರೆಸ್ ಕಾರ್ಯಕರ್ತನಿಂದ ಹಲ್ಲೆಗೆ ಯತ್ನ

ಮಂಗಳೂರು, ಮಾರ್ಚ್ 6: ಕುಡಿದ ಮತ್ತಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬೆಳ್ತಂಗಡಿ ಶಾಸಕ ವಸಂತ ಬಂಗೇರರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿಯ ಕಾಂಗ್ರೆಸ್ ಕಚೇರಿಯ ಸಮೀಪ ಕುಡಿದ ಮತ್ತಿನಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಶಾಸಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿದ ಕಾರ್ಯಕರ್ತರು ವಸಂತ ಬಂಗೇರ ಅವರನ್ನು ಬಚಾವ್ ಮಾಡಿದ್ದಾರೆ.

ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ಕಾಂಗ್ರೆಸ್ ಕಾರ್ಯಕರ್ತ ಇಂದಬೆಟ್ಟಿನ ನಿವಾಸಿ ವೆಂಕಪ್ಪ ಕೊಟ್ಯಾನ್ ಎಂದು ಗುರುತಿಸಲಾಗಿದೆ.

Congress activist tried to attack MLA Vasanth Bangera

"ರಾತ್ರಿ ಕಂಠಪೂರ್ತಿ ಕುಡಿದು ಬಂದಿದ್ದ ವೆಂಕಪ್ಪ ಕೊಟ್ಯಾನ್ ಶಾಸಕ ವಸಂತ ಬಂಗೇರರ ಕಚೇರಿಗೆ ಆಗಮಿಸಿದ್ದಾರೆ. ಅವರನ್ನು ನೋಡಿದ ಕೂಡಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ ಒಂದು ಹಂತದಲ್ಲಿ ಶಾಸಕರ ಮೇಲೆ ಹಲ್ಲೆಗೆ ಯತ್ನ ಕೂಡ ನಡೆಸಿದ್ದಾನೆ," ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಆಗ ಸ್ಥಳದಲ್ಲಿದ್ದ ವಸಂತ ಬಂಗೇರರ ಬೆಂಬಗಲಿರುವ ಶಾಸಕರನ್ನು ಬಚಾವ್ ಮಾಡಿ, ಹಲ್ಲೆ ಮುಂದಾದ ವ್ಯಕ್ತಿಗೆ ಗೂಸಾ ನೀಡಿದ್ದಾರೆ.

Congress activist tried to attack MLA Vasanth Bangera

ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತನ್ನದೇ ಪಕ್ಷದ ಶಾಸಕರ ಮೇಲೆ ನಿಂದಿಸಿ ಹಲ್ಲೆ ಮುಂದಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಲ್ಲೆಗೆ ಯತ್ನಿಸಿದ್ದು ಯಾಕೆ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.
ಸದ್ಯದಲ್ಲೆ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಸಂತ ಬಂಗೇರ ನಿಲ್ಲುವುದು ಬಹುತೇಕ ಖಚಿತವಾಗಿದೆ. ಇದೇ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿರುವು ಚರ್ಚೆಗೆ ಗ್ರಾಸವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+