ವಿಡಿಯೋ : ಬಿಜೆಪಿ ಅಭ್ಯರ್ಥಿ ನೆ.ಲ.ನರೇಂದ್ರ ಬಾಬು ಸಂದರ್ಶನ
Recommended Video

ಬೆಂಗಳೂರು, ಏಪ್ರಿಲ್ 18 : 'ಕಳೆದ ಬಾರಿಯ ಚುನಾವಣೆ ಫಲಿತಾಂಶ ಪ್ರಕಟವಾದ ದಿನವೇ ಮುಂದಿನ ಬಾರಿ ವಿಧಾನಸಭೆಗೆ ಪ್ರವೇಶಿಸಬೇಕು ಎಂದು ಸಂಕಲ್ಪ ಮಾಡಿದ್ದೆ. ಕೆಲವು ಕಾರಣಗಳಿಂದಾಗಿ ಪಕ್ಷ ಬದಲಾವಣೆ ಮಾಡಬೇಕಾಯಿತು' ಎಂದು ಬಿಜೆಪಿ ನಾಯಕ ನೆ.ಲ.ನರೇಂದ್ರ ಬಾಬು ಹೇಳಿದರು.
ನಟ, ರಾಜಕಾರಣಿ ನೆ.ಲ.ನರೇಂದ್ರ ಬಾಬು ಅವರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು ಈಗ ಬಿಜೆಪಿ ಸೇರಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
2008ರ ಚುನಾವಣೆಯಲ್ಲಿ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನೆ.ಲ.ನರೇಂದ್ರ ಬಾಬು ಅವರು 42,652 ಮತಗಳನ್ನು ಪಡೆದು ಜಯಗಳಿಸಿದ್ದರು.

2013ರ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಜೆಡಿಎಸ್‌ನ ಕೆ.ಗೋಪಾಲಯ್ಯ ಅವರು ನೆ.ಲ.ನರೇಂದ್ರ ಬಾಬು ಅವರನ್ನು ಸೋಲಿಸಿದ್ದರು. ಕಳೆದ ಚುನಾವಣೆಯಲ್ಲಿ ನೆ.ಲ.ನರೇಂದ್ರ ಬಾಬು ಅವರು 50,757 ಮತಗಳನ್ನು ಪಡೆದು ಸೋತಿದ್ದರು.
ಚುನಾವಣೆ ಸಮೀಪವಾಗುತ್ತಿರುವಾಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಪಕ್ಷ 2018ರ ಚುನಾವಣೆ ಅಭ್ಯರ್ಥಿಯನ್ನಾಗಿ ಅವರನ್ನು ಘೋಷಣೆ ಮಾಡಿದೆ.
ಕ್ಷೇತ್ರದ ಚುನಾವಣಾ ಕಣ : ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ 2018ರ ಚುನಾವಣಾ ಕಣ ಅಂತಿಮವಾಗಿದೆ. ಜೆಡಿಎಸ್‌ನಿಂದ ಹಾಲಿ ಶಾಸಕ ಕೆ.ಗೋಪಾಲಯ್ಯ ಅಭ್ಯರ್ಥಿ. ಬಿಜೆಪಿಯಿಂದ ನೆ.ಲ.ನರೇಂದ್ರಬಾಬು, ಕಾಂಗ್ರೆಸ್‌ನಿಂದ ಎಚ್.ಎಸ್.ಮಂಜುನಾಥ್ ಅಭ್ಯರ್ಥಿಯಾಗಿದ್ದಾರೆ. [ಸಂದರ್ಶನ ವೀಕ್ಷಿಸಲು ವಿಡಿಯೋ ನೋಡಿ]












Click it and Unblock the Notifications