ಯಾವ ಸ್ಟಾರ್ ಪ್ರಚಾರಕಿಗೂ ಕಡಿಮೆಯಿಲ್ಲ ಈ ಬಿಜೆಪಿ ಅಭ್ಯರ್ಥಿಯ ಪತ್ನಿ!
ಬಳ್ಳಾರಿ, ಏಪ್ರಿಲ್ 27: ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಮಾಜಿ ಶಾಸಕ, ಹಾಲಿ ಬಿಜೆಪಿ ಅಭ್ಯರ್ಥಿ ನೇಮಿರಾಜನಾಯ್ಕ ಅವರಿಗಿಂತಲೂ ಅವರ ಪತ್ನಿ ವಾಣಿ ಹೆಚ್ಚು ಪ್ರಭಾವಿ, ಪ್ರಚಲಿತ ಮತ್ತು ಜನಸ್ನೇಹಿ. ವಾಣಿ ಅವರು ಹಳ್ಳಿಗಳಿಗೆ ಹೋಗುತ್ತಿದ್ದಂತೆಯೇ ತಾರಾ ಪ್ರಚಾರಕರಿಗೆ ಸಿಗುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾರರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಮಾತನಾಡಿಸಿ, ನಮ್ಮ ಓಟುಗಳೆಲ್ಲಾ ನಿಮ್ಮೆಜಮಾನ್ರಿಗೇ ಬಿಡಮ್ಮಾ' ಅಂತ ಹೇಳಿ ಕಳುಹಿಸುತ್ತಿದ್ದಾರೆ.
ಲಂಬಾಣಿ ತಾಂಡಗಳಲ್ಲಿಯ ಮಹಿಳೆಯರಂತೂ, ಅವರದ್ದೇ ಭಾಷೆಯಲ್ಲಿ ಮನೆಯೊಳಗೆ ಕರೆದು, ಚಾಪೆ ಹಾಸಿ, ಒಂದು ಲೋಟ ನೀರು ಕೊಟ್ಟು, ಫ್ಯಾನ್ ಆನ್ ಮಾಡಿ ಮಾತನಾಡಿದ್ದೇ ಮಾತನಾಡಿದ್ದು. ಇನ್ನು ಬೇರೆ ಬೇರೆ ಜಾತಿಯವರ ಜೊತೆಯಲ್ಲಿ ಸ್ಪಷ್ಟವಾದ ಕನ್ನಡ ಭಾಷೆಯಲ್ಲಿ ಅಸ್ಖಲಿತವಾಗಿ ಮಾತನಾಡುತ್ತಲೇ ಅನೇಕರ ಮನಸೆಳೆಯುವ ವಾಣಿ ಉತ್ತಮ ಭಾಷಣಕಾರರು. ಅಷ್ಟೇ ಅಲ್ಲ, ಮಹಿಳೆಯರ ಸಮಸ್ಯೆಗಳನ್ನು, ಅವರ ಬೇಡಿಕೆಗಳನ್ನು ತಾಳ್ಮೆಯಿಂದ ಆಲಿಸುತ್ತಲೇ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಪಾಠ ಒಪ್ಪಿಸಿದಂತೆ ಒಪ್ಪಿಸಿ, ನೀವೆಲ್ಲಾ ಅರ್ಜಿ ಸಲ್ಲಿಸಿ ಮುಂದಿನ ದಿನಗಳಲ್ಲಿ ನೋಡೋಣ ಎಂದು ಮುಂದಿನ ಗ್ರಾಮಕ್ಕೆ ಹೋಗುತ್ತಿದ್ದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ, ಜಗದೀಶ ಶೆಟ್ಟರ್ ಮತ್ತು ಡಿ.ವಿ. ಸದಾನಂದ ಗೌಡ ಅವರು ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ವಿವಿಧ ಯೋಜನೆಗಳ ಪ್ರಸ್ತುತ ಸ್ಥಿತಿಗತಿಗಳನ್ನು ವಿವರಿಸುತ್ತಿದ್ದ ಅವರು, ಧ್ವನಿ ಎತ್ತಿದ, ಪ್ರಶ್ನೆ ಹಾಕಿದ, ಬೇಡಿಕೆ ಇರಿಸಿದ ಮಹಿಳಾ ಮತದಾರರ ಧ್ವನಿಗೆ ಸ್ಪಂದಿಸುತ್ತಿದ್ದರು. ದಾರಿಯಲ್ಲೇ ಸಿಕ್ಕಿದ್ದನ್ನು ತಿಂದು, ಪ್ರಯಾಣ ಮುಂದುವರೆಸುತ್ತಿದ್ದ ಅವರು ಅಕ್ಷರಶಃ ಅವರೇ ಅಭ್ಯರ್ಥಿ ಎನ್ನುವಂತೆ ಅತಿ ಹೆಚ್ಚು ಮತದಾರರನ್ನು ಭೇಟಿ ಮಾಡಲು ಕಾತುರ ತೋರುತ್ತಿದ್ದರು.
ಬೇಟಿ ಬಚಾವೋ, ಬೇಟಿ ಪಡಾವೋ' ಯೋಜನೆಯನ್ನು ಪ್ರತಿ ಹಂತದಲ್ಲೂ ಹೇಳುತ್ತ, ಶಿಕ್ಷಣ, ಆರೋಗ್ಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ವಾಣಿ, ಹೆಣ್ಣು ಮಕ್ಕಳ ಶಿಕ್ಷಣ, ಉನ್ನತ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಲು ಮಹಿಳಾ ಗುಂಪುಗಳಿಗೆ ತಪ್ಪದೇ ಮನವಿ ಮಾಡುತ್ತಿದ್ದರು. ಅಲ್ಲಲ್ಲಿ, ಲಿಂಗಬೇಧ, ಲಿಂಗತಾರತಮ್ಯದ ವಿರುದ್ಧವೂ ಮಾತನಾಡುತ್ತಿದ್ದರು. ಒಟ್ಟಿನಲ್ಲಿ ವಾಣಿ ಕ್ಷೇತ್ರದಲ್ಲಿ ಅಪಾರ ಗಮನ ಸೆಳೆಯುವ ಮಹಿಳಾ ಸ್ಟಾರ್ ಪ್ರಚಾರಕಿ ಆಗಿ ಕಂಡು ಬಂದಿದ್ದಾರೆ. ಮತದಾರರಿಗೆ ಸ್ಪಂದಿಸುತ್ತಿದ್ದ ವೇಳೆ 'ಒನ್ ಇಂಡಿಯಾ'ದ ಜೊತೆಗೂ ಮಾತನಾಡಿದ ಅವರು ನಾವು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದು ಹೀಗೆ....

ನಿಮ್ಮ ವಿದ್ಯಾಭ್ಯಾಸ?
ಎಸ್‍ಎಸ್‍ಎಲ್ ಸಿ. ನಾವೆಲ್ಲಾ ತಾಂಡಾದವರು. ಲಂಬಾಣಿಗಳು. ಈಗೀಗ ಶಿಕ್ಷಣದ ಮಹತ್ವ ನಮ್ಮ ಜನಕ್ಕೆ ತಿಳಿಯುತ್ತಿದೆ. ನಮ್ಮವರ ಹೆಣ್ಣು ಮಕ್ಳು ಈಗೀಗ ಉನ್ನತ ವಿದ್ಯಾಭ್ಯಾಸ ಮಾಡ್ತಿದ್ದಾರೆ.

ಮಹಿಳೆಯರಿಗೆ ಏನು ಹೇಳುತ್ತಿದ್ದೀರಿ?
ನರೇಂದ್ರಮೋದಿ ಅವರು ಜಾರಿ ಮಾಡಿರುವ ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ತಿಳಿ ಹೇಳುತ್ತಿರುವೆ. ಅಷ್ಟೇ ಅಲ್ಲ, ನಾನೂ ಕೂಡ ನನ್ನ ಆರನೇ ತರಗತಿ ಓದುತ್ತಿರುವ ಮಗಳಿಗೆ ಸುಕನ್ಯಾ ಸಮೃದ್ಧಿ ಖಾತೆ ತೆರೆದು, ಹಣ ಕಟ್ಟುತ್ತಿರುವುದನ್ನು ತಿಳಿಸಿ ಹೇಳುತ್ತಿರುವೆ. ಕಳೆದ ಕೆಲ ದಿನಗಳಿಂದ ಅನೇಕರು, ಪೋಸ್ಟ್ ಆಫೀಸ್, ಬ್ಯಾಂಕ್ ಗಳಲ್ಲಿ ಸುಕನ್ಯಾ ಖಾತೆ ತೆರೆದ ಬಗ್ಗೆ, ಮುಂದಿನ ದಿನಗಳಲ್ಲಿ ಖಾತೆ ತೆರೆಯುವ ಬಗ್ಗೆ ಹೇಳುತ್ತಿದ್ದಾರೆ. ಖುಷಿ ಆಗುತ್ತಿದೆ.

ಮತದಾರರಿಗೆ ಏನು ಹೇಳುತ್ತಿದ್ದೀರಿ?
ಬಾಲಕಿಯರಿಗೆ ತಪ್ಪದೇ ಓದಿಸಬೇಕು. ಕಾಲೇಜು ಮೆಟ್ಟಿಲು ಹತ್ತಿಸಲು ಅವಕಾಶಗಳಿದ್ದು, ಚೆನ್ನಾಗಿ ಓದಬೇಕು. ವಿದ್ಯೆ, ಜ್ಞಾನಕ್ಕೆ ಹೆಚ್ಚಿನ ಬೆಲೆ ಇರುವ ಬಗ್ಗೆ ಹೇಳುತ್ತಿರುವೆ. ಬಿ.ಎಸ್. ಯಡಿಯೂರಪ್ಪ ಸಾಹೇಬ್ರು ಇದ್ದಾಗ, ಇದ್ದ, ಭಾಗ್ಯಲಕ್ಷ್ಮಿ ಬಾಂಡ್' ಬಗ್ಗೆ ತಿಳಿಸುತ್ತಿದ್ದೇನೆ. ಅನೇಕ ಹೆಣ್ಣುಮಕ್ಕಳು ಮನೆಯ ಒಳಗಡೆಯಿಂದ ಭಾಗ್ಯಲಕ್ಷ್ಮಿಬಾಂಡ್ ತಂದು ತೋರಿಸಿ, ಖುಷಿ ಪಡುತ್ತಿದ್ದಾರೆ. ಈಗ ಈ ತರಹದ ಬಾಂಡ್ ಗಳು ಸಿಗುತ್ತಿಲ್ಲ ಎಂದು ನೋವು ಹೇಳುತ್ತಾರೆ.
ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಬಗ್ಗೆ ತಿಳಿಸುತ್ತಿರುವೆ. ಅನೇಕರು, ಚುನಾವಣೆಯ ನಂತರ ಈ ಸಂಪರ್ಕ ಪಡೆಯುವ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತೇವೆ ಎನ್ನುತ್ತಿದ್ದಾರೆ. ನನ್ನ ಜೊತೆ ಬರುತ್ತಿರುವ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನೀಡುತ್ತಿದ್ದಾರೆ. ಬಹುತೇಕರಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಏನೂ ಸಿಕ್ಕಿಲ್ಲ. ಕಾರಣ ಅನೇಕರು ಅಚ್ಚರಿ ವ್ಯಕ್ತಪಡಿಸಿ, ನಮಗೂ ಉಜ್ವಲ ಸಿಲೆಂಡರ್ ಕೊಡಿಸಿ ಅಂತ ಬೇಡಿಕೆ ಇರಿಸುತ್ತಿದ್ದಾರೆ.
ಅಂಥವರ ಬೇಡಿಕೆಗಳ ಪಟ್ಟಿಯನ್ನು ಮಾಡಿಕೊಳ್ಳುತ್ತಿದ್ದೇವೆ. ಅಷ್ಟೇ ಅಲ್ಲ, ಮಹಿಳಾ ಮತದಾರರ ವಿವಿಧ ಸಮಸ್ಯೆಗಳ ಪಟ್ಟಿಯನ್ನೂ ಬರೆದುಕೊಳ್ಳುತ್ತಿದ್ದೇವೆ. ನಮ್ಮ ಯಜಮಾನ್ರು ಗೆದ್ದು ಬಂದಲ್ಲಿ, ಅವಕ್ಕೆಲ್ಲಾ ಸ್ಪಂದಿಸುತ್ತೇವೆ. ಇಲ್ಲವಾದಲ್ಲಿ, ಹೋರಾಟ ನಡೆಸಿ, ಮಹಿಳೆಯರ ಬೇಡಿಕೆಗಳಿಗೆ ಸ್ಪಂದಿಸುವೆ.

ಇದು ಎಷ್ಟನೇ ಚುನಾವಣೆ?
ನನಗೆ ಇದು ಮೂರನೇ ಚುನಾವಣೆ. 2008 ರಲ್ಲಿ ಮೊದಲನೆಯ ಚುನಾವಣೆ. ಮೊದಲು ಜನರ ಜೊತೆ ಬೆರೆಯುವುದೇ ಕಷ್ಟ ಆಗ್ತಿತ್ತು. ಯಜಮಾನ್ರು ಶಾಸಕರಾದ್ರು. 2013 ರಲ್ಲಿ 125 ಓಟಿಂದ ಸೋತ್ರು. ಒಳ್ಳೆ ಹವಾ ಇತ್ತು, ಆದ್ರೂ ಸೋತ್ರು. ಈಗ, ಇದು ಮೂರನೇ ಚುನಾವಣೆ. ಜನರು ಒಳ್ಳೆಯದಾಗಿ ಹೇಳ್ತಿದ್ದಾರೆ. ನನಗೆ ಸ್ವಾಗತ ನೀಡ್ತಿದಾರೆ. ಗೆಲ್ಲುವ ವಿಶ್ವಾಸವಿದೆ. ಕಾರ್ಯಕರ್ತರು, ಮತದಾರರು ಆಶೀರ್ವಾದ ಮಾಡ್ತಾರೆ ಎನ್ನುವ ನಂಬಿಕೆ ಇದೆ.

ಮಕ್ಕಳು?
ನನಗೆ ಒಂದು ಗಂಡು, ಒಂದು ಹೆಣ್ಣು ಮಗು ಇದೆ. ಮಗಳು 6ನೇ ತರಗತಿ, ಮಗ 1ನೇ ತರಗತಿ ಓದುತ್ತಿದ್ದಾರೆ. ಅವರನ್ನು ನೋಡಿಕೊಂಡೇ ಚುನಾವಣೆ ಪ್ರಚಾರಕ್ಕೆ ಬರ್ತೀನಿ. ಕೆಲವೊಂದು ಸಲ ಅವರಿಬ್ಬರೂ ನನ್ನೊಟ್ಟಿಗೆ ಬರ್ತಾರೆ. ಚಿಕ್ಕ ಮಕ್ಕಳು. ಎಲೆಕ್ಷನ್, ಕ್ಯಾನ್ವಸ್ ಗಳೆಲ್ಲ ಗೊತ್ತಾಗಲ್ಲ. ಆಟವಾಡ್ತಲೇ ಇರ್ತಾವೆ.
-
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications