ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್ ಎಂ ರೇವಣ್ಣ ಸಂದರ್ಶನ
Recommended Video

ಒಲ್ಲದ ಮನಸ್ಸಿನಿಂದಲೇ ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿದಿರುವ ಹಾಲೀ ಸಾರಿಗೆ ಸಚಿವ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಚ್ ಎಂ ರೇವಣ್ಣ ಸದ್ಯ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಬಿಜೆಪಿಯ ಸಿ ಪಿ ಯೋಗೇಶ್ವರ್ ಮತ್ತು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಎಚ್ ಡಿ ಕುಮಾರಸ್ವಾಮಿಯ ಬಿಗ್ ಫೈಟ್ ನಡುವೆ ರೇವಣ್ಣ ಅವರು ಉತ್ಸಾಹದಿಂದ ಬೀದಿ ಬೀದಿ, ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ಯಾವುದೇ ಪಕ್ಷವಿರಲಿ ಗೆಲ್ಲುವ ಕಲೆಯನ್ನು ಕರಗತ ಮಾಡಿಕೊಂಡಿರುವ ಯೋಗೇಶ್ವರ್ ಅವರ ವಿರುದ್ದ ಸೆಟೆದು ನಿಂತಿರುವ ರೇವಣ್ಣ ಅವರಿಗೆ, ಜಮೀರ್ ಭಾಯ್ ಮುಸ್ಲಿಂ ಕಾಲೋನಿಗಳಲ್ಲಿ ಭರ್ಜರಿ ಪ್ರಚಾರ ನಡೆಸಿ ಬಲ ತುಂಬಿ ಹೋಗಿದ್ದಾರೆ.
ಕ್ಷೇತ್ರದ ಒಟ್ಟು 2.15 ಲಕ್ಷ ಮತದಾರರಲ್ಲಿ ಸುಮಾರು ಅರ್ಧಕರ್ಥ ಜನ ಒಕ್ಕಲಿಗ ಸಮುದಾಯದವರು. ರೇವಣ್ಣ ಅವರು ಪ್ರತಿನಿಧಿಸುವ ಕುರುಬ ಸಮುದಾಯದವರು ಸುಮಾರು ಏಳು ಸಾವಿರದಷ್ಟು ಕ್ಷೇತ್ರದಲ್ಲಿದ್ದಾರೆ. ಒಕ್ಕಲಿಗರ ನಂತರ ನಿರ್ಣಾಯಕ ಪಾತ್ರವಹಿಸುವವರು ಎಸ್ಸಿ/ಎಸ್ಟಿ ಮತ್ತು ಮುಸ್ಲಿಮರು.
ಪಕ್ಕದ ಮಾಗಡಿ ಮೂಲದವರಾದ ರೇವಣ್ಣ, ವಿರೋಧ ಪಕ್ಷಗಳ ವಲಸೆ ಬಂದವರು ಮತ್ತು ಸಾರಿಗೆ ಸಚಿವರಾಗಿ ತಾವು ಮಾಡಿದ ಕೆಲಸವನ್ನು 'ಒನ್ ಇಂಡಿಯಾ' ಜೊತೆಗಿನ ಸಂದರ್ಶನದಲ್ಲಿ ಸಮರ್ಥವಾಗಿ ವಿವರಿಸಿದ್ದಾರೆ. ಸಂದರ್ಶನದ ಆಯ್ದಭಾಗಗಳು ಮುಂದೆ ಓದಿ..

ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್ ಎಂ ರೇವಣ್ಣ ಸಂದರ್ಶನ
ಪ್ರ: ಸಾರಿಗೆ ಸಚಿವರಾಗಿ ನಿಮ್ಮ ಸಾಧನೆಯ ಬಗ್ಗೆ ಸ್ವಲ್ಪ ವಿವರಿಸುತ್ತೀರಾ?
ರೇವಣ್ಣ: ಸಾರಿಗೆ ಇಲಾಖೆಯು ಸಿಎಂ ಮತ್ತು ರಾಮಲಿಂಗ ರೆಡ್ಡಿಯವರ ನೇತೃತ್ವದಲ್ಲಿ ಉತ್ತಮ ಕೆಲಸವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ನಾನು ಇಲಾಖೆಯ ಸಚಿವನಾಗಿ ಅಧಿಕಾರ ಸ್ವೀಕರಿಸಿಕೊಂಡೆ. ನನಗೆ ಸಮಯಾವಕಾಶ ಕಮ್ಮಿಯಿದ್ದರೂ ಕೂಡಾ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸವನ್ನು ಮಾಡಿದ್ದೇನೆ.
ಅಂತರ್ನಿಗಮದ ಬೇಡಿಕೆಯನ್ನು ಜಾರಿಗೆ ತಂದೆ. ಬಿಎಂಟಿಸಿಯಲ್ಲಿ ಮಹಿಳೆಯರಿಗಾಗಿದ್ದ ಸೀಟನ್ನು ಪಿಂಕ್ ಸೀಟಾಗಿ ಪರಿವರ್ತನೆಗೊಳಿಸಿದ್ದೇವೆ. ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಲಿನಿಕ್ ಅನ್ನು ಶುರು ಮಾಡಿದ್ದೇವೆ.
ಪ್ರತೀ ಎರಡನೇ ಭಾನುವಾರ ಲೆಸ್ ಟ್ರಾಫಿಕ್ ಡೇ, ರಾತ್ರಿವೇಳೆ ಒಂಟಿ ಮಹಿಳೆಯರಿಗೆ ಕನೆಕ್ಟಿವಿಟಿ ಸರ್ವಿಸ್, ಸಿದ್ದು ಸವಾರಿ ಹೆಸರಿನಲ್ಲಿ ಕೊನೆಯ ಸ್ಟಾಪ್ ನಿಂದ ಮನೆಯವರೆಗೆ ಸೈಕಲ್ ಸೇವೆ, ಚಾಮರಾಜನಗರ, ಮಂಗಳೂರು ಮತ್ತು ಉಡುಪಿಯಲ್ಲಿ ಇಲಾಖೆ ಸಿಬ್ಬಂದಿ ನೇಮಕಾತಿಗೆ ವಿಶೇಷ ಡ್ರೈವ್, ಬಶವೇಶ್ವರ ಬಸ್ ಟರ್ಮಿನಲ್ ಹೀಗೆ ಹಲವು ಕೆಲಸಗಳು ನನಗೆ ತೃಪ್ತಿಯನ್ನು ತಂದಿದೆ. ಜೊತೆಗೆ ಮೊದಲನೇ ಬಾರಿಗೆ ಇಲಾಖೆ ಹತ್ತು ಕೋಟಿ ಲಾಭಕ್ಕೆ ಬಂದು ನಿಂತಿದೆ.

ನೀವು ಚನ್ನಪಟ್ಟಣ ಕ್ಷೇತ್ರಕ್ಕೆ ಪರಕೀಯರೇ?
ಪ್ರ: ನಿಮ್ಮನ್ನು ಚನ್ನಪಟ್ಟಣಕ್ಕೆ ಪರಕೀಯರು ಅಂತಾರಲ್ಲಾ?
ರೇವಣ್ಣ: ವಿದ್ಯಾರ್ಥಿ ಜೀವನದಲ್ಲಿ ನಾನು ಬೆಂಗಳೂರಿನಲ್ಲಿ ಇದ್ದರೂ ಕೂಡಾ, ನಾನು ಮಾಗಡಿಯಲ್ಲಿ ನನ್ನ ರಾಜಕೀಯ ಜೀವನ ಆರಂಭಿಸಿದ್ದು. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೂಡಾ ಕೆಲಸ ಮಾಡಿದ್ದೇನೆ. ರೇಷ್ಮೆ ಮತ್ತು ಕೃಷಿಕರ ಸಮಸ್ಯೆಯನ್ನು ಬಗೆಹರಿಸಿದ್ದೇನೆ.
ರಾಮನಗರ ಜಿಲ್ಲೆಯಲ್ಲೇ ಇರುವಂತಹ ಮಾಗಡಿ ಮತ್ತು ಚನ್ನಪಟ್ಟಣ ಒಂದಕ್ಕೊಂದು ದೂರವಲ್ಲ. ಹಾಗಾಗಿ, ನನಗೂ ಚನ್ನಪಟ್ಟಣಕ್ಕೂ ಒಳ್ಲೆಯ ಸಂಬಂಧವಿದೆ. ವಲಸಿಗರು ಎನ್ನುವ ಭಾವನೆ ಜನರಿಗೆ ಬಂದಿಲ್ಲ, ವಿರೋಧಿಗಳಿಗೆ ಬಂದರೆ ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ.

ಚುನಾವಣೆಗೆ ಸ್ಪರ್ಧಿಸಲು ನಾನು ಅರ್ಜಿ ಹಾಕಲಿಲ್ಲ
ಪ್ರ: ಒಲ್ಲದ ಮನಸ್ಸಿನಿಂದ ಕಣಕ್ಕಿಳಿದಿದ್ದೀರಾ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ, ಹೌದಾ?
ರೇವಣ್ಣ: ಹಾಗೇನಿಲ್ಲ.. ಚುನಾವಣೆಗೆ ಸ್ಪರ್ಧಿಸಲು ನಾನು ಅರ್ಜಿ ಹಾಕದಿದ್ದರೂ ನನಗೆ ಬಿಫಾರಂ ಬಂತು. ನಾನು ಕಾಂಗ್ರೆಸ್ಸಿನ ಕಟ್ಟಾಳು, ಹೈಕಮಾಂಡಿನ ನಿರ್ದೇಶನ, ಸಿಎಂ, ಡಿಕೆಶಿ ಅವರು ಇಲ್ಲಿ ಒಬ್ಬ ಪ್ರಭಲ ಅಭ್ಯರ್ಥಿ ಬೇಕೆಂದು ನನಗೊಂದು ಅವಕಾಶವನ್ನು ಕಲ್ಪಿಸಿದ್ದಾರೆ. ಸಂತೋಷದಿಂದ, ಜನರ ಅಪೇಕ್ಷೆಯಂತೆ ಇಲ್ಲಿನ ಅಭ್ಯರ್ಥಿಯಾಗಿದ್ದೇನೆ.

ನಿಮಗೆ ಪ್ರತಿಸ್ಪರ್ಧಿ ಇಲ್ಲಿ ಯಾರು?
ಪ್ರ: ನಿಮ್ಮ ಪ್ರತಿಸ್ಪರ್ಧಿ ಯಾರು, ಯೋಗೇಶ್ವರ್ ಅವರೋ ಎಚ್ಡಿಕಿನೋ?
ರೇವಣ್ಣ: ನನಗೆ ಪ್ರತಿಸ್ಪರ್ಧಿ ಯಾರು ಅನ್ನುವುದಕ್ಕಿಂತ ಹೆಚ್ಚಾಗಿ, ನಾನು ಜನರ ಬಳಿ ಹೋಗುತ್ತಿದ್ದೇನೆ. ಜನ ನನಗೆ ಅಭಯ ಹಸ್ತ ನೀಡುತ್ತಾರೆ ಎನ್ನುವ ನಂಬಿಕೆಯಿದೆ. ಪ್ರತಿಸ್ಪರ್ಧಿಗಳು ಯಾರು ಎನ್ನುದಕ್ಕಿಂತ ಹೆಚ್ಚಾಗಿ ಜನರ ಮನಸ್ಸನ್ನು ಗೆಲ್ಲುವುದು ಮುಖ್ಯ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ, ಗೆಲ್ಲುವ ಸಂಪೂರ್ಣ ವಿಶ್ವಾಸದಲ್ಲಿದ್ದೇನೆ.

ನಾವು ಮಾಡುವುದು ಶಾಶ್ವತ ಪರಿಹಾರಕ್ಕಾಗಿ
ಪ್ರ: ಇತರ ಪಕ್ಷದ ಕಾರ್ಯಕರ್ತರನ್ನು ತಮ್ಮತ್ತ ಸೆಳೆಯುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರಾ?
ರೇವಣ್ಣ: ಇಲ್ಲಿ ಹಣದ ಪ್ರಭಾವ ಜಾಸ್ತಿ ಇರುವುದು ಹೌದು, ಜನ ಕೂಡಾ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಸರಕಾರ ನೀಡಿರುವಂತಹ ಅಭಿವೃದ್ದಿ ಕೆಲಸಗಳು ಜೀವನ ಪರ್ಯಂತ ಸಹಾಯ ಆಗುವಂತದ್ದು. ವಿರೋಧಿಗಳು ಮಾಡುವಂತದ್ದು ಚುನಾವಣೆಗೋಸ್ಕರ ಮಾತ್ರ.., ನಾವು ಮಾಡುವುದು ಶಾಸ್ವತ ಪರಿಹಾರಕ್ಕಾಗಿ. ಹಾಗಾಗಿ ಅಲ್ಪತೃಪ್ತಿ ಯಾರೂ ಪಡುವುದಿಲ್ಲ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications