• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಮ ಮತಕ್ಕೆ ಸಮೀಕ್ಷಾ ವರದಿಗಳು ಮಾನದಂಡವಲ್ಲ, ಪ್ರಭಾವಿತರಾಗಬೇಡಿ

By ಸಂತೋಶ್ ಕುಮಾರ್ ಬೂದಿಹಾಳ್
|

ನೆನಪಿರಬೇಕು ನಿಮಗೆ, ಕೇಜ್ರಿವಾಲ್ ಮತ್ತು ಯೋಗೇಂದ್ರ ಯಾದವ್ ಸೇರಿ ಹುಟ್ಟುಹಾಕಿದ್ದ ಆಮ್ ಆದ್ಮಿ ಪಾರ್ಟಿ ಬಹು ಬೇಗನೆ ಜನಪ್ರಿಯಗೊಂಡು ದೆಹಲಿಯಲ್ಲಿ ಮೊದಲ ಪ್ರಯತ್ನದಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಿತು. ಇದಕ್ಕೆ ಕಾರಣ, ಹಲವಾರಿದೆ.

ಅದರಲ್ಲಿ ಸಮೀಕ್ಷಾ ತಂತ್ರ ಕೂಡ ಅತಿ ಪ್ರಮುಖ ವಿಷಯವಾಗಿತ್ತು. ಸರ್ಕಾರವನ್ನು ಬಹಳ ಹತ್ತಿರದಿಂದ ಗಮನಿಸುವ ದೆಹಲಿ ಜನತೆಗೆ ಚುನಾವಣೆ ಗುಂಗು ಸಹಜ, ಇದನ್ನೇ ಬಂಡವಾಳ ಮಾಡಿಕೊಂಡ ಯೋಗೇಂದ್ರ ಯಾದವ್ ತಮ್ಮದೇ ಆದ ಸಮೀಕ್ಷೆಗಳನ್ನು ರಚಿಸಿದರು, ಅದು ನಂಬಲರ್ಹವೂ ಆಗಿತ್ತು,

ಅದರ ಸಾರಾಂಶ ಹೀಗಿತ್ತು, "ಹೆಚ್ಚಿನ ಜನ ಮೋದಿಯನ್ನು ಪ್ರಧಾನಿಯಾಗಿ ನೋಡ ಬಯಸುತ್ತಾರೆ, ಹಾಗೆಯೇ ದೆಹಲಿಯಲ್ಲಿ ಕೇಜ್ರಿವಾಲರನ್ನು ಮುಖ್ಯಮಂತ್ರಿಯಾಗಿ ನೋಡ ಬಯಸುತ್ತಾರೆಂದು". ಇದು ಬಿಜೆಪಿ ಮತದಾರರ ಮೇಲೂ ಪ್ರಭಾವ ಬೀರಿದ್ದು ಬಿಜೆಪಿಗೆ ಮುಳುವಾಯಿತು, ಬಿಜೆಪಿ ಬಹುಮತ ಗಳಿಸಲಿಲ್ಲ. ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂತು..

ನ್ಯೂಸ್ಎಕ್ಸ್ ಸಮೀಕ್ಷೆ: ಸಿದ್ದರಾಮಯ್ಯ ಸರ್ಕಾರ ಪಾಸೋ? ಫೇಲೋ?

ಚುನಾವಣೆ ಬಂತೆಂದರೆ ಸಾಕು, ಅದರ ಜೊತೆಗೆ ಸಾಕಷ್ಟು ಚಟುವಟಿಕೆಗಳು ಗರಿಗೆದರುತ್ತವೆ, ಸಮೀಕ್ಷೆಗಳು ಕೂಡ ಇಂದಿನ ಚುನಾವಣೆಗಳ ಭಾಗವಾಗಿವೆ. ಚುನಾವಣೆ ಬರುವ ಮುಂಚೆ ನಡೆಯುವದು ಚುನಾವಣಾ ಪೂರ್ವ ಸಮೀಕ್ಷೆ (pre-polls), ಮತದಾನ ಆದ ಮೇಲೆ ನಡೆಯುವ ಮತಗಟ್ಟೆ ಸಮೀಕ್ಷೆ (Exit polls), ಒಟ್ಟಿನಲ್ಲಿ ಜನರ ನಾಡಿಮಿಡಿತ ಗ್ರಹಿಸುವ ಈ ಪ್ರಯತ್ನವೇ ಸಮೀಕ್ಷೆ ನಡೆಸುವ ಖಾಸಗಿ ಸಂಸ್ಥೆಗಳ ಮುಖ್ಯ ಉದ್ದೇಶ.

ಮತದಾರನ ಚುನಾವಣಾ ಗೀಳು ಸಮೀಕ್ಷೆಗಳಿಗೆ ಬಹು ದೊಡ್ಡ ಬಂಡವಾಳ. ಅದರಂತೆಯೇ ಕಳೆದೊಂದು ದಶಕದಲ್ಲಿ ಸಮೀಕ್ಷಾ ಸಂಸ್ಥೆಗಳು ಹೆಚ್ಚಾಗಿವೆ, ನಾನಾ ಬಗೆಯ ದತ್ತಾಂಶಗಳನ್ನು ಜೋಡಿಸಿ ಕಳೆದು ಅಳೆದು ತೂಗಿ ಇಂತಹ ಪಕ್ಷಕ್ಕೆ ಇಷ್ಟರಿಂದ ಇಷ್ಟರವರೆಗೆ ಸ್ಥಾನ ಸಿಗುವದೆಂದು ಹೇಳುತ್ತವೆ.

ಪ್ರಮುಖ ವಿಷಯಗಳು ಇದರಲ್ಲಿ ಚರ್ಚಿತವಾಗಿರುತ್ತದೆ, ನಾಯಕರುಗಳ ಜನಪ್ರಿಯತೆ ಕೂಡ ಸೇರಿರುವುದು. ಸಮೀಕ್ಷೆಗಳು ಜನರ ಮೇಲೆ ಗಾಢ ಪ್ರಭಾವ ಬೀರುವ ಕಾಲವೊಂದಿತ್ತು, ಈಗಲೂ ಒಂದಿಷ್ಟು ಸಂಸ್ಥೆಗಳು ತಮ್ಮ ಕೆಲಸದ ಮೂಲಕ ತಮ್ಮದೇ ಆದ ವರ್ಚಸ್ಸನ್ನು ಉಳಿಸಿಕೊಂಡಿವೆ. ಮುಂದೆ ಓದಿ..

ಜನರು ಸಮೀಕ್ಷೆಗಳನ್ನು ವೇದವಾಕ್ಯ ಎಂದೇನೂ ಪರಿಗಣಿಸಿಲ್ಲ

ಜನರು ಸಮೀಕ್ಷೆಗಳನ್ನು ವೇದವಾಕ್ಯ ಎಂದೇನೂ ಪರಿಗಣಿಸಿಲ್ಲ

ಸಮೀಕ್ಷಾ ಸಂಸ್ಥೆಗಳು ಸುಳ್ಳು ಸಮೀಕ್ಷೆಯ ಮೂಲಕ ಮತದಾರನನ್ನು ಕೆಲವು ಪಕ್ಷಗಳ ಕಡೆ ವಾಲುವಂತೆ ಮಾಡುತ್ತಿರುವುದು ಕೂಡ ಜನ ಸಾಮಾನ್ಯರ ಗಮನಕ್ಕೆ ಬಂದಿವೆ, ಜನರು ಸಮೀಕ್ಷೆಗಳನ್ನು ವೇದವಾಕ್ಯ ಎಂದೇನೂ ಪರಿಗಣಿಸಿಲ್ಲ.

2015 ರಲ್ಲಿ ಬಿಹಾರದ ಚುನಾವಣೆ ಬಿಜೆಪಿಗೆ ಹಿನ್ನಡೆಯುಂಟು ಮಾಡಿತ್ತು, ಇದರ ಮೂನ್ಸೂಚನೆ ಕೂಡ ಬಿಜೆಪಿಗಿತ್ತು.

ಟುಡೇಸ್ ಚಾಣಕ್ಯ ಸಂಸ್ಥೆಯ ಸಮೀಕ್ಷೆ

ಟುಡೇಸ್ ಚಾಣಕ್ಯ ಸಂಸ್ಥೆಯ ಸಮೀಕ್ಷೆ

ಮತದಾನವಾದ ಮೇಲೆ ಬಂದ ಟುಡೇಸ್ ಚಾಣಕ್ಯ ಸಂಸ್ಥೆಯ ಸಮೀಕ್ಷೆ ಬಿಜೆಪಿ ಪರವಾಗಿತ್ತು(ಬಿಜೆಪಿಗೆ 155 ಸೀಟು), ಬೇರೆಲ್ಲ ಸಮೀಕ್ಷೆಗಳಿಗಿಂತ ಈ ಸಮೀಕ್ಷೆ ಬೇರೆಯದೇ ಫಲಿತಾಂಶ ತೋರಿಸಿತ್ತು, ಮತ ಎಣಿಕೆ ಆದಮೆಲೇನಾಯ್ತು ಎಂಬುದು ಎಲ್ಲರಿಗು ಗೊತ್ತಿರುವ ಸಂಗತಿ, ಬಿಜೆಪಿ ಗಳಿಸಿದ್ದು ಕೇವಲ 58.

ಕಂಪ್ಯೂಟರ್ ತಾಂತ್ರಿಕ ದೋಷ ಎಂದ ಚಾಣಕ್ಯ

ಕಂಪ್ಯೂಟರ್ ತಾಂತ್ರಿಕ ದೋಷ ಎಂದ ಚಾಣಕ್ಯ

ತಪ್ಪು ಸಮೀಕ್ಷೆಗೆ ಸ್ಪಷ್ಟನೆ ಕೊಟ್ಟ ಸಂಸ್ಥೆ, ಕಂಪ್ಯೂಟರ್ ತಾಂತ್ರಿಕ ದೋಷ ಎಂದು. ಈಗ, ಕರ್ನಾಟಕ ಮತದಾನ ಹತ್ತಿರ ಬಂದಿದೆ, ಸಮೀಕ್ಷೆಗಳಿಗೇನೂ ಬರವಿಲ್ಲ, ಇದು ಅವರಿಗೆ ಸುಗ್ಗಿ ಕಾಲ. ಬಹುತೇಕ ಎಲ್ಲ ಸಮೀಕ್ಷೆಗಳು ಅತಂತ್ರ ಎಂದರೆ ಸಿ-ಫೋರ್ ಎಂಬ ಸಂಸ್ಥೆ ಮಾತ್ರ ಮೊದಲಿನಿಂದಲೂ ಕಾಂಗ್ರೆಸ್ಸಿಗೆ ಬಹುಮತ ಎಂದು ಹೇಳುತ್ತಿದೆ. ಹೇಳಬಾರದೆಂದೇನಲ್ಲ ಆದರೆ ಆ ಸಂಸ್ಥೆ ಹೊರಹಾಕುತ್ತಿರುವ ಮಾಹಿತಿ ಸಂಪೂರ್ಣವಾಗಿ ಕಾಂಗ್ರೆಸ್ ಪ್ರಭಾವಿತವಾಗಿದೆ ಎಂದು ಮೇಲ್ನೋಟಕ್ಕೆ ಅನಿಸದೆ ಇರದು.

ಸಿಎಂ ಜೊತೆ ಕುಳಿತು ಊಟ ಮಾಡುತ್ತಿರುವ ಫೋಟೋ ವೈರಲ್

ಸಿಎಂ ಜೊತೆ ಕುಳಿತು ಊಟ ಮಾಡುತ್ತಿರುವ ಫೋಟೋ ವೈರಲ್

ಆ ಸಂಸ್ಥೆಯವರೊಬ್ಬರು ಮುಖ್ಯಮಂತ್ರಿಯ ಜೊತೆ ಕುಳಿತು ಊಟ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಸಿ-ಫೋರ್ ಸಂಸ್ಥೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಕರ್ನಾಟಕದಿಂದ 14 ಸೀಟು ಎಂದಿತ್ತು, ಬಂದಿತ್ತು ಒಂಬತ್ತು.

ಅಂದರೆ ಸಿ-ಫೋರ್ ಸಂಸ್ಥೆ ಕಾಂಗ್ರೆಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ಯಾ ? ಅದನ್ನು ಬಲಿಷ್ಠ ಸಾಕ್ಷ್ಯ ಇಲ್ಲದೇ ಹಾಗೇ ಖಡಾಖಂಡಿತವಾಗಿ ಮನಬಂದಂತೆ ಹೇಳೋದು ಕಷ್ಟ ಮತ್ತು ತಪ್ಪು ಕೂಡ.

ಮತದಾರನ ಪ್ರತಿಯೊಂದು ವೋಟು ಅತ್ಯಮೂಲ್ಯ

ಮತದಾರನ ಪ್ರತಿಯೊಂದು ವೋಟು ಅತ್ಯಮೂಲ್ಯ

ಏನೇ ಇರಲಿ, ಒಂದಂತೂ ಸ್ಪಷ್ಟ. ಮತದಾರನ ಪ್ರತಿಯೊಂದು ವೋಟು ಅತ್ಯಮೂಲ್ಯ ಎಂಬ ಅರಿವು ಎಲ್ಲ ಪಕ್ಷಗಳಿಗೆ ಬಂದಿದೆ, ಅದು ನಮ್ಮ ಜನಸಾಮಾನ್ಯರಿಗೂ ಅರ್ಥವಾಗಬೇಕು ಅವರ ಮತದ ಮೌಲ್ಯ. ಎಲ್ಲ ಸಮೀಕ್ಷೆಗಳನ್ನು ನೋಡಿ ಅರ್ಥೈಸಿಕೊಳ್ಳಿ, ಒರೆಗೆ ಹಚ್ಚಿ, ಆದರೆ ಪ್ರಭಾವಿತರಾಗಬೇಡಿ. ನಿಮ್ಮ ಮತಕ್ಕೆ ಈ ಸಮೀಕ್ಷಾ ವರದಿಗಳು ಮಾನದಂಡವಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An appeal to the voters, do not get influenced with the survey report, vote for best candidates. There are so many examples that, survey report failed to match with the accurate results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more