ಹಣಕ್ಕಾಗಿ ಟಿಕೆಟ್ ಮಾರಾಟ, ಇಲ್ಲಿ ಯಾರು ಸಭ್ಯರು ನೀವೇ ಹೇಳಿ
ಬೆಂಗಳೂರು, ಮಾರ್ಚ್ 17: ಕಾಂಗ್ರೆಸ್ ಟಿಕೆಟ್ ದುಡ್ಡಿರುವವರಿಗೆ ಮಾರಾಟ ಆಗ್ತಿದೆ ಎಂಬ ಆರೋಪವೊಂದು ಕೇಂದ್ರದ ಮಾಜಿ ಸಚಿವ- ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಪ್ರಭಾವಿ ಮುಖಂಡ ವೀರಪ್ಪ ಮೊಯಿಲಿ ಅವರ ಟ್ವಿಟ್ಟರ್ ಖಾತೆಯಲ್ಲಿ ಕಾಣಿಸಿಕೊಂಡು ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿಯೇ ಎದ್ದಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಆದರೆ, ಇದು ಕಾಂಗ್ರೆಸ್ ನಲ್ಲಿ ಮಾತ್ರ ಹೀಗೆ ಅಂತ ನಿಮಗನ್ನಿಸುತ್ತಾ? ವಿವಿಧ ರಾಜಕೀಯ ಪಕ್ಷಗಳಲ್ಲೂ ಇದೇ ಥರ ಇದೆ. ಅವರು ಹೇಳಿಕೊಂಡರು, ಉಳಿದವರು ಬಾಯಿ ಬಿಡಲ್ಲ. ಅಥವಾ ತಮಗೆ ಅನ್ಯಾಯ ಆಯಿತು ಅಂದಾಗಷ್ಟೇ ಬಾಯಿ ತೆಗೆಯುತ್ತಾರೆ ಅಂತ ನಿಮಗೆ ಅನ್ನಿಸುತ್ತಾ?

ಒಟ್ಟಿನಲ್ಲಿ ಇದೊಂಥರ ಮುಜುಗರ. ರಾಜಕಾರಣಿಗಳ ಬಗ್ಗೆಯೇನೋ ಭರವಸೆ ಕಳೆದುಕೊಂಡರೂ ರಾಜಕಾರಣ ಎಂಬುದರಲ್ಲಿ ಸಣ್ಣ ಆಶಾವಾದವೊಂದಿತ್ತು. ಆದರೆ ಇತ್ತೀಚೆಗೆ ಅದಕ್ಕೂ ಮಣ್ಣು ಬೀಳುತ್ತಿದೆ ಅಂತ ನಿಮಗೆ ಅನ್ನಿಸಿರಬಹುದು. ಅಥವಾ ಇದಕ್ಕಿಂತ ಭಿನ್ನವಾದ ಆಲೋಚನೆ ಇರಬಹುದು. ಅದೇನೆ ಇರಲಿ, ಈ ವೇದಿಕೆಯಲ್ಲಿ ಹಂಚಿಕೊಳ್ಳಿ. ನಿಮಗಾಗಿಯೇ ಆರಂಭಿಸಿರುವ ಈ ಚರ್ಚೆಯಲ್ಲಿ ಪಾಲ್ಗೊಳ್ಳಿ.












Click it and Unblock the Notifications