ಡಿಬೇಟ್: ರಾಹುಲ್ ಗಾಂಧಿ ಅನರ್ಹಗೊಳಿಸಿದ ನಿರ್ಧಾರ ಸರಿಯೇ?
ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾದ ವಿದ್ಯಮಾನ, ಶುಕ್ರವಾರದಂದು (ಮಾರ್ಚ್ 24) ನಡೆದಿದೆ. ಕೇರಳದ ವಾಯನಾಡ್ ಸಂಸದ ರಾಹುಲ್ ಗಾಂಧಿಯವರನ್ನು ಸಂಸದೀಯ ಸ್ಥಾನದಿಂದ ಅನರ್ಹಗೊಳಿಸಿ ಲೋಕಸಭೆಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ ನಿರ್ಧಾರದ ವಿರುದ್ದ ಕಾಂಗ್ರೆಸ್ ಭಾರೀ ಪ್ರತಿಭಟನೆಗೆ ಇಳಿದಿದೆ.
ಲೋಕಸಭಾ ಕಾರ್ಯದರ್ಶಿ ಕಚೇರಿಯ ನಿರ್ಧಾರದಿಂದಾಗಿ ವಯನಾಡ್ ಕ್ಷೇತ್ರದಲ್ಲಿ ವಿಶೇಷ ಉಪಚುನಾವಣೆ ನಡೆಸಬಹುದು ಮತ್ತು ದೆಹಲಿಯಲ್ಲಿ ರಾಹುಲ್ ಅವರಿಗೆ ನೀಡಲಾಗಿರುವ ಸರಕಾರೀ ಬಂಗ್ಲೆಯನ್ನು ಖಾಲಿ ಮಾಡುವಂತೆಯೂ ಕೇಂದ್ರ ಸರಕಾರ ಸೂಚಿಸಬಹುದು. ಲೋಕಸಭಾ ಕಾರ್ಯದರ್ಶಿಗೆ ಅನರ್ಹಗೊಳಿಸುವ ಹಕ್ಕು ಇಲ್ಲ ಎನ್ನುವುದು ಕಾಂಗ್ರೆಸ್ಸಿನ ವಾದ.

2019ರ ಲೋಕಸಭೆ ಚುನಾವಣೆ ವೇಳೆ ಕರ್ನಾಟಕದ ಕೋಲಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ "ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮ ಹೇಗೆ ಇರುತ್ತದೆ ಎಂಬುದೇ ಆಶ್ಚರ್ಯ" ಎನ್ನುವ ಹೇಳಿಕೆಯನ್ನು ನೀಡಿದ್ದರು. ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು.
ರಾಹುಲ್ ಗಾಂಧಿಯವರು ಮೋದಿ ಎನ್ನುವ ಉಪನಾಮವನ್ನು ಕಳ್ಳರಿಗೆ ಹೋಲಿಸಿದ್ದು ಸರಿಯೇ? ಇದು ಒಬಿಸಿ ಜನಾಂಗಕ್ಕೆ ಮಾಡಿದ ಅವಮಾನವೇ? ಕರ್ನಾಟಕ ಚುನಾವಣೆಯನ್ನು ಆಧರಿಸಿ ಹೇಳುವುದಾದರೆ ಇದರ ಲಾಭನಷ್ಟ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಹೇಗೆ? ಒಂದು ಚರ್ಚೆ












Click it and Unblock the Notifications