• search
  • Live TV
keyboard_backspace

ವಿವಾದಕ್ಕೆ ಕಾರಣವಾದ ಶಬರಿಮಲೆಯಲ್ಲಿ ಕಂಡ 'ಹಲಾಲ್ ಬೆಲ್ಲ'

Google Oneindia Kannada News

ತಿರುವನಂತಪುರಂ, ನವೆಂಬರ್‌ 18: ಶಬರಿಮಲೆಯಲ್ಲಿ ಅರಾವಣ ಮತ್ತು ಅಪ್ಪಂ ತಯಾರಿಕೆಗೆ 'ಹಲಾಲ್ ಬೆಲ್ಲ'ವನ್ನು ಬಳಸಲಾಗಿದೆ ಎಂಬ ವರದಿಗಳು ಆಗುತ್ತಿದ್ದಂತೆ ಈ ವಿಚಾರವು ಭಾರೀ ವಿವಾದಕ್ಕೆ ಕಾರಣವಾಗಿದೆ. ಶಬರಿಮಲೆಯ ಗೋದಾಮುಗಳಲ್ಲಿ ಹಲಾಲ್‌ ಸೀಲ್‌ ಇರುವ ಬೆಲ್ಲದ ಪ್ಯಾಕೆಟ್‌ಗಳನ್ನು ಸಂಗ್ರಹ ಮಾಡಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ.

ಒಂದೆಡೆ ಹಲಾಲ್‌ ಆಹಾರದ ಗುಣಮಟ್ಟದ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ಶಬರಿಮಲೆಯಲ್ಲಿ ಹಲಾಲ್‌ ಬೆಲ್ಲದ ಬಳಕೆಗೆ ಹಿಂದೂ ಐಕ್ಯವೇದಿ ವಿರೋಧ ವ್ಯಕ್ತಪಡಿಸಿದೆ. ಹಲಾಲ್‌ ಬೆಲ್ಲ ಬಳಕೆಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ ಹಿಂದೂ ಐಕ್ಯವೇದಿ ಅಧ್ಯಕ್ಷೆ ಕೆ ಪಿ ಶಶಿಕಲಾ, "ಹಲಾಲ್‌ ಆದ ವಸ್ತುವನ್ನು ಬಳಸಿ ಪ್ರಸಾದ ತಯಾರಿ ಮಾಡುವುದು ಭಕ್ತರಿಗೆ ಹಾಗೂ ದೇವರಿಗೆ ಒಂದು ಸವಾಲು. ಈ ವಿಚಾರವಾಗಿ ದೇವಸ್ವಂ ಮಂಡಳಿ ಸ್ಪಷ್ಟಣೆಯನ್ನು ನೀಡಬೇಕು," ಎಂದು ಆಗ್ರಹ ಮಾಡಿದ್ದಾರೆ.

ಶಬರಿಮಲೆಯಲ್ಲಿ ನ.18 ರಿಂದ ಸ್ಪಾಟ್ ಬುಕ್ಕಿಂಗ್ ಆರಂಭ: ಈ ದಾಖಲೆ ಅತ್ಯಗತ್ಯಶಬರಿಮಲೆಯಲ್ಲಿ ನ.18 ರಿಂದ ಸ್ಪಾಟ್ ಬುಕ್ಕಿಂಗ್ ಆರಂಭ: ಈ ದಾಖಲೆ ಅತ್ಯಗತ್ಯ

"ಹಾಗೆಯೇ ಈ ಗಂಭಿರ ಅಪರಾಧವನ್ನು ನಾವು ಒಪ್ಪಿಕೊಂಡು ಸುಮ್ಮನೆ ಬಿಡಲು ಸಿದ್ಧರಿಲ್ಲ," ಎಂದು ಕೂಡಾ ಶಶಿಕಲಾ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ದೇವಸ್ವಂ ಬೋರ್ಡ್‌ನ ಹಿರಿಯ ಅಧಿಕಾರಿಗಳು, "ಶಬರಿಮಲೆಯಲ್ಲಿ ಹಲಾ‌ಲ್‌ ಬೆಲ್ಲವನ್ನು ಬಳಸಲಾಗಿಲ್ಲ," ಎಂದು ಸ್ಪಷ್ಟಣೆಯನ್ನು ನೀಡಿದ್ದಾರೆ. "ಮಹಾರಾಷ್ಟ್ರದ ವರ್ಧಮಾನ ಗ್ರೂಪ್‌ ಈ ಹಿಂದೆ ಬೆಲ್ಲವನ್ನು ಒದಗಿಸುತ್ತಿತ್ತು. ಆ ಬಳಿಕ ಅವರ ಕಾಂಟ್ರಾಕ್ಟ್‌ ಅವಧಿ ಕೊನೆಯಾಯಿತು. ಪ್ರಸ್ತುತ ಎಸ್‌ಪಿ ಸಕ್ಕರೆ ಕಾರ್ಖಾನೆ ನಮಗೆ ಬೆಲ್ಲದ ಹುಡಿಯನ್ನು ಒದಗಿಸುತ್ತಿದ್ದಾರೆ. ಈ ಪ್ಯಾಕೆಟ್‌ಗಳಲ್ಲಿ ಹಲಾಲ್‌ ಎಂಬುವುದುನ್ನು ಪ್ರಿಂಟ್‌ ಮಾಡಿಲ್ಲ," ಎಂದು ತಿಳಿಸಿದ್ದಾರೆ.

 ಈ ವರದಿಗಳು ಆಧಾರರಹಿತ ಎಂದ ದೇವಸ್ವಂ ಮಂಡಳಿ

ಈ ವರದಿಗಳು ಆಧಾರರಹಿತ ಎಂದ ದೇವಸ್ವಂ ಮಂಡಳಿ

ಈ ಬಗ್ಗೆ ಗುರುವಾರ ತಿರುವಾಂಕೂರು ದೇವಸ್ವಂ ಮಂಡಳಿಯು ಕೇರಳ ಹೈಕೋರ್ಟ್‌ಗೆ ಸ್ಪಷ್ಟಣೆಯನ್ನು ನೀಡಿದೆ. "ಶಬರಿಮಲೆ ಪ್ರಸಾದ ಮಾಡಲು ಹಲಾ‌ಲ್‌ ಬೆಲ್ಲವನ್ನು ಬಳಸಲಾಗಿದೆ ಎಂಬ ವರದಿಗಳು ಆಧಾರರಹಿತ," ಎಂದು ಕೇರಳ ಹೈಕೋರ್ಟ್‌ಗೆ ದೇವಸ್ವಂ ಮಂಡಳಿ ತಿಳಿಸಿದೆ. ದೇವಾಲಯದಲ್ಲಿ ಅರಾವಣ ಮತ್ತು ಅಪ್ಪಂ ತಯಾರಿಕೆಗೆ 'ಹಲಾಲ್ ಬೆಲ್ಲ'ವನ್ನು ಬಳಸಲಾಗಿದೆ ಎಂಬ ಹಿನ್ನೆಲೆ ಆ ಪ್ರಸಾದ ಬಳಕೆಗೆ ಅವಕಾಶ ನೀಡಬಾರದು ಎಂದು ಹೇಳಿ ಅರ್ಜಿಯೊಂದು ಕೇರಳ ಹೈಕೋರ್ಟ್‌ಗೆ ಸಲ್ಲಿಕೆ ಆಗಿದೆ. ಈ ಅರ್ಜಿಗೆ ಪ್ರತಿಕ್ರಿಯೆ ನೀಡಿದ ತಿರುವಾಂಕೂರು ದೇವಸ್ವಂ ಮಂಡಳಿಯು ಈ ಆರೋಪವನ್ನು ಅಲ್ಲಗಳೆದಿದೆ.

 ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಶಬರಿಮಲೆ ಕರ್ಮ ಸಮಿತಿಯ ಪ್ರಧಾನ ಸಂಚಾಲಕರಾದ ಎಸ್‌ಜೆಆರ್‌ ಕುಮಾರ್‌ ಎಂಬವರು ಈ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಅಪವಿತ್ರವಾದ ಹಲಾಲ್‌ ಬೆಲ್ಲವನ್ನು ಬಳಸಿ ಶಬರಿಮಲೆಯಲ್ಲಿ ತಯಾರಿ ಮಾಡಲಾದ ಅರಾವಣ ಮತ್ತು ಅಪ್ಪಂ ಅನ್ನು ವಿತರಣೆ ಮಾಡುವುದನ್ನು ನಿಲ್ಲಿಸುವಂತೆ ಹಾಗೂ ಇನ್ನು ಮುಂದೆ ನೇವೇದ್ಯ ಹಾಗೂ ಪ್ರಸಾದ ತಯಾರಿಕೆಗೆ ಈ ಹಲಾಲ್‌ ಬೆಲ್ಲವನ್ನು ಬಳಸದಂತೆ ಟಿಡಿಬಿ ಹಾಗೂ ಕೇರಳದ ಆಹಾರ ಸುರಕ್ಷತೆಯ ಕಮಿಷನರೇಟ್‌ಗೆ ಸೂಚನೆ ನೀಡಲು ಆಗ್ರಹಿಸಿ ಅರ್ಜಿಯನ್ನು ಸಲ್ಲಿಕೆ ಮಾಡಲಾಗಿದೆ. ಅರಾವಣ ಎಂದರೆ ಅಕ್ಕಿ ಹಾಗೂ ಬೆಲ್ಲದಿಂದ ಮಾಡಲಾಗುವ ಪಾಯಸವಾಗಿದೆ ಹಾಗೂ ಅಪ್ಪಂ ಎಂದರೆ ಅಕ್ಕಿ ಹಾಗೂ ಬೆಲ್ಲದಿಂದ ಮಾಡಲಾಗುವ ಗಟ್ಟಿಯಾದ ಪ್ರಸಾದವಾಗಿದೆ. ಇದನ್ನು ಶಬರಿಮಲೆಯಲ್ಲಿ ಪ್ರಸಾದವಾಗಿ ನೀಡಲಾಗುತ್ತದೆ.

ವಾರ್ಷಿಕ ತೀರ್ಥಯಾತ್ರೆಗೆ ಶಬರಿಮಲೆ ಸಜ್ಜು: ಇಲ್ಲಿದೆ ನೋಡಿ ಮಾರ್ಗಸೂಚಿವಾರ್ಷಿಕ ತೀರ್ಥಯಾತ್ರೆಗೆ ಶಬರಿಮಲೆ ಸಜ್ಜು: ಇಲ್ಲಿದೆ ನೋಡಿ ಮಾರ್ಗಸೂಚಿ

 2019 ಮತ್ತು 2020 ರಲ್ಲಿ ಖರೀದಿ ಮಾಡಿದ್ದ ಬೆಲ್ಲವನ್ನೂ ಬಳಸಿಲ್ಲ

2019 ಮತ್ತು 2020 ರಲ್ಲಿ ಖರೀದಿ ಮಾಡಿದ್ದ ಬೆಲ್ಲವನ್ನೂ ಬಳಸಿಲ್ಲ

"ಮಹಾರಾಷ್ಟ್ರ ಮೂಲದ ಕಂಪನಿಯಿಂದ ಬೆಲ್ಲವನ್ನು ಖರೀದಿಸಲಾಗಿದೆ. ಪಂಪಾದಲ್ಲಿ ಈ ಬೆಲ್ಲದ ಗುಣಮಟ್ಟವನ್ನು ತಪಾಸಣೆ ಮಾಡಲಾಗಿದೆ. ಆ ಬಳಿಕವೇ ದೇವಾಲಯದ ಅಧಿಕಾರಿಗಳು ಬೆಲ್ಲವನ್ನು ದೇವಾಲಯಕ್ಕೆ ತಂದಿದ್ದಾರೆ ಎಂದು ಗುರುವಾರ ಹೈಕೋರ್ಟ್‌ಗೆ ತಿಳಿಸಿದೆ. ಈ ಬೆಲ್ಲವನ್ನು ನಾವು 2019 ಮತ್ತು 2020 ರಲ್ಲಿ ಖರೀದಿ ಮಾಡಿದ್ದೇವೆ. ಆದರೆ ಕೊರೊನಾ ವೈರಸ್‌ ಸೋಂಕು ಕಾರಣದಿಂದಾಗಿ ನಾವು ಅಧಿಕವಾಗಿ ಬೆಲ್ಲವನ್ನು ಬಳಸಲು ಸಾಧ್ಯವಾಗಿಲ್ಲ. ಸೆಪ್ಟೆಂಬರ್‌ನಲ್ಲಿ ಈ ಬೆಲ್ಲದ ಗುಣಮಟ್ಟವನ್ನು ಪರಿಶೀಲನೆ ಮಾಡಿದಾಗ ಈ ಬೆಲ್ಲವೂ ಮಾನವ ಬಳಕೆಗೆ ಸೂಕ್ತವಲ್ಲ ಎಂದು ತಿಳಿದು ಬಂದಿದೆ. ಆ ಬಳಿಕ ಜಾನುವಾರುಗಳಿಗೆ ಮೇವನ್ನು ತಯಾರಿ ಮಾಡಲು ಈ ಬೆಲ್ಲವನ್ನು ನೀಡಲಾಗಿದೆ," ಎಂದು ಕೂಡಾ ಟಿಡಿಬಿ ತಿಳಿಸಿದೆ.

 ಬೆಲ್ಲ ಚೀಲದಲ್ಲಿ ಹಲಾಲ್‌ ಇದ್ದದ್ದು ನಿಜ, ಆದರೆ ಅದನ್ನು ಬಳಸಿಲ್ಲ

ಬೆಲ್ಲ ಚೀಲದಲ್ಲಿ ಹಲಾಲ್‌ ಇದ್ದದ್ದು ನಿಜ, ಆದರೆ ಅದನ್ನು ಬಳಸಿಲ್ಲ

"ಇನ್ನು 2020 ರಲ್ಲಿ ಖರೀದಿಸಿದ ಚೀಲಗಳಲ್ಲಿ ಒಂದರಲ್ಲಿ ಹಲಾಲ್‌ ಎಂದು ಪ್ರಮಾಣೀಕರಣವನ್ನು ಹಾಕಲಾಗಿ‌ತ್ತು. ನಾವು ಈ ಬಗ್ಗೆ ವಿಚಾರಿಸಿದಾಗ ರಫ್ತು ಮಾಡಲು ನಿಟ್ಟಿನಲ್ಲಿ ಈ ಹಲಾಲ್‌ ಪ್ರಮಾಣೀಕರಣ ಮುಖ್ಯ ಎಂದು ಸರಬರಾಜುದಾರರು ಹೇಳಿದ್ದಾರೆ. ಹಾಗೆಯೇ, ಶಬರಿಮಲೆಗೆ ನೀಡಲಾಗುವ ಬೆಲ್ಲದಲ್ಲಿ ಈ ರಫ್ತು ಮಾಡುವ ಬೆಲ್ಲಗಳು ತಪ್ಪಾಗಿ ಮಿಶ್ರಣವಾಗಿದೆ ಎಂದು ಹೇಳಿದರು. ನಾವು ಹಲಾಲ್‌ ಎಂದು ಹಾಕಿದ್ದ ಪ್ಯಾಕೆಟ್‌ಗಳ ಬೆಲ್ಲವನ್ನು ಪ್ರಸಾದ ತಯಾರಿ ಮಾಡಲು ಬಳಸಿಲ್ಲ," ಎಂದು ಕೂಟಾ ಟಿಡಿಬಿ ಸ್ಪಷ್ಟಣೆಯನ್ನು ನೀಡಿದೆ.

(ಒನ್‌ಇಂಡಿಯಾ ಸುದ್ದಿ)

English summary
Controversy erupts over the use of halal jaggery in Sabarimala.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X