ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮಾರ್ಟ್ ಫೋನ್ ತರುವ ನೋವು ಶಮನಕ್ಕೆ ಯೋಗಾಸನ

By Prasad
|
Google Oneindia Kannada News

ಬಲವಾದ, ನಮ್ಯವಾದ ಕತ್ತು ಮತ್ತು ಬೆನ್ನನ್ನು ಹೊಂದುವುದರಿಂದ ಅಸಹಜವಾದ ಒತ್ತಡಗಳನ್ನು ತಡೆದುಕೊಳ್ಳಬಹುದು. ಮೊಬೈಲ್ ಪೋನ್ ಗಳ ಬಳಕೆಯಿಂದ ಉಂಟಾಗುವ ಮೂಳೆಗಳ - ಸ್ನಾಯುಗಳ ಸಮಸ್ಯೆಗಳನ್ನು ಇದರಿಂದ ತಡೆಗಟ್ಟಬಹುದು.

ಕೆಲವು ವ್ಯಾಯಾಮಗಳನ್ನು ಮಾಡಿದರೆ ಒತ್ತಡದಲ್ಲಿರುವ ಬೆನ್ನು ಮತ್ತು ಕತ್ತಿನ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ. ನಿಮ್ಮ ಪ್ರೀತಿಪಾತ್ರರೊಡನೆ ಚಾಟಿಂಗ್ ಮಾಡುವ ಸಲುವಾಗಿ ಟೆಕ್ಟ್ಸ್‌ಗಳನ್ನು ಕಳುಹಿಸುತ್ತಿರುವಾಗ ನಿಮಗುಂಟಾಗುವ ಕಿವುಚುವಿಕೆ ಮತ್ತು ನೋವನ್ನು ಇವುಗಳಿಂದ ತಡೆಯಿರಿ.

ಕೆಳಗಿನ ಸೂಚಿಗಳನ್ನು ನಿಯಮಿತವಾಗಿ ಪಾಲಿಸಿದರೆ ಕತ್ತಿನ, ಬೆನ್ನಿನ, ತಲೆಯ ನೋವು ಕ್ರಮೇಣ ಮಾಯವಾಗುತ್ತದೆ. ಜೀವನದಲ್ಲಿ ನವೋಲ್ಲಾಸ ಚಿಮ್ಮುತ್ತದೆ. ಹಾಗೆಯೆ, ಸ್ಮಾರ್ಟ್ ಫೋನ್ ದುರ್ಬಳಕೆ ಮಾಡುವುದನ್ನು ನಿಲ್ಲಿಸಿ, ಆರೋಗ್ಯದತ್ತ ನಿಮ್ಮ ಚಿತ್ತ ಹರಿಸಿ.

* ಕಿವಿಗಳನ್ನು ಕೆಳಕ್ಕೆ ಎಳೆಯುವುದು ಮತ್ತು ತೀಡುವುದು : ನಿಮ್ಮ ಕಿವಿಗಳನ್ನು ಮೇಲಿನಿಂದ ಕೆಳಗಿನವರೆಗೂ ಒತ್ತಿ. ಒಂದೆರಡು ಸಲ ಕಿವಿಗಳನ್ನು ಎಳೆದು, ಗಡಿಯಾರದ ದಿಕ್ಕಿನಲ್ಲಿ ಮತ್ತು ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿ. ಇದರಿಂದ ಕಿವಿಗಳ ಸುತ್ತಲೂ ಇರುವ ಒತ್ತಡವು ಬಿಡುಗಡೆಯಾಗುತ್ತದೆ. []ಸ್ಮಾರ್ಟ್ ಫೋನ್ ಬಳಕೆದಾರರಿಗಾಗಿ 'ಸ್ಮಾರ್ಟ್' ಯೋಗ!

World Yoga Day : Smart Yoga exercises to get relief from neck, back pain

* ತೋಳುಗಳನ್ನು ಮುಂದಕ್ಕೆ ಚಾಚುವುದು : ನಿಮ್ಮ ತೋಳುಗಳನ್ನು ನಿಮ್ಮ ತಲೆಯ ಮೇಲೆಕ್ಕೆತ್ತಿ ಮತ್ತು ಹಸ್ತಗಳು ಆಕಾಶದತ್ತ ನೋಡುತ್ತಿರಲಿ. ಹಸ್ತಗಳನ್ನು ಆಕಾಶದ ಕಡೆಗೆ ಒತ್ತಿ. ನಂತರ ನಿಮ್ಮ ತೋಳುಗಳನ್ನು ನಿಮ್ಮ ಇಬ್ಬದಿಯಲ್ಲಿ ಚಾಚಿ ಬೆರಳುಗಳನ್ನು ಹಿಂದಕ್ಕೆ ತನ್ನಿ. ವಿದಾಯ ಹೇಳುವ ರೀತಿಯಲ್ಲಿ ಎರಡು ಸಲ ನಿಮ್ಮ ಹಸ್ತಗಳನ್ನು ಮೇಲುಕೆಳಗೆ ತಿರುಗಿಸಿ, ಭುಜಗಳಲ್ಲಿ ಬಾಹುಗಳಲ್ಲಿ ಇರುವ ಒತ್ತಡಕ್ಕೆ ವಿದಾಯ ಹೇಳಿ ಬಿಡಿ.

* ಭುಜಗಳ ಸುತ್ತು : ನಿಮ್ಮ ತೋಳುಗಳನ್ನು ಎರಡು ಕಡೆಗಳಿಗೂ ಚಾಚಿ. ಕಿರುಬೆರಳು ಹೆಬ್ಬೆಟ್ಟಿನ ಕೆಳಭಾಗವನ್ನು ಒತ್ತಲಿ. ತೋಳುಗಳನ್ನು, ಹಸ್ತವನ್ನು ಸ್ತಬ್ಧವಾಗಿಟ್ಟುಕೊಂಡು ಭುಜಗಳನ್ನು ಗಡಿಯಾರದ ದಿಕ್ಕಿನೆಡೆಗೆ ಮತ್ತು ಗಡಿಯಾರದ ದಿಕ್ಕಿನ ವಿರುದ್ಧದ ಕಡೆಗೆ 5 ಸಲ ತಿರುಗಿಸಿ.

* ಹಸ್ತಗಳನ್ನು ಒತ್ತಿ : ನಿಮ್ಮ ಹಸ್ತಗಳ ಕೆಳಭಾಗವನ್ನು ನಿಮ್ಮ ಎದೆಯ ಮುಂದಕ್ಕೆ ತನ್ನಿ. ಅವುಗಳನ್ನು ಬಲವಾಗಿ ಒತ್ತಿ, ಭುಜಗಳನ್ನು ಸ್ತಬ್ಧವಾಗಿಡಿ. ಎರಡು ಸಲ ಬಲವಾಗಿ ಒತ್ತಿ ಸಡಿಲಗೊಳಿಸಿ ಹಸ್ತಗಳನ್ನು ಹಿಂದಕ್ಕೆ ತಿರುಗಿಸಿ ಮತ್ತೆ ಬಲವಾಗಿ ಒತ್ತಿ ಸಡಿಲಗೊಳಿಸಿ. ಎರಡು ಸಲ ಮಾಡಿ. ['ಯೋಗ ಈಗ ಒಂದು ಅಂತಾರಾಷ್ಟ್ರೀಯ ಚಳವಳಿ']

World Yoga Day : Smart Yoga exercises to get relief from neck, back pain

* ಎಂಟು ಆಕಾರದ ಮೊಣಕೈ : ನಿಮ್ಮ ಕೈಗಳನ್ನು ಎದೆಯ ಮುಂದೆ ತಂದು ನಿಮ್ಮ ಬೆರಳುಗಳನ್ನು ಒಂದರೊಳಗೊಂದು ಜೋಡಿಸಿ. ನಿಮ್ಮ ಹಸ್ತಗಳನ್ನು ನಿಮ್ಮ ಎದೆಯ ಮುಂದಿಟ್ಟು ನಿಮ್ಮ ಮೊಣಕೈ ಮತ್ತು ಭುಜದಿಂದ ಮಲಗಿರುವ ಎಂಟು ಸಂಖ್ಯೆಯನ್ನು ಗಾಳಿಯಲ್ಲಿ ಬರೆಯಿರಿ.

* ಭುಜಗಳ ವಿಸ್ತರಣ : ನಿಮ್ಮ ಬಲಗೈಯನ್ನು ತಲೆಯ ಮೇಲಿರಿಸಿ. ಎಡಗೈಯಿಂದ ಬಲವಾಗಿ ಬಲಮಂಡಿಯನ್ನು ಬಿಗಿಯಾಗಿ ಹಿಡಿದುಕೊಳ್ಳಿ. ಎಡಗೈಯನ್ನು ಅಲುಗಾಡಿಸದೆ ಬಲಗೈಯನ್ನು ತಲೆಯಿಂದ ಸೊಂಟದವರೆಗೆ ಮತ್ತು ಸೊಂಟದಿಂದ ತಲೆಯವರೆಗೆ ಕೆಲವು ಸಲ ತನ್ನಿ. ಈಗ ಎಡಗೈಯಿಂದ ಇದನ್ನು ಪುನರಾವರ್ತಿಸಿ. [ಜೂ.21ರಂದೇ ವಿಶ್ವ ಯೋಗ ದಿನಾಚರಣೆ ಏಕೆ?]

World Yoga Day : Smart Yoga exercises to get relief from neck, back pain

* ಹೆಬ್ಬೆಟ್ಟುಗಳನ್ನು ಒತ್ತುವುದು : ನಿಮ್ಮ ಹೆಬ್ಬೆಟ್ಟುಗಳನ್ನು ನಿಮ್ಮ ಎದೆಯ ಮುಂದೆ ತಂದು, ಎರಡು ದಿಕ್ಕುಗಳಲ್ಲಿ ಕೆಲವು ಸಲ ತಿರುಗಿಸಿ. ನಿಮ್ಮ ಎಲ್ಲಾ ಬೆರಳುಗಳನ್ನು ಒಂದಾಗಿ ತಂದು, ಎರಡು ಸಲ ಒತ್ತಿ, ಬಿಡಿ. ಈ ಯೋಗದ ವ್ಯಾಯಾಮದಿಂದ ನಿಮ್ಮ ನೋವು ಹೊರಟು ಹೋಗುತ್ತದೆಯಾದರೂ ಇವುಗಳನ್ನು ಮರೆಯಬಿಡಿ.

* ನಿಮ್ಮ ಸಾಧನವನ್ನು ಸರಿಯಾದ ಭಂಗಿಯಲ್ಲಿ ಇಟ್ಟುಕೊಳ್ಳಿ : ನಿಮ್ಮ ತೊಡೆಯ ಮೇಲಿಟ್ಟು ನಿಮ್ಮ ಕತ್ತನ್ನು ಬಗ್ಗಿಸುವ ಬದಲಿಗೆ, ನಿಮ್ಮ ಕಣ್ಣಿನ ಸಮಾನದ ಹಂತಕ್ಕೆ ನಿಮ್ಮ ಸಾಧನವನ್ನು ಇಟ್ಟುಕೊಳ್ಳುವ ರೀತಿಯನ್ನು ಕಂಡುಕೊಳ್ಳಿ. [ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]

World Yoga Day : Smart Yoga exercises to get relief from neck, back pain

* ಆಗಾಗ ವಿರಾಮವನ್ನು ತೆಗೆದುಕೊಳ್ಳಿ : ಇಡೀ ದಿನ ಈ ಸಾಧನಗಳನ್ನು ಬಳಸುತ್ತಲೇ ಇರುತ್ತೀರಿ ಎಂದು ನೆನಪಿನಲ್ಲಿಟ್ಟುಕೊಳ್ಳಿ ಮತ್ತು ಬಲವಂತವಾಗಿ ಆದರೂ ಸರಿ, ಆಗಾಗ ವಿರಾಮವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಭಂಗಿಯನ್ನು ಬದಲಿಸುತ್ತಿರಿ.

ಈ ಸರಳವಾದ ಯೋಗದ ವ್ಯಾಯಾಮಗಳನ್ನು ಪಾಲಿಸಿ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳಿ ಮತ್ತು ಓರ್ವ ಸ್ಮಾರ್ಟ್‌ಫೋನ್‌ನ ಯೋಗಿಯಾಗಿ! (ಮಾಹಿತಿ : ಆರ್ಟ್ ಆಫ್ ಲಿವಿಂಗ್, ಬೆಂಗಳೂರು)

English summary
Smartphone may cause widespread damage to head, neck, back and shoulders if not used properly and scientifically. So, practice these yoga exercises to get relief from these pains. These useful yoga tips are given by Art of Living, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X