Get Updates
Get notified of breaking news, exclusive insights, and must-see stories!

ಯೋಗವೆಂದರೆ ಉಲ್ಲಾಸ, ಸಂತೋಷ, ವಿನೋದ

(ಸಂದರ್ಶನದ ಮುಂದುವರಿದ ಭಾಗ)

ಪ್ರಶ್ನೆ : ಯೋಗದಿಂದ ಮಾನವನ ಜೀವನಶೈಲಿಯನ್ನೇ ಬದಲಾಯಿಸಲು ಸಾಧ್ಯವೆ?

ಕಮಲೇಶ್ ಬರ್ವಾಲ್ : ಖಂಡಿತ. ಯೋಗವೇ ಜೀವನಶೈಲಿ. ಯೋಗದಿಂದ ನೈಸರ್ಗಿಕವಾಗಿ ಜೀವನವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯ.

ಪ್ರಶ್ನೆ : ಭಾರತದಲ್ಲಿ ಮಹಿಳಾ ಶಿಕ್ಷಣಕ್ಕಾಗಿ ನೀವು ಪ್ರಚಾರ ಮಾಡುತ್ತಿದ್ದೀರಿ. ಇದನ್ನು ಕೈಗೆತ್ತಿಕೊಳ್ಳಲು ಯಾರಿಂದಲಾದರೂ ಪ್ರೇರೇಪಣೆ ಸಿಕ್ಕಿತೆ?

ಕಮಲೇಶ್ ಬರ್ವಾಲ್ : ಹೌದು. ಭಾರತದಲ್ಲಿ ಮನೆಯ ಎಲ್ಲ ಚಟುವಟಿಕೆಗಳು ಮಹಿಳೆಯ ಸುತ್ತ ಸುತ್ತುತ್ತಿರುತ್ತವೆ. ನಮ್ಮ ದೇಶದಲ್ಲಿ ಮಹಿಳೆ ಕುಟುಂಬ, ಸಮಾಜವನ್ನು ಸಂಭಾಳಿಸುವುದರ ಜೊತೆಗೆ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಿರುತ್ತಾಳೆ. ಒಬ್ಬ ವಿದ್ಯಾವಂತ ಸಶಕ್ತ ಮಹಿಳೆ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಲ್ಲಳು. ಹೆಣ್ಣುಮಗಳು ಶಾಲೆಗೆ ಹೋಗದೆ ಭಾರತ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಿಲ್ಲ.

ನಾನು ಬೆಂಗಳೂರಿನಲ್ಲಿ ಭಾನುಮತಿ ನರಸಿಂಹನ್ ಅವರನ್ನು ಭೇಟಿ ಮಾಡಿದಾಗ ನನ್ನ ಯೋಚನಾ ಲಹರಿಯೇ ಬದಲಾಯಿತು. ಇಡೀ ಭಾರತದಾದ್ಯಂತ ಅವರು ಮುನ್ನಡೆಸುತ್ತಿರುವ 400 ಶಾಲೆಗಳಲ್ಲಿ ಉಚಿತ ಪಾಠ ಪಡೆಯುತ್ತಿರುವ 40 ಸಾವಿರ ವಿದ್ಯಾರ್ಥಿಗಳಲ್ಲಿ ಶೇ.50ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಈ ಉದಾತ್ತ ಕೆಲಸದಿಂದ ಪ್ರೇರೇಪಣೆ ಪಡೆದು ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಅಭಿಯಾನ ಆರಂಭಿಸಿದೆ. [ಯೋಗ ಕುರಿತು ಸರಣಿ ಲೇಖನ ಆರಂಭ]

Art of Living Yoga expert Kamlesh Barwal interview

ಪ್ರಶ್ನೆ : ಜನರಿಗೆ ಸಂತೋಷ ನೀಡುವಂತೆ ವಿಭಿನ್ನ ರೀತಿಯಲ್ಲಿ ನೀವು ಯೋಗ ಕಲಿಸುತ್ತೀರಿ. ಆದರೆ, ನಿಮ್ಮ ಜೀವನದಲ್ಲಿ ಯೋಗ ಕಲಿಸುವಾಗ ತಮಾಷೆಯ ಸಂಗತಿಗಳು ಜರುಗಿವೆಯಾ?

ಕಮಲೇಶ್ ಬರ್ವಾಲ್ : ತಮಾಷೆ ಅಲ್ಲದಿದ್ದರೂ ಎಲ್ಲೆಲ್ಲೂ ಸಂತೋಷದ ಮತ್ತು ವಿನೋದಮಯ ವಾತಾವರಣವಿರುತ್ತದೆ. ಹಲವು ಬಾರಿ ಯೋಗಾಸವನ್ನು ನಾವು ಗಂಭೀರವಾಗಿಸಿ ಅನಾಕರ್ಷಣೀಯವಾಗಿಸುತ್ತೇವೆ. ಈಗಾಗಲೆ ವಿಶ್ವದಲ್ಲಿ ಚಿಂತೆಗೀಡು ಮಾಡುವಂಥ ಹಲವು ಸಂಗತಿಗಳಿವೆ. ಆದರೆ ಅವರು ನನ್ನ ತರಗತಿಗೆ ಬಂದಾಗ ಅವರು ಉಲ್ಲಸಿತರಾಗಿರಬೇಕು, ಮನಸ್ಸಿನ ಸಂತೋಷದ ಲಾಭ ಪಡೆಯಬೇಕು, ಪ್ರತಿಕ್ಷಣವನ್ನೂ ಆನಂದಿಸಬೇಕು. ಅವರು ತಿರುಗಿ ಹೋಗುವಾಗ ಹೊಸ ಹುರುಪಿನಿಂದ, ಚಿಂತೆಯ ಭಾರ ಹೊತ್ತುಕೊಳ್ಳದೆ ಹೋಗುತ್ತಾರೆ. ಗಂಬೀರ ವ್ಯಕ್ತಿಗಳು ಆಸ್ಪತ್ರೆಯಲ್ಲಿ ಸಿಗುತ್ತಾರೆಯೋ ಹೊರತು ಯೋಗ ತರಗತಿಗಳಲ್ಲಲ್ಲ.

ನಾನು ಜಗತ್ತಿನಾದ್ಯಂತ ಸಂಚರಿಸುತ್ತೇನೆ, ಅಲ್ಲೆಲ್ಲ ಕೆಲ ಭಾಷೆ ತರ್ಜುಮೆ ಮಾಡುವಾಗ ತಮಾಷೆಯ ಸಂಗತಿಗಳು ಕೂಡ ಜರುಗುತ್ತವೆ. ಕೈಗಳಿಂದ ನೆಲವನ್ನು ಮುಟ್ಟಿ ಎಂದು ನಾನು ಹೇಳಿದಾಗ ಭಾಷಾಂತರಕಾರ ತುಟಿಯನ್ನು ಮುಟ್ಟು ಎಂದು ಹೇಳಿದರೆ ಹೇಗಾಗಿರಬೇಡ? ಜರ್ಮನಿಯ ಟಿವಿ ಸಂದರ್ಶನವೊಂದರಲ್ಲಿ, ಭಾರತದಲ್ಲಿ ತಾಯಿಯ ಗರ್ಭದಿಂದ ಬರುವ ಪ್ರತಿಯೊಂದು ಮಗುವೂ ಯೋಗಾಸನ ಭಂಗಿಯಲ್ಲಿಯೇ ಜನಿಸುತ್ತದೆ ಎಂದು ನಂಬಿದ್ದ. ಅದು ಸರಿಯಲ್ಲ ಎಂದು ಆತನಿಗೆ ಮನವರಿಕೆ ಮಾಡಲು ನನಗೆ ತುಸು ಸಮಯವೇ ಬೇಕಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+