ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹುಚ್ಚು ಹುಡುಗ ನೀನು, ಬಿಚ್ಚಿ ಹೇಳಲೇನು...’

By Staff
|
Google Oneindia Kannada News


ತಾನು ಪ್ರೀತಿಸಿದ ಹುಡುಗ ತನ್ನನ್ನು ಧಿಕ್ಕರಿಸಿದ ಅಂತ ಅವಳು ಅವನ ಮುಖಕ್ಕೆ ಆ್ಯಸಿಡ್‌ ಎರಚಿದ್ದು ಇದೆಯಾ? ತಾನು ಪ್ರೀತಿಸಿದ ಹುಡುಗ ತನಗೆ ದಕ್ಕಲಿಲ್ಲ ಅಂತ ಅವಳು ದೇವದಾಸ್‌ ಆಗಿದ್ದು ಇದೆಯಾ? ಅದು ಅವಳಿಗೆ ಸಾಧ್ಯವೇ ಇಲ್ಲ. ಏಕೆಂದರೆ ಅವಳು ಎಂದೂ ಆ ವ್ಯಕ್ತಿಯನ್ನು ಪ್ರೀತಿಸಿಯೇ ಇಲ್ಲ!

Women the opportunist?!ಕಾಲೇಜಿನಲ್ಲಿ ನನ್ನ ಮೊದಲ ದಿನದಿಂದಲೇ ಅವರಿಬ್ಬರ ಹನಿ ಹನಿ ಪ್ರೇಮ್‌ ಕಹಾನಿ ಸಮುದ್ರದಂತೆ ಭೋರ್ಗರೆಯುತ್ತಿತ್ತು. ಎಲ್ಲರ ಬಾಯಲ್ಲೂ ಅವರಿಬ್ಬರದು ಅಮರ ಪ್ರೇಮ ಕಥೆ ಅಂತ ಶ್ಲಾಘನೆ ಬೇರೆ! ಅವಳು ಮೀನಾ. ದಿನೇ ದಿನೇ ಪರಿಚಯದಿಂದ ಸ್ನೇಹಿತರಾದೆವು. ಓಹ್‌, ಅವಳಿಂದ ಅವರಿಬ್ಬರ ಪ್ರೀತಿ ಪ್ರೇಮದ ಮಾತುಗಳನ್ನು ಕೇಳಿ, ಅವನಿಲ್ಲದಿದ್ದರೆ ಒಂದು ಕ್ಷಣ ಇವಳಿಗೆ massive ಹೃದಯಾಘಾತ ಅಂತ ನಾನು ನಿರ್ಧರಿಸಿಬಿಟ್ಟಿದ್ದೆ.

ಅವರಿಬ್ಬರ ಓದು ಮುಗಿಯಿತು. ಯಥಾ ಪ್ರಕಾರ, ಅವಳಪ್ಪ ಹುಡುಗ ದುಡಿಯುತ್ತಿಲ್ಲ ಸೋ ಅವಳಿಗೆ ವರಾನ್ವೇಷಣೆ ಅಂದರು. ಅವರಿಗೆ ತಕ್ಕ ವರ ಸಿಕ್ಕ. ಮದುವೆ ದಿನ ಬಂತು. ಅವಳು ಒಮ್ಮೆಯೂ ವಿರೋಧಿಸದೆ ಇದ್ದದ್ದು ನನಗೆ ಕಸಿವಿಸಿ. ಕಾರಿನಿಂದಿಳಿಯುತ್ತಿದ್ದ ಮದುಮಗನನ್ನು ನೋಡುತ್ತಾ ಅವಳು ‘ಕರಿ ಮುದುಕ ಬಂದ’ ಅಂದದ್ದು ನನ್ನ ಕಿವಿಯಲ್ಲಿ ಇಂದೂ echo ಆಗುತ್ತಿದೆ. ಮದುವೆ ಮುಗಿಯಿತು. ನಾನಂದುಕೊಂಡೆ ಅವಳ ಜೀವನದಲ್ಲಿ ಎಲ್ಲವೂ ಮುಗಿಯಿತು ಅಂತ. ‘ಪ್ರೀತಿಸಿದವನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಲು ಹೇಗೆತಾನೇ ಸಾಧ್ಯ?’ ನಾನು ಕೊರಗುತ್ತಿದ್ದೆ. ಎಷ್ಟರ ಮಟ್ಟಿಗೆ ಅಂದರೆ ಅಮ್ಮ ನನಗೇ ಪ್ರೇಮ ಜ್ವರ ಬಂದಿದೆ ಅಂತ tension ಮಾಡ್ಕೊಂಡು ಮಲೈ ಮಹದೇಶ್ವರನಿಗೆ ಹರಕೆ ಹೊತ್ತ್ಕೊಳ್ಳೋ ಅಷ್ಟು!

ಮತ್ತೆ ನನ್ನ ಅವಳ ಭೇಟಿ ಅವಳ ಮದುವೆಯ ಎರಡು ವರ್ಷಗಳ ನಂತರ. ಅಬ್ಬ ಅವಳೆಷ್ಟು ಚೆನ್ನಾಗಿದ್ದಳು ಅಂದರೆ, ಆ ಕೂಡಲೇ ನನಗೂ ಯಾರನ್ನಾದರು ಮದುವೆ ಆಗ್ಬಿಡಬೇಕು ಅನ್ನಿಸಿತು! ಗುಳಿ ಬಿದ್ದ ಕಣ್ಣುಗಳು, ಕೃಶ ದೇಹದ ಮೀನಾಳನ್ನು ಮನಸ್ಸಿನ ಫ್ರೇಂನಲ್ಲಿ ಹಾಕಿಟ್ಟುಕೊಂಡಿದ್ದ ನನಗೆ ಅವಳನ್ನು ನೋಡಿ ಒಂದು ನಿಮಿಷ ನನ್ನ ಮೇಲೇ ಅನುಮಾನ ಬಂತು. ಈಗ ನಾವಿಬ್ಬರೂ ಪದೇ ಪದೇ ನೋಡುತ್ತಿರುತ್ತೇವೆ. ಮಾತನಾಡುತ್ತಿರುತ್ತೇವೆ. ಅವಳ ಬಾಯಿಂದ ಒಮ್ಮೆಯೂ ಅವನ ಮಾತಿಲ್ಲ! ಏನಾಶ್ಚರ್ಯ ಅಂತೀರಾ? ಉಹೂಂ, ಈಗ ನನಗೆ ಹಾಗನ್ನಿಸುವುದೇ ಇಲ್ಲ.

ಯಾಕೆ ಗೊತ್ತ? ನನಗನ್ನಿಸುತ್ತೆ ಹೆಣ್ಣು ಎಂದೂ ಒಬ್ಬ ವ್ಯಕ್ತಿಯನ್ನು ಪ್ರೀತಿಸಲು ಸಾಧ್ಯವೇ ಇಲ್ಲ. ಅವಳು ಪ್ರೀತಿಸುವುದು ಜೀವನವನ್ನು ಮಾತ್ರ! ಹಾಗಾದ್ರೆ ಅವಳನ್ನು ಅವಕಾಶವಾದಿ ಅಂತೀರಾ? ಛೇ, ಹಾಗಂದುಕೊಂಡ ಆಲೋಚನೆ ಬಗ್ಗೆಯೇ ನನಗೆ sympathyಇದೆ. ಅವಳು ಅವಕಾಶಕ್ಕಾಗಿ ಗಾಳ ಹಾಕುವುದಿಲ್ಲ. ಜೀವನವನ್ನು ಬಾಚಿ ತಬ್ಬಿಕೊಳ್ಳುತ್ತಾಳೆ. ಅವಳಿಗೂ ಜೀವನ ಪ್ರೀತಿಗೂ ಒಂದು ಮಾತಿಲ್ಲದ ಒಪ್ಪಂದವಿದೆ. ಈ familyಗಿಂತ ಬೇರೆ ಸ್ಥೈರ್ಯ ಇಲ್ಲ ಅಂತ ಅವಳಿಗೆ ಗೊತ್ತಿದೆ.

ಗಂಡು egoವನ್ನು ತಣಿಸಲು ಆಕೆ ಕ್ಷಮಯಾಧರಿತ್ರಿ ಅನ್ನುವ ಬಿರುದಿಗೆ ಒಗ್ಗಿಕೊಂಡಿಲ್ಲ. ಬದಲಿಗೆ, ದ್ವೇಷ ಆಕೆಯ dictionaryಯಲ್ಲಿ ಇಲ್ಲವೇ ಇಲ್ಲ. ಪ್ರತಿ ಕ್ಷಣವೂ ಆಕೆ ಎಲ್ಲರನ್ನೂ ಪ್ರೀತಿಸಬಲ್ಲಳು. ಅದೊಂದೇ ಅವಳಲ್ಲಿ ಸ್ಥಾಯಿ. ಈ ಭೂಮಿ ಮೇಲಿರುವ ದೇವದಾಸ್‌ಗಳನ್ನು ಕರೆದು ತಲೆ ನೇವರಿಸಿ ‘ಹುಚ್ಚು ಹುಡುಗಾ ಇನ್ನೂ ಬಿಚ್ಚಿ ಹೇಳಲು ಏನು ತಾನೆ ಇದೆ? ಇಷ್ಟಿಲ್ಲದೆ ಒಲವಿನ ಈ ಬದುಕನ್ನು ವಿಸ್ಮಯ ಅಂತಾರೇನೋ?!’ ಅನ್ನಬೇಕು ಅನ್ನಿಸುತ್ತಿದೆ ನನಗೆ.

ಅವನು ಪ್ರತೀ ದಿನವನ್ನೂ ನಾಳೆ ಎಂಬುದು ಇಲ್ಲವೇ ಇಲ್ಲ ಅನ್ನುವ ಹಾಗೆ ಬದುಕಬಯಸುತ್ತಾನೆ. ಅವಳು ಪ್ರತಿ ಕ್ಷಣವನ್ನು ‘ಈಗಷ್ಟೇ ಆರಂಭ’ ಅನ್ನುವಹಾಗೆ ಬದುಕಲಿಚ್ಛಿಸುತ್ತಾಳೆ. ಎಲ್ಲ ತುಂತುರೂ ಅವಳಿಗೆ ಮುಂಗಾರು ಮಳೆ. ಒಂದು ಹನಿಯೂ ಅವನಿಗೆ ಚಂಡ ಮಾರುತ. . . . . . . .

ಹಲೋ, ನೀವು ಹೀಗೇ ಇದ್ರೆ ನನ್ನ ಈ ಉದ್ದಂಡ ಸ್ವಗತ ನಿಲ್ಲುತ್ತೆ ಅನ್ನುವ ಕಲ್ಪನೆಯಲ್ಲಿ ಇದ್ದೀರೋ ಹೇಗೆ? ಅರೆ, ಹೀಗೆ ನೀವು ಹುಬ್ಬುಗಂಟಿಕ್ಕೊಂಡು, ಗೊಣಗಿಕೊಂಡು, ಒಪ್ಪಿಕೊಳ್ಳದೆ, ಮೆಚ್ಚಿಕೊಂಡು, ಮುಗುಳುನಗುತ್ತಾ ಹೊರಟು ಬಿಟ್ರೆ ಬಿಟ್ಟ್ಬಿಡ್ತೀನಾ?

ನನ್ನ ಲಹರಿಯಲ್ಲಿ full stop ಇಲ್ಲದಿರಬಹುದು ಆದರೆ ನನಗೆ ಗೊತ್ತಿರುವ, ಮುಖಕ್ಕೆ ರಾಚುವಂತಹ ಒಂದು ಸತ್ಯವನ್ನು ಹೇಳಿಬಿಡುತ್ತೇನೆ ಆಮೇಲೆ ನಿಮ್ಮಿಷ್ಟ ಬಂದ ಹಾಗೆ ನೀವು ಮಾಡಿ. ಅದು ಏನೂ ಅಂದ್ರೆ every rule has an exception ಒಪ್ಪ್ತೀರಿತಾನೆ? ಇನ್ನೂ ಒಂದು ನಿಜ ಹೇಳ್ತೀನಿ, ಈಗ ನೀವು ಎಲ್ಲಿದ್ದೀರೋ ಅಲ್ಲೇ ಇದ್ದರೂ ಸರಿ ನಾನು ನಿಂತಲ್ಲೇ ನಿಂತು ಈ ಘಳಿಗೆಯಲ್ಲಿ ನಿಮ್ಮನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದೇನೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X