ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಥಿಂಗ್ ಈಸ್ ಪರ್ಮನೆಂಟ್ ಬಟ್ ದಿ ಚೇಂಚ್

By Staff
|
Google Oneindia Kannada News


ಎಲ್ಲವೂ ಅನಿಶ್ಚಯದ ಇಲ್ಲಿ ಬದಲಾವಣೆಯೊಂದೇ ಶಾಶ್ವತ. ಹವಾಮಾನದ ಬದಲಾವಣೆಯಂತೆ ಸಂಬಂಧಗಳನ್ನು ಎಲ್ಲಿ ಸಾಕೆನಿಸುವುದೋ ಅಲ್ಲಿ ಕಿತ್ತೊಗೆದು ಫಾರ್ ಎ ಚೇಂಜ್ ಅಂದುಕೊಳ್ಳುತ್ತಾ ಬದಲಾವಣೆಯ ಬೆನ್ನೆತ್ತಿ ಹೋಗುವುದೇ ಈ ಬದಲಾವಣೆಯ ಉದ್ದೇಶಿತ ಬದಲಾವಣೆಯೇ?!

What is permanent in the Universe?ಅದೊಂದು ಊರು. ಹೌದು, ಪ್ರಾಣವೂ ಸೇರಿದಂತೆ ಎಲ್ಲವನ್ನೂ ಪರಿತ್ಯಾಗಮಾಡಲು ಒಂದಿಷ್ಟು ಜನ ಹೋಗ ಬಯಸುವ ಊರು. ನಾನು ಆಕೆಯನ್ನು ಭೇಟಿಯಾಗಿದ್ದೇ ಅಲ್ಲಿ. ಗೋದಾಮಿನ ಮುಂದೆ ನಿಂತು ಮುಗ್ಗಲು ಅಕ್ಕಿಯನ್ನು ತನ್ನಂತೆ ಇರುವ ಮತ್ತೊಂದಿಷ್ಟು ಹೆಂಗಸರಿಗೆ ಹಂಚುತ್ತಿದ್ದರು ಆಕೆ.

ಆಲ್ಲಿನ ಸ್ಥಿತಿ, ಪರಸ್ಥಿತಿಯನ್ನು ನೋಡಿ ನನ್ನ ಗಂಟಲು ಆರಿದಂತೆ ಕಣ್ಣು ಒಣಗುತ್ತಿತ್ತು! ಇಷ್ಟೆಲ್ಲಾ ಮನೋದ್ರಾವಕ ವಾತಾವರಣದಲ್ಲೂ, ತೊಗಲು ಸುಕ್ಕುಗಟ್ಟಿದ್ದರೂ ಆಕೆಯ ಕಣ್ಣಲ್ಲಿ ಒಂದು ಹೊಳಪು! ಸರಿ, ನಾನು ಬಿಡುತ್ತೇನಾ? ನನ್ನ ಮಾತಿನ ಚಪಲದ ಭೂತ ಮೈಮೇಲೆ ಬಂತು! ಹೋಗಿ ಆಕೆಯನ್ನು ಪರಿಚಯ ಮಾಡಿಕೊಂಡ್ಬಿಟ್ಟೆ!

ಆಕೆಗೀಗ ಎಪ್ಪತ್ತೈದು ವಯಸ್ಸು. ಹತ್ತು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಾಗ ಎಲ್ಲದರಲ್ಲೂ ನಿರಾಸಕ್ತಿ. ಬ್ರಹ್ಮಾಂಡವೂ ಶೂನ್ಯ ಎನ್ನುವ ಭಾವ. ತುಂಬಿದ ಸಂಸಾರವನ್ನು ತೊರೆದು ಪ್ರಾಣ ತ್ಯಾಗಕ್ಕಾಗಿ ಇಲ್ಲಿಗೆ ಬಂದವರು. ಆದರೆ ಆದದ್ದೇನು? ಇಲ್ಲಿಗೆ ಬಂದೊಡನೆ ಜೀವನದಲ್ಲಿ ಬಂಜರೆನಿಸಿದ್ದ ಅವರ ಆಸಕ್ತಿ ಭೂಮಿ ಹಸಿಯಾಗತೊಡಗಿತು. ಬೀಜ ಬಿತ್ತಿದಂತಾಗಿ, ಹಸಿರು ಕೊನರಿತು!

ಅರೆ, ಏನಿವಳು ಯಾವುದೋ ಪ್ರಬಂಧ ಸ್ಪರ್ಧೆಗೆ ಲೇಖನ ಕಳಿಸುತ್ತಿದ್ದಾಳಾ ಅಂದುಕೊಳ್ಳುತ್ತಿದ್ದೀರಾ?! wait a minute, ತುಂಬಾ ಸರಳವಾಗಿಯೇ ಹೇಳ್ತೀನಿ. ಏನು ಗೊತ್ತಾ. . . . . .ಆಕೆ ಇಲ್ಲಿಗೆ ಬಂದ ಮೇಲೆ ನೂರಾರು ಹೆಂಗಸರನ್ನು ನೋಡಿದರಂತೆ. ಮಾಮೂಲು, ಒಬ್ಬೊಬ್ಬರದು ಒಂದೊಂದು ಕಥೆ, ಕಾರ್ಪಣ್ಯ!

ಆಕೆನೂ ಬಹುಶಃ ನನ್ನ ನಿಮ್ಮತರಹ ಯೋಚನೆ ಮಾಡೋ ಗಿರಾಕಿಯಿರ್ಬೇಕು ಅನ್ನಿಸುತ್ತೆ. ಈ ಕಥೆಗಳನೆಲ್ಲಾ ಕೇಳಿ ಇನ್ನೂ ವೈರಾಗ್ಯ ಬರಬೇಕಿದ್ದ ಅವರಿಗೆ ದಿನೇ ದಿನೇ ಬದುಕಿನಲ್ಲಿ ಆಸಕ್ತಿ ಹೆಚ್ಚಿತಂತೆ. ಅದಕ್ಕೆ ಆಕೆ ಕೊಟ್ಟ ಕಾರಣ ಏನು ಗೊತ್ತಾ ನೆಮ್ಮದಿಗೆ ಬೇಕಾಗಿರೋದು ಪರಿತ್ಯಾಗವಲ್ಲ ಬದಲಾವಣೆ ಅಂತ! ಹೌದ್ಹೌದು, ಈಗ ನಿಮಗನ್ನಿಸಿತಲ್ಲ ಹಾಗೇ ನನಗೂ ಆಕೆ ಹೀಗೆ ಹೇಳಿದತಕ್ಷಣ ಈ ಮಾತೆಲ್ಲಾ ಯಾವುದೋ ಒಂದು ಒಳ್ಳೆ ಪುಸ್ತಕದಲ್ಲಿ ಓದೋದಿಕ್ಕೆ ಚೆನ್ನ ಅನ್ನಿಸಿತು!

ಇನ್ನೂ ಏನೇನೋ ಉಪನ್ಯಾಸ ಕೊಡ್ತಾನೆ ಇದ್ದರು ಆಕೆ. ಯಥಾಪ್ರಕಾರ ನನ್ನ ತಲೆಯಲ್ಲಿ ಗುಂಗಿರಾಣಿಯ ನಟುವಾಂಗ ಶುರುವಾಯ್ತು! ಹವಾಮಾನದ ಬದಲಾವಣೆಯಂತೆ ಒಲ್ಲದ, ಒಗ್ಗದ ಸಂಬಂಧಗಳನ್ನೂ ಬದಲಾಯಿಸುವಂತಿದ್ದರೆ? ವಾಹ್, ಆ ಆಲೋಚನೆಯೇ ಎಷ್ಟೊಂದು ಹಿತ ಅನ್ನಿಸಿಬಿಡ್ತು ಆ ಕ್ಷಣದಲ್ಲಿ.

ಸುಮ್ಮನಿರ್ತೀನಾ? ಆಕೆಗೆ ಅದನ್ನು ಹೇಳಿಯೇಬಿಟ್ಟೆ! ಅದಕ್ಕೇನಂದರು ಗೊತ್ತಾ ಅವರು ಹಾಗೇ ಬೇಡೆನಿಸುವುದು, ಬದಲಾಯಿಸಬೇಕು ಎನಿಸುವುದು ಸಂಬಂಧವೇ ಅಲ್ಲ. ಹಾಗೇ ಉಳಿದುಕೊಳ್ಳಲಿ ಎಂದು ಯಾವುದನ್ನು ಈ ಮನಸ್ಸು ಕಾಡಿ ಬೇಡಿಕೊಳ್ಳುವುದೋ ಅದು ಸಂಬಂಧ. ಸಂಬಂಧಗಳು ಬದಲಾಗದೆ ಉಳಿಯಬೇಕಾದ್ರೆ ನಾವು ಬದಲಾಗುತ್ತಿರಬೇಕು. ನಮ್ಮಲ್ಲಿ ಬದಲಾವಣೆ ನಿರಂತರ ಪ್ರಕ್ರಿಯೆಯಾಗಿರಬೇಕು. . . . . . . ಗಂಡಿಗೆ ಅದು ಅರ್ಥವಾಗೋಲ್ಲ. ಹೆಂಗಸು ಅದನ್ನು ಅರ್ಥ ಮಾಡಿಕೊಳ್ಳೋಹೊತ್ತಿಗೆ ಹಣತೆಯಲ್ಲಿ ಕರಕಲಾದ ಬತ್ತಿ ಉಳಿಯೋ ಹೊತ್ತಾಗಿರುತ್ತೆ! ಅಂದರು ಆಕೆ. ಓಹ್, ಸಿಕ್ಕಾಪಟ್ಟೆ ಭಾರವಾದ cosmism ಅನ್ನಿಸಿತು ನನಗೆ. ಅಯ್ಯೋ, ನಿಮ್ಮ್ಹತ್ರೇನು ಮುಚ್ಚುಮರೆ? ನೇರವಾಗೇ ಹೇಳ್ತೀನಿ ಆಕೆ ಅದೇನು ಹೇಳಿದ್ರೋ ನನಗೆ ಅರ್ಥವೇ ಆಗ್ಲಿಲ್ಲಪ್ಪಾ!

ಥಂಡಿಕಾಲದಲ್ಲಿ ಬಿಸಿಬಿಸಿಯಾಗಿ ಈರುಳ್ಳಿ ಬಜ್ಜಿ, ಆಲೂಗೆಡ್ಡೆ ಬೋಂಡ ಮಾಡಿ ತಿಂದು ಬೆಚ್ಚಗೆ ದಾವಳಿ ಹೊದ್ದು ಮಲಗೋದು; ಬೇಸಿಗೆಯಲ್ಲಿ ಕಲ್ಲಂಗಡಿ, ಕರಬೂಜಗಳ ಪಾನಕ ಮಾಡಿ ಕುಡಿದು ಫ್ಯಾನ್ ಕೆಳಗೆ ಕೂತ್ಕೊಳ್ಳೋದು. ಇವೇ ನನ್ನ ಜೀವನದ ಅತೀ ದೊಡ್ಡ philosophy ಅಂತ ಆಕೆಗೆ ಹೇಳ್ಬೇಕು ಅಂತ ನನಗನ್ನಿಸಿತು ಆದರೆ ಏನು ಮಾಡ್ಲೀ ಗಿರ್ ಅಂತ ಸುತ್ತುತ್ತಿದ್ದ ತಲೆ ಬಾಯಿಂದ ಹೊರಬರುವ ಹಾಗೆ ಗಂಟಲಲ್ಲಿ ಧ್ವನಿಯನ್ನೇ ಹೊರಡಿಸಲಿಲ್ಲವಲ್ಲ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X