ಹಡಗು ನಿನ್ನದು ಕಡಲೂ ನಿನ್ನದು ಮುಳುಗದಿರಲೀ ಬದುಕು...
ಒಂದು ಕಡೆ ಹಿಮಾಲಯ. ಅಲ್ಲೇ ಕೆಳಗೆ ಮಹಾ ಸಾಗರ. ಅತ್ತ ಕಡೆ ಮರೀಚಿಕೆಯ ಮನೆ ಮರುಭೂಮಿ. ಇತ್ತ ಕಡೆ ನಿತ್ಯ ಹರಿದ್ವರ್ಣದ ಕಾಡು! ಸೃಷ್ಟಿ ಎಷ್ಟೊಂದು ಅದ್ಭುತ. ಒಮ್ಮೆ ತಲೆ ನೇವರಿಸಿದಷ್ಟು ಸಮಾಧಾನ. ಮತ್ತೊಮ್ಮೆ ರುದ್ರ ರಮಣೀಯ. ಹಾಗಾದರೆ ಪ್ರಕೃತಿಯಲ್ಲಿ ಕಪ್ಪು ಚುಕ್ಕೆಯೇ ಇಲ್ಲವೇ? ಯಾಕಿಲ್ಲ ನನ್ನ ಪ್ರಕಾರ ಹೆಣ್ಣು ಗಂಡುಗಳ ಸೃಷ್ಟಿಯೇ ಪ್ರಕೃತಿಯ ವೈಫಲ್ಯ!
ಬೇಡವೆಂದರೂ ಒಂದು ಕಡೆ ಹಿಮಾಲಯ. ಅಲ್ಲೇ ಕೆಳಗೆ ಮಹಾ ಸಾಗರ. ಅತ್ತ ಕಡೆ ಮರೀಚಿಕೆಯ ಮನೆ ಮರುಭೂಮಿ. ಇತ್ತ ಕಡೆ ನಿತ್ಯ ಹರಿದ್ವರ್ಣದ ಕಾಡು! ಸೃಷ್ಟಿ ಎಷ್ಟೊಂದು ಅದ್ಭುತ. ಒಮ್ಮೆ ತಲೆ ನೇವರಿಸಿದಷ್ಟು ಸಮಾಧಾನ. ಮತ್ತೊಮ್ಮೆ ರುದ್ರ ರಮಣೀಯ. ಹಾಗಾದರೆ ಪ್ರಕೃತಿಯಲ್ಲಿ ಕಪ್ಪು ಚುಕ್ಕೆಯೇ ಇಲ್ಲವೇ? ಯಾಕಿಲ್ಲ ನನ್ನ ಪ್ರಕಾರ ಹೆಣ್ಣು ಗಂಡುಗಳ ಸೃಷ್ಟಿಯೇ ಪ್ರಕೃತಿಯ ವೈಫಲ್ಯ!
ವೋಲ್ವೋ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದೀರಾ? ಅದ್ಯಾವ್ದೋ ದೇಶದಲ್ಲಿ ನೀರಿನ ಮೇಲೆ ಹೋಗೋ ಬಸ್ಸು ಇದೆಯಂತಲ್ಲಾ ಅದರಲ್ಲೇ ಪ್ರಯಾಣ ಮಾಡಿದ್ದರೆ ನೀವು ಇದು ಗೌಣ ಅಂತೀರೋ ಏನೋ! ನೋಡೋಕ್ಕಂತೂ ಮಸ್ತಾಗಿರುವ ಆ ಬಸ್ಸಿನ ಪ್ರಯಾಣಾನೂ ಅಷ್ಟೇ ಸಖತ್ತಾಗಿರುತ್ತೆ ಅಂದ್ಕೊಂಡು ಬಸ್ಸು ಹತ್ತಿದೆ. ಮೈಸೂರು ಅರಮನೆಯ ಸಿಂಹಾಸನವನ್ನು ನೆನಪಿಸದಿದ್ದರೂ ಸುಖಾಸೀನವಂತೂ ಆಗಿತ್ತು. ಬಸ್ಸು ಭರ್ತಿಯಾಗಿತ್ತು. ನನ್ನ ಪಕ್ಕದ ಸೀಟು ಮಾತ್ರ ಖಾಲಿ. ಸದ್ಯ ಯಾವುದೇ ತರ್ಲೆ ತಾಪತ್ರಯ ಇಲ್ಲದೆ ಕೂತ್ಕೊಳ್ಳಬಹುದು ಅಂತ ನೆಮ್ಮದಿಯ ಉಸಿರು ಬಿಡುತ್ತಿರುವಾಗಲೇ. . . . .ಓಹ್ ಮೈ ಗಾಡ್!
ಆ ಅಚ್ಚಕೆಂಪು ಬಣ್ಣದ ಸೀರೆ ರವಿಕೆ, ಅದೇ ಬಣ್ಣದ ಲಿಪ್ಸ್ಟಿಕ್, ಕಾಕಡ ಕನಕಾಂಬರ ಸುತ್ತುಕೊಂಡಿದ್ದ ತಲೆ ಗಂಟು. ವಿಚಿತ್ರವಾಗಿ ಎದ್ದು ಕಾಣುತ್ತಿದ್ದ ಮೈಮಾಟ ಹೊತ್ತ ‘ಅದು’ ನನ್ನ ಪಕ್ಕ ವಕ್ಕರಿಸಿತು. ಅದು. . . . .ಅದು. . . .ಹೆಣ್ಣು? ಗಂಡು? ವೇಷ ಭೂಷಣದಿಂದ ಹೆಣ್ಣು ಅನ್ನಲೇ? ಅಥವಾ ಗಂಡು. . . ಅದು ನನಗೆ ಗೊತ್ತಿಲ್ಲ! ಏನು ಮಾಡಲೀ. . . .ಅಸಹ್ಯವಂತೂ ಆಗುತ್ತಿದೆ. ಯಾವುದೋ ಕಸಾಯಿಖಾನೆಯ ಮಧ್ಯದಲ್ಲಿ ನಿಂತಿದ್ದೇನೆ. ಕಟುಕ ಕೊಚ್ಚುತ್ತಿದ್ದ ಪ್ರಾಣಿಗಳ ರಕ್ತ ನನ್ನ ಮೈಮೇಲೆ ಸಿಡಿಯುತ್ತಿದೆ ಅನ್ನಿಸತೊಡಗಿತು! ಒಂದು ಕ್ಷಣ ಸಾರ್ವಜನಿಕ ಶೌಚಾಲಯದಲ್ಲಿ ಬೆತ್ತಲಾಗಿ ನಿಂತಿದ್ದೇನೆ ಅನ್ನಿಸಿತು! ನನ್ನ ಮೂಗಿಗೆ ಹೊಲಸು ಮೆತ್ತುಕೊಂಡಿದೆ. . . .ನೊಣ ಗುಯಿಂಗುಡುತ್ತಿದ್ದ ಹಾಗಾಯ್ತು! ವಾಂತಿಯ ಕಮಟಲು ವಾಸನೆ ಬಂದಂತಾಗಿ ತಲೆಸುತ್ತಿತು, ಕಣ್ಣು ಕತ್ತಲಿಟ್ಟುಕೊಂಡಿತು. ಈ ದೇಹಕ್ಕೆ ಈ ಮನಸ್ಸಿಗೆ ಇಷ್ಟೊಂದು ಹಿಂಸೆ ಎಂದೂ ಆಗಿರಲಿಲ್ಲ! ಈಗ್ಯಾಕೆ ಏನಾಯ್ತೂಂತ ಹೀಗಾಗುತ್ತಿದೆ? ಶ್ವಾಸಕೋಶ, ಹೃದಯಗಳ ಕೌಂಟ್ಸ್ miss ಆಗುತ್ತಿದೆ! ಬದುಕಬೇಕೆಂಬ ಆಸೆ ಅದಮ್ಯವಾಗಿರುವಾಗ ಅಂಟಾರ್ಟಿಕ ಖಂಡದಲ್ಲಿ ನಿಸ್ಸಹಾಯಕಳಾಗಿ ನಿಂತುಬಿಟ್ಟಿದ್ದೇನೆ ಅನ್ನಿಸುತ್ತಿತ್ತು!
ಅಬ್ಬ, ಡ್ರೈವರ್ ಆ ‘ಅದು’ ನೋಡಲು ಕನ್ನಡಿ ಸರಿಮಾಡಿಕೊಂಡಾಗ ನನ್ನ ಮುಖದ ಮೇಲೆ ಬೆವರು. . . .ಜನರೆಲ್ಲ ವಿಚಿತ್ರವಾಗಿ ವಕ್ರ ವಕ್ರವಾಗಿ ಆ ‘ಅದು’ವನ್ನು ನೋಡುತ್ತಿದ್ದಾಗ ಮೈಮೇಲೆಲ್ಲಾ ಚೇಳು ಕುಟುಕಿದ ಅನುಭವ. . . .ಅಷ್ಟರಲ್ಲೇ ಲ್ಯಾಪ್‌ಟಾಪ್‌ಅನ್ನು ಹೆಗಲಿಗೆ ಹಾಕಿಕೊಂಡು ಟಿಪ್‌ಟಾಪ್ ಆಗಿ ಬಸ್ಸುಹತ್ತಿದವನನ್ನು ನೋಡಿದೆ. ಅವನು ನನ್ನ ಗಂಡನಲ್ಲ. ಆದರೂ ಒಂದು ಕ್ಷಣ ಅವನ ಸಾಮಿಪ್ಯ, ಆಸರೆ ಸಿಕ್ಕಿ ನಾನು ಬಚಾವಾದರೆ ಸಾಕು ಅನ್ನಿಸಿತು! ಇಷ್ಟು ಭಯಂಕರ ಅಸಹ್ಯ, ಹಿಂಸೆ ಅನ್ನಿಸುತ್ತಿದ್ದರೂ ನನಗೆ ಏನೂ ಆಗಲಿಲ್ಲ! ಯಾಕೆ ಗೊತ್ತಾ? ಆ ಗೀತಾ ಟೀಚರ್ ಹೇಳಿದ್ದು ನೆನಪಾಯ್ತು “calamity always will be proportionate to the stature of the man”. ಇದೆತಾನೇ ನಾಗರೀಕ ಪ್ರಾಣಿಗಳ ನೈತಿಕ ಗೊಂದಲ! ಬಸ್ಸು ಹೊರಟಿತು. ಅನಿವಾರ್ಯತೆ ನನ್ನನ್ನು ಸುಧಾರಿಸಿತು. Life goes on.
ಪ್ರಯಾಣ ಮುಗಿಯುವಷ್ಟರಲ್ಲಿ ನಮ್ಮಿಬ್ಬರ ನಡುವೆ ಮಾತೂ ನಡೆಯಿತು! ನಿಮಗೆ ಕೇಕೇ ಹಾಕಿಕೊಂಡು ನಗಬೇಕು ಅನ್ನಿಸುತ್ತಿದೆಯಾ?! ಇಲ್ಲಿಗೂ ಸೇರದೆ ಅಲ್ಲಿಯೂ ಸಲ್ಲದೆ ಆ ವ್ಯಕ್ತಿ ಈ ಭೂಮಿ ಮೇಲೆ ಐವತ್ತೈದು ವರ್ಷಗಳನ್ನು ಕಳೆದ್ದದ್ದಾಗಿದೆ. ನಾನು ಅನುಭವಿಸಿದ ಯಾತನೆಯನ್ನು ಆ ವ್ಯಕ್ತಿ ನಮ್ಮೆಲ್ಲರನ್ನು ಕಂಡು ಅನುಭವಿಸಿದ್ದಾಗಿದೆ! ಆದರೂ ಎಲ್ಲಿಯೂ ಸೋಲದೆ, ಪಲಾಯನ ಮಾಡದೆ ತನ್ನ ಕಾಲ ಮೇಲೆ ತಾನು ನಿಂತು, ಕೈಬಿಟ್ಟ ಕುಟುಂಬವನ್ನೂ ಒಂದೊಮ್ಮೆ ಕೈಹಿಡಿದು, ಒಬ್ಬ ಅನಾಥ ಹೆಣ್ಣು ಮಗಳನ್ನು ದತ್ತು ತೆಗೆದುಕೊಂಡು ಅಮ್ಮನಾಗುವ ಸುಖವನ್ನು ಕಂಡು, ಈಗ ಪರ್ಸ್‌ನಿಂದ ಮೊಮ್ಮಗಳ photo ವನ್ನು ತೆಗೆದು ತೋರಿಸುವಷ್ಟು ಕಾಲ ಸಾಗಿ ಬಂದಿದೆ.
ಅಂಬೆ ಅಂಬಿಕೆ ಅಂಬಾಲಿಕೆಯರ ಶಪಥವನ್ನು ಗೌರವಿಸುತ್ತೇವೆ ನಾವು. ಅರ್ಜುನ ಬೃಹನ್ನಳೆಯಾಗಿದ್ದನ್ನು justify ಮಾಡುತ್ತೇವೆ ನಾವು. ಆದರೆ ವಾಸ್ತವದಲ್ಲಿ ನಾವೆಲ್ಲಾ ಎಷ್ಟು hypocrites! ನಾನಿಲ್ಲಿ ಸಲಿಂಗ ಕಾಮ ಪ್ರೇಮವನ್ನು support ಮಾಡುತ್ತಿದ್ದೇನೆ ಅಂದುಕೊಳ್ಳಬೇಡಿ ಪ್ಲೀಸ್! ವೈಜ್ಞಾನಿಕ ಕಾರಣಗಳು ಬಗಲಿಗೇ ಅಂಟುಕೊಂಡಿದ್ದರೂ ಸಹ ವಿಷಯವನ್ನು ವಸ್ತುನಿಷ್ಠವಾಗಿ ಒಪ್ಪಿಕೊಳ್ಳದೆ ನಮ್ಮ ದೈನಿಕ ಹುಲುತನದಲ್ಲೇ ಬಾಳಿ ಮರೆಯಾಗುತ್ತಿದ್ದೇವಾ ನಾವು ಅನ್ನಿಸುತ್ತಿದೆ ನನಗೆ. ಅದಕ್ಕೇ ಹೀಗೆ ಹೇಳಿದೆ. ಆದರೂ ನೀವೇನೇ ಅನ್ನಿ ಯಾವುದೇsex ಅನ್ನುವ ಹಣೆಪಟ್ಟಿ ಅಂಟಿಸದೆ, ದೇಹದೊಳಗಿರುವ ಆತ್ಮವನ್ನು ಮಾತ್ರ ಒಪ್ಪಿಕೊಳ್ಳುವುದು ನಮಗೆ ಮಾತ್ರ ಸಾಧ್ಯವಾ ಅನ್ನಿಸುತ್ತೆ ನನಗೆ. ನಮ್ಮ ಹುಟ್ಟಿನಷ್ಟೇ ಹಳೇ ಕಣ್ಣುಗಳಾದರೂ ನಿತ್ಯವೂ ಹೊಸ ದೃಷ್ಟಿಯಿಂದ ನೋಡಬಲ್ಲೆವು ನಾವು. ಆದರೆ ಅವನು ಹಾಗಲ್ಲ ಪಾಪ ಅವನಿಗೆ ಪ್ರಾಕೃತಿಕ limitations ಇವೆಯಲ್ಲ! ಪ್ರಕೃತಿಯೇ ಅಷ್ಟು ಇಷ್ಟು ವೈಫಲ್ಯದಿಂದ ಕೂಡಿರುವಾಗ, ಅಷ್ಟು ಇಲ್ಲಿಷ್ಟು ಎದ್ದು ಕಾಣುವ ನನ್ನ ನಿಮ್ಮ ತಪ್ಪುಗಳೇನು ಮಹಾ ಅಲ್ಲವಾ?!
ಅದೆಲ್ಲಾ ಬಿಡಿ. ಈಗ ಬಿಸಿ ಬಿಸಿ ಅನ್ನಕ್ಕೆ ಒಂದು ಮಿಳ್ಳೆ ಕಡ್ಲೇಕಾಯಿ ಎಣ್ಣೆ ಹಾಕಿಕೊಂಡು ಹುಣಸೇ ತೊಕ್ಕಿನಿಂದ ಕಲೆಸಿಕೊಂಡು ತಿಂದರೆ. . . .ಆಹ್, ಹೇಗಿರುತ್ತೆ ಅಲ್ಲ್ವಾ? ಬಾಯಲ್ಲಿ ನೀರು ಬರುತ್ತಿದೆ. ನಿಮಗೇನಾದ್ರು ಹುಣಸೇ ತೊಕ್ಕಿನ recipe ಗೊತ್ತಿದ್ದ್ರೆ ನನಗೆ ಕೊಡ್ತೀರೇನ್ರೀ?!
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications