ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೌದು ನಾವು ಹೆಂಗಸರೇ ಹೀಗೆ!

By Staff
|
Google Oneindia Kannada News


ನಾವು ಹೆಂಗಸರೇ ಹೀಗೆ ನಮ್ಮಲ್ಲಿ ಅಗಾಧವನ್ನು ಸಾಧಿಸೋ ಶಕ್ತಿ ಇದೆ ಅಂತ ತಿಳಿದ್ಕೊಂಡಿರ್ತೀವಿ, ಅವಕಾಶಗಳಿಗಾಗಿ ಹಪಹಪಿಸುತ್ತೀವಿ ಆದರೆ ಅವಕಾಶ ನಮ್ಮ ಕಾಲ ಬಳಿನೇ ಅಂಗಾತವಾಗಿ ಬಿದ್ದಿದೆ ಅಂತ ಗೊತ್ತಾದಾಗ ಗೋಡೆಗೆ ಮುಖ ಮಾಡಿ ನಿಲ್ತೀವಿ.

ಗಂಡನ ವರ್ಗಾವಣೆಯೊಂದಿಗೆ ನಮ್ಮ ಬೇರುಗಳನ್ನೇ ಕತ್ತರಿಸಿಕೊಂಡು ಊರಿಂದ ಊರಿಗೆ ಅಲೆಮಾರಿಗಳಾಗುವ ನಾವು, ನಮ್ಮ ಗುರಿಮುಟ್ಟೊ ವರ್ಗದ ಆರ್ಡರ್‌ ಬಂದಾಗ ಸಂಸಾರನ ಪತಿಗೆ ಬಿಟ್ಟು ತಾತ್ಕಾಲಿಕವಾಗಿಯೂ ಪರದೇಶಿ ಆಗೋದೆ ಇಲ್ಲ!

ಮನೆ ಮಾಡಿಟ್ಟು ಮಕ್ಕಳನ್ನು ಕೊಟ್ಟು ‘ನೀನಿಲ್ಲಿ ನಾನಲ್ಲಿ’ ಎಂದು ದುಬೈಗೆ ಹಾರುವ ಗಂಡನನ್ನು ಅಸಹಾಯಕತೆ ತೋರಿಸಿಕೊಳ್ಳದೆ ಸಹಿಸಿಕೊಳ್ಳ್ತೀವಿ ಆದ್ರೆ ಒಂದ್ವಾರ ಮಕ್ಕಳನ್ನು ಅವರಪ್ಪನ ಜೊತೆ ಬಿಟ್ಟು ಮತ್ತೆ ಮಗಳಾಗಿ ತವರು ಮನೆಗೆ ಕೈ ಬೀಸಿ ಕೊಂಡು ಹೋಗಿಬರಲು ಮೀನ ಮೇಷ ನೋಡ್ತೀವಿ.

ತಿಂಗಳಿಗೆ ಇಪ್ಪತ್ತು ದಿನ ಟೂರಿಂಗ್‌ ಕೆಲಸದಲ್ಲಿರೋ ಗಂಡನ ಸಾಮಿಪ್ಯ ಇಲ್ಲದೆ ಪತಿವ್ರತೆಯರಾಗಿರ್ತೀವಿ, ಆದ್ರೆ ಆಫಿ‚ೕಸಿನ ವರ್ಕ್‌ಶಾಪ್‌ ಅಟ್ಟೆಂಡ್‌ ಮಾಡೋಕ್ಕೆ ಒಂದ್ವಾರ ಬೇರೆ ಊರಿಗೆ ಹೊಗೋಕ್ಕೆ ಮನೆಯಲ್ಲಿ ಎಲ್ಲರ ಪರ್ಮೀಷನ್ಗೆ ಕಾಯ್ತೀವಿ.

ಮನಸು ಮೆದುಳು ಎಲ್ಲ ಕಲಸು ಮೇಲೊಗರವಾದರೂ ಗಂಡನನ್ನು ಮಾತ್ರ ಬಿಟ್ಟುಕೊಡದೆ ಸುವರ್ಣ ಸಂಕೋಲೆಯೆನಿಸಿದರೂ ತಾಯ್ತನವನ್ನು ಎತ್ತಿ ಹಿಡೀತಿವಿ. ನಾವು ಹೆಂಗಸರು ಮಾತ್ರ ಸಂಸ್ಕೃತಿಯ ಹರಿಕಾರರು ಅನ್ನುವ ಹುಂಬ ನಂಬಿಕೆಯನ್ನು ಸೆರಗಿನಲ್ಲೇ ಕಟ್ಟಿಕೊಂಡು ತಿರುಗ್ತಿರ್ತೀವಿ!

ನನಗೆ ಈತರಹ ಎಲ್ಲ ಅನ್ನಿಸಿದಾಗ ನಮ್ಮ ಕಾಲೇಜಿನ ಇಂಗ್ಲೀಷ್‌ ಲೆಕ್ಚರರ್‌ ಲಕ್ಷ್ಮಿ ನಾರಾಯಣ ನೆನಪಾಗ್ತಾರೆ. ಶೇಕ್ಸ್ಪಿಯರ್‌ನ ಅರೆದು ಕಷಾಯ ಮಾಡಿ ಕುಡಿದುಬಿಟ್ಟಿದ್ದಾರೆ ಪುಣ್ಯಾತ್ಮ. paradoxಅನ್ನು ಶೇಕ್ಸ್ಪಿಯರ್‌ನಷ್ಟು ಪ್ರಬಲವಾಗಿ ವರ್ಣಿಸುವವರು ಯಾರೂ ಇಲ್ಲ ಅಂತ ಒತ್ತಿ ಒತ್ತಿ ಹೇಳ್ತಾನೆ ಇದ್ರು. ಈಗ ಅವ್ರೇನಾದರು ಸಿಕ್ಕರೆ ನನಗೆ ಏನು ಹೇಳಬೇಕು ಅನ್ನಿಸುತ್ತಿದೆ ಗೊತ್ತಾ? ‘ ಸಾರ್‌, ಶೇಕ್ಸ್ಪಿಯರ್‌ ಯಾಕೆ, ಪ್ರತೀ ಹೆಣ್ಣಿನ ಮನಸ್ಸು ಒಂದ್ಸಲಿ ಓದಿ ಸಾಕು. ಒಂದು paradoxಗೆ ನೂರು, ಸಾವಿರ, ಲಕ್ಷ ಡೆಫಿ‚ನಿಶನ್‌ಗಳು ಸಿಕ್ಕುತ್ತೆ ’ ಅಂತ.

ನಾನು ಯಾವಾಗ್ಲೂ ಹೆಂಗಸರಿಗೆ ‘ನೋ ಪ್ರೈವೆಸಿ ಇಸ್‌ ಕೋಜಿ‚ ’ಅಂದ್ಕೊಳ್ಳ್ತಾನೆ ಇರ್ತಿದ್ದೆ, ಆದ್ರೆ ನಿಮ್ಮ್ಹತ್ರ ಮಾತಾಡ್ತಿದ್ದ್ರೆ ಅದು ಸುಳ್ಳು ಅನ್ನಿಸ್ತಿದೆ. . . .ನನ್ನ ಅನಿಸಿಕೆಗಳನ್ನು, ಭಾವನೆಗಳನ್ನು ಅವುಗಳಿಂದಾದ ‘paradoxಅನ್ನು prejudice ಇಲ್ಲದೆ ಅರ್ಥಮಾಡಿಕೊಳ್ಳುವವರು ನೀವು ಮಾತ್ರ, ಅದಕ್ಕೆ ನೀವು ನನ್ನ ಕೋಜಿ‚ ಕಾರ್ನರ್‌. . . .

ಅಂದಹಾಗೆ ನೀವು ‘ಎಮ್‌ ಟಿ ವಿ ಸುಬ್ಬುಲಕ್ಷ್ಮಿಗೆ ಬರಿ ವೋಳು’ ಹಾಡು ಕೇಳಿದ್ದೀರ. . .. . . . ನಗೋದಕ್ಕೆ ಮುಂಚೆ ಒಂದ್ಸಲಿ ಆ ಹಾಡು ಕೇಳಿ ನೋಡಿ ಅದರಲ್ಲೂ ನಮ್ಮ ಮನಮುಟ್ಟುವ ಸಾಹಿತ್ಯ ಹುಡುಕಿಕೊಳ್ಳುತ್ತೀವಿ ನಾವು. . . ಹೌದು ನಾವು ಹೆಂಗಸರೇ ಹೀಗೆ!

ಕೋಜಿ‚ ಕಾರ್ನರ್‌ : ಹೆಂಗೆಳೆಯರ ಈ ಕ್ಲಬ್ಬಿಗೆ ನೀವು ಸೇರಿಕೊಳ್ಳಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X