Andaman: ಬೇಸಿಗೆ ರಜೆಗೆ ಸೂಪರ್ ಆಫರ್: ಐಆರ್‌ಸಿಟಿಸಿ ಅಂಡಮಾನ್ ಪ್ಯಾಕೇಜ್ ₹20,000 ರೂ.ದಿಂದ ಪ್ರಾರಂಭ
Andaman: ಬೇಸಿಗೆ ಅವಧಿಯಲ್ಲಿ ನೀವು ಅಂಡಮಾನ್ ದ್ವೀಪಗಳು ಸೇರಿದಂತೆ ನಾಲ್ಕು ಪ್ರಮುಖ ಪ್ರದೇಶಗಳಿಗೆ ಐಆರ್‌ಸಿಟಿಸಿಯ ಪ್ಯಾಕೇಜ್‌ನ ಮೂಲಕ ಅತ್ಯಂತ ಕಡಿಮೆ ಬೆಲೆಗೆ ನೀವು ಪ್ರಯಾಣ ಮಾಡಬಹುದಾಗಿದೆ. ಅಂಡಮಾನ್ ದ್ವೀಪಗಳು, ಪೋರ್ಟ್ ಬ್ಲೇರ್, ಹ್ಯಾವ್‌ಲಾಕ್ ದ್ವೀಪ (ಸ್ವರಾಜ್ ದ್ವೀಪ) ಹಾಗೂ ನೀಲ್ ದ್ವೀಪ (ಶಹೀದ್ ದ್ವೀಪ)ಗಳ ಪ್ರವಾಸ ಹಾಗೂ ಪ್ರದೇಶಗಳ ವಿವರ, ಪ್ಯಾಕೇಜ್ ದರ ವಿವರ ಸೇರಿದಂತೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.
ಅಂಡಮಾನ್ ದ್ವೀಪಗಳು
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತಕ್ಕೆ ಸೇರಿದ ಸುಂದರ ದ್ವೀಪಸಮೂಹವಾಗಿವೆ. ಇಲ್ಲಿ ಸ್ವಚ್ಛ ನೀಲಿ ಸಮುದ್ರ, ಬಿಳಿ ಮರಳು ಕಡಲತೀರಗಳು ಮತ್ತು ಹಸಿರು ಅರಣ್ಯಗಳು ಪ್ರಮುಖ ಆಕರ್ಷಣೆಯ ಭಾಗವಾಗಿವೆ. ಇಲ್ಲಿಗೆ ಪ್ರವಾಸಕ್ಕೆ ಹೋಗುವವರ ಸಂಖ್ಯೆಯೂ ವಿರಳವಾಗಿದೆ. ಇಲ್ಲಿನ ರಾಧಾನಗರ ಬೀಚ್, ಸೆಲ್ಯುಲರ್ ಜೈಲು, ನೈಸರ್ಗಿಕ ಬ್ರಿಡ್ಜ್ ಮುಂತಾದ ಸ್ಥಳಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಅಲ್ಲದೆ ನೀವಿಲ್ಲಿ ಸ್ಕೂಬಾ ಡೈವಿಂಗ್ ಸೇರಿದಂತೆ ವಿವಿಧ ಜಲ ಕ್ರೀಡೆಗಳನ್ನು ಆಡಬಹುದಾಗಿದೆ. ವಿಶ್ರಾಂತಿ ಮತ್ತು ಸಾಹಸ ಪ್ರವಾಸಕ್ಕೆ ಅಂಡಮಾನ್ ಅತ್ಯುತ್ತಮ ಆಯ್ಕೆಯಾಗಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಒಟ್ಟು 572 ದ್ವೀಪಗಳು, ದ್ವೀಪಗಳು ಮತ್ತು ಬಂಡೆಗಳನ್ನು ಒಳಗೊಂಡ ಸುಂದರವಾದ ದ್ವೀಪಗಳ ಗುಂಪಾಗಿದ್ದು, ದೊಡ್ಡ ಮತ್ತು ಸಣ್ಣ, ಜನವಸತಿ ಮತ್ತು ಜನವಸತಿ ಇಲ್ಲದೆ ಇರುವುದು ಇದರಲ್ಲಿ ಸೇರಿವೆ. ಅವು ಸುಮಾರು 800 ಕಿ.ಮೀ ದೂರದಲ್ಲಿ ಉತ್ತರ - ದಕ್ಷಿಣಕ್ಕೆ ಸರಿಸುಮಾರು 800 ಕಿ.ಮೀ ದೂರದಲ್ಲಿ ಉದ್ದ ಮತ್ತು ಕಿರಿದಾದ ಪ್ರದೇಶದಲ್ಲಿ ಇದೆ.
ಪೋರ್ಟ್ ಬ್ಲೇರ್
ಇನ್ನು ಪೋರ್ಟ್ ಬ್ಲೇರ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿಯಾಗಿದೆ. ಇಲ್ಲಿ ಪ್ರಸಿದ್ಧ ಸೆಲ್ಯುಲರ್ ಜೈಲು, ಮೆರೈನ್ ಮ್ಯೂಸಿಯಂಗಳು ಹಾಗೂ ಕಾರ್ಬಿನ್ ಕೋವ್ ಬೀಚ್ ಇವೆ. ಪ್ರವಾಸಿಗರಿಗೆ ಇಲ್ಲಿ ಸ್ಥಳೀಯ ಸಂಸ್ಕೃತಿ, ಸಮುದ್ರ ಮತ್ತು ಸುಂದರ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.
ಹ್ಯಾವ್‌ಲಾಕ್ ದ್ವೀಪ (ಸ್ವರಾಜ್ ದ್ವೀಪ)
ಹ್ಯಾವ್‌ಲಾಕ್ ದ್ವೀಪವು ಅಂಡಮಾನ್‌ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸ್ವಚ್ಛ ನೀಲಿ ಸಮುದ್ರ, ಬಿಳಿ ಮರಳು ಕಡಲತೀರಗಳು ಮತ್ತು ರಾಧಾನಗರ ಬೀಚ್‌ನಿಂದ ಪ್ರಸಿದ್ಧಿ ಗಳಿಸಿದೆ.
ನೀಲ್ ದ್ವೀಪ (ಶಹೀದ್ ದ್ವೀಪ)
ನೀಲ್ ದ್ವೀಪವು ಶಾಂತ ಮತ್ತು ಸುಂದರ ವಾತಾವರಣ ಹೊಂದಿರುವ ಚಿಕ್ಕ ದ್ವೀಪವಾಗಿದೆ. ಇಲ್ಲಿ ನೈಸರ್ಗಿಕ ಬ್ರಿಡ್ಜ್ (ಹಾವ್ರಾ ಬ್ರಿಡ್ಜ್) ಪ್ರಮುಖ ಆಕರ್ಷಣೆಗಳಾಗಿವೆ. ಅಲ್ಲದೆ ಮುಖ್ಯವಾಗಿ ದ್ವೀಪವು ಕಡಿಮೆ ಜನಸಂದಣಿಯಿಂದ ಕೂಡಿದ್ದು, ವಿಶ್ರಾಂತಿ ಪಡೆಯುವುದಕ್ಕೆ ಅತ್ಯಂತ ಸೂಕ್ತ ಆಯ್ಕೆಯಾಗಿದೆ.

ಐಆರ್‌ಸಿಟಿಸಿ ಪ್ರವಾಸ ಪ್ಯಾಕೇಜ್ ವಿವರ
EXOTIC ANDAMAN HOLIDAYS - GOLD ಪ್ಯಾಕೇಜ್ ವಿವರ
ಈ ಪ್ಯಾಕೇಜ್ 4 ರಾತ್ರಿ / 5 ದಿನಗಳ ಪ್ರವಾಸವಾಗಿದ್ದು, ಪ್ಯಾಕೇಜ್ ಕೋಡ್ EHH97 ಆಗಿದೆ. ಈ ಪ್ರಯಾಣವು ಪೋರ್ಟ್ ಬ್ಲೇರ್‌ನಿಂದ ಪ್ರಾರಂಭವಾಗಿ ಹ್ಯಾವ್‌ಲಾಕ್ ಹಾಗೂ ಮತ್ತೆ ಪೋರ್ಟ್ ಬ್ಲೇರ್‌ಗೆ ಮರಳುತ್ತದೆ. ಪ್ರತಿದಿನವೂ (Daily) ಪ್ರಯಾಣ ಸೌಲಭ್ಯ ಲಭ್ಯವಿದೆ. ಈ ಪ್ಯಾಕೇಜ್‌ನಲ್ಲಿ ದ್ವೀಪಗಳ ಮಧ್ಯೆ ಪ್ರಯಾಣ, ಹೋಟೆಲ್ ವಾಸ್ತವ್ಯ, ಸ್ಥಳೀಯ ಸೈಟ್‌ಸೀಯಿಂಗ್ ಹಾಗೂ ಪ್ರಮುಖ ಪ್ರವಾಸಿ ಸ್ಥಳಗಳ ಭೇಟಿಯನ್ನು ಒಳಗೊಂಡಿರುತ್ತದೆ. ಇದು ಕಡಿಮೆ ಅವಧಿಯಲ್ಲೇ ಅಂಡಮಾನ್‌ನ ಮುಖ್ಯ ಪ್ರದೇಶಗಳನ್ನು ನೋಡುವುದಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಪ್ಯಾಕೇಜ್‌ನ ಪ್ರವಾಸ ಮೊತ್ತವು 20,000 ರೂ.ನಿಂದ ಪ್ರಾರಂಭವಾಗುತ್ತದೆ.
ಪ್ರಯಾಣ ದರ: 20,000
MAGICAL ANDAMAN HOLIDAY GOLD ಪ್ಯಾಕೇಜ್ ವಿವರ
ಅವಧಿ: 4 ರಾತ್ರಿ / 5 ದಿನಗಳು
ಪ್ಯಾಕೇಜ್ ಕೋಡ್: EHH140
ಆರಂಭ ಸ್ಥಳ: ಪೋರ್ಟ್ ಬ್ಲೇರ್
ತಲುಪುವ ಸ್ಥಳಗಳು: ಪೋರ್ಟ್ ಬ್ಲೇರ್ / ನೀಲ್ ದ್ವೀಪ / ಹ್ಯಾವ್‌ಲಾಕ್
ಪ್ರಯಾಣ: ಪ್ರತಿದಿನ
ಮುಂದಿನ ಪ್ರಯಾಣ ದಿನಾಂಕ: 27-ಏಪ್ರಿಲ್-2026
ಪ್ರಯಾಣ ದರ: 23,760
ANDAMAN WITH BARATANG-INDEPENDENCE DAY SPL ಪ್ಯಾಕೇಜ್ ವಿವರ
ಅವಧಿ: 5 ರಾತ್ರಿ / 6 ದಿನಗಳು
ಪ್ಯಾಕೇಜ್ ಕೋಡ್: EHA019U
ಆರಂಭ ಸ್ಥಳ: ಕೊಲ್ಕತ್ತಾ
ತಲುಪುವ ಸ್ಥಳಗಳು: ಬರಾಟಾಂಗ್ / ಹ್ಯಾವ್‌ಲಾಕ್ / ನೀಲ್ ದ್ವೀಪ
ಪ್ರಯಾಣ ದಿನಾಂಕ: 15-08-2026
ಮುಂದಿನ ಪ್ರಯಾಣ ದಿನಾಂಕ: 15-ಆಗಸ್ಟ್-2026
ಪ್ರಯಾಣ ದರ: 40,600
SCENIC ANDAMAN WITH DINNER CRUISE ಪ್ಯಾಕೇಜ್ ವಿವರ
ಅವಧಿ: 5 ರಾತ್ರಿ / 6 ದಿನಗಳು
ಪ್ಯಾಕೇಜ್ ಕೋಡ್: EHH133
ಆರಂಭ ಸ್ಥಳ: ಪೋರ್ಟ್ ಬ್ಲೇರ್
ತಲುಪುವ ಸ್ಥಳಗಳು: ಪೋರ್ಟ್ ಬ್ಲೇರ್ / ಹ್ಯಾವ್‌ಲಾಕ್ / ನೀಲ್ ದ್ವೀಪ
ಪ್ರಯಾಣ: ಪ್ರತಿದಿನ
ಮುಂದಿನ ಪ್ರಯಾಣ ದಿನಾಂಕ: 27-ಏಪ್ರಿಲ್-2026
ಪ್ರಯಾಣ ದರ: 28,950
FAMILY ANDAMAN HOLIDAYS-GOLD ಪ್ಯಾಕೇಜ್ ವಿವರ
ಅವಧಿ: 5 ರಾತ್ರಿ / 6 ದಿನಗಳು
ಪ್ಯಾಕೇಜ್ ಕೋಡ್: EHH96
ಆರಂಭ ಸ್ಥಳ: ಪೋರ್ಟ್ ಬ್ಲೇರ್
ತಲುಪುವ ಸ್ಥಳಗಳು: ಹ್ಯಾವ್‌ಲಾಕ್ / ನೀಲ್ ದ್ವೀಪ / ಪೋರ್ಟ್ ಬ್ಲೇರ್
ಪ್ರಯಾಣ: ಪ್ರತಿದಿನ
ಮುಂದಿನ ಪ್ರಯಾಣ ದಿನಾಂಕ: 27-ಏಪ್ರಿಲ್-2026
ಪ್ರಯಾಣ ದರ: 25,750
THRILLING ANDAMAN HOLIDAY GOLD ಪ್ಯಾಕೇಜ್ ವಿವರ
ಅವಧಿ: 5 ರಾತ್ರಿ / 6 ದಿನಗಳು
ಪ್ಯಾಕೇಜ್ ಕೋಡ್: EHH125
ಆರಂಭ ಸ್ಥಳ: ಪೋರ್ಟ್ ಬ್ಲೇರ್
ತಲುಪುವ ಸ್ಥಳಗಳು: ಹ್ಯಾವ್‌ಲಾಕ್ / ನೀಲ್ ದ್ವೀಪ / ಪೋರ್ಟ್ ಬ್ಲೇರ್
ಪ್ರಯಾಣ: ಪ್ರತಿದಿನ
ಮುಂದಿನ ಪ್ರಯಾಣ ದಿನಾಂಕ: 27-ಏಪ್ರಿಲ್-2026
ಪ್ರಯಾಣ ದರ: 27080
ROMANTIC ANDAMAN HOLIDAYS-GOLD ಪ್ಯಾಕೇಜ್ ವಿವರ
ಅವಧಿ: 6 ರಾತ್ರಿ / 7 ದಿನಗಳು
ಪ್ಯಾಕೇಜ್ ಕೋಡ್: EHH98
ಆರಂಭ ಸ್ಥಳ: ಪೋರ್ಟ್ ಬ್ಲೇರ್
ತಲುಪುವ ಸ್ಥಳಗಳು: ಹ್ಯಾವ್‌ಲಾಕ್ / ನೀಲ್ ದ್ವೀಪ / ಪೋರ್ಟ್ ಬ್ಲೇರ್
ಪ್ರಯಾಣ: ಪ್ರತಿದಿನ
ಮುಂದಿನ ಪ್ರಯಾಣ ದಿನಾಂಕ: 27-ಏಪ್ರಿಲ್-2026
ಪ್ರಯಾಣ ದರ: 30680
MAJESTIC ANDAMAN EX-GUWAHATI ಪ್ಯಾಕೇಜ್ ವಿವರ
ಅವಧಿ: 5 ರಾತ್ರಿ / 6 ದಿನಗಳು
ಪ್ಯಾಕೇಜ್ ಕೋಡ್: EGA026
ಆರಂಭ ಸ್ಥಳ: ಗುವಾಹಟಿ
ತಲುಪುವ ಸ್ಥಳಗಳು: ನೀಲ್ ದ್ವೀಪ / ಹ್ಯಾವ್‌ಲಾಕ್
ಪ್ರಯಾಣ ದಿನಾಂಕ: 03-03-2026
ಪ್ರಯಾಣ ದರ: 46900












Click it and Unblock the Notifications