• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದೋ ಲೆಕ್ಕ ಬಿಡಿಸು, ಇಲ್ಲವೇ ಹಾಳೆ ಮಡಿಸು!

By Staff
|

ಆದರೆ ಆ ಸಮಸ್ಯೆ ಯಾಕೋ ಅವಳ ತಲೆಯನ್ನು ಹೊಕ್ಕುಬಿಟ್ಟಿತು. ಏನಾದರೂ ಆಗಲಿ ಟೀಚರ್‌ ಕೊಟ್ಟ ಚಾಲೆಂಜನ್ನು ಮಾಡಿತೋರಿಸಿಯೇ ಸಿದ್ಧ ಎಂಬ ಛಲ ಬಂತು. ಕಾಗದಕ್ಕಿಂತಲೂ ತೆಳು (ಒಂದು ಮೀಟರ್‌ನ ಮಿಲಿಯದೊಂದು ಭಾಗದ 0.28 ರಷ್ಟು ದಪ್ಪ) ಇರುವ ಗೋಲ್ಡ್‌ ಫಾಯಿಲ್‌ನ 10 ಸೆಂ.ಮಿ ಚಚ್ಚೌಕದ ಹಾಳೆಯನ್ನು ತೆಗೆದುಕೊಂಡು ಮಡಿಸಲಿಕ್ಕಾಗುತ್ತದೋ ನೋಡಿದಳು. ಐದಾರು ಮಡಿಕೆಗಳಾದ ಮೇಲೆ ಅದೂ ಕಷ್ಟವೆಂದೆನಿಸಿತು. ಇಕ್ಕಳ, ಕಡ್ಡಿ ಮತ್ತಿತರ ಸಾಧನಗಳನ್ನು ಉಪಯೋಗಿಸಿ ಅಂತೂ 12 ಸಲ ಮಡಿಸುವುದರಲ್ಲಿ ಯಶಸ್ವಿಯಾದಳು.

100 ಸೆಂ.ಮಿ ಚದರದ ಗೋಲ್ಡ್‌ಫ‚ಾಯಿಲ್‌ಅನ್ನು 12 ಸಲ ಮಡಿಸಿದಾಗ ಅದು ಮೈಕ್ರೊಸ್ಕೊಪಿಕ್‌ ಗಾತ್ರದ ಬಂಗಾರಗಟ್ಟಿಯಂತಾಗಿತ್ತು. ಹೆಮ್ಮೆಯಿಂದ ಅದನ್ನು ಟೀಚರ್‌ಗೆ ತೋರಿಸಿದಳು. ಆದರೆ ಟೀಚರ್‌ ಒಪ್ಪಲು ರೆಡಿಯಿರಲಿಲ್ಲ. ತಾನು ಹೇಳಿದ್ದು ಕಾಗದವನ್ನು ಮಡಿಸಲು, ಗೋಲ್ಡ್‌ಫಾಯಿಲನ್ನಲ್ಲ ಎಂದು ತಿರಸ್ಕರಿಸಿಬಿಟ್ಟರು.

ಛಲಬಿಡದ ತ್ರಿವಿಕ್ರಮನಂತೆ ಬ್ರಿಟ್ನಿ ಗೆಲಿವಾನ್‌ ಕಾಗದ ಮಡಚುವ ಸಮಸ್ಯೆಯ ಹಿಂದೆ ಬಿದ್ದಳು. ಏಳಕ್ಕಿಂತ ಹೆಚ್ಚು ಸಲ ಕಾಗದವನ್ನು ಮಡಚುವುದು ಯಾಕಾಗದು ಎಂದು ಹಗಲೂರಾತ್ರಿ ಯೋಚಿಸಿದಳು. ಲೆಕ್ಕವೆಂದರೆ ತಲೆನೋವು ಆಗಿದ್ದವಳೂ ಆ ಒಂದು ಸಮಸ್ಯೆ ಬಿಡಿಸಿಯೇ ತೀರುತ್ತೇನೆಂದು ಕಾಗದದ ಹಾಳೆಗಳ ಉದ್ದ ಅಗಲ ದಪ್ಪ ಮತ್ತು ಮಡಿಕೆಗಳ ಸಂಖ್ಯೆಗಳನ್ನು ಒಂದಕ್ಕೊಂದು ತಾಳೆಮಾಡಿ, ಎರಡು ಸಂಕೀರ್ಣ ಸೂತ್ರಗಳನ್ನು ಕಂಡುಕೊಂಡಳು. ಕಾಗದವನ್ನು ಅರ್ಧಕ್ಕರ್ಧ ಮಡಚು ಎಂದಾಗ ಸಾಮಾನ್ಯವಾಗಿ ಎಲ್ಲರೂ ಮಾಡುವಂತೆ (ಅಂದರೆ ಉದ್ದಕ್ಕೊಮ್ಮೆ ಅಡ್ಡಕ್ಕೊಮ್ಮೆ ಪರ್ಯಾಯವಾಗಿ) ಮಡಚುತ್ತ ಹೋದರೆ ಎಷ್ಟು ಸಲ ಸಾಧ್ಯವಾಗುತ್ತದೆ, ಅಥವಾ ಅಗಲವನ್ನು ಹಾಗೇ ಇಟ್ಟು ಉದ್ದ ಮಾತ್ರ ಅರ್ಧರ್ಧ ಮಾಡುತ್ತ ಬಂದರೆ ಎಷ್ಟು ಸಲ ಆಗುತ್ತದೆ ಎಂಬ ಲೆಕ್ಕಾಚಾರದ ಸೂತ್ರಗಳವು.

ಹೆಚ್ಚಿನವರಿಗೆ ಬ್ರೈಟ್‌ ಐಡಿಯಾಗಳೆಲ್ಲ ಬಹುಮಟ್ಟಿಗೆ ಬಚ್ಚಲುಮನೆಯಲ್ಲೇ ಹುಟ್ಟಿಕೊಳ್ಳೋದು ಅಂತಾರೆ. ಆರ್ಕಿಮಿಡಿಸ್‌ಗೆ ಮಾತ್ರವಲ್ಲ ನಮಗೆ-ನಿಮಗೆ ಸಹ ಬಾತ್‌ರೂಮ್‌ ಎಂದರೆ ಬೋಧಿ--ವೃಕ್ಷವಿದ್ದಂತೆಯೇ. ಬ್ರಿಟ್ನಿಗೂ ಹಾಗೇ ಆಯ್ತು. ಒಂದುದಿನ ಪ್ರಾತರ್ವಿಧಿ-ಗಳನ್ನು ಮಾಡುತ್ತಿದ್ದಾಗ ಟಾಯ್ಲೆಟ್‌ಪೇಪರ್‌ನ ರೋಲ್‌ ಕಣ್ಣಿಗೆ ಬಿದ್ದದ್ದೇ ತಡ, ಒಂದು ಅದ್ಭುತ ಐಡಿಯಾ ಅವಳಿಗೆ ಹೊಳೆಯಿತು!

ಒಂದು ಇಡೀ ರೋಲ್‌ಅನ್ನು ಬಿಡಿಸಿ ಮಡಿಸಿ ನೋಡಿದಳು. ತಾನು ಕಂಡುಕೊಂಡ ಫಾರ್ಮುಲಾದಲ್ಲಿ ಸರಿಯಾಗಿ 1.2 ಕಿ.ಮೀ ಉದ್ದದ ಪೇಪರ್‌ ರೋಲ್‌ ಅಂದರೆ ಟಾಯ್ಲೆಟ್‌ಪೇಪರ್‌ನದೇ ಎಂದು ನಿರ್ಧರಿಸಿದಳು. ಆದರೆ ಮಾರುಕಟ್ಟೆಯಲ್ಲಿ ಸಿಗುವ ಸಾಮಾನ್ಯ ಸೈಜ್‌ನ ರೋಲ್‌ ಬಿಡಿಸಿದಾಗ ಅಷ್ಟು ಉದ್ದವಿರುವುದಿಲ್ಲ. ಅದಕ್ಕಾಗಿ ಇಂಟರ್‌ನೆಟ್‌ ಶಾಪಿಂಗ್‌ ಮಾಡಿ 85 ಡಾಲರ್‌ ತೆತ್ತು ಒಂದು ಸ್ಪೆಷಲ್‌ ರೋಲ್‌ ತರಿಸಿಕೊಂಡಳು.

2002ರ ಜನವರಿಯ ಚುಮುಚುಮು ಚಳಿಯ ಒಂದು ದಿನ ಬ್ರಿಟ್ನಿ ಗೆಲಿವಾನ್‌ ಆ ಪೇಪರ್‌ರೋಲ್‌ಅನ್ನು ತೆಗೆದುಕೊಂಡು ಪೊಮೊನಾ ನಗರದ ದೊಡ್ಡ ಮಾಲ್‌ಗೆ ಹೋದಳು. ಜತೆಯಲ್ಲಿ ತನ್ನ ತಂದೆತಾಯಿ ಮತ್ತು ಸ್ನೇಹಿತೆಯರನ್ನೂ ಬರಲು ಹೇಳಿದಳು. ಮಾಲ್‌ನ ಹೊರಗೆ ವಿಶಾಲವಾದ ಜಾಗದಲ್ಲಿ 1.2 ಕಿ.ಮೀ ಉದ್ದದ ಪೇಪರ್‌ರೋಲನ್ನು ಬಿಚ್ಚಿದಳು. ಆಮೇಲೆ ಎಲ್ಲರ ಸಮ್ಮುಖದಲ್ಲಿ ಅದನ್ನು ಅರ್ಧರ್ಧ ಮಡಿಸಲಾರಂಭಿಸಿದಳು. ಒಂದೇ ವ್ಯತ್ಯಾಸವೆಂದರೆ ಸಾಮಾನ್ಯವಾಗಿ ಅಡ್ಡಕ್ಕೊಮ್ಮೆ ಉದ್ದಕ್ಕೊಮ್ಮೆ ಮಡಿಸುವಂತೆ ಮಡಿಸುವ ಬದಲು ಪೇಪರ್‌ರೋಲ್‌ನ ಉದ್ದಕ್ಕೂ ಅದನ್ನು ಪದರಪದರಗಳಾಗಿ ಮಡಿಸಿದಳು. ಅದನ್ನವಳು ಹತ್ತಿಪ್ಪತ್ತು ನಿಮಿಷಗಳಲ್ಲಿ ಮಾಡಿಮುಗಿಸಿದಳು ಎಂದುಕೊಳ್ಳಬೇಡಿ, ಅಷ್ಟು ಉದ್ದದ ರೋಲ್‌ಅನ್ನು ಮಡಿಸಲು ಅವಳಿಗೆ ಆರೇಳು ಗಂಟೆಗಳೇ ಬೇಕಾದವು!

A woman has folded the paper 11 times11ನೇ ಸಲ ಮಡಿಸಿ ಆದಾಗ ಆ ರೋಲ್‌ ಸುಮಾರು 80 ಸೆಂ.ಮಿ ಉದ್ದ ಮತ್ತು 40 ಸೆಂ.ಮಿ ದಪ್ಪದ ‘ಸೋನ್‌ಪಾಪಡಿ’ಯಂತೆ ಕಾಣುತ್ತಿತ್ತು. ಅವಳ ಸಾಹಸವನ್ನು ಚಿತ್ರೀಕರಿಸಲು ಅಷ್ಟೊತ್ತಿಗೆ ವಿಡಿಯಾಗ್ರಾಫರ್ಸ್‌, ಫೊಟೊಗ್ರಾಫರ್ಸ್‌ ಎಲ್ಲ ಜಮಾಯಿಸಿದ್ದರು. ಅವರೆಲ್ಲರ ಮುಂದೆ 12ನೇ ಫೋಲ್ಡ್‌ನ ಸಾಧನೆಯೂ ಸಾಕಾರವಾಯಿತು. ಕೊನೆಗೂ ತನ್ನ ಮ್ಯಾತ್‌ಟೀಚರ್‌ ಹಾಕಿದ ಪಂಥಾಹ್ವಾನದಲ್ಲಿ ಗೆದ್ದೆ ಎಂದು ಬೀಗಿದ ಬ್ರಿಟ್ನಿ ,‘‘12ನೇ ಫೋಲ್ಡ್‌ ಮಾಡಿದಾಗ ನಿಜಕ್ಕೂ ಪ್ರಪಂಚದ ತುತ್ತತುದಿಯಲ್ಲಿ ನಿಂತಿದ್ದೇನೋ ಎನ್ನುವಂಥ ಅನುಭವವಾಯಿತು’’ ಎಂದಳು. ಶಿಷ್ಯಾದಿಚ್ಛೇತ್‌ ಪರಾಜಯಂ... ಎಂದು ಆ ಮ್ಯಾತ್‌ ಟೀಚರ್‌ಗೂ ಹೆಮ್ಮೆಯಾಗಿರಬೇಕು. ಆಮೇಲೆ ಬ್ರಿಟ್ನಿ ತನ್ನ ಸಾಧನೆಯ ಬಗ್ಗೆ ಒಂದು ಸಣ್ಣ ಪುಸ್ತಿಕೆಯನ್ನೂ ಬರೆದಳು. ಆ ಕುರಿತು ಒಂದು ಸಾಕ್ಷ್ಯಚಿತ್ರವೂ ಆಮೇಲೊಂದು ದಿನ ಅಮೆರಿಕದ ರಾಷ್ಟ್ರೀಯ ಟಿವಿಜಾಲದಲ್ಲಿ ಬಿತ್ತರವಾಗಿ ಬ್ರಿಟ್ನಿ ಪ್ರಖ್ಯಾತಳಾದಳು.

ಇದಿಷ್ಟು, ಕಾಗದದ ಹಾಳೆ ಮಡಚುವ ಚಾಲೆಂಜ್‌ನ ನೈಜ ಕಥೆ. ಈಗ ಇದನ್ನು ಓದಿಕೊಂಡ ನಿಮಗೆ ಇದರ ಸಂಗತಿ ಆಮೂಲಾಗ್ರವಾಗಿ ಗೊತ್ತಿರುವುದರಿಂದ, ಇನ್ನು ಮುಂದೆ ಯಾರಾದರೂ ‘‘ಕಾಗದದ ಹಾಳೆಯನ್ನು ಎಷ್ಟು ಸಲ ಮಡಿಸಬಲ್ಲಿರಿ?’’ ಎಂದರೆ ನಿಮಗದು ಸವಾಲೇ ಅಲ್ಲ. ಒಂದೊಮ್ಮೆ ನೀವದನ್ನು ಸವಾಲಾಗಿ ಸ್ವೀಕರಿಸಿದರೂ ಹೇಗೂ ಟಾಯ್ಲೆಟ್‌ಪೇಪರ್‌ ನಿಮ್ಮ ನೆರವಿಗೆ ಇದ್ದೆ ಇದೆಯಲ್ಲ?

ಕನಿಷ್ಠಪಕ್ಷ ಟಾಯ್ಲೆಟ್‌ಪೇಪರ್‌ ಇರೋದು ಒಂದೇ ಉದ್ದೇಶಕ್ಕೆ ಅಲ್ಲವೆಂಬುದಾದರೂ ನಿಮ್ಮ ನೆನಪಲ್ಲಿ ಉಳಿಯುತ್ತದಲ್ಲ!?

- srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more