• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಗಿಮುದ್ದೆ ಬಾಳ್ಕಮೆಣ್ಸು ನಿಜಕ್ಕೂ ನೀರೂರಿಸಿದವು!...

By Staff
|
ಏನು ಸ್ವಾಮೀ ಜೋಯಿಸರೇ! ನಿಮಗೆ ಸುಮ್ಮನೆ ಕುಳಿತುಕೊಳ್ಳಲಿಕ್ಕೆ ಆಗೂದಿಲ್ಲವೇ? ಬಾಳ್ಕದ ಮೆಣಸು, ಬಿಸಿ ಅನ್ನ, ಉಪ್ಪು ಮತ್ತು ತುಪ್ಪ ! ನಾನೀಗ ಡಯಟ್‌ನಲ್ಲಿ ಇದ್ದೇನೆ! ಆದರೂ, ಇಂದು ಒಂದು ದಿನ ಇವನ್ನು ತಿಂದರೆ ತಪ್ಪೇ? ಈ ದಿನದ ರಾತ್ರಿಯ ಊಟದ ಮಟ್ಟಿಗೆ ‘ಡಾಯಟ್‌ನ ಅಜ್ಜಿಗೆ ಮದುವೆ’ ಎಂದು ನೀವು ತಿಳಿಸಿದ ಐಟಮ್‌ಗಳನ್ನೇ ತಿನ್ನುತ್ತೇನೆ! ಜೈ ಬಾಳ್ಕದ ಮೆಣಸು! ದೂರದಲ್ಲಿ ಕುಳಿತ ನೀವು ಅನ್ನದಾತ ಎನಿಸಿಕೊಳ್ಳದಿದ್ದರೂ ಇಂದಿನ ಊಟದ ಯೋಜನೆಗೆ ದಾರಿ ತೋರಿದ್ದೀರಿ! ನೆನಪಿಸಿದ್ದಕ್ಕೆ ವಂದನೆಗಳು.

- ಎಸ್‌. ಮಧುಸೂದನ ಪೆಜತ್ತಾಯ; ಬೆಂಗಳೂರು

*

Readers responses to Raagimudde-Baalkamensu episodeಎಂತದು ಮಾರಾಯ್ರೆ? ನೀವು ನಿಮ್ಮ ಸ್ನೇಹಿತರ ಮನೆಯಲ್ಲಿ ತಾಮ್ಮಾನದ ಊಟ ಮಾಡಿ ನಮಗೆಲ್ಲಾ ಬಾಯಿಯಲ್ಲಿ ನೀರೂರಿಸುವುದಾ...? ಛೇ ಹಾಗೆ ಮಾಡಬಾರದು ಆಯ್ತಾ... ಅಂದ ಹಾಗೆ ನೀವು ಬರೆದಿರುವ ರೀತಿ ನೋಡಿದರೆ ಆಶೆಯಾಗದವರಿಗೂ ಒಂದು ಸಲ ಬಾಯಿಯಲ್ಲಿ ಜೊಲ್ಲು ಹರಿದರೆ ಆಶ್ಚರ್ಯವಿಲ್ಲ. ಆದರೆ ಈ ಸಲದ ಪಾಕದಲ್ಲಿ ಟೇಸ್ಟ್‌ ಮಾಡಿಸಿದ ರಾಗಿ ಮುದ್ದೆ ನಮ್ಮ ಊರಿನವರಿಗೆ ತಿನ್ನಲು ಆಗುವುದಿಲ್ಲವಲ್ಲಾ...

ಹ್ಞಾಂ ನನ್ನದೇ ಒಂದು ಕತೆ ಹೇಳುತ್ತೇನೆ.. ನಾನು ರಾಗಿಮುದ್ದೆ ತಿನ್ನಲು ಹೋಗಿ ಫಚೀತಿ ಆದ ವಿಶಯ...

ನಾನು ಚಿಕ್ಕಮಗಳೂರಿನಲ್ಲಿರುವಾಗ ಒಂದು ಸಲ ರಾಗಿ ಮುದ್ದೆಯ ರುಚಿ ನೋಡಬೇಕೆಂದೇ ಅಲ್ಲಿನ ಗೌಡ್ರ ಮೆಸ್‌ಗೆ ಹೋದೆ. ಹೋಗಿ ಒಂದು ಮುದ್ದೆ ಕೊಡಿ ಎಂದೆ. ದೊಡ್ಡ ಉರುಂಟಿನ ಮುದ್ದೆ ತಂದು ನನ್ನ ಎದುರು ಇಟ್ಟರು. ಮತ್ತೆ ಬದಿಯಲ್ಲಿ ಸಾಂಬಾರೂ ತಂದಿಟ್ಟರು. ನನಗೆ ಗೊತ್ತುಂಟಾ ಅದನ್ನು ಹೇಗೆ ತಿನ್ನುವುದು ಎಂದು. ಕಡೆಗೆ ಆಚೆ ಈಚೆ ನೋಡಿದೆ. ಪಕ್ಕದಲ್ಲಿ ಒಬ್ಬ ರಾಗಿ ಮುದ್ದೆ ತಿನ್ನುವುದನ್ನು ನೋಡಿದೆ ಹಾಗೆಯೇ ಸ್ವಲ್ಪ ತೆಗೆದು ಬಾಯಿಗೆ ಹಾಕಿ ಜಗಿಯತೊಡಗಿದೆ. ಅದು ಎಂತದು ಮಾರಾಯ್ರೆ ಬಾಯಿಯಲ್ಲಿ ಪಚ ಪಚ ಅಂಟಿಕೊಳ್ಳುವುದಲ್ವಾ ನನಗೆ ಒಂದು ನಮೂನಿ ಆಯ್ತು ಗೊತ್ತಾ. ಮತ್ತೆ ಎಂತ ಮಾಡುವುದು ಸಾದಾರಣ ಅರ್ದ ಗಂಟೆ ಹಾಗೆಯೇ ಮುದ್ದೆಯ ಎದುರು ಕುಳಿತೆ. ನನ್ನನ್ನೇ ನೋಡುತ್ತಿದ್ದ ಹೋಟೇಲಿನ ಧಣಿಗಳು ಸೀದಾ ನನ್ನ ಹತ್ತಿರ ಬಂದರು ಮತ್ತೆ ನನ್ನಲ್ಲಿ ಕೇಳಿದರು- ‘ಏನ್‌ ಸಾರ್‌ ನೀವು ಮಂಗಳೂರಾ...? ಮುದ್ದೆ ತಿನ್ನೋದು ಹ್ಯಾಗ್‌ ಅಂತಾ ಗೊತ್ತಿಲ್ಲೇನ್ರೀ..? ಮತ್ತ್ಯಾಕ್ರೀ ತಗೊಂಡ್ರಾ.’ ಅಂತ ನನ್ನನ್ನೇ ದುರುಗುಟ್ಟಿ ನೋಡಿ ‘ಲೋ ಮಾಣಿ ಇವ್ರಿಗೆ ಒಂದು ಪ್ಲೇಟ್‌ ರೈಸ್‌ ತಗೊಂಬಾರಪ್ಪಾ...’ ಅಂದ್ರು. ನನಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಹೀಗೆ ಆ ದಿನ ನನ್ನ ಮರ್ಯಾದಿ ಹೋಗುತ್ತಿತ್ತು ಮಾರಾಯ್ರೆ! ಈಗ ನಿಮ್ಮ ವಿಚಿತ್ರಾನ್ನ ಓದಿದಾಗ ನನಗೆ ಆ ಪ್ರಸಂಗ ನೆನಪಿಗೆ ಬಂತು.

(‘ಮಂಗಳೂರು ಕನ್ನಡ’ವನ್ನು ಬಳಸಿ ಇದನ್ನು ಬರೆದಿದ್ದೇನೆ. ತಾಮ್ಮಾನದ ಊಟ = ಔತಣದ ಊಟ; ಪಚೀತಿ = ಪೇಚಾಟ; ಉರೂಂಟಿನ = ದುಂಡಗಿನ)

- ಪ್ರಕಾಶ್‌ ಶೆಟ್ಟಿ ಉಳೆಪಾಡಿ

ಪ್ರಕಾಶಕ ಡಾಟ್‌ ಕಾಂ

*

ಜೋಶಿ ಸಾರ್‌, ಅದ್ಹೇಗೊ ನಿಮ್ಗೆ ನನ್ನ ಫ್ರೀಕ್ವೆನ್ಸಿ ಗೊತ್ತಾಗ್ಬಿಡುತ್ತೆ ಅನ್ಸತ್ತೆ. ಕಳೆದ ವಾರವಷ್ಟೆ ಇಲ್ಲಿ ಇರ್ವಿಂಗ್‌ಪಾರ್ಕ್‌ ರೋಡ್‌ನಲ್ಲಿರೋ ಸರ್ದಾರ್ಜಿ ಅಂಗಡಿಯಿಂದ ಸುಪರ್‌-ಡುಪರ್‌ ರಾಗಿಹಿಟ್ಟು ತಂದಿದ್ದೆ (ಅವನ ಹತ್ರ ಇದ್ದದ್ದೇ 5 ಪ್ಯಾಕೆಟ್ಸ್‌!) ಈ ರಾಗಿಮುದ್ದೆ ವಿಲಾಸ ಏನಂತೀರಿ!! ಹಾಗೆಯೇ ಈ ಬಾರಿ ಬೇಸಿಗೆಯಲ್ಲಿ ಮನೆಯಲ್ಲೆ ಹಾಕಿಟ್ಟಿದ್ದ ಬಾಳ್ಕಮೆಣಸು ...ಆಹ್ಹಹಹಹ. (ಸ್ವಲ್ಪ ಲೊ ಇನ್‌ ಕಾರ್ಬ್ಸ್‌ ಇದ್ರೆ ಚೆನ್ನಾಗಿರ್ತಿತ್ತು :-) ... 2 ಎಕ್ಸ್ಟ್ರಾ ಲಿಪಿಟೊರ್‌ ನುಂಗಿದ್ರೆ ಓಕೆನಾ ??

ಜೈ ವಿಚಿತ್ರಾನ್ನ!!

- ಶ್ರೀನಿ, ಚಿಕಾಗೊ

*

ನಿಮ್ಮ ರಾಗಿ ಮುದ್ದೆ ಲೇಖನ ನಿಜಕ್ಕೂ ಬಾಯಿ ನೀರು ತರಿಸಿತು!!! ಪುಣ್ಯವಂತರು ನೀವು. ಯಾವ ದೇಶದಲ್ಲಿದ್ರೂ ಮನೆ ಊಟ ಸಿಗುತ್ತೆ!!!

- ರಾಧಿಕಾ; ಟೊರಂಟೊ, ಕೆನಡಾ

*

ಬಾಳ್ಕ ಮೆಣ್ಸನ್ನು ನಮ್ಮ ಬಳ್ಳಾರಿ ಕಡೆ ‘ಉಪ್ಪಚಿದ (ಉಪ್ಪು ಹಚ್ಚಿದ) ಮೆಣಸಿನಕಾಯಿ’ ಅಂತೀವಿ. ನಿಜವಾಗ್ಲೂ ಬಾಯಲ್ಲಿ ನೀರೂರುವಂತಿರುತ್ತದೆ....

- ಸಂಧ್ಯಾ ಶಾಮ್‌ಜಿ; ಹೈದರಾಬಾದ್‌

*

ಖುಶಿ ಆಯ್ತು ರಾಗಿಮುದ್ದೆ-ಬಾಳ್ಕಮೆಣ್ಸು ಆಖ್ಯಾನ ಓದಿ. ಮತ್ತೆ, ಅನ್ನದಾತರ ಮುಖದರ್ಶನ ಮಾಡೋಣ ಅಂದ್ರೆ ಅವ್ರ ಫೊಟೊನೆ ಹಾಕಿಲ್ಲ ? ಗೊತ್ತಾಯಿತು ಬಿಡಿ ನೀವು ಎಷ್ಟು ಮುದ್ದೆ ತಿಂದ್ರಿ ಮತ್ತೆ ಎಷ್ಟು ಪ್ಲೇಟ್‌ ಅನ್ನ(ವಿದ್‌ ಮೆಣ್ಸು) ತಿಂದ್ರಿ ಅಂತ... ಹೇಗೆ ಅಂತೀರಾ... ನಿಮ್ಮ ಫೊಟೊ ನೋಡಿ ಹೇಳಿದೆ :-)

- ಲೀನಾ; ಬೆಂಗಳೂರು

*

ಈ ವಾರದ ವಿಚಿತ್ರಾನ್ನ ಚೆನ್ನಾಗಿತ್ತು. ಜೊತೆಗೆ ರಾಗಿಮುದ್ದೆ, ಅವರೆ ಸಾರು, ಬಾಳಕಮೆಣಸಿನಕಾಯಿ ರೆಸಿಪಿ ಕೊಟ್ಟಿದ್ದರೆ ಚೆನ್ನಾಗಿರ್ತಿತ್ತು.

- ಮಮತಾ ಆರ್‌ ಎಂ; ಬೆಂಗಳೂರು

*

ಇದೊಂದು ‘ರಸ’ಪ್ರಶ್ನೆ. ಇದನ್ನು ವಿಚಿತ್ರಾನ್ನಕ್ಕೆ ಫಿಟ್ಟಾಯಿಸಿದ್ದೇನೆ!

ಮದುವೆ ಮನೆ. ಸೀನಂಗೆ ಬಹಳ ಹಸಿವೆ. ತಡೆಯಲಾರದೆ, ಅಡಿಗೆ ಮನೆಗೆ ನುಗ್ಗಿದ. ಅಲ್ಲಿ ಒಂದು ಬಕೆಟ್‌ನಲ್ಲಿ ಕಡಲೆಬೇಳೆ ಪಾಯಸ, ಪಕ್ಕದಲ್ಲೇ ಒಂದು ಬಕೆಟ್‌ನಲ್ಲಿ ತೋವ್ವೆ ಇತ್ತು. ಒಂದು ದೊಡ್ಡ ಸೌಟು ಹಾಕಿ ಪಾಯಸ ತೆಗೆದ. ಅಷ್ಟ್ರಲ್ಲೆ ಭಟ್ಟರು ಬಂದರು. ಅವಸರದ ತರಾತುರಿಯಲ್ಲಿ ಅದನ್ನು ಮತ್ತೆ ಬಕೆಟ್ಟಿಗೆ ಹೊಯ್ದ - ತಪ್ಪಿ ಹೋಗಿ ತೊವ್ವೆ ಬಕ್ಕೆಟ್‌ಗೆ ಹಾಕಿದ. ಪಾಯಸ ಮೇಲಿಂದ ಕಾಣಿಸ್ತದೆ ಅಂತ ಚೆನ್ನಾಗಿ ಬೆರೆಸಿ ಬಿಟ್ಟ.

ಈಗ ತೊವ್ವೆ ಬಕೆಟ್‌ನಲ್ಲಿ ಜಾಸ್ತಿ ಕಾಣಿಸ್ತದೆ ಅಂತ ಅದರಿಂದ ಒಂದು ಸೌಟು ತೊವ್ವೆ ತೆಗೆದು ಪಾಯಸದ ಬಕೆಟ್‌ಗೆ ಹಾಕಿ ಅದನ್ನು ಚೆನ್ನಾಗಿ ಬೆರೆಸಿದ. ಒಳ್ಳೆ ವಿಚಿತ್ರ-ಪರಮಾನ್ನ!

ಪ್ರಶ್ನೆ: ಪಾಯಸದಲ್ಲಿ ಜಾಸ್ತಿ ತೊವ್ವೆಯಾ, ತೊವ್ವೆಯಲ್ಲಿ ಜಾಸ್ತಿ ಪಾಯಸವೊ?

- ದಿನೇಶ್‌ ನೆಟ್ಟರ್‌; ನ್ಯೂಜೆರ್ಸಿ

(ವಿಚಿತ್ರಾನ್ನ ಅಡುಗೆಮನೆಯಿಂದ ಉತ್ತರ (ಕನಕದಾಸರ ಕ್ಷಮೆಕೋರಿ): - ನೀ ಮಾಯೆಯಾಳಗೋ ನಿನ್ನೊಳು ಮಾಯೆಯಾ... ಕೀರ್ತನೆಯಲ್ಲಿದ್ದಂತೆ ತೊವ್ವೆ ಪಾಯ್ಸದ ಒಳಗೊ ಪಾಯ್ಸ ತೊವ್ವೆಯ ಒಳಗೊ ತೊವ್ವೆ ಪಾಯ್ಸಗಳೆರಡು ಹೊಟ್ಟೆಯಾಳಗೋ...)

*

I am also a muddepriya. I am working in Saudi Arabia. When I was reading your article my mouth was watering with the remembrance of mudde & soppina saru. In the beginning I searched for mudde here, but did not get. Ultimately I stopped searching. I fulfill my needs during vacation.

Your article is interesting & thanks article daathaa for giving wide publicity for mudde in America & introduction of muddedaathaa in America.

- A. Satheesh; Saudi Arabia

*

The artilce indeed was mouthwaering stuff. But you did not disucss the helathy/unhealthy aspects of it. It is not good for Bllod pressure patients since it has way too much salt. But people like me and you will eat it anyway. I missed lot of fun from Sammelana since I had my China trip planned around same time. Your reporting was excellent regarding sammelana.

- Suresh Ramachandra; Maryland

*

I printed the article and took it with me to the office. It is true, we made good the short time we all spent at NS Foods. "uppu hachchida meNasinakaayi" as it is called in our houses in Mysore and Bangalore are my favourites too! Nagu and Shankar are great friends of ours and are always looking to help people.

- Dr U B Vasudev; Tampa (Florida)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more