380703childrenಬೇಸಿಗೆ ಶಿಬಿರವೆಂಬ ಮಕ್ಕಳ ಮನೋವಿಕಸನ ಕೇಂದ್ರ/column/shreenidhi/2009/0414-summer-camps-for-children.htmlಬೇಸಿಗೆ ಶಿಬಿರಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮಾತ್ರವಲ್ಲ ಮನೋವಿಕಸನ ಕೂಡ ಆಗುತ್ತದೆ. ಎಲ್ಲ ಬಗೆಯ ಮಕ್ಕಳೊಂದಿಗೆ ಕಲೆತು, ಕಲಿತು ಬೆಳೆಯುವುದರಿಂದ ಸಾಂಘಿಕ ಜೀವನದ ಅರಿವೂ ಆಗುತ್ತದೆ. ಇತ್ತಿತ್ತಲಾಗಿ ನಗರಗಳಲ್ಲಿ ನಾಯಿಕೊಡೆಗಳಂತೆ ಬೇಸಿಗೆ ಶಿಬಿರಗಳು ಹುಟ್ಟಿಕೊಳ್ಳುತ್ತಿವೆ. ಇವೆಲ್ಲ ಬರೀ ಕಾಸು ಮಾಡುವ ಕೇಂದ್ರಗಳು ಅಂತ ಮೂಗು ಮುರಿಯದೇ ಸೂಕ್ತವಾದ ಶಿಬಿರ ಹುಡುಕಿ ಮಕ್ಕಳನ್ನು ಶಿಬಿರಗಳಿಗೆ ಕಳಿಸುವ ಜವಾಬ್ದಾರಿ ಪಾಲಕರದ್ದು.* 35950http://kannada.oneindia.com/img/2009/04/14-summer-camp1.jpg380703childrenಅಲಿಘರ್ ನ ಕೊಳದಲ್ಲಿ100 ತಲೆಬುರುಡೆ ಪತ್ತೆ!/news/2009/05/25/children-discover-100-human-skulls-in-aligarh.htmlಅಲಿಘರ್, ಉತ್ತರಪ್ರದೇಶ, ಮಾ.25: ಇಲ್ಲಿನ ಕೊಳವೊಂದರಲ್ಲಿ ಸುಮಾರು 100 ಕ್ಕೂ ಅಧಿಕ ಮಾನವರ ತಲೆಬುರುಡೆಗಳು ಇರುವುದನ್ನು ಸ್ಥಳೀಯ ಮಕ್ಕಳು ಪತ್ತೆಹಚ್ಚಿದ್ದಾರೆ. ಅಪರಿಚಿತ ಶವಗಳಿಗೆ ಸರಿಯಾದ ಉತ್ತರಕ್ರಿಯೆ ಮಾಡದೆ, ಇಲ್ಲಿನ ಪೊಲೀಸ್ ಇಲಾಖೆ ಕೊಳದೊಳಗೆ ಶವಗಳನ್ನು ಎಸೆದಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಬೇಸಿಗೆಯ ಸುಡು ಬಿಸಿಲಿಗೆ ಕೊಳದ ನೀರು ಕಮ್ಮಿಯಿದ್ದ ಕಾರಣ, ಎಂದೋ ಹುದುಗಿದ್ದ ತಲೆಬುರುಡೆಗಳು ಕೊಳದಲ್ಲಿ 36878http://kannada.oneindia.com/img/2009/05/25-human-skulls.jpg380703childrenಮಕ್ಕಳು ಹಾಳಾಗುವುದಕ್ಕೆ ಯಾರು ಕಾರಣ?/literature/articles/2009/0615-are-literate-students-really-educated.htmlಒ೦ದು ಮಾತ್ರ ಸತ್ಯ. ತಾಯಿಯ ಹಾಲಿಗೆ ಹೇಗೆ ಯಾವ ಹಾಲೂ ಸಾಟಿಯಲ್ಲವೋ ಹಾಗೇ, ತಾಯಿ (ಪೋಷಕರು) ಹೇಳಿಕೊಡುವ ನಾಲ್ಕಕ್ಷರಕ್ಕೆ ಯಾವ ಡಿಗ್ರಿಯೂ ಸಾಟಿಯಿಲ್ಲ. ಮನೆಯಲ್ಲಿನ ಮನೆಯಲ್ಲಿನ ಸ್ವಚ್ಚ ವಾತಾವರಣ, ಸ೦ಸ್ಕೃತಿ, ತಾಜಾತನಕ್ಕೆ ಬೇರೆ ಯಾವ ಶಿಬಿರವೂ ಸಾಟಿ ಅಲ್ಲ, ಇಲ್ಲೇ ನಮ್ಮ ಮಕ್ಕಳ ಅರ್ಧ ಭವಿಷ್ಯ ನಿರ್ಧಾರವಾಗುವುದು. ಮಕ್ಕಳ ಎಳೆಯ ಮನಸ್ಸು ಎಲ್ಲವನ್ನೂ ಹೀರಿಕೊಳ್ಳುವುದೇ ನಮ್ಮ ಈ 37348http://kannada.oneindia.com/img/2009/06/15-venkatesh-dodmane2.jpg380703childrenಮಗುವಿನ ಶತ್ರುಗಳು ಮನೆಯಲ್ಲೇ ಇದ್ದಾರೆ/column/talk-of-the-town/2009/1124-upbringing-kids-mammoth-task.htmlಬೇಕಾದರೆ ಹತ್ತು ಮಕ್ಕಳನ್ನು ಹೆರಬಹುದು, ಆದರೆ ಒಂದು ಮಗುವನ್ನು ಶ್ರದ್ಧೆಯಿಂದ ಬೆಳೆಸುವುದು ತುಂಬಾ ಕಷ್ಟ ಅಲ್ವಾ? ಇದು ಕಲಿಯುಗ ತಾಯೀ, ಕಲಿಯುಗಾ..* ಧವಳಮಗು ಮನೆಯ ನಂದಾದೀಪ. ಮಗು ಹುಟ್ಟಿದಾಗ ತನ್ನ ಹೆಣ್ತನ ಪೂರ್ಣ ಆಗುತ್ತದೆ ಎಂದು ವಿಶ್ವದಲ್ಲಿರುವ ಹೆಚ್ಚಿನ ಹೆಣ್ಣು ಮಕ್ಕಳ ನಂಬುಗೆ! ವಿಸ್ಮಯ,ಕಲ್ಪನೆ,ವಿಶ್ಲೇಷಣೆ ಏನೆ ಇರಲಿ ಆದರೆ ಮಗು ಮಹದಾನಂದ ತರುವ 40388http://kannada.oneindia.com/img/2009/11/24-child-abuse2.jpg30952shreenidhiಮನೆಯಿಂದ ಮನೆಗೆ../column/shreenidhi/2008/0826-old-memories-from-one-home-to-another.htmlಊರಿಂದ ಊರಿಗೆ ಹೋಗುವುದು, ಮನೆಯಿಂದ ಮನೆ ಬದಲಾಯಿಸುವುದು ಬಾಡಿಗೆದಾರರಿಗೆ, ವರ್ಗಾವಣೆಯ ಸರ್ಕಾರಿ ಕೆಲಸ ಇರುವವರಿಗೆ ತಪ್ಪದ ಕರ್ಮ. ಆದರೆ ಅದರಲ್ಲೂ ಸ್ವಾರಸ್ಯವಿರುತ್ತದೆ. ಪ್ರತಿ ಬಾಡಿಗೆ ಮನೆಯೂ ನಮ್ಮ ಸ್ವಂತ ಮನೆಯೇ, ಅದನ್ನು ಬಿಡುವವರೆಗೆ. ಇಂಥ ಅನುಭವಗಳು ಪ್ರತಿಯೊಬ್ಬರದೂ ಆಗಿರುತ್ತವೆ. ಮನೆ ಬದಲಾಯಿಸುವುದು ಸಾಮಾನು ಸರಂಜಾಮುಗಳ ಮೆರವಣಿಗೆ ಮಾತ್ರವಲ್ಲ ನೆನಪುಗಳ ಮೆರವಣಿಗೆ. ಅಂಕಣಕಾರ : ಶ್ರೀನಿಧಿ ಡಿ.ಎಸ್. ವರುಷ 1145http://kannada.oneindia.com/img/2009/09/23-loaded-van1.jpg30952shreenidhiಲಾರಾ ಇಂಗಲ್ಸ್ ವೈಲ್ಡರ್ ಮತ್ತು ಕ್ರಿಸ್ಮಸ್/column/shreenidhi/2008/1223-laura-ingalls-wilder-little-house-series.htmlಮಗುವಿನ ಮುಗ್ಧತೆಯಿಂದ ಮಕ್ಕಳ ಕಥೆಗಳನ್ನು ಮನೋಜ್ಞವಾಗಿ ಬರೆದ ಲಾರಾಳ ನೆನಪು ಇವತ್ತಿನ ಕಾಡುಹರಟೆಯಲ್ಲಿ ಒಂದೇಸಮನೆ ಕಾಡುತ್ತಿದೆ. ವಿಸ್ಕಾನ್ ಸಿನ್ ಕಾಡಿನ ಮರದತೊಗಟೆಗಳಿಂದ ಸೂಸಿಬರುವ ಪರಿಮಳ ನೆತ್ತಿಗೇರುತ್ತಿದೆ. ನಾನೂ ಕೂಡ ನನ್ನ ಬಾಲ್ಯದ ಕಥೆಗಳನ್ನು ಬಾಲ್ಯದ ಭಾಷೆಯಲ್ಲೇ ಬರೆಯಲಾರೆನೇ ಎಂದು ನನಗೆ ನಾನೇ ಕೇಳಿಕೊಳ್ಳಲಾರಂಭಿಸಿದ್ದೇನೆ!* ಶ್ರೀನಿಧಿ ಡಿ. ಎಸ್.ಆಕೆ ಬರೆಯಹೊರಟಿದ್ದು ಎಂದಿಗೂ ಕಳೆದುಹೋಗಬಾರದ ಕಥೆಗಳನ್ನು. ಅವಳ ಜೀವನಾನುಭವಗಳು 33657http://kannada.oneindia.com/img/2008/12/23-laura-ingalls-wilder1.jpg30952shreenidhiಬಂದಿದೆ ಹೊಸ ವರುಷ ತಂದಿದೆ ಬಲು ಹರುಷ/column/shreenidhi/2008/1230-cheers-lets-celebrate-the-new-year.htmlಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.* ಶ್ರೀನಿಧಿ ಡಿ.ಎಸ್.ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು 33789http://kannada.oneindia.com/img/2008/12/30-new-year1.gif30952shreenidhiನಮ್ಮೂರಿನ ಅಂದಿನ ಚೆಂದದ ಕೆರೆಗೆ ಇಂದೇನಾಗಿದೆ?/column/shreenidhi/2009/0106-sad-story-of-a-lake-in-karnataka.html* ಶ್ರೀನಿಧಿ ಡಿ.ಎಸ್.ಒಂದು ಉದ್ದನೆಯ ಏರಿ, ಏರಿಯ ಕೆಳಗೆ ದೊಡ್ಡ ಕೆರೆ. ನಿಂತು ನೋಡುತ್ತಿದ್ದರೆ, ಅದರ ತುದಿ ಕಾಣುವಷ್ಟರಲ್ಲಿ ಕಣ್ಣು ನೋಯಬೇಕು, ಅಷ್ಟು ದೊಡ್ಡದು. ಕೆರೆಯ ತುಂಬ ಗಾಳಿಗೆ ಅಲ್ಲಾಡುತ್ತ ನಿಂತ ತಾವರೆಯ ಹೂವುಗಳು. ಜೊತೆಗೆ ಹಸಿರು ಹುಲ್ಲ ಜೊಂಡು. ದಂಡೆಯ ಪಕ್ಕದಲ್ಲೇ ಸಾಲು ಮರಗಳು. ಕೆರೆಯ, ಅಕೋ ಆ ತುದಿಯಲ್ಲಿ ಒಂದು ಹಳೆಯ ಕಾಲದ ಶಿವನ 33924http://kannada.oneindia.com/img/2009/01/06-lake1.jpg30952shreenidhiರಾಜು ಅನಂತಸ್ವಾಮಿಗೆ ಬ್ಲಾಗಿಗಳ ಅನಂತ ನಮನ/mixed-bag/blogs/2009/0119-tribute-raju-ananthaswamy-by-kannada-bloggers.html[ಗಾಯಕ ರಾಜು ಅನಂತಸ್ವಾಮಿ ಅವರ ಅಕಾಲಿಕ ಮರಣ ದುರಂತವೇ ಸರಿ. ಅವರ ಅಗಣಿತ ಅಭಿಮಾನಿಗಳು ತಮ್ಮ ನೋವು,ಆಘಾತ, ವಿಷಾದ ಹಾಗೂ ಅಂತಿಮ ನಮನವನ್ನು ಬ್ಲಾಗ್ ಲೋಕದಲ್ಲಿ ಹರಿಯಬಿಟ್ಟಿದ್ದಾರೆ. ಅದರಲ್ಲಿ ಆಯ್ದ ಕೆಲವನ್ನು ಇಲ್ಲಿ ಕೊಡಲಾಗಿದೆ. ಮಿಕ್ಕವರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಅಡ್ಡಿಯಿಲ್ಲ. -ಸಂಪಾದಕ]*ಚೆಂಡೆಮದ್ದಳೆಕಣ್ತುಂಬಿ ಬರುತ್ತದೆ….!ನಾವು ಕ್ರಮಿಸುವ ದಾರಿಯನ್ನು ಪ್ರತಿ ಪ್ರತಿ ಹಂತದಲ್ಲೂ ಪ್ರಶ್ನಿಸುತ್ತಲೇ ನಮ್ಮ ಖಚಿತತೆಯನ್ನು ಮತ್ತಷ್ಟು 34153http://kannada.oneindia.com/img/2009/01/19-raju-ananthaswamy2.jpg30946ಶ್ರೀನಿಧಿಲಾರಾ ಇಂಗಲ್ಸ್ ವೈಲ್ಡರ್ ಮತ್ತು ಕ್ರಿಸ್ಮಸ್/column/shreenidhi/2008/1223-laura-ingalls-wilder-little-house-series.htmlಮಗುವಿನ ಮುಗ್ಧತೆಯಿಂದ ಮಕ್ಕಳ ಕಥೆಗಳನ್ನು ಮನೋಜ್ಞವಾಗಿ ಬರೆದ ಲಾರಾಳ ನೆನಪು ಇವತ್ತಿನ ಕಾಡುಹರಟೆಯಲ್ಲಿ ಒಂದೇಸಮನೆ ಕಾಡುತ್ತಿದೆ. ವಿಸ್ಕಾನ್ ಸಿನ್ ಕಾಡಿನ ಮರದತೊಗಟೆಗಳಿಂದ ಸೂಸಿಬರುವ ಪರಿಮಳ ನೆತ್ತಿಗೇರುತ್ತಿದೆ. ನಾನೂ ಕೂಡ ನನ್ನ ಬಾಲ್ಯದ ಕಥೆಗಳನ್ನು ಬಾಲ್ಯದ ಭಾಷೆಯಲ್ಲೇ ಬರೆಯಲಾರೆನೇ ಎಂದು ನನಗೆ ನಾನೇ ಕೇಳಿಕೊಳ್ಳಲಾರಂಭಿಸಿದ್ದೇನೆ!* ಶ್ರೀನಿಧಿ ಡಿ. ಎಸ್.ಆಕೆ ಬರೆಯಹೊರಟಿದ್ದು ಎಂದಿಗೂ ಕಳೆದುಹೋಗಬಾರದ ಕಥೆಗಳನ್ನು. ಅವಳ ಜೀವನಾನುಭವಗಳು 33657http://kannada.oneindia.com/img/2008/12/23-laura-ingalls-wilder1.jpg30946ಶ್ರೀನಿಧಿಬಂದಿದೆ ಹೊಸ ವರುಷ ತಂದಿದೆ ಬಲು ಹರುಷ/column/shreenidhi/2008/1230-cheers-lets-celebrate-the-new-year.htmlಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.* ಶ್ರೀನಿಧಿ ಡಿ.ಎಸ್.ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು 33789http://kannada.oneindia.com/img/2008/12/30-new-year1.gif30946ಶ್ರೀನಿಧಿರಾಜು ಅನಂತಸ್ವಾಮಿಗೆ ಬ್ಲಾಗಿಗಳ ಅನಂತ ನಮನ/mixed-bag/blogs/2009/0119-tribute-raju-ananthaswamy-by-kannada-bloggers.html[ಗಾಯಕ ರಾಜು ಅನಂತಸ್ವಾಮಿ ಅವರ ಅಕಾಲಿಕ ಮರಣ ದುರಂತವೇ ಸರಿ. ಅವರ ಅಗಣಿತ ಅಭಿಮಾನಿಗಳು ತಮ್ಮ ನೋವು,ಆಘಾತ, ವಿಷಾದ ಹಾಗೂ ಅಂತಿಮ ನಮನವನ್ನು ಬ್ಲಾಗ್ ಲೋಕದಲ್ಲಿ ಹರಿಯಬಿಟ್ಟಿದ್ದಾರೆ. ಅದರಲ್ಲಿ ಆಯ್ದ ಕೆಲವನ್ನು ಇಲ್ಲಿ ಕೊಡಲಾಗಿದೆ. ಮಿಕ್ಕವರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಅಡ್ಡಿಯಿಲ್ಲ. -ಸಂಪಾದಕ]*ಚೆಂಡೆಮದ್ದಳೆಕಣ್ತುಂಬಿ ಬರುತ್ತದೆ….!ನಾವು ಕ್ರಮಿಸುವ ದಾರಿಯನ್ನು ಪ್ರತಿ ಪ್ರತಿ ಹಂತದಲ್ಲೂ ಪ್ರಶ್ನಿಸುತ್ತಲೇ ನಮ್ಮ ಖಚಿತತೆಯನ್ನು ಮತ್ತಷ್ಟು 34153http://kannada.oneindia.com/img/2009/01/19-raju-ananthaswamy2.jpg30946ಶ್ರೀನಿಧಿಸಿನಿಮಾ ನೋಡುವ ಸುಖದ ಕುರಿತು.../column/shreenidhi/2009/0120-the-joy-of-watching-acclaimed-movies.htmlಕ್ಲಾಸಿಗೆ ಚಕ್ಕರ್ ಹಾಕಿ, ಸ್ನೇಹಿತರೊಡಗೂಡಿ ಹಳ್ಳಿ ಚಿತ್ರಮಂದಿರಗಳಲ್ಲಿ ಕದ್ದುಮುಚ್ಚಿ ಚಲನಚಿತ್ರ ನೋಡುವ ಖುಷಿಯಿದೆಯಲ್ಲ, ಅದು ಯಾವ ಸಂತೋಷಕ್ಕೂ ಸಾಟಿಯಲ್ಲ. ಹಳ್ಳಿ ಹುಡುಗರನೇಕರು ಪಟ್ಟಣ ಸೇರಿಕೊಂಡು ಆ ಸುಖದಿಂದ ವಂಚಿತರಾಗುತ್ತಿರುವುದು ಅಷ್ಟೇ ಸತ್ಯ. ಈಗಂತೂ ಸಿನೆಮಾವನ್ನು ಡಿವಿಡಿಗಳಲ್ಲೇ ನೋಡುವ ಸೌಭಾಗ್ಯ ಲಭಿಸುತ್ತಿರುವುದರಿಂದ ಮನೆಯಲ್ಲಿ ಕೂತು ಸಿನೆಮಾ ನೋಡುವವರ ಸಂಖ್ಯೆ ಜಾಸ್ತಿಯಾಗ್ತಾಯಿದೆ. ಆದರೂ, ಧಿಯೇಟರಿಗೆ ಹೋಗಿ ಚಿತ್ರ ವೀಕ್ಷಿಸುವ ಸುಖವೇ 34175http://kannada.oneindia.com/img/2009/01/20-seven-pounds1.jpg30946ಶ್ರೀನಿಧಿಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpgnews"> ಬೇಸಿಗೆ ಶಿಬಿರವೆಂಬ ಮಕ್ಕಳ ಮನೋವಿಕಸನ ಕೇಂದ್ರ | Summer camp | Children | Personality development | Creativity - ಬೇಸಿಗೆ ಶಿಬಿರವೆಂಬ ಮಕ್ಕಳ ಮನೋವಿಕಸನ ಕೇಂದ್ರ - Kannada Oneindia

ಬೇಸಿಗೆ ಶಿಬಿರವೆಂಬ ಮಕ್ಕಳ ಮನೋವಿಕಸನ ಕೇಂದ್ರ

Summer camp for children
ಬೇಸಿಗೆ ಶಿಬಿರಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮಾತ್ರವಲ್ಲ ಮನೋವಿಕಸನ ಕೂಡ ಆಗುತ್ತದೆ. ಎಲ್ಲ ಬಗೆಯ ಮಕ್ಕಳೊಂದಿಗೆ ಕಲೆತು, ಕಲಿತು ಬೆಳೆಯುವುದರಿಂದ ಸಾಂಘಿಕ ಜೀವನದ ಅರಿವೂ ಆಗುತ್ತದೆ. ಇತ್ತಿತ್ತಲಾಗಿ ನಗರಗಳಲ್ಲಿ ನಾಯಿಕೊಡೆಗಳಂತೆ ಬೇಸಿಗೆ ಶಿಬಿರಗಳು ಹುಟ್ಟಿಕೊಳ್ಳುತ್ತಿವೆ. ಇವೆಲ್ಲ ಬರೀ ಕಾಸು ಮಾಡುವ ಕೇಂದ್ರಗಳು ಅಂತ ಮೂಗು ಮುರಿಯದೇ ಸೂಕ್ತವಾದ ಶಿಬಿರ ಹುಡುಕಿ ಮಕ್ಕಳನ್ನು ಶಿಬಿರಗಳಿಗೆ ಕಳಿಸುವ ಜವಾಬ್ದಾರಿ ಪಾಲಕರದ್ದು.

* ಶ್ರೀನಿಧಿ ಡಿಎಸ್

ಬೇಸಿಗೆ ರಜೆ ಅರಂಭವಾಯಿತೆಂದರೆ, ಅಪ್ಪ ಅಮ್ಮಂದಿರಿಗೆ, ತಮ್ಮ ಮಕ್ಕಳನ್ನು ಕಂಟ್ರೋಲು ಮಾಡುವುದು ಹೇಗಪ್ಪಾ ಅನ್ನುವ ಚಿಂತೆ ಶುರು. ಇತ್ತೀಚಿನ ವರುಷಗಳಲ್ಲಿ, ಪಾಶ್ಚಾತ್ಯ ಪ್ರಭಾವದಿಂದ ದೇಶದಾದ್ಯಂತ ಹುಟ್ಟಿಕೊಂಡಿರುವ ಸಮ್ಮರ್ ಕ್ಯಾಂಪುಗಳು, ಹೆತ್ತವರ ತಲೆಬಿಸಿ ಕಡಿಮೆ ಮಾಡಿವೆ.

ಬೇಸಿಗೆ ಶಿಬಿರ ಎಂದರೆ, ಬೇಸಿಗೆ ರಜೆಯಲ್ಲಿ ಹೆಚ್ಚಾಗಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ, ಅನುಭವಿ ತರಬೇತುದಾರರಿಂದ ಮಕ್ಕಳಿಗಾಗಿ ನಡೆಯುವ ಶಿಬಿರಗಳು. ಈ ಶಿಬಿರಗಳಲ್ಲಿ, ಮಕ್ಕಳ ದೈನಂದಿನ ಕಲಿಕೆಯ ಬದಲಾಗಿ, ಬೇರೆಯದೇ ರೀತಿಯ ಶಿಕ್ಷಣ ನೀಡಲಾಗುತ್ತದೆ. ಇವುಗಳು ಅಟಗಳು, ಮನಸ್ಸನ್ನು ವೃದ್ಧಿಸುವ ಮೈಂಡ್ ಗೇಮ್ ಗಳು, ಕಲೆ ಸಂಸ್ಕೃತಿಯ ಪರಿಚಯ- ಇತ್ಯಾದಿಗಳನ್ನು ಒಳಗೊಂಡಿದೆ. ಮಕ್ಕಳಲ್ಲಿ ಸಾಂಸ್ಕೃತಿಕ ಮತ್ತು ಸಮಾಜಿಕ ಬೆಳವಣಿಗೆ ಮಾಡಿಸುವುದು, ಈ ತರಹದ ಶಿಬಿರಗಳ ಮುಖ್ಯ ಉದ್ದೇಶ.

ಬೇಸಿಗೆ ಶಿಬಿರಗಳು, ಮಕ್ಕಳ ಮನೋವಿಕಾಸಕ್ಕೆ ಸಹಕಾರಿ. ಪ್ರತಿ ಬೇಸಿಗೆಯಲ್ಲೂ, ಅದೆಷ್ಟೋ ಮಕ್ಕಳು ಶಿಬಿರಗಳಲ್ಲಿ ಪಾಲ್ಗೊಂಡು, ತಮ್ಮ ಜೀವನಾನುಭವ ಹೆಚ್ಚಿಸಿಕೊಳ್ಳುತ್ತಾರೆ. ಮಕ್ಕಳನ್ನು ಇಂತಹ ಶಿಬಿರಗಳಿಗೆ ಕಳುಹಿಸುವುದರಿಂದಾಗುವ ಅನುಕೂಲಗಳು ಬಹಳಷ್ಟು. ಹೊಸ ಸಂಗತಿಗಳ ಅಧ್ಯಯನ, ಹೊಸ ಸ್ನೇಹಿತರು, ಹೊಸ ವಿಚಾರಗಳು.. ಹೀಗೆ ಮಗುವೊಂದರ ನಿಜವಾದ ವಿಕಾಸದ ವೇದಿಕೆಯಾಗಬಲ್ಲವು ಬೇಸಿಗೆ ಶಿಬಿರಗಳು. ಇಲ್ಲಿ ಮಕ್ಕಳಿಗೆ ಅತ್ಯಂತ ಅಗತ್ಯವಾದ ಸ್ವಾತಂತ್ರ್ಯದ ಪರಿಚಯವಾಗುತ್ತದೆ. ತಾವಾಗಿಯೇ ತಮ್ಮ ಕೆಲಸಗಳನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಅರಿವಾಗುತ್ತದೆ. ತಂದೆ ತಾಯಿಗಳಿಲ್ಲದ ಸಂದರ್ಭದಲ್ಲಿ, ಹೇಗೆ ತಮ್ಮನ್ನು ತಾವು ಅರಿತುಕೊಳ್ಳಬೇಕೆಂಬುದು ತಿಳಿಯುತ್ತದೆ. ಹೊಸ ಜವಾಬ್ದಾರಿಗಳು ಬೆಳೆಯುತ್ತದೆ.

ಶಿಬಿರಗಳಲ್ಲಿ, ಕಲೆ-ಸಂಸ್ಕೃತಿಗಳ ವಿಚಾರಗಳು, ಅಟೋಟಗಳಲ್ಲಿ ಎಲ್ಲರೂ ಒಂದಾಗಿ ಪಾಲುಗೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ, ಒಂದು ಸಮುದಾಯದಲ್ಲಿ ಮಗು, ತಾನು ಹೇಗೆ ಇತರರೊಡನೆ ಬೆರೆಯಬೇಕು- ಉಳಿದವರೊಡನೆ ಒಟ್ಟಾಗಿ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಅರಿತುಕೊಳ್ಳುತ್ತದೆ. ಸಣ್ಣಪುಟ್ಟ ಕೆಲಸಗಳ ಮೂಲಕ, ತನ್ನ ಪರಿಣತಿಯನ್ನೂ ಬೆಳಸಿಕೊಳ್ಳುತ್ತದೆ. ವಿನೂತನ ಅನುಭವಗಳು, ಮಕ್ಕಳಲ್ಲಿನ ಪರಿಣಿತಿಯನ್ನು ಬೆಳೆಸುತ್ತದೆ. ಇಲ್ಲಿ ಮಕ್ಕಳಿಗೆ ಪರಿಣತಿ ಹೆಚ್ಚಿಸುವ ಅಟಗಳು, ಇತರ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತದೆ. ಇದು ಜೀವನದ ಹಾದಿಯಲ್ಲಿ ಮಕ್ಕಳಿಗೆ ಹೊಸ ದಾರಿಗಲ್ಲಾಗುತ್ತದೆ. ಇಲ್ಲಿನ ಕಲಿಕೆ, ಮುಂದಿನ ದಿನಗಳಲ್ಲಿ ಮಕ್ಕಳ ಅಸಕ್ತಿಗೆ ಹೊಸ ರೂಪ ನೀಡಬಹುದು.

ಬೇರೆ ಬೇರೆ ಕಡೆಗಳಿಂದ ಬಂದ ಹೊಸ ಮುಖಗಳ ಪರಿಚಯ ನಿಮ್ಮ ಮಕ್ಕಳಿಗಾಗುತ್ತದೆ. ಪ್ರತಿ ದಿನ ಅದೇ ಶಾಲೆ, ಅದೇ ಸ್ನೇಹಿತರನ್ನು ಹೊಂದಿದ್ದ ಮಗುವಿಗೆ, ಇಲ್ಲಿ ಹೊಸ ಸ್ನೇಹಿತರು ದೊರಕುತ್ತಾರೆ, ಹೊಸ ವಿಚಾರಗಳು ತಿಳಿಯುತ್ತವೆ. ಯಾರೊಂದಿಗೂ ಮಾತನಾಡದೇ, ತನ್ನ ಪಾಡಿಗೆ ತಾನಾಗೇ ಇರುವ ಮಕ್ಕಳೂ ಕೂಡ, ಇಂತಹ ಕಡೆಗಳಲ್ಲಿ ತಮ್ಮ ಚಿಪ್ಪಿನಿಂದ ಹೊರಬಂದು, ಸಮಾಜದಲ್ಲಿ ಎಲ್ಲರೊಂದಿಗೆ ಹೇಗೆ ಬದುಕಬೇಕು ಎನ್ನುವ ಕಲೆಯನ್ನು ಕಲಿಯುತ್ತಾರೆ.

ಮಕ್ಕಳು ಇಲ್ಲಿ ಬಹಳಷ್ಟು ಚಟುವಟಿಕೆಗಳಲ್ಲಿ ಪಾಲುಗೊಳ್ಳುವುದರಿಂದ, ತಮ್ಮ ಅಸಕ್ತಿಯೇನು ಎಂಬುದನ್ನು ಅರಿಯುತ್ತಾರೆ. ಅಲ್ಲಿ ಕಲಿಸುವ ಬೇರೆ ಬೇರೆ ಅಟಗಳಲ್ಲಿ, ಮೆದುಳಿನ ಕೆಲಸ ಹೆಚ್ಚಿಸುವ ಕ್ರಿಯೆಗಳಲ್ಲಿ ತಮಗೆ ಯಾವುದು ಇಷ್ಟ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಇದು, ಮುಂದೆ ಅವರ ಅಸಕ್ತಿಯ ಕ್ಷೇತ್ರವನ್ನು ಅಯ್ದುಕೊಳ್ಳಲು ಉಪಕಾರಿ. ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಕೂಡ ಬೆಳೆಸುತ್ತವೆ. ಪ್ರತಿ ದಿನ ಕೇವಲ ಶೈಕ್ಷಣಿಕ ವಿಚಾರಗಳ ಸುತ್ತ ಸುತ್ತುತ್ತಿದ್ದ ಮನಸ್ಸಿಗೆ, ಹಿತಕಾರಕ ಎನ್ನಿಸುವ ಸರಳ ಚಟುವಟಿಕೆಗಳು, ಹೊಸ ಹುರುಪು ನೀಡುತ್ತದೆ. ಗುಂಪು ಚಟುವಟಿಕೆಗಳು ಮಕ್ಕಳಲ್ಲಿ ಕೂಡಲೇ ನಿರ್ಧಾರಗಳನ್ನು ತೆಗೆದುಕೊಳ್ಳುವ. ನಾಯಕತ್ವ ವಹಿಸಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸುತ್ತವೆ. ಇದು ಮುಂದಿನ ಬದುಕಿಗೆ ಸಹಕಾರಿ.

ಭಾಷಾ ಬೆಳವಣಿಗೆ ಮಾಡುವುದರಲ್ಲಿ, ಧೈರ್ಯ ಹೆಚ್ಚಿಸುವಿಕೆಯಲ್ಲಿ, ಹೊಣೆಕಾರಿಕೆ ಅರಿತುಕೊಳ್ಳುವುದರಲ್ಲಿ, ಎಲ್ಲರ ಜೊತೆಗಿನ ಪಾಲ್ಗೊಳ್ಳುವಿಕೆಯಲ್ಲಿ, ಕರ್ತವ್ಯಪ್ರಜ್ಞೆ ಮತ್ತು ನಂಬಿಕೆ ಬೆಳೆಸುವುದರಲ್ಲೂ ಈ ಕ್ಯಾಂಪ್ ಗಳ ಮಹತ್ವ ಹೆಚ್ಚಿನದು. ಸ್ವಗೌರವ ಹೆಚ್ಚಿಸಿ, ಕೀಳರಿಮೆ ಹೋಗಲಾಡಿಸುವುದರಲ್ಲೂ ಇವುಗಳ ಪಾತ್ರ ಪ್ರಮುಖ. ಯಾವುದೇ ಜಾತಿ, ಧರ್ಮಗಳ ಹಂಗಿಲ್ಲದೇ, ಬೆರೆತು ಬಾಳುವುದನ್ನು ಕೂಡ ಈ ಶಿಬಿರಗಳ ಕಲಿಸುತ್ತವೆ. ಇಲ್ಲಿ ನಡೆಸುವ ಚಟುವಟಿಕೆಗಳಲ್ಲಿ ಯಾವುದೇ ಬೇಧಭಾವ ಇರುವುದಿಲ್ಲ. ಮಕ್ಕಳು ಇಲ್ಲಿ ಎಲ್ಲರೊಂದಿಗೆ ಸಮಾನವಾಗಿ ವರ್ತಿಸುವುದನ್ನು ಕಲಿತುಕೊಳ್ಳುತ್ತಾರೆ.

ಈ ಶಿಬಿರಗಳು ಶಿಕ್ಷಣ- ಅಂಕಗಳು- ಗ್ರೇಡ್ ಪದ್ಧತಿಯಿಂದ ಹೊರತಾಗಿರುವುದರಿಂದ, ಮಕ್ಕಳ ಮನಸ್ಸಿನ ಭಾರವನ್ನು ಇಳಿಸುತ್ತವೆ. ವರುಷವಿಡೀ ಪರೀಕ್ಷೆಗಳ ಜಂಜಡದಿಂದ ನೊಂದ ಮನಸ್ಸಿಗೆ ಇವು ಸಹಾಯ ಮಾಡುತ್ತವೆ. ಕ್ಯಾಂಪ್ ಗಳಲ್ಲಿ ಭಾಗವಹಿಸುವುದರಿಂದ, ದೈಹಿಕ ಕ್ಷಮತೆ ಹೆಚ್ಚುತ್ತದೆ. ಹೊಸ ಬಗೆಯ ಅಟಗಳು, ಈಜು ಇತ್ಯಾದಿಗಳಲ್ಲಿ ಪಾಲ್ಗೊಳ್ಳುವುದರಿಂದ ಅರೋಗ್ಯ ಕೂಡ ವೃದ್ಧಿಸುತ್ತದೆ. ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಅರಿತುಕೊಳ್ಳಲು ಇಂತಹ ಶಿಬಿರಗಳು ಸರಿಯಾದ ವೇದಿಕೆ ಒದಗಿಸಬಲ್ಲದು. ಕಲೆ, ಪೇಂಟಿಗ್, ನೃತ್ಯ ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳು, ಮಕ್ಕಳಿಗೆ ಸಾಧ್ಯವಾಗಬಹುದಾದ ಹೊಸ ನೆಲೆಗಟ್ಟನ್ನು ಒದಗಿಸಬಲ್ಲವು.

ಇಂದು ಭಿನ್ನ ಭಿನ್ನ ಬಗೆಯ ಬೇಸಿಗೆ ಶಿಬಿರಗಳು ನಡೆಯುತ್ತವೆ. ಕೇವಲ ಕ್ರೀಡೆಗೆ ಸಂಬಂಧಿಸಿದವು, ಕಲಿಕೆ, ಸಾಹಸ ಕ್ರೀಡೆಗಳು, ಸಾಂಸ್ಕೃತಿಕ ಬೆಳವಣಿಗೆಗೆ ಸಹಕಾರಿಯಾಗಬಲ್ಲವು ಹೀಗೆ ಮಕ್ಕಳ ಅಭಿರುಚಿಗೆ ತಕ್ಕ ಹಾಗಿನ ಬೇಸಿಗೆ ಶಿಬಿರಗಳು ಲಭ್ಯವಿದೆ. ಕಂಪ್ಯೂಟರ್, ಫೋಟೋಗ್ರಫಿ, ನಾಟಕ ಇತ್ಯಾದಿಗಳನ್ನು ಕಲಿಸುವ ಶಿಬಿರಗಳೂ ಇವೆ. ಇದುವರೆಗೆ ಕೇಳಿರದ, ನೋಡಿರದ, ಅನುಭವಿಸಿರದ ಹೊಸ ಅನುಭೂತಿಯನ್ನು ಮಕ್ಕಳಿಗೆ ನೀಡುತ್ತವೆ. ಹೊಸ ಪ್ರಯೋಗಗಳನ್ನು ಮಾಡಲು ಸಂಪೂರ್ಣ ಅನುಮತಿ ನೀಡುತ್ತವೆ. ಇಲ್ಲಿ ಮಕ್ಕಳಿಗೆ ಹೆಜ್ಜೆ ಹೆಜ್ಜೆಗೂ ಪ್ರೋತ್ಸಾಹ ದೊರಕುತ್ತದೆ. ಸರಿಯಾದ ಬೇಸಿಗೆ ಶಿಬಿರಗಳನ್ನು ಹುಡುಕಿ- (ಕಿಸೆಗೆ ಭಾರವಾಗದ ಹಾಗಿನವು ಮತ್ತು ನಿಜಕ್ಕೂ ಉಪಯೋಗಿಯಾಗಬಲ್ಲವು) ಮಕ್ಕಳನ್ನು ಸೇರಿಸಿ ನೋಡಿ- ಅವರ ಕ್ಷಿತಿಜ ವಿಸ್ತಾರವಾದೀತು.

ದಿನಗಳೆದಂತೆ, ಅಥವಾ ವರುಷಗಳು ಕಳೆದ ಹಾಗೆ, ನಿಮ್ಮ ಮಕ್ಕಳಿಗೆ ತಾವು ಹೋದ ಬೇಸಿಗೆ ಶಿಬಿರದ ನೆನಪು ಮಾಸಿಹೋಗಬಹುದು. ಅದರೆ, ಅಲ್ಲಿ ಕಲಿತ ವಿಚಾರಗಳು, ಮನಸಿನಾಳಕ್ಕಿಳಿದು, ಜೀವನವಿಡೀ ಜೊತೆ ನೀಡುತ್ತವೆ, ಅವರಿಗೆ ತಿಳಿಯದ ಹಾಗೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+