30952shreenidhiಮನೆಯಿಂದ ಮನೆಗೆ../column/shreenidhi/2008/0826-old-memories-from-one-home-to-another.htmlಊರಿಂದ ಊರಿಗೆ ಹೋಗುವುದು, ಮನೆಯಿಂದ ಮನೆ ಬದಲಾಯಿಸುವುದು ಬಾಡಿಗೆದಾರರಿಗೆ, ವರ್ಗಾವಣೆಯ ಸರ್ಕಾರಿ ಕೆಲಸ ಇರುವವರಿಗೆ ತಪ್ಪದ ಕರ್ಮ. ಆದರೆ ಅದರಲ್ಲೂ ಸ್ವಾರಸ್ಯವಿರುತ್ತದೆ. ಪ್ರತಿ ಬಾಡಿಗೆ ಮನೆಯೂ ನಮ್ಮ ಸ್ವಂತ ಮನೆಯೇ, ಅದನ್ನು ಬಿಡುವವರೆಗೆ. ಇಂಥ ಅನುಭವಗಳು ಪ್ರತಿಯೊಬ್ಬರದೂ ಆಗಿರುತ್ತವೆ. ಮನೆ ಬದಲಾಯಿಸುವುದು ಸಾಮಾನು ಸರಂಜಾಮುಗಳ ಮೆರವಣಿಗೆ ಮಾತ್ರವಲ್ಲ ನೆನಪುಗಳ ಮೆರವಣಿಗೆ. ಅಂಕಣಕಾರ : ಶ್ರೀನಿಧಿ ಡಿ.ಎಸ್. ವರುಷ 1145http://kannada.oneindia.com/img/2009/09/23-loaded-van1.jpg30952shreenidhiಲಾರಾ ಇಂಗಲ್ಸ್ ವೈಲ್ಡರ್ ಮತ್ತು ಕ್ರಿಸ್ಮಸ್/column/shreenidhi/2008/1223-laura-ingalls-wilder-little-house-series.htmlಮಗುವಿನ ಮುಗ್ಧತೆಯಿಂದ ಮಕ್ಕಳ ಕಥೆಗಳನ್ನು ಮನೋಜ್ಞವಾಗಿ ಬರೆದ ಲಾರಾಳ ನೆನಪು ಇವತ್ತಿನ ಕಾಡುಹರಟೆಯಲ್ಲಿ ಒಂದೇಸಮನೆ ಕಾಡುತ್ತಿದೆ. ವಿಸ್ಕಾನ್ ಸಿನ್ ಕಾಡಿನ ಮರದತೊಗಟೆಗಳಿಂದ ಸೂಸಿಬರುವ ಪರಿಮಳ ನೆತ್ತಿಗೇರುತ್ತಿದೆ. ನಾನೂ ಕೂಡ ನನ್ನ ಬಾಲ್ಯದ ಕಥೆಗಳನ್ನು ಬಾಲ್ಯದ ಭಾಷೆಯಲ್ಲೇ ಬರೆಯಲಾರೆನೇ ಎಂದು ನನಗೆ ನಾನೇ ಕೇಳಿಕೊಳ್ಳಲಾರಂಭಿಸಿದ್ದೇನೆ!* ಶ್ರೀನಿಧಿ ಡಿ. ಎಸ್.ಆಕೆ ಬರೆಯಹೊರಟಿದ್ದು ಎಂದಿಗೂ ಕಳೆದುಹೋಗಬಾರದ ಕಥೆಗಳನ್ನು. ಅವಳ ಜೀವನಾನುಭವಗಳು 33657http://kannada.oneindia.com/img/2008/12/23-laura-ingalls-wilder1.jpg30952shreenidhiಬಂದಿದೆ ಹೊಸ ವರುಷ ತಂದಿದೆ ಬಲು ಹರುಷ/column/shreenidhi/2008/1230-cheers-lets-celebrate-the-new-year.htmlಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.* ಶ್ರೀನಿಧಿ ಡಿ.ಎಸ್.ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು 33789http://kannada.oneindia.com/img/2008/12/30-new-year1.gif30952shreenidhiನಮ್ಮೂರಿನ ಅಂದಿನ ಚೆಂದದ ಕೆರೆಗೆ ಇಂದೇನಾಗಿದೆ?/column/shreenidhi/2009/0106-sad-story-of-a-lake-in-karnataka.html* ಶ್ರೀನಿಧಿ ಡಿ.ಎಸ್.ಒಂದು ಉದ್ದನೆಯ ಏರಿ, ಏರಿಯ ಕೆಳಗೆ ದೊಡ್ಡ ಕೆರೆ. ನಿಂತು ನೋಡುತ್ತಿದ್ದರೆ, ಅದರ ತುದಿ ಕಾಣುವಷ್ಟರಲ್ಲಿ ಕಣ್ಣು ನೋಯಬೇಕು, ಅಷ್ಟು ದೊಡ್ಡದು. ಕೆರೆಯ ತುಂಬ ಗಾಳಿಗೆ ಅಲ್ಲಾಡುತ್ತ ನಿಂತ ತಾವರೆಯ ಹೂವುಗಳು. ಜೊತೆಗೆ ಹಸಿರು ಹುಲ್ಲ ಜೊಂಡು. ದಂಡೆಯ ಪಕ್ಕದಲ್ಲೇ ಸಾಲು ಮರಗಳು. ಕೆರೆಯ, ಅಕೋ ಆ ತುದಿಯಲ್ಲಿ ಒಂದು ಹಳೆಯ ಕಾಲದ ಶಿವನ 33924http://kannada.oneindia.com/img/2009/01/06-lake1.jpg30952shreenidhiರಾಜು ಅನಂತಸ್ವಾಮಿಗೆ ಬ್ಲಾಗಿಗಳ ಅನಂತ ನಮನ/mixed-bag/blogs/2009/0119-tribute-raju-ananthaswamy-by-kannada-bloggers.html[ಗಾಯಕ ರಾಜು ಅನಂತಸ್ವಾಮಿ ಅವರ ಅಕಾಲಿಕ ಮರಣ ದುರಂತವೇ ಸರಿ. ಅವರ ಅಗಣಿತ ಅಭಿಮಾನಿಗಳು ತಮ್ಮ ನೋವು,ಆಘಾತ, ವಿಷಾದ ಹಾಗೂ ಅಂತಿಮ ನಮನವನ್ನು ಬ್ಲಾಗ್ ಲೋಕದಲ್ಲಿ ಹರಿಯಬಿಟ್ಟಿದ್ದಾರೆ. ಅದರಲ್ಲಿ ಆಯ್ದ ಕೆಲವನ್ನು ಇಲ್ಲಿ ಕೊಡಲಾಗಿದೆ. ಮಿಕ್ಕವರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಅಡ್ಡಿಯಿಲ್ಲ. -ಸಂಪಾದಕ]*ಚೆಂಡೆಮದ್ದಳೆಕಣ್ತುಂಬಿ ಬರುತ್ತದೆ….!ನಾವು ಕ್ರಮಿಸುವ ದಾರಿಯನ್ನು ಪ್ರತಿ ಪ್ರತಿ ಹಂತದಲ್ಲೂ ಪ್ರಶ್ನಿಸುತ್ತಲೇ ನಮ್ಮ ಖಚಿತತೆಯನ್ನು ಮತ್ತಷ್ಟು 34153http://kannada.oneindia.com/img/2009/01/19-raju-ananthaswamy2.jpg110501kaaduharateಮನೆಯಿಂದ ಮನೆಗೆ../column/shreenidhi/2008/0826-old-memories-from-one-home-to-another.htmlಊರಿಂದ ಊರಿಗೆ ಹೋಗುವುದು, ಮನೆಯಿಂದ ಮನೆ ಬದಲಾಯಿಸುವುದು ಬಾಡಿಗೆದಾರರಿಗೆ, ವರ್ಗಾವಣೆಯ ಸರ್ಕಾರಿ ಕೆಲಸ ಇರುವವರಿಗೆ ತಪ್ಪದ ಕರ್ಮ. ಆದರೆ ಅದರಲ್ಲೂ ಸ್ವಾರಸ್ಯವಿರುತ್ತದೆ. ಪ್ರತಿ ಬಾಡಿಗೆ ಮನೆಯೂ ನಮ್ಮ ಸ್ವಂತ ಮನೆಯೇ, ಅದನ್ನು ಬಿಡುವವರೆಗೆ. ಇಂಥ ಅನುಭವಗಳು ಪ್ರತಿಯೊಬ್ಬರದೂ ಆಗಿರುತ್ತವೆ. ಮನೆ ಬದಲಾಯಿಸುವುದು ಸಾಮಾನು ಸರಂಜಾಮುಗಳ ಮೆರವಣಿಗೆ ಮಾತ್ರವಲ್ಲ ನೆನಪುಗಳ ಮೆರವಣಿಗೆ. ಅಂಕಣಕಾರ : ಶ್ರೀನಿಧಿ ಡಿ.ಎಸ್. ವರುಷ 1145http://kannada.oneindia.com/img/2009/09/23-loaded-van1.jpg110501kaaduharateಬಂದಿದೆ ಹೊಸ ವರುಷ ತಂದಿದೆ ಬಲು ಹರುಷ/column/shreenidhi/2008/1230-cheers-lets-celebrate-the-new-year.htmlಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.* ಶ್ರೀನಿಧಿ ಡಿ.ಎಸ್.ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು 33789http://kannada.oneindia.com/img/2008/12/30-new-year1.gif110501kaaduharateನಮ್ಮೂರಿನ ಅಂದಿನ ಚೆಂದದ ಕೆರೆಗೆ ಇಂದೇನಾಗಿದೆ?/column/shreenidhi/2009/0106-sad-story-of-a-lake-in-karnataka.html* ಶ್ರೀನಿಧಿ ಡಿ.ಎಸ್.ಒಂದು ಉದ್ದನೆಯ ಏರಿ, ಏರಿಯ ಕೆಳಗೆ ದೊಡ್ಡ ಕೆರೆ. ನಿಂತು ನೋಡುತ್ತಿದ್ದರೆ, ಅದರ ತುದಿ ಕಾಣುವಷ್ಟರಲ್ಲಿ ಕಣ್ಣು ನೋಯಬೇಕು, ಅಷ್ಟು ದೊಡ್ಡದು. ಕೆರೆಯ ತುಂಬ ಗಾಳಿಗೆ ಅಲ್ಲಾಡುತ್ತ ನಿಂತ ತಾವರೆಯ ಹೂವುಗಳು. ಜೊತೆಗೆ ಹಸಿರು ಹುಲ್ಲ ಜೊಂಡು. ದಂಡೆಯ ಪಕ್ಕದಲ್ಲೇ ಸಾಲು ಮರಗಳು. ಕೆರೆಯ, ಅಕೋ ಆ ತುದಿಯಲ್ಲಿ ಒಂದು ಹಳೆಯ ಕಾಲದ ಶಿವನ 33924http://kannada.oneindia.com/img/2009/01/06-lake1.jpg110501kaaduharateಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg110501kaaduharateಈ ಮೇಲ್ ಭಯೋತ್ಪಾದನೆ!/column/shreenidhi/2009/0210-spam-junk-hoax-emails.htmlಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!* ಶ್ರೀನಿಧಿ ಡಿಎಸ್ಇತ್ತೀಚಿನ ದಿನಗಳಲ್ಲಿ ಕೆಲಬಾರಿ ದಿನವೂ 34579http://kannada.oneindia.com/img/2009/02/10-junk-emails1.gif38591terrorismಆರು ಹಿತವರು ನಿನಗೆ? ದೇವರೋ ದೇಶವೋ?/column/nataraj/2003/191103moore.htmlಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ 10940http://kannada.oneindia.com/img/2009/11/24-roy-moore.jpg38591terrorismಬಾರಿಸುವ ಗಂಟೆ ಸದಾ ಎಚ್ಚರಿಸುವ ಗಂಟೆ/festivals/general/2008/1224-for-whom-the-bell-tolls.htmlಕರ್ನಾಟಕದ ಚರ್ಚುಗಳಲ್ಲೆಲ್ಲ ಚರ್ಚ್ ಮೇಲಿನ ದಾಳಿ, ಭಯೋತ್ಪಾದನೆ ಬದಿಗಿಟ್ಟು ಕ್ರೈಸ್ತ ಪರಮಾತ್ಮನ ಆರಾಧಿಸುವ ಸಡಗರ. ನಳನಳಿಸುತ್ತಿರುವ ಎಕ್ಸ್ಮಸ್ ಗಿಡ, ತೂಗಾಡುವ ಬಣ್ಣದ ಬಲ್ಬುಗಳು, ಬಣ್ಣ ಸುಣ್ಣ, ಹೊಸ ಗಾಜು ಕಿಟಕಿಗಳಿಂದ ಅಲಂಕೃತ ದೇವಳಗಳು. ಹೊಸ ಬಟ್ಟೆ, ಘಮಘಮಿಸುವ ಬಗೆಬಗೆಯ ಕೇಕು, ಸಿಹಿಮುತ್ತುಗಳು, ಸ್ವಲ್ಪವೇ ವೈನ್... ಆಮೆನ್. ಇದೆಲ್ಲ ಚರ್ಚಿನ ಒಳಗಡೆ, ಹೊರಗಡೆ ಗೇಟಿನ ಬಳಿ ಪೊಲೀಸ್ ಬಿಗಿ 33694http://kannada.oneindia.com/img/2008/12/24-churchbell.jpg38591terrorismನೂತನ ವರ್ಷ ಆಚರಣೆ ಸರಳವಾಗಿರಲಿ/news/2008/12/31/celebrate-new-year-eve-safely.htmlಬೆಂಗಳೂರು, ಡಿ. 31 : ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಚಾಚಿಕೊಂಡಿದ್ದರೂ ಏನೋ ಒಂಥರ ದುಗುಡದ ವಾತಾವರಣ. ವರ್ಷಾಚರಣೆಯಲ್ಲಿ ಪಂಜರದಿಂದ ಬಿಟ್ಟ ಹಕ್ಕಿಯಂತೆ ಹಾರಾಡುತ್ತಿದ್ದ ಹುಡುಗಿಯರಿಗೆ ಈ ಬಾರಿ ಅಕ್ಷರಶಃ ಪಂಜರದಲ್ಲಿ ಬಂಧಿಯಾಗಿರುವ ಅನುಭವ. ಭಯೋತ್ಪಾದನೆಯ ಕರಿನೆರಳು, ಆರ್ಥಿಕ ಹೊಡೆತ ಈಸತಿ ವರ್ಷಾಚರಣೆಯ ಒಂದು ಭಾಗವನ್ನು ಕಸಿದುಕೊಂಡಿದೆ.ಝಗಮಗಿಸುವ ಮಿಣುಕು ದೀಪಗಳ ಅಡಿಯ ಕರಿನೆರಳಿನಲ್ಲಿ ಹೊಸವರ್ಷ ಆಚರಿಸಲು ಬೆಂಗಳೂರು 33809http://kannada.oneindia.com/img/2008/12/31-brigade-road1.jpg38591terrorismಬೆಂಗಳೂರಿಗೆ ಎನ್ಎಸ್ ಜಿ ಘಟಕ ಮಂಜೂರು?/news/2009/01/06/will-centre-set-up-nsg-unit-in-bengaluru.htmlನವದೆಹಲಿ, ಜ. 6 : ಸಾಫ್ಟವೇರ್ ತಂತ್ರಜ್ಞರ ತಾಣವಾಗಿರುವ ಬೆಂಗಳೂರಿಗೆ ರಾಷ್ಟ್ರೀಯ ತನಿಖಾ ಘಟಕ (ಎನ್ಎಸ್ ಜಿ) ಸ್ಥಾಪಿಸಬೇಕು ಎನ್ನುವುದು ಎಲ್ಲರ ಅನಿಸಿಕೆ ಹಾಗೂ ಒತ್ತಾಯವಾಗಿದೆ. ತಾಂತ್ರಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿದಿರುವ ಬೆಂಗಳೂರಿನ ರಕ್ಷಣೆಗೆ ಎನ್ಎಸ್ ಜಿ ಬೇಕೆಬೇಕು ಎಂದು ಕರ್ನಾಟಕ ಸರ್ಕಾರ ಹಾಗೂ ದೇಶದ ಪ್ರಮುಖ ಐಟಿ ಕಂಪನಿಗಳ ಮುಖ್ಯಸ್ಥರ ಒಕ್ಕೊರಲಿನ ಆಗ್ರಹವೂ ಕೇಂದ್ರ 33913http://kannada.oneindia.com/img/2009/01/06-cm-meets-pm1.jpg38591terrorismಈ ಮೇಲ್ ಭಯೋತ್ಪಾದನೆ!/column/shreenidhi/2009/0210-spam-junk-hoax-emails.htmlಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!* ಶ್ರೀನಿಧಿ ಡಿಎಸ್ಇತ್ತೀಚಿನ ದಿನಗಳಲ್ಲಿ ಕೆಲಬಾರಿ ದಿನವೂ 34579http://kannada.oneindia.com/img/2009/02/10-junk-emails1.gifnews"> ಈ ಮೇಲ್ ಭಯೋತ್ಪಾದನೆ! | E-mail spam | Hoax emails | Junk email - ಈ ಮೇಲ್ ಭಯೋತ್ಪಾದನೆ! - Kannada Oneindia

ಈ ಮೇಲ್ ಭಯೋತ್ಪಾದನೆ!

E-mail spam | Hoax emails | Junk email
ಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!

* ಶ್ರೀನಿಧಿ ಡಿಎಸ್

ಇತ್ತೀಚಿನ ದಿನಗಳಲ್ಲಿ ಕೆಲಬಾರಿ ದಿನವೂ ಈ ಮೇಲ್ ಚೆಕ್ ಮಾಡಲು ಆಗುತ್ತಿಲ್ಲ. ಎಲ್ಲಾದರೂ ಎರಡು ದಿನ ಬಿಟ್ಟು ಇನ್ಬಾಕ್ಸು ನೋಡಿದರೆ ಅದು ಪಕ್ಕಾ ನಮ್ಮ ಊರಿನ ಮಣ್ಣಿನ ರಸ್ತೆ ಮಳೆ ಬಂದು ಹಾಳಾಗಿ ಕೊಚ್ಚೆಗುಂಡಿ ಆಗಿರುತ್ತದಲ್ಲ - ಹಾಗಿರುತ್ತದೆ. ಯಾಕಾದರೂ ಇಷ್ಟೊಂದು ಸೋಶಿಯಲ್ ನೆಟ್ವರ್ಕು ತಾಣಗಳಿವೆಯೇನೋ ಏನೋ. ಒಬ್ಬರಲ್ಲ ಒಬ್ಬರು - ಯಾರೀ, ಲಿಂಕ್ಡಿನ್ನು, ಕೋಲ್ಡ್ರಿಂಕು, ಮತ್ತಿನ್ನೇನೋ ಸುಡುಗಾಡು ತಾಣಗಳಿಂದ ರಿಕ್ವೆಸ್ಟುಗಳನ್ನ ಕಳುಹಿಸುತ್ತಲೇ ಇರುತ್ತಾರೆ. ಅವುಗಳನೆಲ್ಲ ಡಿಲೀಟು ಮಾಡಿ ಇನ್ ಬಾಕ್ಸು ಕ್ಲೀನು ಮಾಡುವ ಹೊತ್ತಿಗೆ ಸರಿಯಾಗಿ ಮತ್ತೆರಡು ಹಾಗಿನದೇ ಮೇಲ್ ಗಳು ಬಂದು, ನೀನೇನು ಮಾಡಿದರೂ ಅಷ್ಟೇ, ನಾವು ಸತ್ತು ಹುಟ್ಟೋ ರಕ್ತಬೀಜಾಸುರರು ಅಂತ ಗಹಗಹಿಸಿ ನಗುತ್ತವೆ.

ಬರೀ ರಿಕ್ವೆಸ್ಟ್ ಮೇಲ್ ಗಳು ಮಾತ್ರವಲ್ಲ, ನೀವು ಮತ್ತೆ ಮತ್ತೆ ಆ ಮೇಲ್ ಗಳನ್ನು ಕಡೆಗಣಿಸುತ್ತಲೇ ಇದ್ದರೂ, ನೋಡಿ ಸ್ವಾಮಿ ಶ್ರೀಯುತರು ಕಳುಹಿಸಿದ ಪತ್ರಕ್ಕೆ ನಿಮ್ಮ ಉತ್ತರ ತಲುಪಿಲ್ಲ, ನೀವು ಉತ್ತರಿಸದಿದ್ದರೆ ಅವರಿಗೆ ಬೇಜಾರಾಗುತ್ತದೆ, ದಯವಿಟ್ಟು ಉತ್ತರಿಸಿ ಎಂಬ ನೆನಪು ಮಾಡಿಕೊಡೋ ಅಂಚೆಗಳು ಬೇರೆ.

ಇವತ್ತು ಸ್ನೇಹಕೊಂಡಿ ಬೆಸವ ನೂರಾರು ತಾಣಗಳು ಅಂತರ್ಜಾಲ ಪ್ರಪಂಚದಲ್ಲಿವೆ ಮತ್ತು ನನಗೆ ಬರುವ ಮೈಲ್ಗಳಲ್ಲಿ ಹೆಚ್ಚಿನವು ಕೇವಲ ಅದದೇ ವ್ಯಕ್ತಿಗಳಿಂದಲೇ ಮತ್ತೆ ಮತ್ತೆ ಬರುತ್ತದೆ. ಅಲ್ಲಾ, ಅಷ್ಟೊಂದು ವೆಬ್ಸೈಟುಗಳಿಗೆಲ್ಲ ಮೆಂಬರುಗಳಾಗಿ ಜನ ಅದೇನು ಮಾಡುತ್ತಾರೋ ಭಗವಂತನೇ ಬಲ್ಲ. ಅವರಾದರೆ ಆಗಿಕೊಳ್ಳಲಿ, ನಮಗೇಕೆ ತೊಂದರೆ ಕೊಡುತ್ತಾರೆ ಅನ್ನುವುದು ಮತ್ತೂ ಸೋಜಿಗವೇ.

ಮೊದಲೆಲ್ಲ, ಹೆಚ್ಚಿನವರು ಹೊಸದಾಗಿ ಇಂಟರ್ನೆಟ್ ಬಳಸುವಾಗ ಈ ತೆರನಾದ ವೆಬ್ ತಾಣಗಳಿಗೆ ದಾಳಿ ಇಡುತ್ತಿದ್ದರು. ಯಾವುದೋ ಚಂದದ ಹುಡುಗಿಯ ಫೋಟೋ, ಅವಳದೇ ಎಂದು ನಂಬಿಸಲಾದ ಮೇಲ್ ಐಡಿ, ಇತ್ಯಾದಿಗಳನ್ನು ಕಂಡು ಪುಳಕಿತರಾಗಿ ಅಂತಹ ತಾಣಗಳ ಮೆಂಬರುಗಳಾಗುತ್ತಿದ್ದರು. ಇವತ್ತೋ, ಹೆಚ್ಚಿನವರಿಗೆ ಅವುಗಳ ಸತ್ಯಾಸತ್ಯತೆಯ ಅರಿವಾಗಿದೆ, ಬುದ್ದಿ ಬಂದಿದೆ ಎಂದುಕೊಂಡಿದ್ದರೆ, ಊಹೂಂ, ಹುಚ್ಚು ಹೆಚ್ಚಾಗಿದೆ!

ಒಂದೊಂದು ತಾಣಕ್ಕೂ ಒಂದೊಂದು ವಿಶೇಷತೆ. ವ್ಯವಹಾರಕ್ಕೊಂದಾದರೆ, ಸ್ನೇಹಕ್ಕೊಂದು- ಆಟಕ್ಕೊಂದು- ಪಾಠಕ್ಕೊಂದು, ಬೇಟಕ್ಕೊಂದು. ಹೀಗಾಗಿ ಕಂಡಕಂಡ ಸೈಟುಗಳಿಗೆಲ್ಲ ಮೆಂಬರುಗಳಾಗಿ, ಚೈನ್ ಸ್ಕೀಮಿನ ಏಜೆಂಟರಂತೆ ನೀವೂ ಸದಸ್ಯರಾಗಿ ದಮ್ಮಯ್ಯ ಅಂತ ಗೋಳು ಹೊಯ್ಕೊಳುತ್ತಾರೆ ಬೇರೆ. ಇವರಿಗೆಲ್ಲ ಗೊತ್ತಿಲ್ಲದ ಅಥವ ಗೊತ್ತಿದ್ದರೂ ಗಮನಹರಿಸದ ವಿಷ್ಯ ಒಂದಿದೆ. ಈ ತಾಣಗಳಿಗೆ ಅಗತ್ಯವಿರುವ ಮಾಹಿತಿ ತುಂಬುವ ಪೇಜುಗಳಲ್ಲಿ ಒಂದೆಡೆ, ನಿಮ್ಮ ಸಂಬಂಧಪಟ್ಟ ಇನ್ಬಾಕ್ಸಿಗೆ ಆ ತಾಣ ಅಕ್ಸೆಸ್ ಕೇಳುತ್ತದೆ, ಅದನ್ನ ಸುಮ್ಮನೆ ಕ್ಲಿಕ್ ಮಾಡಿ ಓಕೆ ಅಂದುಬಿಟ್ಟರೆ ನಿಮ್ಮ ಬಳಿ ಇರುವ ಎಲ್ಲರಿಗೂ, ಆ ತಾಣದ ಜಾಹೀರಾತು ನಿಮ್ಮ ಮೇಲ್ ಐಡಿಯಿಂದಲೇ ಹೋಗಿರುತ್ತದೆ. ಮತ್ತು ಅಷ್ಟು ಸಾಲದೇ, ತನಗೆ ಬೇಕಾದಾಗೆಲ್ಲ ರಿಮೈಂಡರು ಮೇಲ್ಗಳನ್ನು ಕಳುಹಿಸುತ್ತಲೇ ಇರುತ್ತದೆ.

ಸಿಕ್ಕಸಿಕ್ಕ ತಾಣಗಳಿಗೆಲ್ಲ ಸದಸ್ಯರಾಗುವವರು ಒಂದು ವಿಷಯ ನೆನಪಲ್ಲಿಟ್ಟುಕೊಳ್ಳಬೇಕು. ನಿಮ್ಮ ಮೇಲ್ ಐಡಿಗೆ ನುಗ್ಗಲು ಕೇಳುವ ಅನುಮತಿ ನಿರಾಕರಿಸಿ ಬಿಟ್ಟರೆ, ಅದೆಷ್ಟೋ ಜನಕ್ಕೆ ಆಗುವ ತೊಂದರೆ ತಪ್ಪುತ್ತದೆ. ಪದೇ ಪದೇ ನಿಮ್ಮನ್ನು ಬೈದುಕೊಳ್ಳುವುದು ಕೂಡ.

ಇನ್ನು ಮೇಲ್ಬಾಕ್ಸು ತುಂಬಿಕೊಳ್ಳುವ ಸ್ಪಾಮು, ಫೇಕ್ ಮೇಲುಗಳ ಬಗ್ಗೆ ಹೇಳಿ ಪ್ರಯೋಜ್ನವೇ ಇಲ್ಲದ ಹಾಗಾಗಿದೆ. ಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!

ಹೆಣ್ಣಿನಾಕಾರದ ಕಾಯಿ ಬಿಡುವ ಸುಡುಗಾಡು ಮರ! ಮನುಷ್ಯನ ದೇಹ- ಮೀನಿನ ತಲೆ, 18 ಆಡಿಯ ರಾಕ್ಷಸಾಕಾರದ ದೇಹ ಅಲ್ಲೆಲ್ಲೋ ಸಿಕ್ಕಿದೆ, ಇವುಗಳನೆಲ್ಲ ಯಾವುದೇ ಮುಲಾಜೂ ಇಲ್ಲದೆ ಕಳುಹಿಸುತ್ತಲೇ ಇರುತ್ತಾರೆ. ಇವುಗಳೆಲ್ಲ ಸತ್ಯವೇ, ಅಲ್ಲವೇ ಎಂಬ ಕಿಂಚಿತ್ ಯೋಚನೇ ಮಾಡೋ ಕ್ರಮವೂ ಇಲ್ಲ. ಬೇಕಾದರೆ ನೋಡುವವರು ತಲೆ ಕೆಡಿಸಿಕೊಳ್ಳಲಿ ಅನ್ನುವುದು ಇವರ ಅಂದಾಜಿರಬೇಕು. 1098 ನಂಬರಿಗೆ ಕಾಲ್ ಮಾಡಿದರೆ ಬಂದು ನಿಮ್ಮನೇಲಿ ಉಳಿದ ಆಹಾರ ತಗಂಡು ಹೋಗ್ತಾರೆ ಅನ್ನೋ ಮೇಲ್ ಕಾಲದಲ್ಲಿ ಪಾಪ, ಚೈಲ್ಡ್ ಲೈನ್ ಸಂಸ್ಥೆಯ ಪರಿಸ್ಥಿತಿ ಬ್ಯಾಡ. ಸಿಕ್ಕಸಿಕ್ಕವರೆಲ್ಲ ಫೋನಾಯಿಸಿ, ನಮ್ಮನೇಲಿ ಅನ್ನ ಇದೆ, ಇಡ್ಲಿ ಇದೆ ಅನ್ನುವವರೇ. ಅದೊಂದು ಮಕ್ಕಳ ರಕ್ಷಣೆಗಿರುವ ಸಂಸ್ಥೆ. ಬೇಕಷ್ಟು ಸಹಾಯಧನ ದೇಶವಿದೇಶಗಳಿಂದ ಬರುತ್ತದೆ ಅವರಿಗೆ!

ನಿಮಗೆ ಬಂದಿರುವ ಅದ್ಭುತ ಎನ್ನಿಸಿಕೊಳ್ಳುವ ಈ ಮೇಲ್, ಸತ್ಯವೇ ಅಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಬೇಕಾದಷ್ಟು ತಾಣಗಳಿವೆ. ಫಾರ್ವರ್ಡು ಮಾಡುವ ಮುನ್ನ ಒಮ್ಮೆ, www.hoax-slayer.com, www.snopes.comಗಳಂತಹ ಅದೆಷ್ಟೋ ವೆಬ್ ಸೈಟುಗಳಲ್ಲಿ ಅವುಗಳ ಸತ್ಯಾಸತ್ಯತೆ ಪರೀಕ್ಷಿಸಿಕೊಳ್ಳಿ. ನೀವೂ ಸತ್ಯ ತಿಳಿದುಕೊಂಡಂತಾಗುತ್ತದೆ, ಮತ್ತು ಇತರರಿಗೂ ಕಿರಿಕಿಕಿ ತಪ್ಪಿಸಿದಂತಾಗುತ್ತದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+