ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂಪಾಗೆ ಅಭಿನಂದನೆ, ನಿಂದಕರಿಗೆ ಚಂಪಾಕಲಿ!

ಅಂಕ ಗಣಿತದಲ್ಲಿ 4+4=8.

ಆದ್ರೆ ಫೇಸ್ ಬುಕ್ ಲೆಕ್ಕದಲ್ಲಿ ಅದು ಎಷ್ಟು ಬೇಕಾದರೂ ಆಗಬಹುದು, ನೂರಾಯೆಂಟೂ ಆಗಬಹುದು. ನಿನ್ನೆ ಮೊನ್ನೆ ಹುಟ್ಟಿದ ಫೇಸ್ ಬುಕ್ ವಿಚಾರವಾದಿಗಳ ಲೆಕ್ಕದಲ್ಲಿ ಅದು ಇನ್ನೂ ಏನು ಬೇಕಾದರೂ ಆಗಬಹುದು. ಯಾಕಂದರೆ ಹೊಸ ತಳಿಯ ಫೇಸ್ ಬುಕ್ ಕನ್ನಡ ವಿದ್ವಾಂಸರಿಗೆ ಹಿಂದಿನ ಲೆಕ್ಕ ಬುಕ್ಕು ಗೊತ್ತಿರುವುದಿಲ್ಲ. ಅದು ಅವರ ತಪ್ಪಲ್ಲ. ಮುಂದೆ ಹೇಗೋ ಏನೋ, ದೇವರೇ ಬಲ್ಲ.

ಕನ್ನಡ ಸಾಹಿತ್ಯವೂ ಗೊತ್ತು, ಸಾಹಿತಿಗಳೂ ಗೊತ್ತು, ಪ್ರಚಲಿತ ವಿದ್ಯಮಾನಗಳೂ ಗೊತ್ತು. ಜಗಳ ಕಾಯುವುದೂ ಗೊತ್ತು. ಸಾಕಷ್ಟು ಗೊತ್ತು. ಮಾತಿನ ಮೊನಚು, ಸದಭಿರುಚಿಯ ಕೀಟಲೆ, ವಂಗ್ಯ, ಚಾಟೂಕ್ತಿಗಳ ಜತೆಗೆ ಆಗಾಗ ಚಾಟಿ ಬೀಸುವ ಚಂಪಾ ವ್ಯಕ್ತಿಯಲ್ಲ, ಸಂಸ್ಥೆ,. ಇಂತಿಪ್ಪ 78 ವರ್ಷಗಳ ಹಿರಿಯ ಚೇತನ ಚಂಪಾ (ಹುಟ್ಟಿದ್ದು 1939) ಅವರ ದೈತ್ಯ ಪ್ರತಿಭೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಮತ್ತು ಬೀದಿಜಗಳದ ಧೂಳಿನಲ್ಲಿ ಮಸುಕಾಗುವುದಿಲ್ಲ. ಪ್ರೊ. ಚಂದ್ರಶೇಖರ ಪಾಟೀಲರ ಮೇಲೆ ಮತ್ಸರದ ಕಲ್ಲು ತೂರುವ ಅವಿವೇಕಿಗಳಿಗೆ ಇಲ್ಲಿ ಬರವಿಲ್ಲ.

Welcome Chandrasekhar Patil chosen Kannada Mysuru sahithya summit president

ಅವರಿವರಿಗೆ ಡೊಗ್ಗು ಸಲಾಮು ಹೊಡೆಯದೆ, ಸಾಹಿತ್ಯ ಮತ್ತು ಅದರ ಚರ್ಚೆಗೆ ಮೀಸಲಾದ "ಸಂಕ್ರಮಣ" ಎಂಬ ಪತ್ರಿಕೆಯನ್ನು ಸತತ 53 ವರ್ಷದಿಂದ ಹೊರತರುತ್ತಿರುವ, ಏಕಲವ್ಯ ಚಂಪಾ, ಯಾವ ಗುಂಪುಗಾರಿಕೆಯ ಖಾಯಂ ಸದಸ್ಯರಾಗಿಲ್ಲ.

ನಿಷ್ಠುರ, ನಿರ್ಭೀತಿಯ ಪತ್ರಕರ್ತ ಮತ್ತು ಇಂಗ್ಲಿಷ್ ಮೇಷ್ಟ್ರು ಚಂಪಾ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಅಗಿದ್ದಾರೆ. ಅವರಿಗೆ ಅಭಿನಂದನೆ. ನಿಂದಕರಿಗೆ ಒಂದು ಚಂಪಾಕಲಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+