ಒನ್ಇಂಡಿಯಾ ವಾಟ್ಸಾಪ್ ಕುಟುಂಬ ಸೇರಿರಿ, ನೀವೂ ನಮ್ಮವರಾಗಿರಿ
ಬೆಳಿಗ್ಗೆ ಎದ್ದು ಅಂಗೈ ತಿಕ್ಕಿ, ಕರಾಗ್ರೇ ವಸತೆ ಲಕ್ಷ್ಮೀ ಹೇಳುತ್ತೀರೋ ಇಲ್ಲವೋ, ಸ್ಮಾರ್ಟ್ ಆಗಿರುವ ನೀವು ಸ್ಮಾರ್ಟ್ ಫೋನ್ ತೆರೆದು, ವಾಟ್ಸಾಪ್ ನಲ್ಲಿ ಯಾವ್ಯಾವ ಗುಂಪಲ್ಲಿ ಏನೇನು ಚರ್ಚೆಗಳು ನಡೆದಿವೆ, ಏನೇನು ಫೋಟೋಗಳು ಬಂದಿವೆ ಎಂಬುದನ್ನು ನೋಡುತ್ತೀರಿ. ಹೌದಾ, ನಿಜ ತಾನೆ?
ನೀವು ವಾಟ್ಸಾಪ್‌ಗೆ ಅಡಿಕ್ಟ್ ಆಗಿದ್ದೀರೋ ಇಲ್ಲವೊ, ಇಂದಿನ ಯುವ ಪೀಳಿಗೆ ಮಾತ್ರ WhatsAppಗೆ ಶರಣು ಶರಣೋ ಎಂದಿದೆ. ಕಿಂಡರ್ ಗಾರ್ಟನ್ ಮಕ್ಕಳಿಗೆ ಕೂಡ ವಾಟ್ಸಾಪ್ ಬಳಸುವುದು ಹೇಗೆ ಎಂಬುದು ತಿಳಿದಿರತ್ತೆ. ಬೆಳಿಗ್ಗೆ ಹಲೋ ಹಾಯ್, ಗುಡ್ ಮಾರ್ನಿಂಗ್ ನಿಂದ ಹಿಡಿದುಕೊಂಡು ಗುಡ್ ನೈಟ್ ವರೆಗೆ ವಾಟ್ಸಾಪ್ ಸದಸ್ಯರ ನಡುವೆ ಓಡಾಡುವ ಸುದ್ದಿಗಳು, ಗಾಳಿಮಾತುಗಳು ಎಷ್ಟೋ?
ಬೀಸೋ ಗಾಳಿಗೆ ಎಲ್ಲೋ ಮರಬಿದ್ದರೆ, ಕೂಡಲೆ ವಾಟ್ಸಾಪಲ್ಲಿ ಚಿತ್ರ/ವಿಡಿಯೋ ಸಮೇತ ಬಂದಿರುತ್ತದೆ. ವೀಕೆಂಡಲ್ಲಿ ಹೋಗುವುದೆಲ್ಲಿಗೆ, ಯಾರ್ಯಾರು ಬರುತ್ತಾರೆ, ಏನೇನು ತರತ್ತಾರೆ... ಎಲ್ಲ ವಿಷಯಗಳು ವಾಟ್ಸಾಪಲ್ಲೇ ಚರ್ಚೆಯಾಗುತ್ತವೆ. ಇನ್ನು ಇಲ್ಲಿ ಜಗಳಗಳಿಗೆ, ಕೂಡಿಕೆಗಳಿಗೆ, ಸಂಭ್ರಮಗಳಿಗೆ ಲೆಕ್ಕವೇ ಇಲ್ಲ. [ಒನ್ಇಂಡಿಯಾದ ಇತರ ಸೇವೆಗಳು]

ಇನ್ನು ನಮ್ಮ ಒನ್ಇಂಡಿಯಾ ಮತ್ತು ಫಿಲ್ಮಿಬೀಟ್ ಓದುಗರಿಗೆ ವಾಟ್ಸಾಪ್ ಮೂಲಕ ಕನ್ನಡ, ಕರ್ನಾಟಕದ ತರಹೇವಾರಿ ಸುದ್ದಿಗಳು, ಸಿನೆಮಾರಂಗದ ಬಿಸಿಬಿಸಿ ಸಮಾಚಾರಗಳನ್ನು ತಿಳಿಸದಿದ್ದರೆ ಹೇಗೆ? ಓದುಗರಿಗೆ ಓದಿನ ರುಚಿ ಹತ್ತಿಸುವಲ್ಲಿ, ಹೊಸದನ್ನು ನೀಡುವಲ್ಲಿ ಒನ್ಇಂಡಿಯಾ ಯಾವತ್ತೂ ಒಂದು ಹೆಜ್ಜೆ ಮುಂದಿರುತ್ತದೆ.
ಬನ್ನಿ ಒನ್ಇಂಡಿಯಾ, ಫಿಲ್ಮಿಬೀಟಿನ ವಾಟ್ಸಾಪ್ ಕುಟುಂಬವನ್ನು ಸೇರಿಕೊಳ್ಳಿ. ಬನ್ನಿ, ಸುದ್ದಿ ಸಮಾಚಾರಗಳನ್ನು ಮಾತ್ರವಲ್ಲ ಸುಖದುಃಖಗಳನ್ನೂ ಹಂಚಿಕೊಳ್ಳೋಣ.
ಬಳಕೆದಾರರು ಮಾಡಬೇಕಾಗಿರುವುದು ಇಷ್ಟೆ
7259011110 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿರಿ. ಒನ್ಇಂಡಿಯಾ ತಾಜಾ ಸುದ್ದಿಗಳಾಗಲಿ, ಫಿಲ್ಮಿಬೀಟ್ ರಂಜನೀಯ ಸಮಾಚಾರ ಬೇಕಿದ್ದರೆ, ಅದನ್ನು ನಮೂದಿಸಿ 'Send Alerts' ಸಂದೇಶವನ್ನು ವಾಟ್ಸಾಪ್ ಮುಖಾಂತರವೇ ಕಳಿಸಿ. ಅಲರ್ಟ್ ಗಳು ಬೇಡವೆನಿಸಿದಾಗ 'Stop Alerts' ಎಂದು ಸಂದೇಶ ಕಳಿಸಿ.
ಹಾರ್ಡ್ ನ್ಯೂಸ್ ಮಾತ್ರವಲ್ಲ, ಲೈಫ್ ಸ್ಟೈಲ್, ಪ್ರವಾಸ, ಮೊಬೈಲ್ ಲೋಕದ ಸುದ್ದಿ ಸಮಾಚಾರಗಳು ಕೂಡ ನಿಮಗೆ ಬಂದು ತಲುಪಲಿವೆ.












Click it and Unblock the Notifications