ನಿಮ್ಮನೆ ಹುಡುಗಿಯ ಹ್ಯಾಪಿ ನ್ಯೂ ಇಯರ್, ಚೀರ್ಸ್!

Posted By:
Subscribe to Oneindia Kannada

ಒಂದಿಷ್ಟು ಜನ ಬ್ಯಾಚುಲರ್ ಕನ್ನಡ ಹುಡುಗ್ರು ಮತ್ತು ಹುಡಿಗೀರು ಸೇರಿಕೊಂಡು 2016ರ ಹೊಸ ವರ್ಷದ ಪಾರ್ಟಿ ಮಾಡಕ್ಕೆ ಊರಾಚೆ ಹೋಗಿದ್ರು. ಹೊಸ ವರ್ಷದ ಪಾರ್ಟಿ ಮುಗಿದು ಇವತ್ತಿಗೆ ಏಳು ದಿನ ಆಗೋಯ್ತು. ಪಾರ್ಟಿ ಹ್ಯಾಂಗೋವರ್ನಿಂದ ನಿಧಾನವಾಗಿ ಆಚೆಬಂದ ಕನ್ನಡತಿಯೊಬ್ಬರು ಬರೆದುಕೊಂಡ ಸ್ವಗತಗಳು, ನಿಮ್ಮ ಮುಂದೆ.. ಸಂಪಾದಕ.

ನಮ್ಮ ಹೆಣ್ಮುಕ್ಲು ಎಷ್ಟೇ ಮಾಡ್ರನ್ ಆದ್ರೂ ಸೀರೆ ತೊಟ್ಟು ಬೀಗೋದು ಅಂದ್ರೆ ಅವ್ರಿಗೆ ಅದೇನೋ ಸಂತಸ.. ಹಾಗೆಯೇ ಈ ಹೊಸ ವರ್ಷದ ಪಾರ್ಟಿ ಬಗ್ಗೆಯೂ ಒಂದು ವ್ಯಾಮೋಹವಿದೆ. ಕುತೂಹಲವಿದೆ ಅವ್ರಿಗೆ.. ಡೌಟ್ ಇದ್ರೆ, ಕೇಳಿ ನೋಡಿ. ತಿಳಿದೋ ತಿಳಿಯದೆಯೋ ಎಲ್ಲ ಹುಡುಗಿಯರಿಗೊಂದು ಆಸೆ ಇರುತ್ತೆ. ನಾವು ಒಮ್ಮೆ ಹುಡುಗರಂತೆ ಪಾರ್ಟಿ ಮಾಡ್ಬೇಕು ಎಣ್ಣೆ ಹಾಕ್ದೇ ಇದ್ರೂ ಪರವಾಗಿಲ್ಲ. ಸಿನಿಮಾಗಳಲ್ಲಿ ತೋರಿಸುವಂತೆ ಮಸ್ತ್ ಮ್ಯೂಸಿಕ್‌ಗೆ ಸೂಪರ್ಬ್ ಅನಿಸುವಂತೆ ಡ್ಯಾನ್ಸ್ ಮಾಡ್ಬೇಕು, ಲಾಂಗ್ ಡ್ರೈವ್ ಹೋಗ್ಬೇಕು, ಮಧ್ಯರಾತ್ರಿಯಲ್ಲಿ ಸ್ನೇಹಿತರೊಂದಿಗೆ ಹೈವೆಯಲ್ಲಿ ನಿಂತು ಕೇಕ್ ಕಟ್ ಮಾಡಿ ಕೇಕೆ ಹಾಕಿ ನಕ್ಕು ನಲಿಬೇಕು ಅಂತ ಅನ್ಸುತ್ತೆ. ಆದ್ರೆ, ಈ ಆಸೆ ಈಡೇರಲು ಪಾರ್ಟಿಗೆ ಬರೋಕೆ ನಂಬಿಕೆ ಇರೋ ಫ್ರೆಂಡ್ಸ್ ಬೇಕು. ಆ ಫ್ರೆಂಡ್ಸ್ ಬಾಯ್ ಆಗಿರ‍್ಬಹುದು ಅಥ್ವಾ ಗರ್ಲ್ ಆಗಿರ‍್ಬಹುದು ಅಲ್ಲಿ ನಂಬಿಕೆ ಇರಬೇಕು.. [ಚಿತ್ರಗಳು: ಹೊಸವರ್ಷದ ಸಂಭ್ರಮದಲ್ಲಿ ಮಿಂದೆದ್ದ ಜನತೆ]

Confessions of a woman want to become party animal

ಆ ರೀತಿ ನಂಬಿಕೆ ಇಟ್ಟು ಹೊಸ ವರ್ಷದ ಪಾರ್ಟಿಗೆ ನಾವು ಹೊರಟಿದ್ವಿ. ಬೆಂಗಳೂರಿನಿಂದ ಬಿಡದಿ ಕಡೆಗೆ. ಅನು, ಸ್ಪೂರ್ತಿ, ಪ್ರಕೃತಿ, ನಾನು, ರಜಿನಿ.. ಚೇತನ್, ಅಮರ್, ಉದಯ್, ಹರೀಶ್, ಶ್ರೀಮಂತ್, ನವೀನ್ ಹೀಗೆ ಎಲ್ಲ ಸೇರಿ ಮೂರು ಕಾರ್‌ನಲ್ಲಿ 14 ಮಂದಿ. ಸಂಜೆ 7 ಗಂಟೆಗೆ ಬಿಡದಿ ಕಡೆ ಪಯಣ ಬೆಳಸಿದ್ವೀ.. ಎಲ್ರೂ ಬ್ಯಾಚುಲರ್ಸ್. ಮುಂದಿನ ವರುಷ ಮದುವೆಯಾಗೋರು ತುಂಬಾ ಜನ ಇದ್ದಿದ್ದರಿಂದ ಈ ವರ್ಷದ ನ್ಯೂ ಇಯರ್ ಪಾರ್ಟಿಲಿ ನಮ್ಮಿಷ್ಟದ ಲೋಕವನ್ನೇ ಸೃಷ್ಟಿಸೋ ಆತುರ.. ಆಕಾಶದ ಚಂದ್ರ ನಮ್ಮತ್ತ ನೋಡೋ ರೀತಿ ಕೂಗೋ ಕಾತರ.. ಮೂತಿ ಸೊಟ್ಟಗೆ ಮಾಡಿ.. ನಾಲಿಗೆ ಆಚೆ ಹಾಕಿ.. ಒಬ್ಬರಿಗಿಂತ ಒಬ್ಬರು ಹುಬ್ಬು ಮೇಲಕ್ಕೆತ್ತಿ ಸೆಲ್ಫಿಗಳನ್ನ ಕ್ಲಿಕ್ಕಿಸಿದ್ವಿ..

ಮೊದಲೇ ಪ್ಲಾನ್ ಮಾಡಿದಂತೆ ಮೊದಲೇ ಬುಕ್ ಮಾಡಿದ ಪಾಸ್ ಹಿಡಿದು ಈಗಲ್ ಟನ್ ರೆಸಾರ್ಟ್‌ಗೆ ನಮ್ಮ ಟೀಮ್ ಲಗ್ಗೆ ಇಟ್ಟಿತು. ಒಳಗೆ ಎಂಟ್ರಿಯಾಗಿದ್ದೇ ನಮ್ಮ ಹುಡುಗಿಯರೆಲ್ಲ ವ್ಹಾವ್... ಅಂತಾ ಸುತ್ತ ಕಣ್ಣರಳಿಸಿದ್ರು.. ಭೂಮಿಯಲ್ಲಿರೋ ನಾವೆಂದು ನೋಡಿರದ ಮತ್ತೊಂದು ಲೋಕ ಅದಾಗಿತ್ತು. ಇಡೀ ಗ್ರೌಂಡ್ ಬಣ್ಣ ಬಣ್ಣದ ಲೈಟ್‌ಗಳಿಂದ ತುಂಬಿಹೋಗಿತ್ತು.. ಲೈಟಿಂಗ್ಸ್‌ನಲ್ಲಿ ಮೂಡಿದ ಚಿತ್ತಾರವು ಮಧುವಿಲ್ಲದೆಯೇ ಮತ್ತೇರಿಸಿತ್ತು.. ಸ್ವಿಮ್ಮಿಂಗ್ ಪೂಲ್ ಸುತ್ತ ಅರೆಂಜ್ ಆಗಿದ್ದ ಪಾರ್ಟಿಲಿ ತಣ್ಣನೇ ಗಾಳಿಯಲ್ಲಿ ಚಂದ್ರ ಸಹ ನಮ್ಮ ಸಂಭ್ರಮ ನೋಡಿ ಆನಂದಿಸುತ್ತಿದ್ದ. [ಹೊಸವರ್ಷಕ್ಕೆ ಒಂದಷ್ಟು ತಮಾಷೆಯ ಸಂಕಲ್ಪಗಳು!]

ಜೊತೆಗಿದ್ದ ಹುಡುಗರ ಮೇಲೆ ನಂಬಿಕೆ ಇತ್ತು.. ಮನಸ್ಸಲ್ಲಿ ಕುಡಿದು, ಕುಣಿದು ನಲಿಯೋ ಆಸೆಯಿತ್ತು. ಸುತ್ತಮುತ್ತ ಹಲವಾರು ಫ್ಯಾಮಿಲಿ ಸಣ್ಣಗೆ ಕಾಲು ಕುಣಿಸುತ್ತ, ಚಪ್ಪಾಳೆ ಹಾಕಿ ಹಾಡಿಗೆ ತಾಳ ತಟ್ಟುತ್ತಿದ್ರು. ನಮ್ಮ ಟೀಮ್ ಮಾತ್ರ ಇವತ್ತೆ ನಮ್ಮ ಬ್ಯಾಚುಲರ್ ಲೈಫ್ ಕೊನೆ ಅನ್ನುವಂತೆ, ವೇದಿಕೆ ಹತ್ರ ಹೆಜ್ಜೆ ಹಾಕಿದ್ವು. ಮಬ್ಬು ಬೆಳಕಲ್ಲಿ ಸಖತ್ ಹಾಡಿಗೆ ಈ ಮೊದಲೇ ಕೋರ‍್ಯಾಗ್ರಾಫಿ ಮಾಡಿದವರಂತೆ ಎಲ್ರೂ ಒಂದೆ ರೀತಿ ಸ್ಟೆಪ್ಸ್ ಹಾಕತೊಡಗಿದ್ವಿ. ನಮ್ಮಂತೆ ಮಸ್ತ್ ಮಸ್ತ್ ಆಗಿ ನ್ಯೂ ಇಯರ್ ವೆಲ್‌ಕಂ ಮಾಡೋಕ್ಕೆ ಬಂದಿದ್ದವರೊಂದಿಗೆ ಬೆರೆತು ಡ್ಯಾನ್ಸ್ ಮಾಡಿದ್ವು..

ಯಾವತ್ತು ಡ್ಯಾನ್ಸೇ ಮಾಡದ ಪ್ರಕೃತಿ, ನವೀನ್, ಉದಯ್ ಸಹ ಸಖತ್ ಟಂಪಾಗುಚ್ಚಿ ಹಾಕಿ ಎಂಜಾಯ್ ಮಾಡಿದ್ರು. ಮೈ ಕೈ ನೋವಾಗೋವರೆಗೂ, ಸುಸ್ತಾಗಿ ಕಾಲು ಸೋಲೊವರೆಗೂ ನಮ್ಮ ಲೋಕದಲ್ಲೇ ಹೊಸ ವರುಷಕ್ಕೆ ಹೊಸ ರೀತಿಯಲ್ಲಿ ಕಾದಿದ್ವು.. 2015ರ ಸಣ್ಣ ರಿವ್ಯೂಗಳು ಸಹ ಆ ಸಡಗರದಲ್ಲು ಕಾಡದೆ ಬಿಡ್ಲಿಲ್ಲ... ನಮ್ಮಂತೆ ಅಲ್ಲಿ ಹಲವಾರು ಫ್ಯಾಮಿಲಿಗಳಿದ್ವು, ಅಪ್ಪ ಅಮ್ಮ ಅಣ್ಣ ತಮ್ಮ, ಚಿಕ್ಕಪ್ಪ, ಚಿಕ್ಕಮ್ಮ ಎಲ್ರೂ ಕೂಡಿಯೇ ಬಂದಿದ್ರು. ನಿಧಾನವಾಗಿ ಎಲ್ಲರಲ್ಲಿದ್ದ ಅಂಜಿಕೆ ದೂರಾಗಿ ಎಲ್ರೂ ಹೆಜ್ಜೆ ಹಾಕಿದ್ರು. ಹೊಸ ವರುಷ ಬಂದೇ ಬಿಡ್ತು.. ಎಲ್ರೂ ವಿಶ್ ಮಾಡ್ಕೊಂಡ್ವೀ..

12 ಗಂಟೆ 5 ನಿಮಿಷಕ್ಕೆ ಅಲ್ಲೊಬ್ಬ ನಮ್ಮ ಹುಡುಗಿ ಸೊಂಟಕ್ಕೆ ಕೈ ಹಾಕಿದ್ದ, ಅವಳೋ ಮೊದಲೇ ಚಂಡಿ, ಸೊಂಟದ ಮೇಲಿನ ಕೈ ಸಮೇತ ಸಿಕ್ಕಿಕೊಂಡ ಅವನಿಗೆ ಚಂಡಿ ಬಿಡಿಸಿದ್ಲು. ನಮ್ ಹುಡುಗರೆಲ್ಲ ಸೇರಿ ಸಖತಾಗೆ ಗೂಸ ಕೊಟ್ರು.

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಹಾಡಿಗೆ ಕದ್ದು ಮುಚ್ಚಿ ಕುಣಿದ ನೆನಪಿತ್ತು. ಹುಡುಗರಿಗೆ ಮಾತ್ರ ಅನ್ನೋವಂತೆ ಆ ಹಾಡಿಗೆ ಹಿಂದೆ ಸರಿಯುತ್ತಿದ್ದ ನಾವೆಲ್ಲ ಪಕ್ಕ ಲೋಕಲ್ ಸ್ಟೆಪ್‌ನಲ್ಲಿ ಅಣ್ಣಾವ್ರು ಮೈ ಮೇಲೆ ಬಂದ ರೀತಿ ಮನಸೋ ಇಚ್ಛೆ ಕುಣಿದು ಕುಪ್ಪಳಿಸಿದ್ವಿ. ಊಟ ಮಾಡಿ ಮತ್ತೆ ಬೆಂಗಳೂರಿನತ್ತ ಪಯಣ ಬೆಳೆಸಿದ್ವಿ. ರಾತ್ರಿ ಎರಡಾದ್ರೂ ಪೊಲೀಸ್ರ ಕೆಲಸ ಮಾತ್ರ ಚಾಲ್ತಿಯಲ್ಲಿತ್ತು. ರಿಂಗ್ ರೋಡ್‌ನಿಂದ ಹಿಡಿದು ರಸ್ತೆ ರಸ್ತೆಗಳಲ್ಲು ಪೊಲೀಸ್ರು ನಿಂತಿದ್ರು.. ರಿಂಗ್ ರೋಡ್ ಕ್ಲೋಸ್ ಮಾಡಿ ಸರ್ವಿಸ್ ರೋಡಿನಲ್ಲಿ ಪಯಣಕ್ಕೆ ಅನುವು ಮಾಡಿ ಕೊಟ್ಟಿದ್ರು..

ನಮ್ಮ ಹುಡುಗಿಯರೆಲ್ಲ ಫುಲ್ ಖುಷ್. ಹೊಸ ಅನುಭವಕ್ಕೆ ಥ್ಯಾಂಕ್ಸ್ ಹೇಳಿದ್ವಿ. ಮದ್ಯದ ಅಮಲಿನಲ್ಲಿ ಜಗತ್ತು ಹೇಗಿರುತ್ತೆ. ಪ್ರತಿದಿನ ಪಬ್ಬು ಬಾರು ಅಂತಾ ಸುತ್ತೋ ಜನರ ಲೈಫ್ ಹೇಗಿರುತ್ತೆ.. ಹೊಸ ವರುಷದಂದು ಪೊಲೀಸ್ರು ಕೆಲಸ ನಿರ್ವಾಹಿಸೋ ರೀತಿ.. ಮತ್ತಿನಲ್ಲಿ ಮದವೇರಿಸಿಕೊಂಡು ಆಯ ತಪ್ಪೋರು, ಹುಡುಗಿಯರ ಸೊಂಟ ಗಿಲ್ಲಿ ಒದೆ ತಿಂದೋರು, ಹೀಗೆ ಹೊಸ ಅನುಭವದೊಂದಿಗೆ ಹೊಸ ವರುಷ ಶುರುವಾಯ್ತು. ನಮ್ಮ ಟೀಮ್ ಹುಡುಗಿಯರಂತು ಅವ್ರ ಬಹು ದಿನದ ಆಸೆ ಈಡೇರಿಸಿಕೊಂಡ್ರು.

ಎಸ್, ಎಲ್ಲ ಅನುಭವಗಳು ಹೊಸತಾಗಿಯೇ ಇರುತ್ತೆ. ಆದ್ರೆ, ಅದರಲ್ಲಿರೋ ಒಳಿತನ್ನು ಮಾತ್ರ ಆಯ್ಕೆ ಮಾಡ್ಕೊಬೇಕು. ಬಟ್ ಎಲ್ಲ ಹುಡುಗಿಯರು ಮಾತಿನಲ್ಲಿ ಸಂಸ್ಕೃತಿಯ ಮಡಿ ತೊರಿಸ್ತಾ, ಆ ಕ್ಷಣಕ್ಕಾಗಿ ಮನಸಿನಲ್ಲಿ ಕಾತರ ತೋರಿಸೋ ಪಾರ್ಟಿ ಕಥೆ ಇದು.. ಮತ್ತೊಂದು ವಿಷ್ಯ, ಬೆಳಗ್ಗೆ ನಮ್ಮನ್ನ ಏನಮ್ಮ ಹೊಸ ವರ್ಷದ ಸ್ಪೆಷಲ್ ಅಂತ ಕೇಳಿದವರಿಗೆ ನಾವ್ ಕೊಟ್ಟ ಉತ್ತರ ಏನು ಗೊತ್ತೋ..? ಈ ಪಾರ್ಟಿ ಗೀರ್ಟಿಯಲ್ಲ ನಮ್ಗೆ ಆಗಿ ಬರಲ್ಲ. "ನಮ್ಮದೇನಿದ್ರು ಯುಗಾದಿಗೆ ಹೊಸ ವರುಷ" ಅನ್ನೋದಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dear Past, thanks for all the lessons. Dear future, I`am ready! Yes, for the Kannada Happy New Year party, Ugadi 2016 - Confessions of a Kannada women who want to become a party animal.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ