ಬೆಂಗ್ಳೂರು ಒಂಥರಾ ಫ್ರೂಟ್ ಸಲಾಡ್ ಇದ್ದ ಹಾಗೆ
ನೂರಾರು ಗ್ರಾಮಗಳನ್ನು ನುಂಗಿ, ಅಕ್ಷರಶಃ ಬೋರ್ ವೆಲ್ ನೀರು ಕುಡಿಯುತ್ತ ಬೆಳೆಯುತ್ತಿರುವ ಮಹಾನಗರ ಬೆಂಗಳೂರು. ಮಹಾನಗರಗಳು ಬೆಳೆಯುವ ಪರಿಯೇ ಹೀಗೆ. ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ, ಉದ್ಯಮ, ಶಿಕ್ಷಣ, ಅಡ್ವೊಕೇಟು, ಕೋರ್ಟು, ವಿಮಾ ಏಜೆಂಟು, ನರ್ಸಿಂಗ್ ಹೋಮುಗಳಿಂದ ತುಂಬಿ ತುಳುಕುತ್ತಿರುವ ಊರೆಂಬೋ ಊರು.
ಅತಿ ಶ್ರೀಮಂತರು, ಶ್ರೀಮಂತರು, ಅಷ್ಟೇನು ಶ್ರೀಮಂತರಲ್ಲದವರು, ಇಷ್ಟರಲ್ಲೇ ತೃಪ್ತರು, ಅಷ್ಟಾದರು ಅತೃಪ್ತರು, ಬಡವರು, ಅತೀ ಬಡವರು, ಭಿಕ್ಷುಕರು, ಕಳ್ಳರು, ಕಾಕರು, ಭಯೋತ್ಪಾದಕರು, ಯೋಗಿಗಳು, ಮೇಧಾವಿಗಳು, ಸಮಾಜ ಸೇವಕರು, ನಯವಂಚಕರು, ಎಲ್ಲೋ ಕಳೆದು ಹೋದವರು, ಸಂತೆಯಲ್ಲಿ ನಿಂತಲ್ಲೆ ಕಬೀರರಾದವರು. ಎಲ್ರೂ.
ಜತೆಗೆ, ಹೋರಾಟಗಾರರು, ಖದೀಮರು, ಸಮಯ ಸಾಧಕರು, ಕಾಲಾಯ ತಸ್ಮೈನ್ನಮಃ ಎಂದುಕೊಳ್ಳುವವರು, ಬಾರುಗಳಲ್ಲಿ ರಿಪೀಟ್ ಎಂದು ಹೇಳುವವರು, ಶನಿ ಮಹಾತ್ಮನಿಗೆ ತಪ್ಪದೆ ಎಳ್ಳಿನ ದೀಪ ಹಚ್ಚಿ ಬಂದು ಅನ್ನಕ್ಕೆ ಹೆಸರಿಡುವವರು. ಫೋನನ್ನು ಚಾರ್ಜಿಗೆ ಇಟ್ಟು ಕೈಯಲ್ಲೇ ಊಟ ಮಾಡುವವರು. ನಾಳಿನ ಕೆಲಸಗಳನ್ನು ಇಂದೇ ಟಿಪ್ಪಣಿ ಮಾಡಿಟ್ಟುಕೊಂಡು, ಗುಳಿಗೆ ನುಂಗಿ ಮಲಗುವವರು.
ನಾಲ್ಕು ಗೋಡೆಗಳ ಮಧ್ಯೆ ಒರಗಿ ಕುಳಿತು ಸಮಾಜದ ಕಪಟ ನಾಟಕಗಳನ್ನು ನೋಡುವವರು, ಓದುವವರು, ಮರೆಯುವವರು. ಇಲ್ಲೂ ಮೂಲ ನಿವಾಸಿಗಳು, ವಲಸಿಗರು, ಬಂದು ಹೋಗುವವರು. ಒಂದು ಮಹಾನಗರಕ್ಕೆ ದೈತ್ಯ ಶಕ್ತಿ ಇರ್ತದೆ. [ಚಿತ್ರಗಳು : ಜಯನಗರದ ಪಟಾಲಮ್ಮ ಮಹೋತ್ಸವದ ಸಂಭ್ರಮ]
ಈ ಮಧ್ಯೆ ಮಹಾಜನತೆಗೆ ನಾನು ತಿಳಿಯಪಡಿಸುವುದೇನೆಂದರೆ ನಾನೇನು ಬೆಂಗಳೂರನ್ನು ಅರಗಿಸಿಕೊಂಡಿಲ್ಲ. ಬೆಂಗಳೂರು ನಮ್ಮನ್ನು ಅರಗಿಸಿಕೊಳ್ಳುತ್ತಿದೆ. ಬೆಂಗ್ಳೂರು ಒಂಥರಾ ಫ್ರೂಟ್ ಸಲಾಡ್ ಇದ್ದ ಹಾಗೆ. ಅಲ್ಲಿರುವ ಯಾವ ಹಣ್ಣೂ ತನ್ನತನವನ್ನು ಬಿಟ್ಟುಕೊಡುವುದಿಲ್ಲ. ಇದಕ್ಕೆ ಉದಾಹರಣೆ 198 ವಾರ್ಡುಗಳಲ್ಲಿ ಜರಗುವ ಗ್ರಾಮದೇವತೆಯ ಉತ್ಸವಗಳು.
ಜೂನ್ ಮಾಹೆ ಬಂತೆಂದರೆ ಜಾತ್ರೆಗಳು ಗರಿಕೆದರಿಕೊಳ್ಳುವ ಕಾಲ. ಮುಂಗಾರು ಮಳೆ ಅಮರಿಕೊಳ್ಳುವ ಮೊದಲು ಜಾತ್ರೆಗಳು ಮುಗಿಯಬೇಕು. ಚಿತ್ರಗಳು ಉಳಕೊಂಡರೆ ಉಳೀಬೇಕು.
ಬಾಲ್ಯ, ಹದಿಹರೆಯದಲ್ಲಿ ಚಿತ್ರದುರ್ಗದಲ್ಲಿ ನಡೆಯುವ ಏಕನಾಥೇಶ್ವರಿ ಉತ್ಸವ, ಸಿಡಿ, ಬರಗೇರಮ್ಮ - ತಿಪ್ಪಲಘಟ್ಟಮ್ಮನ ಭೇಟಿ, ಊರಾಚೆಯ ವೆಂಕಟರಮಣನ ಗುಡಿಯಲ್ಲಿ ವಿಜಯದಶಮಿಯಂದು ಜರುಗುವ ತೇರಿಗೆ ಹೋಗುತ್ತಿದ್ದನ್ನು ಬಿಟ್ಟರೆ ಮತ್ಯಾವ ದೇವತೆಯ ಜಾತ್ರೆಗಳಿಗೆ ನಾನು ಹೋಗಲಾಗಿಲ್ಲ.
ನಿನ್ನೆ ಏನಾಯಿತೆಂದರೆ, ಈ ಕಡೆ ಆನೆಬಂಡೆ ರಸ್ತೆ, ಈ ಕಡೆ ಮಾಧವನ್ ಪಾರ್ಕ್, ಇನ್ನೊಂದ್ಕಡೆ ಜಯನಗರ ನಾಲಕ್ಕನೇ ಬ್ಲಾಕ್, ಮತ್ತೊಂದು ದಿಕ್ಕಿನಲ್ಲಿ ಸೌತ್ ಎಂಡ್ ರಸ್ತೆಯ ನಡುವೆ ತಣ್ಣಗಿರುವ ಪ್ರದೇಶದಲ್ಲಿ ಒಂದು ಮಸೀದಿ ಇದೆ. ಅದರ ಎದುರಿಗೆ ಪಟಾಲಮ್ಮನ ಗುಡಿ. ಇವೆರಡರ ನಡುವೆ ನಮ್ಮ ಒನ್ಇಂಡಿಯಾ ಕನ್ನಡ ವೆಬ್ ಸೈಟ್ ಕಚೇರಿ ಇದೆ. Pure Digital.
ಅವತ್ತು ಪಟಾಲಮ್ಮನ ಊರ ಹಬ್ಬ. ಅವಳು ಕನಕನ ಪಾಳ್ಯ, ಸಿದ್ದಾಪುರ, ಯಡಿಯೂರು, ಭೈರಸಂದ್ರ ಹಾಗೂ ನಾಗಸಂದ್ರ ಗ್ರಾಮಗಳ ಅಧಿದೇವತೆ. ಅಮ್ಮನನ್ನು, ಅಮ್ಮನ ಭಕ್ತಕೋಟಿಯನ್ನು ನೋಡಲು ಎರಡು ಕಣ್ಣುಗಳು ಸಾಲವು.
ನಾನು ಜಾತ್ರೆಗಳಿಗೆ ಹೋಗದಿದ್ದರೆ ಏನಂತೆ. ಜಾತ್ರೆಯೇ ನಮ್ಮ ಆಫೀಸಿನ ಮನೆ ಬಾಗಿಲಿಗೆ ಬಂದಿತ್ತು. ಅದರ ಕೆಲವು ಚಿತ್ರಗಳ ಮೆರವಣಿಗೆ ಇಲ್ಲಿದೆ.
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.














Click it and Unblock the Notifications