ಜನಪ್ರಿಯ 25 ಹೊಸ ವರ್ಷದ ರೆಸಲೂಷನ್ಸ್

ಒಂದು ಕ್ಯಾಲೆಂಡರ್ ವರ್ಷ ಉರುಳಿ ಹೊಸ ಕ್ಯಾಲೆಂಡರ ಗೋಡೆ ಏರಿದೆ. ಇನ್ನೊಂದು ವರ್ಷ ಕಳೆದು ಹೋಯಿತಲ್ಲ ಎಂಬ ವ್ಯಥೆ ಕೆಲವರಿಗಾದರೆ ಹೊಸ ವರ್ಷದಲ್ಲಿ ಹೊಸ ಸಾಧನೆ ಮಾಡಿದರಾಯಿತು ಎಂಬ ಛಲ ಕೆಲವರಿಗೆ.

ಇದೇ ಉದ್ದೇಶದಿಂದ ಅನೇಕರು ಹೊಸ ವರ್ಷಕ್ಕೆ ಹೊಸ ರೆಸಲೂಷನ್ ತೆಗೆದುಕೊಳ್ಳುವುದು ವಾಡಿಕೆ. ಹೊಸ ವರ್ಷಕ್ಕೆ ನಿಮ್ಮ ಹೊಚ್ಚಹೊಸ ರೆಸಲೂಷನ್ ಯಾವುದು? ನಮಗೆ ಗೊತ್ತಾಗಲಿಲ್ಲವೇ.

ಕಾಲದೇಶ ವರ್ತಮಾನಗಳನ್ನು ಗಮನದಲ್ಲಿಟ್ಟು ಹೊಸ ವರ್ಷದ 25 ಸಂಕಲ್ಪಗಳನ್ನು ಜಾಗರೂಕತೆಯಿಂದ ಪಟ್ಟಿಮಾಡಲಾಗಿದೆ. ಇವು ನಿಮಗೂ ಇಷ್ಟವಾಗುವುದೆಂಬ ಸಂಕಲ್ಪ ನಮ್ಮದು.

ಕಳೆದ ಎರಡು ದಿನಗಳಲ್ಲಿ ನಮ್ಮ ಕಣ್ಣು ಕಿವಿಗೆ ಬಿದ್ದ ಕೆಲವು ಪಾಪುಲರ್ ನ್ಯೂ ಇಯರ್ ರೆಸಲೂಷನ್ನುಗಳು ಹೀಗಿವೆ. ನೀವು ಓದಿ. ನೀವು ಕೇಳಿದ ಅಥವಾ ಕೈಗೊಂಡ ರೆಸಲೂಶನ್ನುಗಳನ್ನೂ ಇಲ್ಲಿ ಪಟ್ಟಿ ಮಾಡಬಹುದು. ಹ್ಯಾಪಿ ನ್ಯೂ ಇಯರ್!

Most popular new year resolutions 2016

* ಕುಡಿಯುವುದನ್ನು ಬಿಡುತ್ತೇನೆ.
* ಸಿಗರೇಟು ಸೇದುವುದನ್ನು ನಿಲ್ಲಿಸುತ್ತೇನೆ.
* ಕಚೇರಿಗೆ ಟೈಮಿಗೆ ಸರಿಯಾಗಿ ಹೋಗುತ್ತೇನೆ.
* ಹೆಲ್ಮೆಟ್ ಧರಿಸದೆ ಗಾಡಿ ಓಡಿಸುವುದಿಲ್ಲ.
* ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳುವುದಿಲ್ಲ.
* ಹಣ ಪೋಲು ಮಾಡುವುದಿಲ್ಲ.
* ಈ ವರ್ಷ ಭಾರತಕ್ಕೆ ತಪ್ಪದೆ ಹೋಗುತ್ತೇನೆ.
* ಹೆಂಡತಿಯನ್ನು ಹೆಚ್ಚಾಗಿ ಪ್ರೀತಿ ಮಾಡುತ್ತೇನೆ.
* ಗಂಡ ಹಾಕಿದ ಗೆರೆ ದಾಟುವುದಿಲ್ಲ.
* ಕನ್ನಡ ಸಿನೆಮಾ ತಪ್ಪದೆ ನೋಡುತ್ತೇನೆ.
* ದೀನದಲಿತರಿಗೆ ನೆರವಾಗುತ್ತೇನೆ.
* ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ.
* ಒಂದು ಪೈಸಾ ಲಂಚ ಕೊಡಲ್ಲ.
* ಇವತ್ತಿಂದ ಜಗಳ ಕಾಯುವುದು ನಿಲ್ಲಿಸುತ್ತೇನೆ.
* ಪಾಸ್ ಪೋರ್ಟ್ ಮಾಡಿಸಲೇಬೇಕು.
* ನಾಳೆ ಕೆಲಸ ಇಂದೇ ಮಾಡುತ್ತೇನೆ.
* ತೂಕ ಕಡಿಮೆ ಮಾಡಿಕೊಳ್ಳುತ್ತೇನೆ.
* ಕಳೆದುಹೋದ ಗೆಳತಿಯನ್ನು ಹುಡುಕುವುದು ಇವತ್ತಿನಿಂದಲೇ ಸ್ಟಾಪ್.
* ದೂರದ ಊರಿಗೆ ಪ್ರವಾಸ ಕೈಗೊಳ್ಳುತ್ತೇನೆ.
* ಅವಳಿಗೆ ತಕ್ಕ ಪಾಠ ಕಲಿಸುತ್ತೇನೆ
* ಇನ್ನೊಬ್ಬರ ತಪ್ಪು ತಿದ್ದುವುದಿಲ್ಲ.
* ಮದುವೆ ಆಗೇ ಆಗುತ್ತೇನೆ.
* ಹುಟ್ಟಿದ ಊರಿಗೆ ಮರಳುತ್ತೇನೆ.
* ಬೇರೆ ಕೆಲಸ ಹುಡುಕುತ್ತೇನೆ.
* ಬೇಗ ಮಲಗಿ ಬೇಗ ಏಳುತ್ತೇನೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+