ಇಂದಿನ ಕನ್ನಡ ಅಂಕಣಗಳು ಬೋರೋ ಬೋರು

ಅಶೋಕ್ ಶೆಟ್ಟರ್ : ಅಂಕಣಕಾರರಾದರೂ ಸಾಯಬೇಕು, ಅವರ ಅಂಕಣಗಳನ್ನು (ಗಾಡ್, ಹಾಗಂತ ಯಾರು ಹೆಸರಿಟ್ಟರೋ.. ಯಾಕೋ..) ಪ್ರಕಟಿಸುವ ಪತ್ರಿಕೆಗಳಾದರೂ ಸಾಯಬೇಕು. ಆದರೆ ಅಂ.ರಾ ನಾವೇಕೆ ಒದ್ದಾಡಿ ಸಾಯಬೇಕು? ಬೇಡವಾ.., ಬಿಟ್ಟುಬಿಡಿ, ಓದಬೇಡಿ.. ಇದಕ್ಕೆ ಸಂಬಂಧಿಸಿದಂತೆ ಹಿಂದೆ B.k.Sumathiಯವರು ಒಂದು ಲೇಖನವನ್ನೇ ಬರೆದಿದ್ದರು. ಇತ್ತೀಚೆಗೆ Jogiಯವರ ಕಥೆಗಳನ್ನು ಮತ್ತೊಂದಾವರ್ತಿ ಓದುತ್ತಿದ್ದೆ. ಲವಲವಿಕೆಯ ಬರಹಗಳು. ಆದರೆ ಅವುಗಳ ಸೋಲಿನ ನೆಲೆಗಳನ್ನು ನಾನು ಯೋಚಿಸಿದಾಗ ನನಗೆ ತೋಚಿದ್ದು ಅವರು ಅವುಗಳನ್ನು ಒಂದು ಅಂಕಣದ ಸರಕಾಗಿಸಲು ನೋಡಿದ್ದು. A story-writer, if he is also a columnist, should write about anything but a short story in his column. ಒಂದು ಅಂಕಣದ ಸ್ಥಳಮಿತಿಗೆ ಒಂದು ಕಥೆಯನ್ನು ಕುಗ್ಗಿಸುವದರಲ್ಲಿ ಅಂತಸ್ಥವಾಗೇ ಇರುವ ಕೃತ್ರಿಮತೆಯ ಹೊರತಾಗ್ಯೂ ಒಂದು ಕಥೆ ತನ್ನ ಹಂದರ, ಪಾತ್ರಪೋಷಣೆಯ ಅಗತ್ಯಗಳಿಗನುಗುಣವಾಗಿ ಸ್ವಚ್ಛಂದವಾಗಿ ವಿಸ್ತರಿಸಿಕೊಳ್ಳುವ ಸಾಧ್ಯತೆಗಳನ್ನು ಒಬ್ಬ ಕತೆಗಾರ ತಾನೇ ಸ್ವತಃ ಕೊಂದು ಹಾಕುವದು ನನ್ನ ಮಟ್ಟಿಗೆ ವಿಲಕ್ಷಣ.
ಉಷಾ ಕಟ್ಟೆಮನೆ : ನಾನು ಪತ್ರಕರ್ತಳಲ್ಲ. ತಿಳಿದವಳಂತೂ ಮೊದಲೇ ಅಲ್ಲ. ಇನ್ನು ಓದುಗಳಾಗಿ ನಾನು ಅಂಕಣಗಳನ್ನು ಓದುವುದು ಕಡಿಮೆ. ಅವರು ಏನು ಹೇಳುತ್ತಿದ್ದಾರೆ ಮತ್ತು ಯಾವುದರ ಪರ ವಕಾಲತ್ತು ವಹಿಸುತ್ತಿದ್ದಾರೆಂದು ಕಣ್ಣಾಡಿಸಿದರೆ ಗೊತ್ತಾಗುತ್ತದೆ. ಹಾಗಾಗಿ ಏನನ್ನೂ ಹೇಳಲಾರೆ ಅಂಜಲಿ. ಆದರೆ ನನಗೆ ಏನು ಬೇಕು ಎಂಬುದು ನನಗೆ ಗೊತ್ತಿದೆ. ಅದನ್ನು ನಾನು ಎಲ್ಲಿಂದಾದರೂ ಹುಡುಕಿ ಪಡೆದುಕೊಳ್ಳುತ್ತೇನೆ. ಅರೆಬೆಂದ ಅಂಕಣಗಳ ಗೊಡವೆಯೇಕೆ ಅಂಜಲಿ?












Click it and Unblock the Notifications