ಜನತೆಗೆ ಯಡಿಯೂರಪ್ಪ ದೀಪಾವಳಿ ಶುಭಾಶಯ

ಹೋದ ವರ್ಷ, ವಿಕೃತಿ ನಾಮ ಸಂವತ್ಸರ ನರಕ ಚತುರ್ದಶಿ ದಿವಸ (2010) ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಬಿ ಎಸ್ ಯಡಿಯೂರಪ್ಪ. ಆ ದಿನದಂದು ಅವರು ನಾಡಿನ ಜನತೆಗೆ ಹೃದಯಸ್ಪರ್ಶಿ ಶುಭಾಶಯ ಪತ್ರ ಕಳಿಸಿದ್ದರು. ಈಗಲೂ ನನಗೆ ನೆನಪಿದೆ.
ಸನ್ನಡತೆ, ಸದಾಶಯ, ಸದ್ಭಾವನೆ, ದೀಪಾವಳಿಯ ಮಹತ್ವವನ್ನು ಸಾರುವ ಅವರ ಗ್ರೀಟಿಂಗ್ ಕಾರ್ಡ್ ನಮ್ಮ ಡಾಟ್ ಕಾಂ ಕಚೇರಿಗೂ ಬಂದಿತ್ತು. ಕರ್ನಾಟಕ ಸರಕಾರದ ಮೊಹರು ಇರುವ, ಕೆಂಪು ಹಳದಿ ಬಣ್ಣದಲ್ಲಿ ಮುದ್ರಿತ ಎರಡು ಹಾಳೆಯ ಶುಭಾಶಯ ಸಂದೇಶ ಹೀಗಿತ್ತು.
ಶುಭಂ ಕರೋತಿ ಕಲ್ಯಾಣಂ
ಆರೋಗ್ಯಂ ಧನ ಸಂಪದ:
ಜ್ಞಾನ ಪ್ರಕಾಶ ಸಿದ್ಧ್ಯರ್ಥಂ
ದೀಪ ಜ್ಯೋತಿರ್ ನಮೋಸ್ತುತೆ||
***
ಶುಭಾಶಯ
ದೀಪ ಜ್ಯೋತಿರ್ ಪರಬ್ರಹ್ಮ
ದೀಪ ಜ್ಯೋತಿರ್ ಜನಾರ್ದನಃ
ದೀಪೋ ಹರತು ಮೇ ಪಾಪಂ
ಸಂಧ್ಯಾ ದೀಪಂ ನಮೋಸ್ತುತೇ||
***
ಕವಿತೆ
ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ
ಹಚ್ಚೋಣ
-ಕವಿ ಜಿ.ಎಸ್. ಶಿವರುದ್ರಪ್ಪ
****
ಸದ್ಭಾವನೆ
ಅಂತರಂಗ-ಬಹಿರಂಗದಲ್ಲಿ ಅರಿವಿನ ಬೆಳಕು ನೀಡುವ
ಬಾಳ ಬದುಕಿಗೆ ಸಕಲ ಭಾಗ್ಯವ ಕರುಣಿಸುವ
ಜಗವೆಲ್ಲ ಜ್ಞಾನಜ್ಯೋತಿಯ ಕಿರಣಗಳ ಹರಡುವ
ಬೆಳಕಿನ ಹಬ್ಬ ದೀಪಾವಳಿ
ನಮ್ಮೆಲ್ಲರ ಮನ-ಮನೆಗಳನು ಬೆಳಗಲಿ
* ಅಭಿವೃದ್ಧಿಯೇ ಆಡಳಿತದ ಮಂತ್ರ - ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ.












Click it and Unblock the Notifications