ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಟ್ ಕೋರ್ ತೆಕ್ಕೆಗೆ ದಟ್ಸ್ ಕನ್ನಡ

By Prasad
|
Google Oneindia Kannada News

Rajesh Jain, BG Mahesh
ದಟ್ಸ್ ಕನ್ನಡ ಮತ್ತು ಒನ್ ಇಂಡಿಯಾ ಸೇರಿದಂತೆ ಪ್ರಾದೇಶಿಕ ಭಾಷೆಯ ಜನಪ್ರಿಯ ವೆಬ್ ಪೋರ್ಟಲ್ ಗಳ ಮಾತೃಸಂಸ್ಥೆಯಾಗಿರುವ ಗ್ರೇನಿಯಂ ಕಂಪನಿಯನ್ನು ಮೊಬೈಲ್ ಇಂಟರ್ನೆಟ್ ಸೇವೆಯಲ್ಲಿ ನಿರತವಾಗಿರುವ ನೆಟ್ ಕೋರ್ ಕಂಪನಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈ ಕಂಪನಿಗಳ ಸಂಗಮದಿಂದಾಗಿ ಇಂಟರ್ನೆಟ್ ಮತ್ತು ಮೊಬೈಲ್ ಸೇವೆ ಪಡೆಯುತ್ತಿರುವ ಗ್ರಾಹಕರಿಗೆ ಹಲವು ರೀತಿಯ ಹೆಚ್ಚಿನ ಸೇವೆಗಳು ಲಭ್ಯವಾಗಲಿವೆ.

ಈ ಕುರಿತು ಎರಡೂ ಸಂಸ್ಥೆಗಳ ನಡುವೆ ಒಡಂಬಡಿಕೆಯಾಗಿದ್ದು ಮೂರ್ನಾಲ್ಕು ತಿಂಗಳುಗಳಲ್ಲಿ ಕೂಡಿಕೆಯ ಔಪಚಾರಿಕತೆ ಪೂರ್ಣಗೊಳ್ಳಲಿದೆ.

ನೆಟ್ ಕೋರ್ ಸಲ್ಯುಷನ್ಸ್ ನ ಸಿಇಓ ಅಭಿಜಿತ್ ಸಕ್ಸೇನಾ ಅವರು ಈ ಒಡಂಬಡಿಕೆ ಕುರಿತಂತೆ ಹರ್ಷ ವ್ಯಕ್ತಪಡಿಸಿದ್ದು, ಭಾರತದಲ್ಲಿ ಪ್ರಾದೇಶಿಕ ಭಾಷೆಗಳ ಮಹತ್ವವನ್ನು ಪರಿಗಣಿಸಿದರೆ, ಇಂಟರ್ನೆಟ್ ಮತ್ತು ಮೊಬೈಲ್ ಕ್ಷೇತ್ರದಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಹಾಗೂ ವರಮಾನ ವೃದ್ಧಿಗೆ ಈ ಒಡಂಬಡಿಕೆ ಉತ್ತೇಜನ ನೀಡಲಿದೆ ಎಂದಿದ್ದಾರೆ.

ಭಾರತ ಕೇಂದ್ರಿತ ಮೊಬೈಲ್ ಇಂಟರ್ನೆಟ್ ಪೋರ್ಟಲ್ ಮೈಟುಡೆ ಮುಖಾಂತರ ನೆಟ್ ಕೋರ್ ಕಂಪನಿ ನೇರವಾಗಿ ಜಾಗತಿಕ ಗ್ರಾಹಕರನ್ನು ಸೆಳೆಯುತ್ತಿದೆ. ಮೊಬೈಲ್ ಮತ್ತು ಇಂಟರ್ನೆಟ್ ಕ್ಷೇತ್ರದ ಗ್ರಾಹಕರನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಲು ಈ ಕೂಡಿಕೆ ಸಹಕಾರಿಯಾಗಲಿದೆ ಮತ್ತು ಇ-ಕಾಮರ್ಸ್ ಮತ್ತು ಎಮ್-ಕಾಮರ್ಸ್ ವಲಯದಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಯಾಗಲಿವೆ ಎಂದು ಸಕ್ಸೇನಾ ಹೇಳಿದರು.

ಪಿಸಿ-ಇಂಟರ್ನೆಟ್ ಮತ್ತು ಮೊಬೈಲ್-ಇಂಟರ್ನೆಟ್ ನಡುವಿನ ಅಂತರ ದಿನೇದಿನೇ ಕಡಿಮೆ ಆಗುತ್ತಿದೆ, ಎರಡೂ ಕಂಪನಿಗಳ ಕೂಡಿಕೆಯಿಂದಾಗಿ ಇಂಟರ್ನೆಟ್ ನಲ್ಲಿರುವ ಆಡಿಯೋ, ವಿಡಿಯೋ ಮತ್ತಿತರ ಮಾಹಿತಿಯನ್ನು ಮೊಬೈಲ್ ಮೂಲಕ ಕೂಡ ನಮ್ಮ ಗ್ರಾಹಕರಿಗೆ ದಕ್ಕಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜಾಹೀರಾತುದಾರರಿಗೆ ಇದರಿಂದ ಹೆಚ್ಚಿನ ಲಾಭವಾಗಲಿದೆ ಎಂದು ಸಕ್ಸೇನಾ ತಿಳಿಸಿದರು.

ಗ್ರೇನಿಯಂನ ಸಿಇಓ ಮತ್ತು ಸಂಸ್ಥಾಪಕರಾಗಿರುವ ಬಿಜಿ ಮಹೇಶ್ ಅವರು, ಪ್ರಾದೇಶಿಕ ಭಾಷಾ ಇಂಟರ್ನೆಟ್ ಕ್ಷೇತ್ರದಲ್ಲಿ ಮೊದಲು ಅಡಿಯಿರಿಸಿದ್ದೇ ಗ್ರೇನಿಯಂ. ಅಪಾರವಾದ ಇಂಟರ್ನೆಟ್ ವೀಕ್ಷಕರನ್ನು ಗ್ರೇನಿಯಂನ ಪ್ರಾದೇಶಿಕ ಮತ್ತು ಇಂಗ್ಲಿಷ್ ಪೋರ್ಟಲ್ ಗಳು ಸೆಳೆಯುತ್ತಿವೆ. ಪ್ರತಿ ತಿಂಗಳು ಆರು ಮಿಲಿಯನ್ ಗೂ ಹೆಚ್ಚಿನ ಹೊಸ ಗ್ರಾಹಕರು ಗ್ರೇನಿಯಂಗೆ ಬರುತ್ತಿದ್ದಾರೆ. ಇದು ಮೈಟುಡೇ ಮುಖಾಂತರ ನೆಟ್ ಕೋರ್ ಕಂಪನಿ ಹೊಂದಿರುವ 4 ಮಿಲಿಯನ್ ಗ್ರಾಹಕರಿಗೆ ವರದಾನವಾಗಲಿದೆ ಎಂದು ಹೇಳಿದರು.

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷಾ ಪೋರ್ಟಲ್ ಗಳನ್ನು ಗ್ರೇನಿಯಂ ಹೊಂದಿದೆ. ಉಚಿತ ಜಾಹೀರಾತು ಪೋರ್ಟಲ್ ಕ್ಲಿಕ್.ಇನ್ ಕೂಡ ಗ್ರೇನಿಯಂ ಒಡೆತನದಲ್ಲಿದೆ. ಡಿಜಿಟಲ್ ಕಮ್ಯುನಿಕೇಷನ್ ನಲ್ಲಿ ಮುಂಚೂಣಿಯಲ್ಲಿರುವ ನೆಟ್ ಕೋರ್ ಕಂಪನಿಯ ಎಸ್ಎಮ್ಎಸ್ ಮತ್ತು ಈಮೇಲ್ ಸೇವೆಯನ್ನು ಭಾರತದ 2000ಕ್ಕೂ ಅಧಿಕ ಕಂಪನಿಗಳು ಪಡೆಯುತ್ತಿವೆ. ನೆಟ್ ಕೋರ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೈನ್ ಅವರು ಗ್ರೇನಿಯಂನಲ್ಲಿ ಈಮೊದಲು ಬಂಡವಾಳ ಹೂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

Also Read : Greynium/Oneindia.in/Click.in acquisition : My Thoughts

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X