ಪ್ರೆಸ್ ಕ್ಲಬ್ : 11 ಹುದ್ದೆಗೆ 40 ಪತ್ರಕರ್ತರ ಲಗೋರಿ

ಕ್ಲಬ್ಬಿನ ಪದಾಧಿಕಾರಿ ಆಗಬಯಸುವ ಆಕಾಂಕ್ಷಿಗಳ ಪಟ್ಟಿ ಈ ಬಾರಿ ಹನುಮಂತನ ಬಾಲವಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಖಚಾಂಜಿ ಹಾಗೂ ಆಡಳಿತ ಸಮಿತಿಯ 6 ಸ್ಥಾನಗಳು ಸೇರಿದಂತೆ ಒಟ್ಟು 11 ಹುದ್ದೆಗಳಿಗೆ 40 ಮಂದಿ ಹುರಿಯಾಳುಗಳು ಲಗ್ಗೆ ಇಟ್ಟಿದ್ದಾರೆ. ಕ್ಲಬ್ಬಿನ ಮೂಲ ಸೌಕರ್ಯಗಳನ್ನು ವೃದ್ಧಿಸುವುದು, ಪತ್ರಕರ್ತರು ಹಾಗೂ ಅವರ ಕುಟುಂಬ ವರ್ಗಕ್ಕೆ ಮನರಂಜನೆಯ ಸಾಧ್ಯತೆಗಳನ್ನು ವಿಸ್ತರಿಸುವುದಲ್ಲದೆ ಕ್ಲಬ್ಬಿನ ವರ್ಚಸ್ಸನ್ನು ಹೆಚ್ಚಿಸುವುದೇ ಎಲ್ಲ ಸ್ಪರ್ಧಿಗಳ ಚುನಾವಣಾ ಪ್ರಣಾಳಿಕೆಯಲ್ಲಿ ಕಾಣಬರುವ ಸಾಮಾನ್ಯ ಅಂಶವಾಗಿದೆ.
ಹಾಲಿ ಅಧ್ಯಕ್ಷರಾಗಿರುವ ಪತ್ರಕರ್ತ ಇ.ವಿ. ಸತ್ಯನಾರಾಯಣ, ಎಂ. ಎ. ಪೊನ್ನಪ್ಪ ಹಾಗೂ ರಾಮಕೃಷ್ಣ ಉಪಾಧ್ಯಾಯ ಹಾಗೂ ಫ್ರೀ ಲಾನ್ಸ್ ಛಾಯಾಗ್ರಾಹಕ ಕೆ. ವೆಂಕಟೇಶ್ ಅವರುಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಈ ಹುದ್ದೆಗೆ ಆಯ್ಕೆ ಬಯಸಿರುವ ಮೂರೂ ಮಂದಿ ಪತ್ರಕರ್ತರು ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹಕ್ಕೆ ಸೇರಿದವರಾಗಿರುವುದು ಈ ಬಾರಿಯ ವಿಶೇಷವೆನಿಸಿದೆ.
ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಜಿದ್ದಾಜಿದ್ದಿ ಸ್ಪರ್ಧೆಯಿದೆ. ಉದಯ ಟಿವಿ ವರದಿಗಾರ ಬಿ. ಎಸ್. ಸತ್ಯನಾರಾಯಣ, ಚಲನಚಿತ್ರ ಪತ್ರಕರ್ತ ಸದಾಶಿವ ಶೆಣೈ ಮತ್ತು ಹೊಸದಿಗಂತ ಪತ್ರಿಕೆಯ ಎಸ್. ಶಾಂತಾರಾಮ್ ನಡುವೆ ಹಣಾಹಣಿ ಇದೆ. ಉಪಾಧ್ಯಕ್ಷ ಸ್ಥಾನಕ್ಕೆ ಉದಯ ಟಿವಿಯ ಶ್ರೀಧರ್ , ನಿವೃತ್ತ ಪತ್ರಕರ್ತ ಆರ್. ಕೃಷ್ಣಪ್ಪ ಮತ್ತು ಕೆ. ಎಸ್. ಜಯರಾಮ್ ಪ್ರಯತ್ನಿಸುತ್ತಿದ್ದಾರೆ.
ಪ್ರೆಸ್ ಕಬ್ಬಿನ ಸದಸ್ಯಬಲ 1,070. ಅರ್ಹ ಮತದಾರರ ಸಂಖ್ಯೆ 602. ಎಲೆಕ್ಟ್ರಾನಿಕ್ ಮತದಾನ ಭಾನುವಾರ ಬೆಳಗ್ಗೆ 9ರಿಂದ 2 ಗಂಟೆ. ಚುನಾವಣಾ ಅಧಿಕಾರಿ ಬಿ.ಎನ್. ಗುರುಮೂರ್ತಿ. ಫಲಿತಾಂಶ ಮಧ್ಯಾನ್ಹ 3ರ ನಂತರ.
ಸ್ಪರ್ಧೆಗೆ ಧುಮುಕಿದವರ ಪೂರ್ಣ ಪಟ್ಟಿ:
ಅಧ್ಯಕ್ಷ ಸ್ಥಾನಕ್ಕೆ
ಪೊನ್ನಪ್ಪ ಎಂ.ಎ.
ರಾಮಕೃಷ್ಣ ಉಪಾದ್ಯ
ಸತ್ಯನಾರಾಯಣ ಇ.ವಿ.
ವೆಂಕಟೇಶ್ ಕೆ.
ಉಪಾಧ್ಯಕ್ಷ ಸ್ಥಾನಕ್ಕೆ
ಜಯರಾಮ್ ಕೆ.ಎಸ್.
ಕೃಷ್ಣಪ್ಪ ಆರ್.(ಪಾವಗಡ)
ಶ್ರೀಧರ ಆರ್.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ
ಸದಾಶಿವ ಶೆಣೈ
ಸತ್ಯನಾರಾಯಣ ಬಿ.ಎಸ್. (ಬಿ.ಎಸ್. ಸತ್ಯ)
ಶಾಂತಾರಾಮ್ ಎಸ್.
ಕಾರ್ಯದರ್ಶಿ ಸ್ಥಾನಕ್ಕೆ
ದೊಡ್ಡಬೊಮ್ಮಯ್ಯ
ಜಗನ್ನಾಥ್ ಕೆ.ಎಸ್.
ನಾರಾಯಣರಾವ್ ಜಿ.ಎಸ್. (ಜೆ.ಸು.ನಾ)
ಸಾಂಬಸದಾಶಿವ ರೆಡ್ಡಿ ಆರ್.ಪಿ.
ಖಜಾಂಜಿ ಸ್ಥಾನಕ್ಕೆ
ಮೋಹನ್‌ರಾವ್ ಸಾವಂತ್ ಜಿ.
ರಾಮಾನುಜ ಹೆಚ್.ಎಸ್.
ರಿಜ್‌ವಾನ್ ಎಂ.ಕೆ.
ಸೋಮಶೇಖರ್ ಜಿ.ಆರ್.ಎನ್.
ಸೋಮಶೇಖರ್ ಕೆ.ಎಸ್. (ಸೋಮಣ್ಣ)
ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ (ಒಟ್ಟು 6 ಸ್ಥಾನಗಳು)
ಆನಂದ್ ಜಿ. ಬಳ್ಳಾರಿ
ಆಲ್‌ಫ್ರೆಡ್ ಟೆನಿಸನ್ ಡಿ.
ದಿನೇಶ್‌ಕುಮಾರ್ ಎಸ್.ಸಿ.
ಈಶ್ವರ್ ಎಸ್.
ಗಂಗಾಧರಮೂರ್ತಿ ಎಸ್.ಎಸ್.
ಗೋಪಾಲ್ ಆರ್.
ಜನಾರ್ಧನಾಚಾರ್ ಕೆ.ಎಸ್.
ಲೋಕೇಶ್ ಕಾಯರ್ಗ
ಮಹಾಬಲೇಶ್ವರ್ ಕಾಟರಹಳ್ಳಿ
ಮಣಿ ಎಂ.ಎಸ್.
ಮೋಹನ್ ಕುಮಾರ್ ಬಿ.ಎನ್.
ಮೃತ್ಯುಂಜಯ ಎನ್.ಹೆಚ್.
ನಾಗೇಶ್ ಡಿ.ಸಿ.
ನಾಗರಾಜ ಜಿ.ಜಿ.
ರಮೇಶ್ ಬಿ.ಕೆ.
ರಮೇಶ್ ಬಿ.ಎನ್.
ಸಂಗಮದೇವ ಐ.ಹೆಚ್.
ಶಂಕರ್ ಆರ್.
ಶಾಂತಮ್ಮ
ಶ್ರೀನಿವಾಸ ಪ್ರಸಾದ್ ಹೆಚ್.ಎನ್. (ಹೆಚ್.ಎನ್.ಎಸ್. ಪ್ರಸಾದ್)
ವಿಶ್ವನಾಥ್ ಹೆಚ್.ಕೆ.











Click it and Unblock the Notifications