30880recipeಗುಲ್‌ಪೀಟ್ ಅಲ್ಲ ಗುಳಪಾಟಿ/recipe/sweet/2007/020707gulapati.htmlಈ ವಿಶೇಷವಾದ ಸಿಹಿಯನ್ನು ರಾಮನವಮಿಯ ದಿನ ಮಾಡಿ ಕೋಸಂಬರಿ, ಪಾನಕದ ಜೊತೆ ನೈವೇದ್ಯಕ್ಕೆ ಇಡುತ್ತಾರೆ. ಪ್ರಸಾದ ನಾಯಿಕ ನಮ್ಮ ತಂದೆಯ ಚಿಕ್ಕಪ್ಪನ ಮಗನ ಹೆಂಡತಿಯ ಅಕ್ಕನ ಗಂಡನ ಕಸಿನ್‌ನ ಮಗಳು ಒಂದು ಬಾರಿ ಯಾವುದೋ ಟಿವಿಯ ಅಡುಗೆ ಕಾರ್ಯಕ್ರಮವೊಂದರಲ್ಲಿ ಬಂದಿದ್ದಳು. ನಮ್ಮ ದೂ.....ರದ ಸಂಬಂಧಿ, ಇವಳ್ಯಾವ ಸವಿರುಚಿ ಹೇಳಬಹುದೆಂದು ನಮಗೂ ಕಾತರ. ವೈಯ್ಯಾರದಿಂದ ನಾನೀಗ ಮಾಡುತ್ತಿರುವುದು ಗುಲ್‌ಪೀಟ್ 6103http://kannada.oneindia.com/img/2009/08/13-gulapati1.jpg30880recipeಅಕ್ಕರೆಯ ಅಕ್ಕತಂಗಿಯರಿಗೆ ಸಕ್ಕರೆ ಹೋಳಿಗೆ/recipe/sweet/2007/220807sakkare-holige.htmlಹೋಳಿಗೆಯಾದರೂ ಅನ್ನಿ, ಒಬ್ಬಟ್ಟಾದರೂ ಅನ್ನಿ, ಪೋಳಿಯಾದರೂ ಅನ್ನಿ. ಅಳಿಯ ಅಲ್ಲ ಮಗಳ ಗಂಡ. ಆಕಾರ, ಸವಿ ಒಂದೇ ಆದರೂ ಕರೆಯುವ ಹೆಸರು ನಾನಾ ಬಗೆ. ವಾಣಿ ನಾಯಿಕ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ದಿನದಂದು ಬೆಳಿಗ್ಗೆ ಎದ್ದು ಅಭ್ಯಂಜನ ಮಾಡಿ ಭಕ್ತಿಭಾವಗಳಿಂದ ಮಹಾಲಕ್ಷ್ಮಿ ಪೂಜೆ ಮುಗಿಯುತ್ತಿದ್ದ ಹಾಗೆ ಹೊಟ್ಟೆ ಚುರುಗುಟ್ಟಲು ಪ್ರಾರಂಭಿಸುತ್ತದೆ. ದೇವಿಯ ಪೂಜೆಯಾದ 6107http://kannada.oneindia.com/img/2009/07/27-sakkare-holige1.jpg30880recipeಚೀನಿಕಾಯಿ (ಕೆಂಪು ಕುಂಬಳ) ಆಂಬೊಡೆ/recipe/kurukalu/2007/300107cheenikai_ambode.htmlಚಳಿದಿನಗಳಲ್ಲೊಂದು ಬಾಯಲ್ಲಿ ನೀರೂರಿಸುವ ಸ್ವಾದಿಷ್ಟ ತಿನಿಸು* ಸುಳಿಮನೆ ಸರೋಜಮ್ಮ ಪೆಜತ್ತಾಯಬೇಕಾಗುವ ಸಾಮಗ್ರಿ:ಕೆಂಪು ಕುಂಬಳ ತುರಿ: 1 ಕಪ್‌ಸಣ್ಣದಾಗಿ ಹೆಚ್ಚಿದ ಈರುಳ್ಳಿ: 1/4 ಕಪ್‌ಮೈದಾ ಹಿಟ್ಟು : 1 ಟೇಬಲ್‌ ಸ್ಪೂನ್‌ಕಡಲೆ (ಬೇಸನ್‌) ಹಿಟ್ಟು : 1/2 ಕಪ್‌ಅಡುಗೆ ಸೋಂಡಾ : 1ಚಿಟಿಕೆಕೊತ್ತಂಬರಿ ಸೊಪ್ಪು, ಸ್ವಲ್ಪ ಪುದಿನಾ, ಹಸಿ ಮೆಣಸಿನ ಕಾಯಿ, ಉಪ್ಪು - ಇವು ರುಚಿಗೆ ಬೇಕಾಗುವಷ್ಟು 6244http://kannada.oneindia.com/img/2009/09/24-pumpkin1.jpg30880recipeಬಾಯಲಿ ಚಕ್ಕುಲಿಯೋ, ಚಕ್ಕುಲಿಯಲಿ ಬಾಯೋ?/recipe/kurukalu/2006/191006chakkuli.htmlಎಂಟು ಬಗೆಯ ಚಕ್ಕುಲಿ ಮಾಡುವ ವಿಧಾನಗಳು ಇಲ್ಲಿವೆ. ನಿಮಗೆ ಇಷ್ಟವಾದದ್ದನ್ನು ಮಾಡಿ, ನಮಗೆ ನಾಲಕ್ಕು ಚಕ್ಕುಲಿ ಕಳಿಸಿಕೊಡಿ!ಹೆಸರುಬೇಳೆ ಚಕ್ಕುಲಿಬೇಕಾಗುವ ಸಾಮಗ್ರಿ : ಬೇಯಿಸಿದ ಹೆಸರುಬೇಳೆ ಒಂದು ಕಪ್‌, ತೊಳೆದ ಅಕ್ಕಿಹಿಟ್ಟು ಒಂದು ಕಪ್‌, ಜೀರಿಗೆ, ಉಪ್ಪು, ಕರಿಯಲು ಎಣ್ಣೆ.ಮಾಡುವ ವಿಧಾನ : ಹೆಸರುಬೇಳೆಯನ್ನು ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ಬೇಳೆಯ ನೀರು ಬಸಿದು ನುಣ್ಣಗೆ ನಾದಿಕೊಳ್ಳಿ. ಉಪ್ಪು, 6247http://kannada.oneindia.com/img/2009/07/25-chakkuli2.jpg30880recipeಬಾಳೆ ದಿಂಡಿನ ಪಲ್ಯ ಮತ್ತು ಕೋಸಂಬರಿ/recipe/palya/2006/191106beledindu_kosambari.htmlಬಾಳೆ ಎಂದರೆ ರುಚಿಯಾದ ಹಣ್ಣು, ಬಾಳೆಕಾಯಿ ಬಜಿ, ಬಾಳೆಕಾಯಿ ಚಿಪ್ಸು, ಬಾಳೆ ನಾರು, ಇನ್ನೂ ಏನೇನೋ ಮಾತ್ರ ಅಲ್ಲ. ಇನ್ನೂ ಒಂದಿದೆ. ಪ್ರಸಾದ ನಾಯಿಕ, ಬೆಂಗಳೂರು ಒಮ್ಮೆ ಏನಾಯಿತೆಂದರೆ, ಮನೆಯಲ್ಲಿ ಸಮಾರಾಧನೆ, ನೆಂಟರೊಬ್ಬರು ಬಂದು ನೇರವಾಗಿ ಒಂದು ಖಾಲಿ ಇದ್ದ ಬಾಳೆ ಎಲೆಯ ಮುಂದೆ ಪಕ್ವಾನ್ನ ಸೇವನೆಗೆ ಕುಳಿತುಕೊಂಡರು. ಅಷ್ಟರಲ್ಲಿ ಬಾಳೆ ಎಲೆ ತೆಗೆಯಲು ಮಹಿಳೆಯರಿಬ್ಬರು ಶುರು 6257http://kannada.oneindia.com/img/2009/07/27-baledindu1.jpg111069shamಆಕಾಶದಾಗೆ ಯಾರೋ ಮಾಯಗಾರನೆ/column/sham/2007/050107about_us.htmlನೀವೀಗ ಓದಲು ಅಣಿಯಾಗುತ್ತಿರುವುದು ನಮ್ಮ ವೆಬ್‌ಸೈಟ್‌ ಬಗೆಗಿನ About Us. ಅರ್ಥಾತ್‌ ನಮ್ಮ ಬಗ್ಗೆ ಎರಡು ಮಾತು, ನಿಮ್ಮಲ್ಲೊಂದು ನಿವೇದನೆ, ಚಾರಣಿಗರಲ್ಲಿ ವಿನಮ್ರ ಅರಿಕೆ. ಇವೆಲ್ಲವು ನಾವು-ನೀವು ಜತೆಯಾಗಿ ನಡೆಯಲು ನೆರವಾಗುವ ಮಾಹಿತಿ ಸಲಕರಣೆಗಳು!ಪ್ರಿಯ ಬಂಧು,ಸಸ್ನೇಹ ನಮಸ್ಕಾರ.ಕಳೆದ ಹತ್ತು ವರ್ಷಗಳಿಂದ ಅಂತರ್‌ಜಾಲ ತಾಣದಲ್ಲಿ ಅನವರತ ಕಾರ್ಯಮಗ್ನವಾಗಿರುವ ನಮ್ಮ ಆನ್‌ಲೈನ್‌ ಪತ್ರಿಕಾ ಬಳಗದ (www.oneindia.com) ವತಿಯಿಂದ ನಿಮಗೆಲ್ಲ ಮತ್ತೊಮ್ಮೆ 11212http://kannada.oneindia.com/img/2009/11/03-sham7.jpg111069sham‘ದಟ್ಸ್‌ ಕನ್ನಡ’ದ ಕಷ್ಟ-ಸುಖ ಮತ್ತು ಉಪ್ಪಿಟ್ಟು ಮಹಾತ್ಮೆ!/column/sham/2007/080307policy_matters_uppittu2.htmlಉಪ್ಪಿಟ್ಟೇ ನಿನ್ನ ಮಹಿಮೆ ಅಪಾರ!ನಮ್ಮ ವೆಬ್‌ಸೈಟಿನಲ್ಲಿ ಇತ್ತೀಚೆಗೆ ಸಾಹಿತ್ಯಿಕವಾಗಿ ಗೇಲಿಮಾಡುತ್ತ ಮಾಡುತ್ತ, ಕನ್ನಡಿಗರ ಸದಭಿರುಚಿಗೆ ಪ್ರತೀಕವೇ ಆಗಿರುವ ಉಪ್ಪಿಟ್ಟನ್ನು ನಿಂದಿಸುವ ಲೇಖನವೊಂದು ಪ್ರಕಟವಾಗಿತ್ತು. ಲೇಖಕರ ಅಭಿಪ್ರಾಯ ಸ್ವಾತಂತ್ರ್ಯವನ್ನು ಗೌರವಿಸಿ ಆ ಲೇಖನವನ್ನು ಪ್ರಕಟಣೆಗೆ ಪಾಸ್‌ ಮಾಡಲಾಗಿತ್ತು. ದುರದೃಷ್ಟದ ಸಂಗತಿಯೆಂದರೆ ಏಳು ಖಂಡಗಳನ್ನು ಸುತ್ತಿದರು 175 ದೇಶಗಳಲ್ಲಿ ಅಲೆದರು ಕಾಣಸಿಗದ, ಉಪ್ಪಿಟೆಂಬ ತಿಂಡಿಯ ಬಗ್ಗೆ ಅಪಸ್ವರ ಎತ್ತುವ ಲೇಖನ 11214http://kannada.oneindia.com/img/2009/09/09-uppittu1.jpg111069shamಕರಾಳ ವರ್ಷವನ್ನು ಅರಗಿಸಿಕೊಂಡ ಸಂಭ್ರಮ/column/sham/2008/1231-pledge-to-make-atleast-one-person-happy.htmlYouth is when you're allowed to stay up late on New Year's Eve. Middle age is when you're forced to. - Bill Vaughnಇತಿಹಾಸದ ಪುಟಗಳಿಗೆ ಜಾರಿಹೋಗಲು ಸಜ್ಜಾಗಿರುವ ದುರುಳ 2008 ಅನೇಕ ಉಪಟಳಗಳನ್ನು ನೀಡಿ ಇದೀಗ ಇಲ್ಲಿಂದ ತೊಲಗುವುದಕ್ಕೆ ಹಾಸಿಗೆ ಟ್ರಂಕು ಕಟ್ಟಿಕೊಂಡು ರೆಡಿ ಆಗಿದ್ದಾನೆ. ಕಳೆದ 33800http://kannada.oneindia.com/img/2008/12/31-balloons1.jpg111069shamಜನವಿರೋಧಿ ಬಿಳಿಮನೆ ವೆಬ್ಸೈಟ್/column/sham/2009/0122-white-house-website-is-oneway-online.htmlನಾವು ನೇತು ಹಾಕಿರುವುದನ್ನು ನೀನು ಓದು, ನಿನ್ನ ಅಭಿಪ್ರಾಯ ನಮಗೆ ಬೇಡ ಎನ್ನುತ್ತಿದೆ ಶ್ವೇತಭವನದ ಹೊಸಮಾಧ್ಯಮ.* ಶಾಮಿಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಕಾರ್ಯತತ್ಪರರಾದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಕೈಗೊಂಡ ಹಲವು ನಿರ್ಣಯಗಳಲ್ಲಿ ಎರಡು ವಲಯಗಳು ಎದ್ದು ಕಾಣುತ್ತವೆ. 1) ಭಯೋತ್ಪಾದಕರನ್ನು ಬಗ್ಗು ಬಡಿಯಿರಿ ಇಲ್ಲವೇ ನಿಮ್ಮ ದೇಶಕ್ಕೆ ಸೇನೆಯೇತರ ಅಮೆರಿಕಾ ನೆರವನ್ನು ನಿಲ್ಲಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ 34226http://kannada.oneindia.com/img/2009/01/22-white-house1.jpg111069shamಸಿಡ್ನಿ ರೇಡಿಯೋದಲ್ಲಿ ಶಾಮ್ ಸಂದರ್ಶನ/column/sham/2009/0204-sydney-radio-thatskannada-editor-interview.htmlಸಿಡ್ನಿಯಲ್ಲಿರುವ ಎಸ್ ಬಿ ಎಸ್ ರೇಡಿಯೋ ಆಸ್ಟ್ರೇಲಿಯ ಪ್ರಜೆಗಳಿಗೆ ಒಂದು ಪ್ರಮುಖ ಮಾಧ್ಯಮ. ಇಂಗ್ಲಿಷ್ ಅಲ್ಲದೆ, 68 ವಿವಿಧ ಜಾಗತಿಕ ಭಾಷೆಗಳಲ್ಲಿ ಆಕಾಶವಾಣಿ ನುಡಿಸೇವೆ ಸಲ್ಲಿಸುವ ಹೆಗ್ಗಳಿಕೆ ಈ ಸಂಸ್ಥೆಯದ್ದು. ಆಸ್ಟ್ರೇಲಿಯ ಮತ್ತು ಏಷಿಯ ಪೆಸಿಫಿಕ್ ವಲಯದಲ್ಲಿ ನೆಲೆಸಿರುವ ಆಯಾ ಭಾಷಿಕ ಸಮುದಾಯದ ಶ್ರೋತೃಗಳನ್ನು ತಲಪುವುದು, ತನ್ಮೂಲಕ ಅವರವರ ಮಾತೃ ಭಾಷೆಗೆ ದನಿಯಾಗುವುದು ಆಕಾಶವಾಣಿಯ 34466http://kannada.oneindia.com/img/2009/02/04-sham6.jpg36616kendasampigeಮಜಾವಾಣಿ : ಸ್ವಲ್ಪ ಈರುಳ್ಳಿ, ಸ್ಪಲ್ಪ ಬೆಳ್ಳುಳ್ಳಿ!/column/sham/2008/1201-majavani-the-onion-and-the-garlic.htmlಸ್ವಲ್ಪ ಈರುಳ್ಳಿ, ಸ್ಪಲ್ಪ ಬೆಳ್ಳುಳ್ಳಿ! ಸುದ್ದಿ ಮತ್ತು ಮನರಂಜನೆಗಳ ಭರಪೂರ ವಾಹಿನಿ ದಟ್ಸ್ ಕನ್ನಡ ವೆಬ್ ಸೈಟಿನಲ್ಲಿ ಇಂದು ಮಧ್ಯಾನ್ಹ ಹೊಸ ಅಂಕಣ ಮಜಾವಾಣಿ ಆರಂಭವಾಯಿತು. ಕನ್ನಡ ಆನ್ ಲೈನ್ ಪತ್ರಿಕೆಯ ಸಂಪಾದಕರು ಮತ್ತು ಅವರ ಸಿಬ್ಬಂದಿ ವರ್ಗ ಎಚ್ಟಿಎಂಎಲ್ ಕತ್ತರಿಸುವುದರ ಮೂಲಕ ನೂತನ ಅಂಕಣವನ್ನು ಅಂತರಿಕ್ಷದಲ್ಲಿ ತೇಲಿಬಿಟ್ಟರು. ಉಡಾಯಿಸಿದ ಕೆಲವೇ ಕ್ಷಣಗಳಲ್ಲಿ ಮಜಾವಾಣಿ ನೌಕೆಯು 33113http://kannada.oneindia.com/img/2008/12/majavani1.jpg36616kendasampigeಕರ್ನಾಟಕ ಫಿಲಂ ಅಕಾಡೆಮಿ ಲಿಂಗೈಕ್ಯ!/column/sham/2008/1223-is-karnataka-film-academy-moved-to-trash.htmlಕರ್ನಾಟಕ ಫಿಲಂ ಅಕಾಡೆಮಿ ಬಫ್ ಪೇಪರ್ ಮೇಲೆ ಸ್ಥಾಪನೆಯಾಗಿ ಐದು ತಿಂಗಳಾದವು. ಸಿನಿಮಾ ಸಂಸ್ಕೃತಿ ಹಬ್ಬುವ ಈ ಸಂಸ್ಥೆ ಕಾರ್ಯಾರಂಭ ಮಾಡುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಇದು ಏನನ್ನು ಸೂಚಿಸುತ್ತದೆ?* ಎಸ್ಕೆ. ಶಾಮಸುಂದರಚಲನಚಿತ್ರ ಸಂಸ್ಕೃತಿಯನ್ನು ಪೋಷಿಸುವ ಉದ್ದೇಶದಿಂದ ಸುಮಾರು ಹತ್ತು ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ ಕರ್ನಾಟಕ ಫಿಲಂ ಅಕಾಡೆಮಿ ಎಂಬ ಸಂಸ್ಥೆ ಸ್ಥಾಪನೆ ಆಗಿತ್ತು, 33663http://kannada.oneindia.com/img/2008/12/23-film-camera1.gif36616kendasampigeಕರಾಳ ವರ್ಷವನ್ನು ಅರಗಿಸಿಕೊಂಡ ಸಂಭ್ರಮ/column/sham/2008/1231-pledge-to-make-atleast-one-person-happy.htmlYouth is when you're allowed to stay up late on New Year's Eve. Middle age is when you're forced to. - Bill Vaughnಇತಿಹಾಸದ ಪುಟಗಳಿಗೆ ಜಾರಿಹೋಗಲು ಸಜ್ಜಾಗಿರುವ ದುರುಳ 2008 ಅನೇಕ ಉಪಟಳಗಳನ್ನು ನೀಡಿ ಇದೀಗ ಇಲ್ಲಿಂದ ತೊಲಗುವುದಕ್ಕೆ ಹಾಸಿಗೆ ಟ್ರಂಕು ಕಟ್ಟಿಕೊಂಡು ರೆಡಿ ಆಗಿದ್ದಾನೆ. ಕಳೆದ 33800http://kannada.oneindia.com/img/2008/12/31-balloons1.jpg36616kendasampigeಕನ್ನಡಪ್ರಭದಿಂದ ಪ್ರತಿಭಾ ಪಲಾಯನ/column/sham/2009/0820-kannada-prabha-exodus-to-suvarna-tv-channel.htmlಕನ್ನಡದ ಹೆದ್ದಾರಿ ಸುದ್ದಿ ವಾಹಿನಿಗಳಲ್ಲಿ ಒಂದಾಗಿ ರೂಪುಗೊಳ್ಳಲು ತವಕಿಸುತ್ತಿರುವ ಸುವರ್ಣ ಚಾನಲ್ ನಲ್ಲಿ ಈಗ ಬದಲಾವಣೆಯ ಗಾಳಿ ಪ್ರಬಲವಾಗಿ ಬೀಸುತ್ತಿದೆ. ಹಳೆ ನೀರು ಕೊಚ್ಚಿಹೋಗಿ ಹೊಸ ನೀರು ನುಗ್ಗಲು ತಗ್ಗು ಪ್ರದೇಶ ಚಾನಲ್ಲಿನಲ್ಲಿ ಸೃಷ್ಟಿಯಾಗಿದೆ. ಪತ್ರಕರ್ತರ ತಲೆಗಳು ಉರುಳುತ್ತಿವೆ. ಜವಾಬ್ದಾರಿಯನ್ನು ಹೊರಲು ಅಣಿಯಾಗಿರುವ ಹೊಸ ತಲೆಗಳಿಗೋಸ್ಕರ ಚಾನಲ್ ಕಚೇರಿಯಲ್ಲಿರುವ ಆಯಕಟ್ಟಿನ ಕೋಣೆಗಳನ್ನು ನವೀಕರಿಸಲಾಗುತ್ತಿದೆ.ಪ್ರಮುಖವಾಗಿ ಚಾನಲ್ಲಿನ ಮುಖ್ಯಸ್ಥ ಗಡ್ಡಧಾರಿ 38751http://kannada.oneindia.com/img/2009/08/20-ranganath1.jpg36616kendasampigeಗೌರಿ ಗಣೇಶರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು/column/sham/2009/0821-happy-gowri-ganesha-festival-2009.htmlವಿರೋಧಿ ನಾಮ ಸಂವತ್ಸರದ ಗಣೇಶ ಚತುರ್ಥಿ, ಗೌರಿ ತೃತೀಯದ ಶುಭಾಶಯಗಳು. ಭಾದ್ರಪದ ಮಾಸ ಶುಕ್ಲಪಕ್ಷ ಆಗಸ್ಟ್ 22 ಶನಿವಾರ ಗೌರಿ ಹಬ್ಬ, ಸ್ವರ್ಣಗೌರೀ ವ್ರತ. 23ರ ಭಾನುವಾರ ಸಿದ್ದಿ ವಿನಾಯಕ, ಬುದ್ದಿ ವಿನಾಯಕ, ವಿಘ್ನನಾಶಕ ಗಣೇಶ ಚತುರ್ಥಿ. ಶನಿವಾರದಂದು ಸಾಮೋಪಕರ್ಮ ಇರುತ್ತದೆ. ಈ ಬಾರಿ ಹಬ್ಬಗಳು ವಾರಾಂತ್ಯದಲ್ಲಿ ಬಂದಿರುವುದರಿಂದ ಸರಕಾರಿ ರಜಾದಿನಗಳ ಲಾಭವನ್ನು ಹಿಂದೂ ಕುಂಟುಂಬಗಳು ಪಡೆಯಲಾರವು. 38763http://kannada.oneindia.com/img/2009/08/21-gowri-ganesha1.jpgnews"> ಕೊಬ್ಬರಿ ಬಳಸಿರಿ, ಪಿಎಚ್ ಡಿ ಪಡೆಯಿರಿ | Dry Coco | Nutritious | Time Saver | Value Addition | Recipe | Recipe Support systems - ಕೊಬ್ಬರಿ ಬಳಸಿರಿ, ಪಿಎಚ್ ಡಿ ಪಡೆಯಿರಿ - Kannada Oneindia

ಕೊಬ್ಬರಿ ಬಳಸಿರಿ, ಪಿಎಚ್ ಡಿ ಪಡೆಯಿರಿ

Dry coconut to embellish your recipe
ಇಂಗು ತೆಂಗು ಇದ್ದರೆ ಮಂಗಮ್ಮನೂ ಚೆನ್ನಾಗಿ ಅಡುಗೆ ಮಾಡುತ್ತಾಳೆ, ಎನ್ನುತ್ತದೆ ಗಾದೆ. ಗಾದೆಗಳು ಋಗ್, ಯಜುರ್, ಅಥರ್ವ, ಸಾಮವೇದಕ್ಕೆ ಸಮ. ಜಿಡ್ಡು ಮತ್ತು ರಾಸಾಯನಿಕ ವಸ್ತು ಬೆರೆತಿಲ್ಲದ ಸಿಹಿ ಪದಾರ್ಥ ತೆಂಗು. ಹಲವು ಗುಣಗಳ ಖಣಿಯೇ ಕಲ್ಪವೃಕ್ಷ. ನಮ್ಮ ದೈನಂದಿನ ಆಹಾರಕ್ಕೆ ಸ್ವಾದ, ಸಮೃದ್ಧಿ ಮತ್ತು ಆಪ್ಯಾಯಮಾನತೆಯನ್ನು ತಂದುಕೊಡುವ ಆದರೆ, ತಾರಾ ವರ್ಚಸ್ಸಿಲ್ಲದ ಆಹಾರ. ತೆಂಗಿನಕಾಯಿ ತುರಿ ಅಥವಾ ತೆಂಗಿನ ಹಾಲು ಅಥವಾ ಒಣಕೊಬ್ಬರಿ ಹಾಕದೆ ಮಾಡುವ ಅಡುಗೆಯೂ ಒಂದು ಅಡುಗೆಯೇ ಎಂದು ಯಾರಾದರೂ ಸವಾಲೆಸೆದರೆ ಎದುರು ಮಾತಾಡುವುದು ಕಷ್ಟ.

ಅನೇಕ ವೇಳೆ ಅಡುಗೆ ಮನೆಯಲ್ಲಿ ತೆಂಗಿನಕಾಯಿ ದಾಸ್ತಾನು ಇಲ್ಲದೇ ಹೋಗುವ ಸಾಧ್ಯತೆಗಳುಂಟು. ಅಡುಗೆ ಸಿದ್ದವಾಗಿ ಇನ್ನೇನು ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಸಿಂಪಡಿಸಬೇಕು ಎನ್ನುವ ಹೊತ್ತಿಗೆ ಬಗ್ಗಿ ಬುಟ್ಟಿಗೆ ಕೈಹಾಕಿದರೆ ತೆಂಗಿನಕಾಯಿ ಖಾಲಿಯಾಗಿರುವ ಪ್ರಮೇಯಗಳಿರುತ್ತವೆ. ಹುಡುಗರನ್ನು ಅಂಗಡಿಗೆ ಓಡಿಸಿದರೆ, ಪಾಪಮ್ಮನ ಅಂಗಡಿ ಬಾಗಿಲುಹಾಕಿದೆ ಅಮ್ಮ ಎಂಬ ಉತ್ತರ ಹಿಡಕೊಂಡು ಮಕ್ಕಳು ಬರಬಹುದು. ಇಷ್ಟರ ಮೇಲೆ ಪಕ್ಕದ ಮನೆಯ ಅನಸೂಯ ಬೀಗ ಹಾಕಿಕೊಂಡು ಮಾರ್ನಿಂಗ್ ಶೋಗೆ ನೋಡಕ್ಕೆ ಬೇರೇ ಹೋಗಿದ್ದಾಳೆ.

ಅನೇಕರಿಗೆ ಗೊತ್ತಿಲ್ಲದ ಅನೇಕ ವಿಷಯಗಳಿರುತ್ತವೆ. ಗೊತ್ತಿದ್ದರೂ ಮುಂದಾಲೋಚನೆಯಿಂದ ಒಪ್ಪವಾಗಿ ಸಂಸಾರ ನಡೆಸದ ಮಡದಿಯರು ಇದ್ದೇ ಇರುತ್ತಾರೆ. ತಂಗಳನ್ನಕ್ಕೆ ಬೆಳ್ಳುಳ್ಳಿ ಒಗ್ಗರಣೆ ಹಾಕಿಕೊಂಡು ತಿನ್ನುತ್ತಾ ಕಾಲ ನೂಕುತ್ತಿರುವ ಕನ್ನಡ ಹುಡುಗರಿಗೆ ಅಂಥ ಹೆಣ್ಣುಗಳ ಜಾತಕ ಕೂಡಿಬರದಿರಲಿ. ಇದೇ ವೇಳೆ, ನಮ್ಮ ತಾಯಿ ನನಗೆ ಹೇಳಿಕೊಟ್ಟ ಒಂದು ಗುಟ್ಟನ್ನು ನನ್ನ ಹೆಮ್ಮೆಯ ಜತೆಗಾರ ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನೀವೂ ನನ್ನಂತೆ ಮಾಡಿದರೆ, ನಿಮ್ಮ ಮನೆಯಲ್ಲಿ ಊಟ ಮಾಡುವವರ ಮೆಚ್ಚುಗೆ ಮತ್ತು ನಮ್ಮ ತಾಯಿಯ ಆಶೀರ್ವಾದ ನಿಮಗೆ ಮುಟ್ಟುತ್ತದೆ.

ವಿಷಯ ಸಿಂಪಲ್. ಇದೇನು ರೆಸಿಪಿ ಅಲ್ಲ. ಆದರೆ, ಅನೇಕ ಸಸ್ಯಾಹಾರಿ ರೆಸಿಪಿಗಳಿಗೆ ಹಾರ್ ಮೋನ್ ಇಂಜೆಕ್ಷನ್ ಕೊಡುವ ಆಹಾರ ಸಲಕರಣೆ. ತೆಂಗಿನಕಾಯಿ ಇಲ್ಲದೆ ಅಡುಗೆ ಮಾಡುವ ಸಂದರ್ಭ ಬಂದಾಗ ಚಡಪಡಿಸುವುದನ್ನು ತಪ್ಪಿಸಲು ಒಂದು ಚಿಕ್ಕ ಉಪಾಯ. ಮೊದಲು ನಾಲಕ್ಕು ಒಳ್ಳೆ ಒಣಕೊಬ್ಬರಿ ಗಿಟಕುಗಳನ್ನು ಆರಿಸಿ ತುರಿಯೋಮಣೆಯಲ್ಲಿ ತುರಿಯಬೇಕು. ಆನಂತರ ಅದನ್ನು ಸಾಧ್ಯವಾದರೆ ಸ್ವಲ್ಪಹೊತ್ತು ಬಿಸಿಲಿನಲ್ಲಿ ಇಟ್ಟು, ಸಾಧ್ಯವಾಗದಿದ್ದರೆ ಹಾಗೆನೇ ಮಿಕ್ಸಿಗೆ ಹಾಕಿ ಪುಡಿಮಾಡಿಕೊಳ್ಳಬೇಕು.

ತಿಪಟೂರು, ಚಿಕ್ಕನಾಯಕನಹಳ್ಳಿ, ಹುಳಿಯಾರು, ಕುಂದಾಪುರ, ಸಾಲಿಗ್ರಾಮದಿಂದ ಲಾರಿಯಲ್ಲಿ ಮನೆತನಕ ಬಂದ ಕೊಬ್ಬರಿಗೆ ಒಳ್ಳೆ ಸಂಸ್ಕಾರ ಆಗಬೇಕು. ಮಿಕ್ಸಿಯಲ್ಲಿ ಕೊಬ್ಬರಿ ನುಣ್ಣಗಾಗಬಾರದು, ಅವಲಕ್ಕಿ ಶೇಪಿಗೆ ಬಂದರೆ ಚೆನ್ನ. ಇದನ್ನು ದೊಡ್ಡ ಬಾಣಲೆಗೆ ಹಾಕಿ ನಿಧಾನವಾಗಿ, ಸೀಯದಂತೆ, ಹುರಿಯಬೇಕು. ಕ್ರಮೇಣ ತುರಿ ಕಂದುಬಣ್ಣಕ್ಕೆ ತಿರುಗಿದಾಗ ಸ್ಟೌವ್ ಆರಿಸಿ ಬಾಣಲೆ ಕೆಳಗಿಳಿಸಿ ಆರಲು ಬಿಡಬೇಕು. ಅಷ್ಟು ಹೊತ್ತಿಗೆ ಇಡೀ ಫ್ಲಾಟಿಗೆ ಕೊಬ್ಬರಿ ಪರಿಮಳ ಹರಡಿಕೊಳ್ಳುತ್ತಾ ಹೋದಹಾಗೆ, ಸ್ಟೇರ್ ಕೇಸ್ ಮತ್ತು ಲಿಫ್ಟ್ ನಲ್ಲಿ ಹೆಪ್ಪುಗಟ್ಟಿರುವ ಸೆಂಟ್ ವಾಸನೆ ಕಾಲಿಗೆ ಬುದ್ಧಿ ಹೇಳಿರುತ್ತದೆ.

ಸಂಸ್ಕರಿಸಿದ ಈ ಒಣಕೊಬ್ಬರಿ ಪುಡಿಯನ್ನು ಪ್ಲಾಸ್ಟಿಕ್ ಅಲ್ಲ, ಸ್ಟೀಲ್ ಡಬ್ಬಿಯಲ್ಲಿ ಹಾಕಿ ಭದ್ರವಾಗಿ ಮುಚ್ಚಿಡಬೇಕು. ಕನಿಷ್ಠ ಒಂದು ತಿಂಗಳ ಕಾಲ ಕೆಡವುದಿಲ್ಲ. ಯಾವುದೇ ಅಡುಗೆಗೆ, ಉದಾಹರಣೆಗೆ ಪುಳಿಯೋಗರೆ, ಬಿಸಿಬೇಳೆ ಭಾತ್, ಪೊಂಗಲ್, ವಾಂಗಿಭಾತ್, ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನ, ನಾನಾ ಬಗೆಯ ಪಲ್ಯಗಳು, ಹುಳಿ, ಗೊಜ್ಜು ಇತ್ಯಾದಿ ಪದಾರ್ಥಗಳಿಗೆ ಎರಡು ಅಥವಾ ಮೂರು ಚಮಚ ಬೆರೆಸಿದರೆ ಅಡುಗೆಗೆ ಹೊಸ ಛಾರ್ಮ್ ಆಗಮಿಸುತ್ತದೆ. ಮಾಡಿನೋಡಿ, ನಿಮ್ಮ ಪಾಕ ಪ್ರವೀಣತೆಗೆ ದಿಢೀರ್ ಪಿಎಚ್ ಡಿ ಸಿಕ್ಕುತ್ತದೆ.

ವಿಸೂ : ಕೊಬ್ಬರಿಯಲ್ಲಿ ಕೊಬ್ಬಿರುವುದಿಲ್ಲವೇ? ಆರೋಗ್ಯಕ್ಕೆ ಮಾರಕವಲ್ಲವೇ? ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಎಸೆದುಕೊಳ್ಳುವುದು ತರವಲ್ಲ. ಹಿತಮಿತವಾಗಿ ಬಳಸಿದರೆ ಯಾವುದೂ ಕೆಟ್ಟದಲ್ಲ. ತೆಂಗಿನಲ್ಲಿರುವ ಕೊಬ್ಬು ಹೃದಯಾಘಾತಕ್ಕೆ ಇಂಬುಕೊಡುತ್ತದೆ ಎಂಬ ಸಂದೇಹಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಭದ್ರವಾಗಿ ಮುಚ್ಚಿಡಿ. ಕೋಕೋನಟ್ ನಿಂದಲೇ ಹಾರ್ಟ್ ಅಟ್ಯಾಕ್ ಆಗುವಹಾಗಿದ್ದರೆ ಇಡೀ ಕೇರಳ ರಾಜ್ಯಕ್ಕೆ ಮ್ಯಾಸಿವ್ ಹಾರ್ಟ್ ಅಟ್ಯಾಕ್ ಆಗಿ ರಾಜ್ಯದಲ್ಲಿ ತೆಂಗಿನಗಿಡಗಳನ್ನು ಬಿಟ್ಟರೆ ಇವತ್ತು ಬೇರಾರೂ ಬದುಕಿರುತ್ತಿರಲಿಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+