ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಹೀರೋ ಯಾರು, ಯಾರವರು?

By * ಶಾಮ್
|
Google Oneindia Kannada News

Who is your real hero?
ಮಹಾತ್ಮಾ ಗಾಂಧೀಜಿ ನನ್ನ ನಿಜವಾದ ಹೀರೋ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದು ಇವತ್ತು ಸುದ್ದಿಯಾಗಿದೆ. ಗಾಂಧೀಜಿಯೇ ತಮ್ಮ ನಿಜವಾದ ಹೀರೋ ಯಾಕಾದರು ಎನ್ನುವುದನ್ನೂ ಒಬಾಮಾ ಉದಾಹರಣೆ ಸಮೇತ ತೆರೆದಿಟ್ಟಿದ್ದಾರೆ. ಸರಿಯೇ.

ಒಬ್ಬೊಬ್ಬರಿಗೆ ಒಬ್ಬೊಬ್ಬರು ಹೀರೋ ಆಗಿರುತ್ತಾರೆ. ಮಾದರಿ ಎನಿಸಿರುತ್ತಾರೆ. ಬದುಕಿಗೆ ಪ್ರೇರಕ ಶಕ್ತಿಯಾಗಿರುತ್ತಾರೆ. ಒಬ್ಬ ವ್ಯಕ್ತಿಗೆ ಮಾದರಿಯಾಗುವ ಆ ವ್ಯಕ್ತಿ ಮನುಕುಲವನ್ನು ಪ್ರತಿನಿಧಿಸುವವರಾಗಿರಬಹುದು. ಹೆಸರಾಂತ ಸಾಧಕರಾಗಿರಬಹುದು. ಪ್ರಸಿದ್ಧ ರಾಜಕಾರಣಿ, ಗುರು, ತತ್ತ್ವಜ್ಞಾನಿ, ವಿಜ್ಞಾನಿ ಅಥವಾ ತಂತ್ರಜ್ಞರೇ ಆಗಿರಬಹುದು. ಒಂದು ಸಿನಿಮಾದಲ್ಲಿ ಬರುವ ಸನ್ನಿವೇಶ ಅಥವಾ ನಟನ ಅಭಿನಯವೇ ಎಂದೂ ಅಳಿಸಲಾಗದ ಪ್ರಭಾವ ಬೀರಿರಬಹುದು.

ನಿಮ್ಮ ಜೀವನದಲ್ಲೂ ಅಂಥವರೊಬ್ಬರಿರುತ್ತಾರೆ. ಅವರಿಂದ ನೀವು ಪಡೆದ ಪ್ರೇರಣೆ ಸದಾ ನಿಮ್ಮೊಡನೆ ಸ್ಥಾಯಿ ಭಾವದಲ್ಲಿ ಇರುತ್ತದೆ. ತಂದೆ, ತಾಯಿ, ಅಜ್ಜ, ಅಜ್ಜಿ, ಹೆಂಡತಿ, ಗಂಡ, ಉಪಾಧ್ಯಾಯರು, ಅಥವಾ ನೆರೆಮನೆಯ ಜಗಲಿಯ ಮೇಲೆ ಕುಳಿತಿರುವ ನೆರೆತ ಕೂದಲಿನ ಒಂಟಿ ಜೀವಿ ಆಗಿರಲಿಕ್ಕೂ ಸಾಕು. ಗಾಂಧಿಯಾಗಿರಬಹುದು, ಗೋಡ್ಸೆ ಆಗಿರಬಹುದು. ನಿಮ್ಮ ವ್ಯಕ್ತಿತ್ವವನ್ನು ಕಡೆದು ನಿಲ್ಲಿಸಿದ ಶಿಲ್ಪಿಯಾಗಿರಬಹುದು. ಸತತವಾಗಿ ಓದುವ ಅಭ್ಯಾಸ ರೂಢಿಸಿಕೊಂಡವರಿಗೆ ಒಬ್ಬ ಲೇಖಕ ಅಥವಾ ಒಂದು ಪುಸ್ತಕ ನಿಮ್ಮ ಜೀವನ ಧರ್ಮವನ್ನೇ ರೂಪಿಸಿರಬಹುದು, ನಿರೂಪಿಸುತ್ತಿರಬಹುದು. ಅವರು ಯಾರು? ಯಾರವರು?

ನಿಮ್ಮ ಜೀವನದ ಹೀರೋ ಯಾರೆಂಬುದನ್ನು ನಮಗೂ ತಿಳಿಸಿ. ನಮ್ಮ ಓದುಗರೊಂದಿಗೆ ಹಂಚಿಕೊಳ್ಳಿ. ನಿಮ್ಮ ನೆನಪಿನ ಭಿತ್ತಿಯಲ್ಲಿ ಸದಾ ಗುಪ್ತಗಾಮಿನಿಯಾಗಿ ಕುಳಿತು, ಪ್ರೇರಣೆಯ ಚಿಲುಮೆಯಾಗಿರುವ ಆ ವ್ಯಕ್ತಿ-ಶಕ್ತಿಯ ಹೆಸರು ಹೇಳಿ. ಹೆಸರಿನ ಜತೆಗೆ, ಅವರು ನಿಮಗೆ ಆದರ್ಶಪ್ರಾಯರಾದುದು ಹೇಗೆ? ಏಕೆ? ಎಂಬುದನ್ನು ಎರಡು, ಮೂರು ವಾಕ್ಯಗಳಲ್ಲಿ ಕಾಮೆಂಟ್ ವಿಭಾಗದಲ್ಲಿ ದಾಖಲಿಸಲು ಮರೆಯಬೇಡಿ. ವಿಸ್ತಾರವಾಗಿ ಚಿತ್ರಸಮೇತ ಬರೆಯಲಿಚ್ಛಿಸುವವರು ಬರಹ ಅಥವಾ ಯುನಿಕೋಡ್ ನಲ್ಲಿ ಬರೆದು [email protected] ವಿಳಾಸಕ್ಕೆ ಕಳಿಸಿರಿ. ವಂದನೆಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X