502876sydneyಮೆಲ್ಬೋರ್ನ್ : ಭಾರತೀಯರ ಮೇಲೆ ಪೆಟ್ರೋಲ್ ಬಾಂಬ್ /news/2009/05/29/australia-petrol-bomb-thrown-at-indian-student.htmlಮೆಲ್ಬೋರ್ನ್, ಮೇ. 29 : ಆಸ್ಟ್ರೇಲಿಯಾದಲ್ಲಿರುವ ಭಾರತೀಯರ ಮೇಲೆ ನಿತ್ಯ ಜನಾಂಗೀಯ ನಿಂದನೆ, ಹಲ್ಲೆಗಳು ನಿರಂತರವಾಗಿ ನಡೆಯತೊಡಗಿವೆ. ಇದೇ ತಿಂಗಳು ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ. ಆಸೀಸ್ ನಾಡಿನಲ್ಲಿರುವ ಭಾರತೀಯರ ಭದ್ರತೆಗೆ ಬಗ್ಗೆ ತೀವ್ರ ಆತಂಕವಾಗಿರುವ ಬೆನ್ನಲ್ಲೇ ಮಂಗಳವಾರ ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಮನೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಹತ್ಯೆ ಮಾಡುವ ವಿಫಲ ಯತ್ನ ನಡೆದಿದೆ.ರಾಜೇಶ್ 36975http://kannada.oneindia.com/img/2009/05/29-australia-map-flag1.jpg502876sydneyಆಸ್ಟ್ರೇಲಿಯಾ : ಮುಂದುವರೆದ ಜನಾಂಗೀಯ ದಾಳಿ/news/2009/06/12/australia-racial-attack-22yr-indian-student-beaten.htmlಬೆಂಗಳೂರು, ಜೂ. 12 : ಭಾರತೀಯರ ಮೇಲೆ ಜನಾಂಗೀಯ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಟ್ರೇಲಿಯಾದ ಪ್ರಧಾನಿ ಕೆವಿನ್ ರುಡ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಗುರುವಾರ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಮೇಲೆ ದಾಳಿ ನಡೆದಿದೆ. ಇದರೊಂದಿಗೆ ಒಟ್ಟು 12 ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ ನಡೆದಂತಾಗಿದೆ.22 ವರ್ಷದ ಭಾರತೀಯ ವಿದ್ಯಾರ್ಥಿ ಅಡಿಲೇಡ್ 37300http://kannada.oneindia.com/img/2009/06/12-australia-indians-protest.jpg502876sydneyಸಿಡ್ನಿ ಕನ್ನಡಿಗ ಜನಾನುರಾಗಿ ಶಂಕರ್ ಸಂಗಮೇಶ್ವರ ಇನ್ನಿಲ್ಲ/nri/article/2009/0720-sydney-kannadiga-shankar-sangameshwar-no-more.htmlಸಿಡ್ನಿಯ ಭಾರತೀಯರ ಪೈಕಿ, ಅದರಲ್ಲೂ ಕನ್ನಡಿಗರಿಗೆ ಅತ್ಯಂತ ಜನಪ್ರಿಯರಾಗಿದ್ದ ಮತ್ತು ಜನಾನುರಾಗಿಯಾಗಿದ್ದ ಡಾ|| ಶಂಕರ್ ಸಂಗಮೇಶ್ವರ ಅವರು ಇದೇ ಜುಲೈ 15ರಂದು ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ 71 ವರ್ಷವಯಸ್ಸಾಗಿತ್ತು.ಮೂಲತಃ ಭೂಗರ್ಭಶಾಸ್ತ್ರ ಪರಿಣಿತರಾದ ಶಂಕರ್ ಇಲ್ಲಿನ University of technologyಯಲ್ಲಿ ಅಧ್ಯಾಪಕರಾಗಿದ್ದು 1993ರಲ್ಲಿ ನಿವೃತ್ತರಾಗಿದ್ದರು. ಕಲೆ, ಸಂಗೀತ ಕ್ರೀಡೆ ಮುಂತಾಗಿ ನಾನಾ ಕ್ಷೇತ್ರಗಳಲ್ಲಿ ಆಸಕ್ತಿಹೊಂದಿದ್ದ ಇವರು 38084http://kannada.oneindia.com/img/2009/07/20-shankar-sangameshwar1.jpg502876sydneyಸಿಡ್ನಿ ಕನ್ನಡಿಗರ ಗುಡ್ ವೀಕ್ ಎಂಡ್ಸ್/column/sham/2009/0901-sydney-kannadiga-good-weak-ends.htmlಸಿ.ಅಶ್ವಥ್ ಅವರ ರಸಸಂಜೆ ಚೆನ್ನಾಗಿತ್ತು. ಅದಕ್ಕಿಂತ ಚೆನ್ನಾಗಿರುವ ಇನ್ನೊಂದು ಕಾರ್ಯಕ್ರಮ ಇದೇ 5ನೇ ತಾರಿಖು ಇದೆ. ಬರ್ತೀರಾ?* ಶಾಮ್ವೀಕೆಂಡ್ ಬಂತೂಂದ್ರೆ ಸಾಕು ನಮ್ಮ ಸಿಡ್ನಿ ಸ್ನೇಹಿತರಿಗೆ ಎಂದಿಲ್ಲದ ಸಡಗರ. ಏನಾದ್ರೊಂದು ಆಚೆಕಡೆ ಕೆಲಸ ಹಚ್ಚಿಕೊಳ್‍ದಿದ್ರೆ ಸೋಮವಾರ ಸೂರ್ಯನೇ ಹುಟ್ಟಲ್ಲ! ಅದು ಸ್ವಂತ ಕೆಲಸ ಆಗಿರಬಹುದು, ಮನರಂಜನೆ ಇರಬಹುದು ಅಥವಾ ಸಮಾಜಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಇರಬಹುದು. ಅಷ್ಟೇ 38947http://kannada.oneindia.com/img/2009/09/01-iaafa-australia1.jpg234191australiaಸಿಡ್ನಿ ರೇಡಿಯೋದಲ್ಲಿ ಶಾಮ್ ಸಂದರ್ಶನ/column/sham/2009/0204-sydney-radio-thatskannada-editor-interview.htmlಸಿಡ್ನಿಯಲ್ಲಿರುವ ಎಸ್ ಬಿ ಎಸ್ ರೇಡಿಯೋ ಆಸ್ಟ್ರೇಲಿಯ ಪ್ರಜೆಗಳಿಗೆ ಒಂದು ಪ್ರಮುಖ ಮಾಧ್ಯಮ. ಇಂಗ್ಲಿಷ್ ಅಲ್ಲದೆ, 68 ವಿವಿಧ ಜಾಗತಿಕ ಭಾಷೆಗಳಲ್ಲಿ ಆಕಾಶವಾಣಿ ನುಡಿಸೇವೆ ಸಲ್ಲಿಸುವ ಹೆಗ್ಗಳಿಕೆ ಈ ಸಂಸ್ಥೆಯದ್ದು. ಆಸ್ಟ್ರೇಲಿಯ ಮತ್ತು ಏಷಿಯ ಪೆಸಿಫಿಕ್ ವಲಯದಲ್ಲಿ ನೆಲೆಸಿರುವ ಆಯಾ ಭಾಷಿಕ ಸಮುದಾಯದ ಶ್ರೋತೃಗಳನ್ನು ತಲಪುವುದು, ತನ್ಮೂಲಕ ಅವರವರ ಮಾತೃ ಭಾಷೆಗೆ ದನಿಯಾಗುವುದು ಆಕಾಶವಾಣಿಯ 34466http://kannada.oneindia.com/img/2009/02/04-sham6.jpg234191australiaಮಹಿಳಾ ಕ್ರಿಕೆಟ್: ಪಾಕ್ ವಿರುದ್ಧ ಭಾರತಕ್ಕೆ ಜಯ /news/2009/03/07/india-beat-pakistan-in-wwc-opener.htmlಬ್ರಾಡ್ಮನ್ ಓವಲ್ (ಆಸ್ಟ್ರೇಲಿಯಾ), ಮಾ.7: ಶನಿವಾರ ನಡೆದ ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಪಾಕಿಸ್ತಾನ ತಂಡವನ್ನು ಭರ್ಜರಿ 10 ವಿಕೆಟ್ ಗಳಿಂದ ಸೋಲಿಸಿ ವಿಶ್ವಕಪ್ ನಲ್ಲಿ ಶುಭಾರಂಭ ಮಾಡಿದರು.ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದ ಭಾರತ, ತನ್ನ ಬೌಲರ್ ಗಳ ಪ್ರಚಂಡ ಪ್ರದರ್ಶನ ದಿಂದ ಪಾಕಿಸ್ತಾನವನ್ನು ಕೇವಲ 35059http://kannada.oneindia.com/img/2009/03/07-india-pak-cricket2.jpg234191australiaಸಿಡ್ನಿ ಕನ್ನಡಿಗರಿಗೆ ಸಂಗೀತದೌತಣ ಬಡಿಸಿದ ಅಶ್ವಥ್/nri/article/2009/0324-music-concert-by-c-ashwath-in-sydney.html* ಸಿಡ್ನಿ ಶ್ರೀನಿವಾಸ್, ಆಸ್ಟ್ರೇಲಿಯಾ ಕನ್ನಡ ಕವಿತೆಗಳಲ್ಲಿ, ಹಾಡುಗಳಲ್ಲಿ ಹರಿದಿರುವ ಭಾವಧಾರೆ ಸೋಜಿಗ ತರುವಂತದ್ದು. ಈ ಧಾರೆಯನ್ನು ಸಂಗೀತವಾಗಿ ಎರಕಹೊಯ್ಯುವುದು ಕನ್ನಡಕ್ಕೆ ಅನನ್ಯವಾದ ಪದ್ಧತಿ. ಇದಕ್ಕೆಂದೇ ಟೊಂಕ ಕಟ್ಟಿ ನಿಂತಿದ್ದಾರೆ ಸಿ ಅಶ್ವಥ್. ಇದೇ ಮಾರ್ಚ್ ಹದಿನಾಲ್ಕರಂದು ಸಿಡ್ನಿಯಲ್ಲಿ ಜರುಗಿದ ಅವರ ಕಾರ್ಯಕ್ರಮದಲ್ಲಿ ಕುಳಿತವರಿಗೆ ಕುಳಿತಲ್ಲೆ ಹತ್ತಾರು ಭಾವನೆಗಳು ಕೈಬೀಸಿ, ಮೈಮುಟ್ಟಿ, ಅಲುಗಿಸಿದ ಅನುಭವ. ಅವರ ಜತೆ 35475http://kannada.oneindia.com/img/2009/03/24-ashwath-nathan1.jpg234191australiaಸಿಡ್ನಿಯಲ್ಲಿ ಸಂಗೀತ ನಿರ್ದೇಶಕ ಸಿ. ಅಶ್ವಥ್/nri/article/2009/0324-c-ashwath-interview-by-sydney-srinivas.html* ಸಿಡ್ನಿ ಶ್ರೀನಿವಾಸ್, ಆಸ್ಟ್ರೇಲಿಯಾ ವಾರವಿಡೀ ಸಿಡ್ನಿ, ಮೆಲ್ಬೋರ್ನ್‌ಗಳಲ್ಲಿ ಸಂಗೀತ ಮತ್ತಿತರ ಕಾರ್ಯಕ್ರಮಗಳು ಇದ್ದದ್ದರಿಂದ ಖ್ಯಾತ ಸಂಗೀತ ನಿರ್ದೇಶಕ, ಹಾಡುಗಾರ ಸಿ. ಅಶ್ವಥ್ ಅವರ ಜೊತೆ ಕುಳಿತು ನಾಲ್ಕು ಮಾತುಗಳನ್ನಾಡುವ ಅವಕಾಶ ಸಿಕ್ಕಿರಲೇ ಇಲ್ಲ. ಕೊನೆಗೂ ಸದವಕಾಶ ಸಿಕ್ಕಿದ್ದು ಅವರೊಡನೆ ಸಿಡ್ನಿಯ ಪ್ರೇಕ್ಷಣೀಯ ಬೋಂಡಾಯ್ ಬೀಚ್ ಮತ್ತು ವಾಟ್ಸನ್ಸ್ ಬೇ ನೋಡಲು ಡ್ರೈವ್ ಹೋದಾಗ. ಪ್ರಾಯಶಃ ವಿಪರೀತ 35477http://kannada.oneindia.com/img/2009/03/24-ashwath-in-sydney1.jpg234191australiaತನುಗೂಚಿ-ಯೂಕೋ/nri/short-story/2009/0508-japanees-love-story-by-sydney-srinivas.htmlಶನಿವಾರ ಸಂಜೆ. ತನುಗೂಚಿ ಹಲ್ಲು ಕಡಿಯುತ್ತಲೇ ಕಂಪ್ಯೂಟರ್ ಸ್ಕ್ರೀನಿನತ್ತ ಒಮ್ಮೆ, ಸೆನ್ಸೆಯತ್ತ ಒಮ್ಮೆ ನೋಡುತ್ತಿದ್ದ. ಆಗಲೇ ಐದೂವರೆ ಹತ್ತಿರ, ಇನ್ನೂ ಸೆನ್ಸೆ (ಗುರು ಫ್ಯೂಜಿಸಾವ) ಅಲ್ಲೇ ಕೂತಿದ್ದಾರೆ, ಮನೆಗೆ ಹೋಗಿಲ್ಲ. ಆರು ಗಂಟೆಗೆ ಗೆಳತಿ ಯೂಕೋ ಜೊತೆ ಸಿನೀಮಾಕ್ಕೆ ಹೋಗುವ ಕಾರ್ಯಕ್ರಮ. ಶನಿವಾರ ಸೆನ್ಸೆ ಲ್ಯಾಬಿಗೆ ಬರುವುದು ಅಪರೂಪ. ಸೋಮವಾರ ಯಾವುದೋ ಕಾನ್ಫೆರೆನ್ಸಿಗೆ ಪೇಪರ್ ಕಳುಹಿಸಬೇಕು. ಅದಕ್ಕಾಗಿ 36499http://kannada.oneindia.com/img/2009/05/08-sydney-srinivas1.jpg111069shamಆಕಾಶದಾಗೆ ಯಾರೋ ಮಾಯಗಾರನೆ/column/sham/2007/050107about_us.htmlನೀವೀಗ ಓದಲು ಅಣಿಯಾಗುತ್ತಿರುವುದು ನಮ್ಮ ವೆಬ್‌ಸೈಟ್‌ ಬಗೆಗಿನ About Us. ಅರ್ಥಾತ್‌ ನಮ್ಮ ಬಗ್ಗೆ ಎರಡು ಮಾತು, ನಿಮ್ಮಲ್ಲೊಂದು ನಿವೇದನೆ, ಚಾರಣಿಗರಲ್ಲಿ ವಿನಮ್ರ ಅರಿಕೆ. ಇವೆಲ್ಲವು ನಾವು-ನೀವು ಜತೆಯಾಗಿ ನಡೆಯಲು ನೆರವಾಗುವ ಮಾಹಿತಿ ಸಲಕರಣೆಗಳು!ಪ್ರಿಯ ಬಂಧು,ಸಸ್ನೇಹ ನಮಸ್ಕಾರ.ಕಳೆದ ಹತ್ತು ವರ್ಷಗಳಿಂದ ಅಂತರ್‌ಜಾಲ ತಾಣದಲ್ಲಿ ಅನವರತ ಕಾರ್ಯಮಗ್ನವಾಗಿರುವ ನಮ್ಮ ಆನ್‌ಲೈನ್‌ ಪತ್ರಿಕಾ ಬಳಗದ (www.oneindia.com) ವತಿಯಿಂದ ನಿಮಗೆಲ್ಲ ಮತ್ತೊಮ್ಮೆ 11212http://kannada.oneindia.com/img/2009/11/03-sham7.jpg111069sham‘ದಟ್ಸ್‌ ಕನ್ನಡ’ದ ಕಷ್ಟ-ಸುಖ ಮತ್ತು ಉಪ್ಪಿಟ್ಟು ಮಹಾತ್ಮೆ!/column/sham/2007/080307policy_matters_uppittu2.htmlಉಪ್ಪಿಟ್ಟೇ ನಿನ್ನ ಮಹಿಮೆ ಅಪಾರ!ನಮ್ಮ ವೆಬ್‌ಸೈಟಿನಲ್ಲಿ ಇತ್ತೀಚೆಗೆ ಸಾಹಿತ್ಯಿಕವಾಗಿ ಗೇಲಿಮಾಡುತ್ತ ಮಾಡುತ್ತ, ಕನ್ನಡಿಗರ ಸದಭಿರುಚಿಗೆ ಪ್ರತೀಕವೇ ಆಗಿರುವ ಉಪ್ಪಿಟ್ಟನ್ನು ನಿಂದಿಸುವ ಲೇಖನವೊಂದು ಪ್ರಕಟವಾಗಿತ್ತು. ಲೇಖಕರ ಅಭಿಪ್ರಾಯ ಸ್ವಾತಂತ್ರ್ಯವನ್ನು ಗೌರವಿಸಿ ಆ ಲೇಖನವನ್ನು ಪ್ರಕಟಣೆಗೆ ಪಾಸ್‌ ಮಾಡಲಾಗಿತ್ತು. ದುರದೃಷ್ಟದ ಸಂಗತಿಯೆಂದರೆ ಏಳು ಖಂಡಗಳನ್ನು ಸುತ್ತಿದರು 175 ದೇಶಗಳಲ್ಲಿ ಅಲೆದರು ಕಾಣಸಿಗದ, ಉಪ್ಪಿಟೆಂಬ ತಿಂಡಿಯ ಬಗ್ಗೆ ಅಪಸ್ವರ ಎತ್ತುವ ಲೇಖನ 11214http://kannada.oneindia.com/img/2009/09/09-uppittu1.jpg111069shamಕರಾಳ ವರ್ಷವನ್ನು ಅರಗಿಸಿಕೊಂಡ ಸಂಭ್ರಮ/column/sham/2008/1231-pledge-to-make-atleast-one-person-happy.htmlYouth is when you're allowed to stay up late on New Year's Eve. Middle age is when you're forced to. - Bill Vaughnಇತಿಹಾಸದ ಪುಟಗಳಿಗೆ ಜಾರಿಹೋಗಲು ಸಜ್ಜಾಗಿರುವ ದುರುಳ 2008 ಅನೇಕ ಉಪಟಳಗಳನ್ನು ನೀಡಿ ಇದೀಗ ಇಲ್ಲಿಂದ ತೊಲಗುವುದಕ್ಕೆ ಹಾಸಿಗೆ ಟ್ರಂಕು ಕಟ್ಟಿಕೊಂಡು ರೆಡಿ ಆಗಿದ್ದಾನೆ. ಕಳೆದ 33800http://kannada.oneindia.com/img/2008/12/31-balloons1.jpg111069shamಜನವಿರೋಧಿ ಬಿಳಿಮನೆ ವೆಬ್ಸೈಟ್/column/sham/2009/0122-white-house-website-is-oneway-online.htmlನಾವು ನೇತು ಹಾಕಿರುವುದನ್ನು ನೀನು ಓದು, ನಿನ್ನ ಅಭಿಪ್ರಾಯ ನಮಗೆ ಬೇಡ ಎನ್ನುತ್ತಿದೆ ಶ್ವೇತಭವನದ ಹೊಸಮಾಧ್ಯಮ.* ಶಾಮಿಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಕಾರ್ಯತತ್ಪರರಾದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಕೈಗೊಂಡ ಹಲವು ನಿರ್ಣಯಗಳಲ್ಲಿ ಎರಡು ವಲಯಗಳು ಎದ್ದು ಕಾಣುತ್ತವೆ. 1) ಭಯೋತ್ಪಾದಕರನ್ನು ಬಗ್ಗು ಬಡಿಯಿರಿ ಇಲ್ಲವೇ ನಿಮ್ಮ ದೇಶಕ್ಕೆ ಸೇನೆಯೇತರ ಅಮೆರಿಕಾ ನೆರವನ್ನು ನಿಲ್ಲಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ 34226http://kannada.oneindia.com/img/2009/01/22-white-house1.jpg111069shamಸಿಡ್ನಿ ರೇಡಿಯೋದಲ್ಲಿ ಶಾಮ್ ಸಂದರ್ಶನ/column/sham/2009/0204-sydney-radio-thatskannada-editor-interview.htmlಸಿಡ್ನಿಯಲ್ಲಿರುವ ಎಸ್ ಬಿ ಎಸ್ ರೇಡಿಯೋ ಆಸ್ಟ್ರೇಲಿಯ ಪ್ರಜೆಗಳಿಗೆ ಒಂದು ಪ್ರಮುಖ ಮಾಧ್ಯಮ. ಇಂಗ್ಲಿಷ್ ಅಲ್ಲದೆ, 68 ವಿವಿಧ ಜಾಗತಿಕ ಭಾಷೆಗಳಲ್ಲಿ ಆಕಾಶವಾಣಿ ನುಡಿಸೇವೆ ಸಲ್ಲಿಸುವ ಹೆಗ್ಗಳಿಕೆ ಈ ಸಂಸ್ಥೆಯದ್ದು. ಆಸ್ಟ್ರೇಲಿಯ ಮತ್ತು ಏಷಿಯ ಪೆಸಿಫಿಕ್ ವಲಯದಲ್ಲಿ ನೆಲೆಸಿರುವ ಆಯಾ ಭಾಷಿಕ ಸಮುದಾಯದ ಶ್ರೋತೃಗಳನ್ನು ತಲಪುವುದು, ತನ್ಮೂಲಕ ಅವರವರ ಮಾತೃ ಭಾಷೆಗೆ ದನಿಯಾಗುವುದು ಆಕಾಶವಾಣಿಯ 34466http://kannada.oneindia.com/img/2009/02/04-sham6.jpgnews"> ಸಿಡ್ನಿ ಕನ್ನಡಿಗರ ಗುಡ್ ವೀಕ್ ಎಂಡ್ಸ್ | IAAFA | Sydney Kannadiga | Student Unrest | Indian Culture | Children workshop - ಸಿಡ್ನಿ ಕನ್ನಡಿಗರ ಗುಡ್ ವೀಕ್ ಎಂಡ್ಸ್ - Kannada Oneindia

ಸಿಡ್ನಿ ಕನ್ನಡಿಗರ ಗುಡ್ ವೀಕ್ ಎಂಡ್ಸ್

Indian Australian Arts & Film Association
ಸಿ.ಅಶ್ವಥ್ ಅವರ ರಸಸಂಜೆ ಚೆನ್ನಾಗಿತ್ತು. ಅದಕ್ಕಿಂತ ಚೆನ್ನಾಗಿರುವ ಇನ್ನೊಂದು ಕಾರ್ಯಕ್ರಮ ಇದೇ 5ನೇ ತಾರಿಖು ಇದೆ. ಬರ್ತೀರಾ?

* ಶಾಮ್

ವೀಕೆಂಡ್ ಬಂತೂಂದ್ರೆ ಸಾಕು ನಮ್ಮ ಸಿಡ್ನಿ ಸ್ನೇಹಿತರಿಗೆ ಎಂದಿಲ್ಲದ ಸಡಗರ. ಏನಾದ್ರೊಂದು ಆಚೆಕಡೆ ಕೆಲಸ ಹಚ್ಚಿಕೊಳ್‍ದಿದ್ರೆ ಸೋಮವಾರ ಸೂರ್ಯನೇ ಹುಟ್ಟಲ್ಲ! ಅದು ಸ್ವಂತ ಕೆಲಸ ಆಗಿರಬಹುದು, ಮನರಂಜನೆ ಇರಬಹುದು ಅಥವಾ ಸಮಾಜಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಇರಬಹುದು. ಅಷ್ಟೇ ಹೆಚ್ಚೆಚ್ಚು ಉತ್ಸಾಹದಿಂದ ಭಾಗವಹಿಸುವ ಅವರ ಉಮ್ಮೇದು ಮೆಚ್ಚುಗೆಗೆ ಅರ್ಹ.

ವಾರದ ತುಂಬಾ ಹೊಟ್ಟೆಪಾಡಿನ ಕೆಲಸ, ಮಕ್ಕಳು ಮರಿಗಳ ಜವಾಬ್ದಾರಿ, ಮನೆ ಗುಡಿಸೋದ್ರಿಂದ ಹಿಡಿದು ಶಾಪಿಂಗ್ ಮಾಡೋದ್ರವರೆಗೆ ಎಲ್ಲಾ ಕೆಲಸಗಳನ್ನು ಇಷ್ಟ ಇರ್ಲಿ ಬಿಡಲಿ ಗೊಣಗಿಕೊಂಡೋ ಅಥವಾ ನಗುನಗುತ್ತಲೋ ಅವರವರೇ ಮಾಡಬೇಕಾದ ಅನಿವಾರ್ಯ. ಹೀಗಿರುವಾಗ ವೀಕೆಂಡ್ ಬಂತೂಂದ್ರೆ ಅಬ್ಬಾ ಸಾಕು ಸ್ವಲ್ಪಾನಾದ್ರೂ ಮೈಗೆ ಮನಸ್ಸಿಗೆ ಆರಾಮ ಕೊಡೋಣ "ಟು ರೆಸ್ಟ್ ಈಸ್ ಬೆಸ್ಟ್" ಅನ್ನಿಸಿದ್ರೂ ಸುಮ್ಮನೆ ಮುಸುಕುಹಾಕ್ಕೊಂಡ್ ಕೂಡೋ ಜಾಯಮಾನ ಅವರದ್ದಲ್ಲ. ದೇಹಕ್ಕೆ ಎಷ್ಟೇ ಸುಸ್ತಾಗಿದ್ರೂ ಮನಸ್ಸಿಗೆ ಸ್ನೇಹಿತರನ್ನು ಭೇಟಿ ಮಾಡುವ, ಕಷ್ಟಸುಖ ಹಂಚಿಕೊಳ್ಳುವ, ನಾಲ್ಕಾರು ಜನರ ಜೊತೆಗೂಡಿ ಏನಾದ್ರೂ ಹೊಸದನ್ನು ಮಾಡುವ, ಕ್ರಿಯೇಟಿವ್ ಎಂಟರ್ ಟೈನಿಂಗ್ ಜನ ನಮ್ಮವರು. ಎಷ್ಟೇ ಆಗಲಿ, ಕನ್ನಡಿಗರು ತಾನೆ.

ಇಂತಹುದೇ ಮನಸ್ಥಿತಿಯ, ಹತ್ತಾರು ಸಮಾನಮನಸ್ಕರ, ನಮ್ಮ ನಾಳೆಗಳನ್ನು ಇನ್ನೂ ಒಳ್ಳೆಯ ದಿನಗಳನ್ನಾಗಿ ಮಾಡುವ ಜವಾಬ್ದಾರಿ ನಮ್ಮದು ಎನ್ನುವ ಉದಾತ್ತ ಉದ್ದೇಶದ ಗೆಳೆಯರು ಕೂಡಿ ಕಟ್ಟಿದ ಸಂಸ್ಥೆ ಇಂಡಿಯನ್ ಆಸ್ಟ್ರೇಲಿಯನ್ ಆರ್ಟ್ಸ್ ಅಂಡ್ ಫಿಲಂ ಅಸೋಸಿಯೇಷನ್(IAAFA). ಎಲ್ಲರೂ ಗಮನಿಸಬೇಕಾದ, ವಿಶೇಷವಾಗಿ ಅನಿವಾಸಿ ಕನ್ನಡಿಗರು ಗಮನಿಸಬೇಕಾದ ಸಂಗತಿಯೆಂದರೆ ಇಲ್ಲಿ ನಾನು ಎನ್ನುವ ಪದವೇ ಇಲ್ಲ. ಪ್ರತಿಯೊಬ್ಬರೂ ನಾವು ಎನ್ನುವವರೇ. ಟೀಂವರ್ಕ್ ಎನ್ನುವುದು ಮಂತ್ರ, ಕೂಡಿಬಾಳೋಣ ಎನ್ನುವುದು ತಂತ್ರ. ಏನಾದರೊಂದು ಹೊಸದನ್ನು ಮಾಡುತ್ತಲೇ ಇರಬೇಕು, ನಮ್ಮಿಂದ ನಾಲ್ಕು ಜನಕ್ಕೆ ಒಳ್ಳೇದಾದ್ರೆ ಸಾಕು ಎನ್ನುವ ತುಡಿತವೇ ಅವರನ್ನು ಮುಂದಕ್ಕೆ ತಳ್ಳುತ್ತಿರುವ ಶಕ್ತಿ.

ಬಹುತೇಕ ಕನ್ನಡಿಗರೇ ಇರುವ, ಪರಂತು ಇತರ ಸಮಾನಮನಸ್ಕರಿಗೂ ಸದಾ ಬಾಗಿಲು ತೆರೆದಿರುವ IAAFA ಬಳಗದ ಕಾರ್ಯಕ್ರಮಗಳು ಹತ್ತುಹಲವು. ಕನ್ನಡ ಸಿನೆಮಾಗಳನ್ನು ಕಾಂಗರೂ ನೆಲದಲ್ಲಿ ಬಿಡುಗಡೆ ಮಾಡೋದ್ರಿಂದ ಹಿಡಿದು ಆಧ್ಯಾತ್ಮಿಕ ಪ್ರವಚನದವರೆಗೆ ಎಲ್ಲಾ ಪ್ರಾಪಂಚಿಕ ಪಾರಮಾರ್ಥಿಕ ಕೈಂಕರ್ಯಕ್ಕೂ ಸಿಡ್ನಿ ಕನ್ನಡ ಮಿತ್ರರು ಕೈ ಎತ್ತುತ್ತಾರೆ. ಇಂಥ ಕ್ರಿಯಾಶೀಲ ಮನಸ್ಸುಗಳ ಮುಕುಟಕ್ಕೊಂದು ಚಿನ್ನದ ಗರಿ ಇತ್ತೀಚೆಗಷ್ಟೇ ಸಿಡ್ನಿಯಲ್ಲಿ ಏರ್ಪಡಿಸಿದ್ದ ಗಾನಕೋಗಿಲೆ ಸಿ ಅಶ್ವತ್ಥ್ ಅವರ ಗಾನಸಂಜೆ. ಆಸ್ಟ್ರೇಲಿಯಾ ಕನ್ನಡಿಗರು ಹಿಂದು-ಇಂದು-ಮುಂದು ನೋಡಿರದ, ಎಂದಿಗೂ ನೆನಪಿನಲ್ಲಿಡುವ ಕಾರ್ಯಕ್ರಮ ಅದಾಗಿತ್ತು ಎನ್ನುತ್ತಾರೆ ನನ್ನ ಸಿಡ್ನಿ ಗೆಳೆಯರ ಬಳಗದವರು.

ಅಂತಹುದೇ ಮತ್ತೊಂದು ಕಾರ್ಯಕ್ರಮ ಇಂದು ಸಿಡ್ನಿ ಕನ್ನಡಿಗರ ಎದುರಿಗಿದೆ. ಈ ಸರತಿ ಅದು ಮಾಮೂಲು ಮನರಂಜನೆಗಿಂತ ಒಂದು ಕೈ ಮೇಲಾಗಿರುವ ಜವಾಬ್ದಾರಿ ಎಂದು ಜಂಭದಿಂದ ಹೇಳಿಕೊಳ್ಳಬಹುದು.

***
ಜನಾಂಗೀಯ ಅಸಹಿಷ್ಣುತೆ ಇಂದು ಖಂಡಿತಾ ಗ್ಲೋಬಲ್ ವಾರ್ಮಿಂಗ್ ನಷ್ಟೇ ವಿಶ್ವವ್ಯಾಪಕ. ಇಂದು ಅದು ಇಲ್ಲದ ಜಾಗವೇ ಇಲ್ಲ. ಇದು ನಿಜವಾಗಿ ಮನುಕುಲದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬ ಪ್ರಜೆಯೂ ಇವತ್ತು ತಲೆಕೆಡಿಸಿಕೊಳ್ಳಬೇಕಾಗಿರುವ ಸಂಗತಿ. ಅದರಲ್ಲೂ ಆಸ್ಟ್ರೇಲಿಯಾದಂತಹ ಬಹುಸಂಸ್ಕೃತಿಯ ದೇಶದಲ್ಲಿ ಇದು ಇನ್ನೂ ಪ್ರಸ್ತುತ. ಅಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸೆಗಳಂತೂ ಭಾರತೀಯರ ನಿದ್ದೆ ಕೆಡಿಸಿರುವುದಂತೂ ನಿಜ. ಹಾಗಂತ ಅಲ್ಲಿದೆ ನಮ್ಮನೆ ಇಲ್ಲಿಗೆ ಬಂದಿರುವೆವು ಸುಮ್ಮನೆ ಎಂದುಕೊಂಡು ನೀವು ಸುಮ್ಮನೆ ಕೂಡುವಂತಿಲ್ಲ. ಹಾಗಿದ್ರೆ ನಾವು ನಮ್ಮಗಳ ಉತ್ತಮ ಭವಿಷ್ಯಕ್ಕೆ ಈಗ ಮಾಡುತ್ತಿರುವ ಕೆಲಸ ಅಷ್ಟೇ ಸಾಕೇ?

ನಮ್ಮ ಜನಗಳ ಹಾಗೂ ದೇಶದ ಏಳಿಗೆಗೆ ಅನಿವಾಸಿ ಭಾರತೀಯರು ಹಾಗೂ ಆಸ್ಟ್ರೇಲಿಯನ್ನರು ಪರಸ್ಪರ ಒಬ್ಬರೊನ್ನಬ್ಬರು ಅರಿತು ಬೆರೆತು ಬಾಳುವುದು ನಮ್ಮ ಇಂದಿನ ಅತ್ಯಂತ ತುರ್ತು ಅಗತ್ಯ ಎಂದು ಆಳವಾಗಿ ನಂಬಿದ್ದೇನೆ. ನಾಳೆ ಅಲ್ಲಿನ ಗಗನದಲ್ಲಿ ಮಿಂಚಲಿರುವ ತಾರೆಗಳು ನಮ್ಮ ಇಂದಿನ ಮಕ್ಕಳೇ ಅಲ್ಲವೇ? ಈ ಹಿನ್ನೆಲೆಯಲ್ಲಿ IAAFA ವತಿಯಿಂದ ಇದೇ ಸೆಪ್ಟೆಂಬರ್ 5ರಿಂದ ಸಿಡ್ನಿಯ ವೆಂಟ್‍ವರ್ತ್ ಲೈಬ್ರರಿ ಹಾಲಿನಲ್ಲಿ ಒಂದು ಮಕ್ಕಳ ವರ್ಕ್‍‍ಶಾಪ್ ಏರ್ಪಡಿಸಲಾಗಿದೆ. ಭಾರತೀಯಮೂಲದ ಹಾಗೂ ಆಸ್ಟ್ರೇಲಿಯನ್ ಮಕ್ಕಳಿಗೆ ಭಾರತೀಯ ಹಾಗೂ ಆಸ್ಟ್ರೇಲಿಯನ್ ಚಿತ್ರಕಲೆ, ಸಂಗೀತ, ಯೋಗ ಇತ್ಯಾದಿಗಳ ಪರಿಚಯ ಈ ಕಾರ್ಯಕ್ರಮದ ಹಿಂದಿನ ಉದ್ದೇಶ.

ವಾರಾಂತ್ಯದಲ್ಲಿ ಈ ಬಗೆಯ ಒಂದೆರಡು ಗಂಟೆಗಳ ಒಡನಾಟ ಖಂಡಿತಾ ನಿಮ್ಮೆಲ್ಲರ ಮನಸ್ಸಿನಲ್ಲಿ ಮಧುರ ಬದಲಾವಣೆ ತರಬಲ್ಲುದು. ಅದಕ್ಕೆಂದೇ ಈ ವರದಿಗೆ Sydney kannadigara good weak ends! ಎಂಬ ಶೀರ್ಷಿಕೆ ಹಾಕಿದ್ದೇನೆ. ನಾಡಿನ ಬಗೆಗೆ ನಮ್ಮ ಮಕ್ಕಳ ನಾಳಿನ ಬಗೆಗೆ ಕಾಳಜಿ ಇರುವ ಪ್ರತಿಯೊಬ್ಬರೂ ಭಾಗವಹಿಸಬೇಕಾದಂತಹ ಕಾರ್ಯಕ್ರಮವಿದು ಎಂಬುದು ನನ್ನ ನಂಬಿಕೆ. ಎಲ್ಲಾ ಆಸಕ್ತರೂ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ದಟ್ಸ್ ಕನ್ನಡ ಸವಿನಯ ಮನವಿ ಮಾಡುತ್ತದೆ.

ಎಲ್ಲರಿಗೂ ಉಚಿತ ಪ್ರವೇಶವಿದೆ. ಆಸನಗಳು ಕಡಿಮೆ ಇವೆ, ಹೆಚ್ಚಿನ ವಿವರಗಳಿಗೆ ಮತ್ತು ಸಂಪರ್ಕ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ http://iaafa.org.au/

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+