• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿಕ್ರಿಯೆ : ನಕ್ಸಲ್ ಚಳವಳಿ ಮತ್ತು ಹಾವಳಿಮಲೆನಾಡ ಸ್ವಾಸ್ಥ್ಯ

By Super
|

ಆಂಧ್ರದ ಕ್ರೂರಿ ಜಮೀನ್ದಾರುಗಳ ವಿರುದ್ಧ ಗದ್ದರ್ ನಡೆಸಿಕೊಂಡು ಬಂದಿರುವ ಚಳವಳಿಯನ್ನು ಮುಂದುವರೆಸಿಕೊಂಡು ಬಂದಿರುವುದಾಗಿ ಹೇಳಿಕೊಳ್ಳುವ ಈ ನಕ್ಸಲೀಯರು ಮಾಡುತ್ತಿರುವುದು ಮಾತ್ರ ಗದ್ದರ್‌ಗೂ ನಾಚಿಕೆ ಬರುವಂಥ ಕೆಲಸ.

ನಕ್ಸಲರು, ಅವರು ತಂದಿಟ್ಟಿರುವ ಸಮಸ್ಯೆಗಳ ಕುರಿತು ದಟ್ಸ್‌ಕನ್ನಡದಲ್ಲಿ ನ‌ಡೆಯುತ್ತಿರುವ ಚರ್ಚೆ ವಿಚಾರಪೂರ್ಣವಾಗಿದೆ. ವಿಶಾಲವಾಗಿ ಬೆಳೆದು ಕೊಳೆಯುತ್ತಿರುವ ಮರದ ಟೊಂಗೆಯನ್ನು ಮೊದಲು ಕಡಿಯುವುದೋ ಬೇರುಸಹಿತ ಕಿತ್ತುಹಾಕುವುದೋ ತಿಳಿಯದ ವಿಚಾರವಾಗಿದೆ. ಟೊಂಗೆ ಕಡಿಯಬೇಕೆಂದರೆ ಮತ್ತೊಂದೆಡೆ ಚಿಗುರುತ್ತಿದೆ. ಬೇರುಸಹಿತ ಕಿತ್ತೊಗೆಯಬೇಕೆಂದರೆ ಬೇರು ಆಳವಾಗಿದೆ ಹೂತುಬಿಟ್ಟಿದೆ.

ಆಗುಂಬೆಯ ತಲ್ಲೂರಂಗಡಿ ಬಳಿ ಬೆಳ್ಳಿ, ಚಿನ್ನ, ಲಕ್ಷ ನಗದನ್ನು ಲೂಟಿ ಮಾಡಿದ ನಕ್ಸಲರ ಕುರಿತು ಬಂದ ವರದಿ ಆಘಾತವನ್ನುಂಟು ಮಾಡಿತು.

ಸ್ವಾತಂತ್ಯ್ಯಪೂರ್ವ ಕಾಲದಲ್ಲಿ ಚಂದ್ರಶೇಖರ್ ಆಝಾದ್ ಪಡೆ ದೇಶದ್ರೋಹ ಬಗೆಯುವ ಶ್ರೀಮಂತರ ಮನೆಯನ್ನು ಲೂಟಿ ಮಾಡಿದ ಹಣವನ್ನು ಬ್ರಿಟಿಷರನ್ನು ಓಡಿಸಲು ಬಳಸುತ್ತಿದ್ದರು. ಈಗ ಅಂಥದೇ ಲೂಟಿಗೆ ಕರ್ನಾಟಕದಲ್ಲಿ ನಕ್ಸಲೀಯರು ಇಳಿದಿದ್ದಾರೆ. ವ್ಯತ್ಯಾಸ ಇಷ್ಟೇ ಲೂಟಿಗೆ ಒಳಗಾದವರು ದೇಶದ್ರೋಹಿಗಳೂ ಅಲ್ಲ, ಲೂಟಿ ಮಾಡಿದವರು ದೇಶಪ್ರೇಮಿಗಳೂ ಅಲ್ಲ.

ಆಂಧ್ರದ ಕ್ರೂರಿ ಜಮೀನ್ದಾರುಗಳ ವಿರುದ್ಧ ಗದ್ದರ್ ನಡೆಸಿಕೊಂಡು ಬಂದಿರುವ ಚಳವಳಿಯನ್ನು ಮುಂದುವರೆಸಿಕೊಂಡು ಬಂದಿರುವುದಾಗಿ ಹೇಳಿಕೊಳ್ಳುವ ಈ ನಕ್ಸಲೀಯರು ಮಾಡುತ್ತಿರುವುದು ಮಾತ್ರ ಗದ್ದರ್‌ಗೂ ನಾಚಿಕೆ ಬರುವಂಥ ಕೆಲಸ. ಗದ್ದರ್ ಚಳವಳಿಗೆ ಒಂದು ಖದರಿತ್ತು. ಆಹಾ... ಓಹೋ.. ಅಂತ ಕೂಗು ಹಾಕಿದರೆ ಸಾಕು ಸಹಸ್ರಾರು ಜನ ಧ್ವನಿ ಕೂಡಿಸುತ್ತಿದ್ದರು. ಗದ್ದರ್ ಚಳವಳಿಗೂ ಸರ್ಕಾರದಿಂದ ಮಾನ್ಯತೆ ಬಂದಿದೆ. ಆದರೆ ಕರ್ನಾಟಕದಲ್ಲಿ ಪಿಡುಗಾಗಿ ಪರಿಣಮಿಸಿದೆ.

ಮಲೆನಾಡಲ್ಲಿ ಯುವಕರಿಗೆ ನಿರುದ್ಯೋಗ ಕಾಡುತ್ತಿರುವುದರಿಂದಲೇ ಯುವಕರು ನಕ್ಸಲೀಯರಾಗುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುವ ಪತ್ರಿಕೆಗಳ ವರದಿಯಲ್ಲಿ ಅಷ್ಟೇನು ಸತ್ಯವಿರಲಾರದು. ನೌಕರಿಯೆಂದರೆ ಕಚೇರಿಯಲ್ಲಿ ಕುಳಿತು ಮಾಡುವ ಕೆಲಸವೇ ಆಗಬೇಕೆ? ನಿಜಕ್ಕೂ ಹೇಳಬೇಕೆಂದರೆ ಅಲ್ಲಿನ ನೌಕರರು ಸೋಮಾರಿಗಳಾಗುತ್ತಿದ್ದಾರೆ. ಕೆಲಸ ಏನು ಮಾಡಬೇಕೆಂದು ಗೊತ್ತಿಲ್ಲ. ಗೊತ್ತಿದ್ದರೂ ಸಾಕಷ್ಟು ಸಂಬಳ ತರುತ್ತಿಲ್ಲವೆಂಬ ಕೊರಗು.

ನಕ್ಸಲೀಯರ ಪಡೆ ಸೇರುವುದು, ಚಳವಳಿಗಿಳಿಯುವುದು ಬರೀ ನೆವ ಅಷ್ಟೇ. ನಕ್ಸಲರಾದರೆ ತುತ್ತಿಗೇನೂ ಕೊರತೆಯಿರುವುದಿಲ್ಲ. ಲೂಟಿ ಮಾಡುತ್ತಿರುವುದರಿಂದ ಹಣಕ್ಕೂ ಕೊರತೆಯಿಲ್ಲ. ಇತ್ತೀಚೆಗಂತೂ ಅಮಾಯಕ ಜನರನ್ನು ಬೆದರಿಸಿ ಅವರ ಮನೆಯಲ್ಲೇ ಊಟ ಮಾಡಿ, ಪೊಲೀಸರಿಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಸಿದ ವರದಿಗಳೂ ಸಾಕಷ್ಟು ಬಂದಿವೆ.

ಭೂಮಾಲಿಕರನ್ನು ಹದ್ದುಬಸ್ತಿಗೆ ತರುತ್ತಾರೆ, ಕುದುರೆಮುಖ ಉದ್ಯಾನವನವನ್ನು ಉಳಿಸುತ್ತಾರೆ ಎಂಬ ಕಾರಣ ನೀಡಿ ಅನೇಕರು ನಕ್ಸಲೀಯರಿಗೆ ಆಶ್ರಯ ನೀಡುತ್ತಿದ್ದಾರೆ. ಅಪರಾಧಿಗಳಿಗೆ ಆಶ್ರಯ, ರಕ್ಷೆ ನೀಡುವುದೂ ಅಪರಾಧವೇ. ಇತ್ತೀಚೆಗೆ ನಕ್ಸಲೀಯರು ಮೊದಲು ಧರಿಸುತ್ತಿದ್ದ ಸಮವಸ್ತ್ರವನ್ನೂ ಧರಿಸುತ್ತಿಲ್ಲದಿರುವುದು ಪೊಲೀಸರನ್ನು ಗೊಂದಲಕ್ಕೀಡು ಮಾಡುವ ಉದ್ದೇಶದಿಂದಲೇ. ನಕ್ಸಲೀಯತೆ ಜನತೆಯಲ್ಲೇ ಬೆರೆತುಬಿಟ್ಟಿದೆ. ನಕ್ಸಲರನ್ನು ಮಟ್ಟಹಾಕುವ ನೆಪದಿಂದಲೇ ಆಗಲಿ ನಕ್ಸಲೀಯರಿಗೆ ಬೆಂಬಲಿಸಿದ ಕೆಲವರು ಪೊಲೀಸರ ಗುಂಡಿಗೆ ಹತರಾಗಿದ್ದು ಈ ಕಾರಣದಿಂದಲೇ. ಇದರಲ್ಲಿ ಪೊಲೀಸರ ತಪ್ಪೇನೂ ಇಲ್ಲ.

ನಕ್ಸಲೀಯರಿಗೂ ತನಗೂ ಏನೂ ಸಂಬಂಧವಿಲ್ಲವೆಂದು ಬೊಬ್ಬಿಡುವ ವಿಠಲ ಹೆಗಡೆಗೆ ಧನ ಸಹಾಯ ಮಾಡುವಂತೆ ನಕ್ಸಲೀಯರು ಚೀಟಿಗಳನ್ನು ಅಂಟಿಸಿಡುವುದೇಕೆ? ಹುತ್ತದಲ್ಲಿಯೇ ಹುತ್ತವಿರುವಿದೆಯೆಂಬುದು ಇದರಿಂದ ವೇದ್ಯವಾಗದೇ? ಅಥವ ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಬಲ್ಲವರ್ಯಾರು?

ಸ್ವಲ್ಪ ದಿನಗಳ ಹಿಂದೆ ಮಳೆಗಾಲಕ್ಕೂ ಮೊದಲು ಚಿಕ್ಕಮಗಳೂರಿನ ಕಾಡಿನಲ್ಲಿ ಚಾರಣ ಮಾಡಬೇಕೆಂಬ ಅಪೇಕ್ಷೆಗೆ ಅಲ್ಲಿನ ಮಿತ್ರರು ನಕ್ಸಲರ ಹಾವಳಿಯಿರುವುದರಿಂದ ಅಲ್ಲಿ ಚಾರಣ ಮಾಡುವುದ ಬೇಡ ಎಂದು ಹೇಳಿದ್ದು ಕೇಳಿ ಆಘಾತವಾಯಿತು. ನಕ್ಸಲರಿಗೂ ದಂತಚೋರ ವೀರಪ್ಪನ್‌ಗೂ ವ್ಯತ್ಯಾಸವೇನು? ನಕ್ಸಲೀಯರಿಂದ ನಮ್ಮಂಥ ಅಮಾಯಕರಿಗ್ಯಾಕೆ ಬೆದರಿಕೆ?

ಕೃಷ್ಣಭಟ್ ಅವರು ಹೇಳಿದಂತೆ ಸುದರ್ಶನ್ ಅಂಥವರು ಬರೀ ಗಿರಿಜನರ ಉದ್ಧಾರಕ್ಕೆ ಶ್ರಮಿಸದೇ ಮಲೆನಾಡಿನ ನಕ್ಸಲೀಯರನ್ನಾಗಲಿ, ನಕ್ಸಲರನ್ನು ಸೇರಬಯಸುವ ಯುವಕರನ್ನು ಸರಿದಾರಿಗೆ ತರಲು ಯೋಜನೆಯನ್ನು ರೂಪಿಸಬೇಕು.

ಆರ್ಟ್ ಆಫ್ ಲೀವಿಂಗ್‌ನ ರವಿಶಂಕರ್ ಅವರ ಹೆಸರನ್ನಾದರೂ ಈ ವಿಷಯದಲ್ಲಿ ಎತ್ತುವುದ್ಯಾಕೆ. ಅಂಥವರು ಅಮೆರಿಕ ಇರಾಕ್ ನಡುವಿನ ಹಳಸಿದ ಸಂಬಂಧಗಳನ್ನು ಬೆಸೆಯಲು ಮಾತ್ರ ಲಾಯಕ್ಕು. ಸಾವಿರಾರು ರುಪಾಯಿ ಸುಲಿಯುವ ಯೋಗಶಿಕ್ಷಣ ಕೇಂದ್ರ ತೆರೆಯಿರೆಂದರೆ ಮಲೆನಾಡಿನಲ್ಲಿ ತೆರೆಯಲು ಅವರು ಸಿದ್ಧ.

ಇವರೆಲ್ಲರಿಂತ ಡೇಂಜರಸ್ ಅಂದರೆ ನಗರದಲ್ಲಿ ಅವಿತುಕೊಂಡಿರುವ ಸುಸಂಸ್ಕೃತ ನಕ್ಸಲೀಯರು. ಮಾಡಲು ಬೇರೆ ಕೆಲಸವಿಲ್ಲದ ಅವರಿಗೊಂದು ಸುದ್ದಿಯಲ್ಲಿರಲು ಇಶ್ಯೂ ಬೇಕಿತ್ತು. ನಕ್ಸಲೀಯರ ಮೇಲಾದ ಗುಂಡಿನ ದಾಳಿಯನ್ನು ಗಂಟಲು ಕಿತ್ತುಕೊಳ್ಳುವಂತೆ ಅರಚಿ ಪ್ರತಿರೋಧಿಸುವ ಇವರು ಮಲೆನಾಡಿನಲ್ಲೇ ನೆಲೆಸಿ ಈ ಪಿಡುಗಿಗೆ ಪರಿಹಾರ ಹುಡುಕಿರೆಂದರೆ ಎಲ್ಲಿದ್ದಾರೆಂದು ಅವರನ್ನೇ ನಾವು ಹುಡುಕಬೇಕಾಗುತ್ತದೆ.

ಮಾತುಕತೆಗೆ ಕುಳಿತುಕೊಳ್ಳದೇ ಬಂದೂಕಿನಿಂದಲೇ ಉತ್ತರ ಹೇಳುತ್ತೇವೆಂಬ ಹುಂಬರಿಗೆ ಬಂದೂಕಿನಿಂದಲೇ ಪಾಠ ಕಲಿಸಬೇಕು.

ನಮಸ್ಕಾರ,

ನಿವೇದಿತಾ ಪ್ರಭಾಕರ್, ಬೆಂಗಳೂರು

English summary
Niveditha Prabhakar, Bangalore, reponses to Naxalism menace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more