ನೂತನ ಅಂಕಣ ‘ಮಂಥನ’ದಲ್ಲಿ ಸಂಪಿಗೆಯ ಕಂಪು!
ಸಹ ಅಂಕಣಕಾರರಿಗೆ ಸ್ವಾಗತ! ನಿಮ್ಮ ಲೇಖನಗಳಿಂದ ಮತ್ತು ಅದರೊಳಗಿನ ವಿಚಾರಮಂಥನದಿಂದ ಎಲ್ಲಾ ಓದುಗರಿಗೂ ಉಪಯೋಗವಾಗಲಿ.
- ಮೈ. ಶ್ರೀ. ನಟರಾಜ, ಪೊಟೊಮೆಕ್, ಮೇರಿಲ್ಯಾಂಡ್.
*
ಸಂಪಿಗೆಯವರಿಗೆ,
ಹೊಸದಾಗಿ ಪ್ರಾರಂಭವಾಗಲಿರುವ ನಿಮ್ಮ ಹೊಸ ಅಂಕಣ ಮಂಥನಕ್ಕೆ ಶುಭ ಹಾರೈಕೆಗಳು.
ಕನ್ನಡ ಡಿಂಡಿಮ ಮೊಳಗಲಿ!
- ತ್ರಿವೇಣಿ, ಇಲಿನಾಯ್‌ು, ಅಮೆರಿಕಾ
*
ಸಂಪಿಗೆಯವರೆ,
ನಿಮ್ಮ ಹೊಸ ಅಂಕಣದಿಂದ ಕನ್ನಡದ ಮಕ್ಕಳಿಂದ ಕ್ರಾಂತಿಯಾಗಿ ( ಹಸಿರುಕ್ರಾಂತಿ, ಉದ್ಯೋಗಕ್ರಾಂತಿ, ನಾಡು-ನುಡಿಯ ಹೆಗ್ಗಳಿಗೆಯ ಕ್ರಾಂತಿ) ಕನ್ನಡದ ಪತಾಕೆ ಎಲ್ಲೆಡೆ ಹಾರಲಿ ಎಂದು ಆಶಿಸುವೆ.
ಆ ಸರ್ವಶಕ್ತ ಈ ಸಮಯದಲ್ಲಿ ನಿಮ್ಮ ಕೈಗಳನ್ನು ಬಲಪಡಿಸುವನು. ಇಂದಿನ ನನ್ನ ಪ್ರಾರ್ಥನೆ ನಿಮಗಾಗಿ ಮತ್ತು ನಿಮ್ಮ ಶ್ರೇಷ್ಠ ಕಾರ್ಯಗಳಿಗಾಗಿ.
ಒಳ್ಳೆಯದಾಗಲಿ.
- ತಳಕು ಶ್ರೀನಿವಾಸ, ಮುಂಬಯಿ.
*
ಸಂಪಿಗೆ ಶ್ರೀನಿವಾಸ ಅವರಿಗೆ ನಮಸ್ಕಾರ,
ಮಂಥನ ಅಂಕಣ ಆರಂಭದ ಶುಭಸಂದರ್ಭದಲ್ಲಿ ನಿಮಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಹಾರೈಕೆಗಳು. ನಿಮ್ಮ ಹರಿತವಾದ ಲೇಖನಿಯಿಂದ ಅತ್ಯುತ್ತಮ, ಚಿಂತನಯೋಗ್ಯ ಲೇಖನಗಳು ಮೂಡಿ ಬರಲಿವೆ ಎಂಬುದರಲ್ಲಿ ಸಂಶಯವಿಲ್ಲ. ನಿಮಗೂ ಓದುಗರಿಗೂ ಸಂಪರ್ಕ ಬೆಳೆಯುತ್ತಾ ಹೋಗಿ ಅಂಕಣ ಪಕ್ವವಾಗುತ್ತ ಸಾಗಲಿ.
ಇತಿ
- ಶ್ರೀವತ್ಸ ಜೋಷಿ, ವಾಷಿಂಗ್ಟನ್ ಡಿಸಿ, ಯು.ಎಸ್.ಎ
*
ನಲ್ಮೆಯ ಸಂಪಿಗೆ ಶ್ರೀನಿವಾಸ್‌ರವರೆ,
ನಿಮ್ಮ ಈ ವಾರದ ಅಂಕಣ ಬರಹ -ಹೆಸರಿನಲ್ಲೇನಿದೆ ಅತ್ಯಂತ ಸಾಮಾನ್ಯ ವಿಷಯವೂ ಇಷ್ಟೊಂದು ವಿಚಾರಗಳನ್ನು ಒಳಗೊಂಡಿದೆ ಎಂಬುವುದನ್ನು ಸುಲಭವಾಗಿ ಸುಲಲಿತವಾಗಿ ನಮ್ಮ ಮುಂದೆ ಇಟ್ಟಿದ್ದೀರಿ.
ನಿಮ್ಮ ಪ್ರಥಮ ಅಂಕಣ ಬರಹವೇ ನಿಮ್ಮ ಎಲ್ಲಾ ಮುಂದಿನ ಬರಹಗಳ ಆಳ ಮತ್ತು ವ್ಯಾಪ್ತಿಗೆ ಸಾಕ್ಷಿಯಾಗಿ ನಿಂತಿದೆ. ಅಂಕಣದ ಶುಭಾರಂಭ ಸೂಪರ್ ಆಗಿದೆ. ಇದೇ ರೀತಿ ನಿಮ್ಮ ಲೇಖನಗಳು ಬರುತ್ತಿರಲಿ ಎಂದು ಹಾರೈಸುವೆ.
ನಿಮ್ಮವ
- ತಿಪ್ಪೇರುದ್ರ, ಬೆಂಗಳೂರು
*
ಶ್ರೀನಿವಾಸ್ ರವರಿಗೆ ನಮಸ್ಕಾರಗಳು.
ನಿಮ್ಮ ಹೆಸರು ಪುರಾಣವನ್ನು ಓದಿದೆ. ಚೆನ್ನಾಗಿದೆ. ಕನೆಕ್ತಿಕಟ್ ಘಿನಲ್ಲಿರುವ ನನ್ನ ಮಗಳಿಗೂ ವೆಬ್ ಸೈಟ್ ನ ವಿಳಾಸ ತಿಳಿಸಿ ನಿಮ್ಮ ಲೇಖನವನ್ನು ಓದಲು ತಿಳಿಸಿದೆ. ಗಣಕ ಯಂತ್ರದ ಹೆಸರು ಆಯ್ಕೆಯ ಸಾಫ್ಟ್ ವೇರ್ / ಡಾಟಾಬೇಸ್ ಬಗ್ಗೆಯೂ ಒಂದು ಪ್ಯಾರಾ ಸೇರಿಸಬಹುದಿತ್ತು.
ಧನ್ಯವಾದಗಳು
- ಸುಬ್ರಹ್ಮಣ್ಯ ಯು. ಎಚ್., ಮುಂಬೈ
*
ಸಂಪಿಗೆ ತುಂಬಾ ಚೆನ್ನಾಗಿದೆ.
ಇದರಲ್ಲಿ ಉತ್ತರ ಕರ್ನಾಟಕದ ಹೆಸರುಗಳ ಬಗ್ಗೆಯೂ ಸೇರಿಸಬಹುದಿತ್ತು. ಉದಾಹರಣೆಗೆ ಉಳ್ಳಾಗಡ್ಡಿ(ಈರುಳಿ ವ್ಯಾಪಾರಮಾಡುವ ಮನೆತನದವರು ಇಟ್ಟುಕೊಳ್ಳುವರು), ಇದೇ ತರಹ ಮೆಣಸಿನಕಾಯಿ, ಪುಟಾಣಿ, ಕುಲಕರ್ಣಿ(ಅಂದರೆ ಕ್ಲರ್ಕ್), ದೆಸಾಯಿ, ದೇಶಪಾಂಡೆ ಇತ್ಯಾದಿ.
- ಮಧುಸೂದನ ಜಂಭಾ, ಬಾಗಲಕೋಟೆ
*
ಹೆಸರು ಪುರಾಣ ಚೆನ್ನಾಗಿದೆ. ಹೆಸರಿನ ಮಹತ್ವವನ್ನು ಉತ್ತಮ ರೀತಿಯಲ್ಲಿ ಬಣ್ಣಿಸಿದ್ದೀರಿ.
ತಮ್ಮ ಮಕ್ಕಳಿಗೆ ಅರ್ಥವಿಲ್ಲದ ಹೆಸರು ಮತ್ತು ಸಾಕು ಪ್ರಾಣಿಗಳಿಗೆ ದೇವರ ಹೆಸರನ್ನು ಇಡುವ ಜನರ ಬಗ್ಗೆ ಮರುಕವಿದೆ. ಇಂತಹ ಜನರ ಸಂಖ್ಯೆ ಕಮ್ಮಿಯಾಗಲಿ ಎಂದು ಹಾರೈಕೆ.
ಕೊನೆಯಲ್ಲಿ ನಮ್ಮ ಬುದ್ಧಿಜೀವಿಗಳಿಗೆ ಮತ್ತೊಮ್ಮೆ ನೆನಪಿಸೋಣ ಬ್ಯಾಂಗಲೂರ್ ಅಲ್ಲ ಬೆಂಗಳೂರು.
- ಪ್ರಶಾಂತ್ ತೀರ್ಥರಾಜ್ ಕಂಚನ್, ಅಭುದಾಭಿ
*
ಸೂಪರ್ಬ್ ಆಗಿದೆ ಮಾರಾಯ ನಿಮ್ಮ ಆರ್ಟಿಕಲ್...
- ರಾಜೇಶ್ ಪ್ರಭು, ಊರು?












Click it and Unblock the Notifications