ನಾಗರಿಕರಿಗಷ್ಟೇ ನಾಗರಿಕ ಪ್ರಜ್ಞೆಯ ಚಿಂತೆ!

ನಾಗರಿಕರಿಗಷ್ಟೇ ನಾಗರಿಕ ಪ್ರಜ್ಞೆಯ ಚಿಂತೆ!
ಮಾಲಿನ್ಯಸಹಿತ ಪ್ರಪಂಚಕ್ಕೆ ವಿದ್ಯಾವಂತರ ಕೊಡುಗೆ ದೊಡ್ಡದು! -ಹೀಗೇಕೆ ಸಾರ್‌? ಅನ್ನೋದು ಕೇಳೋದಕ್ಕೆ ಸಾಮಾನ್ಯ ಪ್ರಶ್ನೆ. ಉತ್ತರಿಸಲು ಮಾತ್ರ ಕಷ್ಟದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಹೇಳುವಂತಿವೆ; ಓದುಗರ ಪತ್ರಗಳು.

ನಮಸ್ಕಾರ ಶ್ರೀನಿವಾಸ್‌,

ತುಂಬಾ ಚೆನ್ನಾಗಿ ಬರೆದಿದ್ದೀರ... ಇದನ್ನು ಓದಿಯಾದರೂ ಜನರಲ್ಲಿ ಮಲಗಿರುವ ಪ್ರಜ್ಞೆ ಜಾಗೃತವಾಗುತ್ತದೆಯೆಂದು ಭಾವಿಸೋಣ.

- ಲೀನಾ, ಬೆಂಗಳೂರು

*

ಪ್ರೀತಿಯ ಸಂಪಿಗೆಯವರೇ,

ನಾಗರಿಕ ಪ್ರಜ್ಞೆ ಬಗ್ಗೆ ವಿಚಾರ ಪೂರ್ಣ ಲೇಖನ ಬರೆದಿದ್ದೀರಿ.

ನಾವು ಸ್ವಲ್ಪ ಶಿಸ್ತು ಮತ್ತು ದೇಶಾಭಿಮಾನ ಕಲಿತರೆ ನಮ್ಮನ್ನು ಮೀರಿಸುವವರು ಈ ಲೋಕದಲ್ಲಿ ಬೇರಾರೂ ಇಲ್ಲ! ನಾವು ಪರದೇಶಗಳಿಗೆ ಹೋದಾಗ ಅವರಂತೆ ನಡೆಯುತ್ತೇವೆ. ನಮ್ಮ ದೇಶಕ್ಕೆ ಹಿಂತಿರುಗಿ ಬಂದ ಮೇಲೆ... ಯಥಾರೀತಿ -ನಾಯಿ ಬಾಲ ಡೊಂಕು! ಅಥವಾ ಇದು ಹತ್ತರ ಜೊತೆಗೆ ಹನ್ನೊಂದು ಎಂಬ ಗಾದೆಯೇ? ಕಾಲವೇ ಈ ಪ್ರಶ್ನೆಗಳಿಗೆ ಉತ್ತರ ಹೇಳಬೇಕು.

ರಾಷ್ಟ್ರಪತಿ ಕಲಾಮ್‌ ಸಾಹೇಬರ ಮಾತು ಮನ್ನಿಸಿ ನಡೆದರೆ ನಾವು ಖಂಡಿತಾ ಉದ್ಧಾರ ಆದೇವು!

ವಂದನೆಗಳು

- ಎಸ್‌. ಮಧುಸೂದನ ಪೆಜತ್ತಾಯ, ಬೆಂಗಳೂರು

*

ಸಂಪಿಗೆಯವರೇ,

ನೀವು ಬರೆದಿದ್ದು ಸರಿಯಾಗಿದೆ. ನಾವು ಯಾವು ಯಾವುದಕ್ಕೋ ಪಾಶ್ಚಾತ್ಯರನ್ನು ಅನುಕರಿಸುತ್ತೇವೆ, ಆದರೆ ಅವರ ಶಿಸ್ತನ್ನು, ಸಮಯ ಪಾಲನೆಯನ್ನು ಕಲಿಯುವುದಿಲ್ಲ. ಮಾತು ಮಾತಿಗೂ ಸರಕಾರವನ್ನು, ರಾಜಕಾರಣಿಗಳನ್ನು ಬಯ್ಯುವುದು ಒಂದು ಫ್ಯಾಷನ್‌ ಆಗಿದೆ. ಆದರೆ, ನಾಗರಿಕರಾದ ನಾವೆಷ್ಟು ಕರ್ತವ್ಯ ಪಾಲಿಸುತ್ತಿದ್ದೇವೆ? ಮತ ಹಾಕಲು ನಮ್ಮ ವಿದ್ಯಾವಂತರಿಗೆ ಆಗುವುದಿಲ್ಲ, ಆಗ ಸುಮ್ಮನೆ ಕೂತು ಆಮೇಲೆ ನಮ್ಮ ದೇಶ ರಾಜಕಾರಣಿಗಳಿಂದ ಹಾಳಾಯ್ತು ಹಾಗೆ ಹೀಗೆ ಎಂದು ಬೊಬ್ಬೆ ಹೊಡೆಯುತ್ತಾರೆ.

ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಬಾಟಲಿ, ಕಾಗದ ಹಾಕುವುದು ವಿದ್ಯಾವಂತರೇ ಹೆಚ್ಚು. ನಾನೆಷ್ಟೋ ವೇಳೆ ನೋಡಿದ್ದೇನೆ, footpathಗಳು ಖಾಲಿ ಹಾಗೂ ಅಗಲವಾಗಿದ್ದರೂ ಪಾದಚಾರಿಗಳು ರಸ್ತೆ ಮೇಲೆ, ಕೆಲಸಲ ಮಧ್ಯದಲ್ಲೇ ನಡೆಯುತ್ತಾರೆ. ಹಾರ್ನ್‌ ಮಾಡಿದರೂ ತಮಗಲ್ಲವೇನೊ ಎಂಬಂತೆ ಹೋಗುತ್ತಿರುತ್ತಾರೆ.

ನಮ್ಮ ಆಫೀಸಿನ ಮೊದಲ ಕ್ಯಾಂಪಸ್ಸಿನಲ್ಲಿ ಒಂದು ದೊಡ್ಡ ಗುಂಡಿ ಇತ್ತು (ಈಗಲೂ ಇರಬಹುದು). ಇದರಲ್ಲಿ ಎಲ್ಲರೂ ಬಾಟಲಿ, ಚಿಪ್ಸ್‌ ಪ್ಯಾಕೆಟ್‌, ಸಿಗರೇಟ್‌ ಎಸೆಯುತ್ತಾರೆ. ಈ ಗುಂಡಿ ಇರುವುದು ಪ್ರತಿಷ್ಠಿತ ಎನಿಸಿರುವ ಅನೇಕ ಕಂಪನಿಗಳ ಕ್ಯಾಂಪಸ್‌ ಕಂಪೌಂಡ್‌ ಒಳಗೆ, ಅದನ್ನು ಸರಿ ಮಾಡಬೇಕಾದ್ದು ಈ ಕಂಪನಿಗಳ ಕರ್ತವ್ಯ. ನಾ ಅಲ್ಲಿ ಇದ್ದಷ್ಟೂ ದಿನ ಅದು ಹಾಗೇ ಇತ್ತು. ಐ.ಟಿ. ಕಂಪನಿಗಳು ರಸ್ತೆ ಸರಿ ಇಲ್ಲ, ಮೂಲಭೂತ ಸೌಕರ್ಯ ಸರಿ ಇಲ್ಲ, ಅದಿಲ್ಲ ಇದಿಲ್ಲ ಎಂದೆಲ್ಲ ಬೊಬ್ಬೆ ಹೊಡೆದು, ಅದೆಲ್ಲ ಸರಿಯಾಗದಿದ್ದರೆ ನಾವು ಬೇರೆ ಕಡೆ ಹೋಗುತ್ತೇವೆ ಎಂದು ಬ್ಲಾಕ್‌ಮೇಲ್‌ ಮಾಡುತ್ತಾರೆ, ನಮ್ಮ ಕೆಲ ಮಹಾನ್‌ ಉದ್ಯಮಿಗಳು. ನಾವೇ ಎಲ್ಲ, ನಮ್ಮಿಂದಲೇ ಎಲ್ಲ, ನಾವಿಲ್ಲದಿದ್ದರೆ ಇವರು ಹೇಗೆ ಬದುಕುತ್ತಾರೆ ಎಂಬ ಅಹಂಕಾರದ, ಧಿಮಾಕಿನ ನಡೆ ಕಾಣುತ್ತಿದ್ದೇವೆ.

ಈಗ ಹೇಳಿ, ನಾನಿದ್ದ ಕ್ಯಾಂಪಸ್‌ ಒಳಗಿರುವ ರಸ್ತೆಗೆ ತಾಗಿಕೊಂಡಿರುವ ದೊಡ್ಡ ಹೊಂಡ ಸರಿ ಮಾಡುವುದು ಯಾರ ಕೆಲಸ? ಅದಿರುವುದು ಕಾಂಪೌಂಡ್‌ ಒಳಗೆ. ನಮ್ಮ ಮನೆ ನೆಟ್ಟಗೆ ಇಟ್ಟುಕೊಳ್ಳುವುದಕ್ಕೆ ಆಗೋದಿಲ್ಲ, ಎಲ್ಲದಕ್ಕೂ ಬೇರೆಯವರನ್ನು ಬೈದು, ಎಲ್ಲವೂ ಸರಕಾರವೇ ಮಾಡಬೇಕು ಎಂದು ನಿರೀಕ್ಷಿಸುತ್ತಾರೆ. ತಮ್ಮನ್ನು ಜನ ಹೇಗಿದ್ದರೂ ಸಮರ್ಥಿಸುತ್ತಾರೆ ಎಂಬ ಹುಂಬ ಧೈರ್ಯ ಇವರಿಗೆ

ಪರಿಸರದ ಕಾಳಜಿಯೆನ್ನುವುದು ಅನೇಕರಿಗೆ ಇನ್ನೂ ಏನೆಂಬುದು ಅರ್ಥವಾಗಿಲ್ಲ. ಹೋದ ಕಡೆಯೆಲ್ಲ ಕಸ ತುಂಬುವುದು, ಐತಿಹಾಸಿಕ ಸ್ಮಾರಕ, ಬಂಡೆಗಳ ಮೇಲೆ ಗೀಚುವುದು, ಹೇಗೆ ಪಟ್ಟಿ ಬೆಳೆಯುತ್ತದೆ. ಯಾಕೆ ಹೀಗೆ ನಮ್ಮ ಜನ. ಈ ನಿಟ್ಟಿನಲ್ಲಿ ಸನ್ಮಾನ್ಯ ರಾಷ್ಟ್ರಪತಿ ಅಬ್ದುಲ್‌ ಕಲಾಮ್‌ ಅವರ ಪ್ರಸಿದ್ಧ ಭಾಷಣ ಚಾಟಿ ಏಟಿನಂತಿದೆ.

ನಿಮ್ಮ ಲೇಖನಗಳು ಚೆನ್ನಾಗಿ ಬರುತ್ತಿವೆ.

- ಶ್ರೀದೀಪ್‌, ಬೆಂಗಳೂರು

*

ಸಂಪಿಗೆಯವರೆ,

2-3 ವರ್ಷಗಳ ಹಿಂದೆ ಎನ್‌ಆರ್‌ಎನ್‌ ಅವರು ಹೈದರಾಬಾದಿನ ಐ.ಎಸ್‌.ಬಿ ನಲ್ಲಿ ಒಂದು ಭಾಷಣ ಕೊಟ್ಟಿದ್ದರು. ಅದರ ಸಾರಾಂಶ ಏನಪ್ಪ ಅಂದರೆ we have successfully picked all the dirt from the west and have been practicing and cultivating this for years!

ಇದೊಂದು ದುರಂತವೇ ಸರಿ. ನನಗೆ ಅನ್ನಿಸತ್ತೆ ಭಾರತಕ್ಕೆ 21ನೇ ಶತಮಾನದಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದರೆ ಚೆನ್ನಾಗಿತ್ತು ಅಂತ. ಈಗ ಹಾಂಗ್‌ಕಾಂಗ್‌ ನೋಡಿ. ಒಂದು ಸಲ ಕೊಲ್ಕತ್ತ ಕೂಡ ನೋಡಿ!

- ಗುರು ಪಿ. ಚತುರ್ವೇದಿ, ಸಿಕಂದರಾಬಾದ್‌.

*

ನಮಸ್ಕಾರ ಶ್ರೀನಿವಾಸ್‌ ಅವರೆ,

ನಿಮ್ಮ ಬರಹಗಳು ತುಂಬಾ ಚೆನ್ನಾಗಿವೆ. ಅದರಲ್ಲೂ ನಿಮ್ಮ ನಮ್ಮಲ್ಲಿ ನಾಗರಿಗ ಪ್ರಜ್ಞೆ ಮೂಡವುದು ಯಾವಾಗ ಹಾಗೂ ಕನ್ನಡಿಗನ ಆದ್ಯ ಕರ್ತವ್ಯಗಳು ತುಂಬಾನೇ ಚೆನ್ನಾಗಿವೆ. ಇವೆಲ್ಲವೂ ಪ್ರತಿಯೊಬ್ಬ ಕನ್ನಡಿಗರೂ ಯೋಚಿಸಬೇಕಾದ ವಿಷಯಗಳು. ನಿಮ್ಮ ಬರಹದಿಂದ ಸ್ಫೂರ್ತಿಗೊಂಡಾದರೂ ಜನರು ಆ ಬಗ್ಗೆ ಯೋಚಿಸುತ್ತಾರೆಂದು ಆಶಿಸುತ್ತೇನೆ.

ನಿಮ್ಮ ಅಭಿಮಾನಿ

- ವೇದಾ, ಸ್ಯಾನ್‌ ಡಿಯಾಗೊ, ಕ್ಯಾಲಿಫೊರ್ನಿಯ

*

ಆತ್ಮೀಯ ಸಂಪಿಗೆ ಶ್ರೀನಿವಾಸ್‌,

ಬಹಳ ಸೊಗಸಾದ ಲೇಖನ. ಯು.ಕೆ ನಲ್ಲಿ ಈ ತರಹ ಆಗುವುದು ಸಹಜವೆ. ಉತ್ತರ ಯೂರೋಪಿನಿಂದ ದಕ್ಷಿಣ ಯೂರೋಪಿನತ್ತ ಸಾಗಿದರೆ, ಈ ನಾಗರಿಕ ಪ್ರಜ್ಞೆ ಮಾಯವಾಗುತ್ತಿರುವುದನ್ನು ಕಾಣಬಹುದು.

ಭಾರತದಲ್ಲಿ ಕೆಂಪಿಗೂ, ಕಿತ್ತಳೆಗೂ ಮತ್ತು ಹಸಿರಿಗೂ ವ್ಯತ್ಯಾಸವೇ ತಿಳಿಯುವುದಿಲ್ಲ. ಸೊಗಸಾಗಿ ಬರೆದಿದ್ದೀರಿ.

ಇಂತಿ

- ರಮೇಶ ಬಿ.ಎನ್‌., ಪ್ರಾನ್ಸ್‌

*

ನಮಸ್ಕಾರ ಸಂಪಿಗೆಯವರಿಗೆ,

ನಮ್ಮಲ್ಲಿನ ಸಾಮಾನ್ಯ ಗುಣಗಳನ್ನು ಮತ್ತು ಪರದೇಶದಲ್ಲಿನ ಜನರ ಗುಣಗಳನ್ನು ಸಮರ್ಪಕವಾಗಿ

ವಿಶ್ಲೇಷಿಸಿದ್ದೀರಿ. ನಾವು ಅಂದಾನುಕರಣೆಯ ಬರದಲ್ಲಿ ಇಂಥಾ ಸೂಕ್ಷ್ಮ ವಿಚಾರ ಮತ್ತು ನಡತೆಗಳನ್ನು ಕಾಪಿ ಮಾಡುವುದಿಲ್ಲ. ನಮಗೆ ಸುಲಭವೆನಿಸಿದ ಫ್ಯಾಶನ್‌, ಸಂಸ್ಕೃತಿಗಳನ್ನು ಬಹು ಬೇಗ ಆಚರಣೆಗೆ ತರುತ್ತೀವಿ ಮತ್ತು ತಂದಿದ್ದೀವಿ. ನಿಮ್ಮ ಈ ವಾರದ ಲೇಖನ ಸೈಲೆಂಟಾಗಿ ಅಂಥಾ ಪೀಳಿಗೆಯ ಕಿವಿ ಹಿಂಡಿದೆ ಎಂದು ಅನಿಸುತ್ತಿದೆ. ತುಂಬಾ ಧನ್ಯವಾದಗಳು ಸಂಪಿಗೆಯವರೆ.

ವಂದನೆಗಳೊಂದಿಗೆ

- ತಿಪ್ಪೇರುದ್ರ, ಬೆಂಗಳೂರು

*

ತುಂಬಾ ಒಳ್ಳೇ ಲೇಖನ ಸಂಪಿಗೆ ಸರ್‌,

ಬಹಳ ವಿವರವಾಗಿ ಬರೆದಿದ್ದೀರ...

ನಾನೂ ಎಷ್ಟೋ ಬಾರಿ ಈ ರೀತಿಯ ತಪ್ಪುಗಳನ್ನು ಮಾಡಿದ್ದೀನಿ, especially traffic signal jump maadodu, which is very bad & very risky aswell... ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ವಿಷಯದಲ್ಲಂತೂ ನನಗೆ ತುಂಬಾ ಕೋಪ ಬರುತ್ತದೆ. ನಮ್‌ ಜನ ಯಾಕೆ ಇದನ್ನ ಅರ್ಥ ಮಾಡ್ಕೊಳ್ಳೋದಿಲ್ಲ ಅಂಥಾ ತಿಳಿಯದು. ನನ್ನ ಎಷ್ಟೋ ಜನ ಗೆಳೆಯರೊಂದಿಗೆ ಇದರ ಬಗ್ಗೆ ಜಗಳವಾಡಿದ್ದೀನಿ.

- ದೀಪಕ್‌ ಗೌಡ, ಬೆಂಗಳೂರು

*

ಸಂಪಿಗೆಯವರೆ ತುಂಬಾ ಒಳ್ಳೇ ಲೇಖನ.

ನಾನು ಗಾಡಿಯಲ್ಲಿ ಹೋಗಬೇಕಾದರೆ ಇದೆಲ್ಲಾ ಯೋಚಿಸ್ತಾ ಇರ್ತೀನಿ. ಶೇ.50ರಷ್ಟು ರಸ್ತೆ ಪ್ರಾಬ್ಲಮ್‌ ಇರಬಹುದು ಆದರೆ ಇನ್ನು ಶೇಕಡ 50 ಜನರ ಪ್ರಾಬ್ಲಮ್‌ ಇದೆ.

ಯಾರು ಎತ್ಲಾಗೆ ಬೇಕಾದ್ರೆ ಸಾಯ್ಲಿ ನಾನ್‌ ಮಾತ್ರ ಫಸ್ಟ್‌ ಹೋಗಬೇಕು ಅನ್ನೋದು ನಮ್ಮ ಜನರಲ್ಲಿ ಸಾಮಾನ್ಯವಾಗಿದೆ. ನಾನು ಒಂದು ಘಟನೆ ಹೇಳ್ತೀನಿ.

ಕೋರಮಂಗಲ ಚೆಕ್‌ಪೋಸ್ಟ್‌ ಹತ್ತಿರ ಡೈರಿ ವೃತ್ತಕ್ಕೆ ಫ್ರೀ ಲೆಫ್ಟ್‌ ಹೋಗತ್ತೆ ಒಂದ್‌ ರೋಡ್‌. ಅಲ್ಲಿ ಒಂದು ಸಿಗ್ನಲ್‌ ಇದೆ. ಹೆಚ್ಚು ಅಂದ್ರೆ 10ರಿಂದ 20 ಕ್ಷಣಗಳು ಪಾದಚಾರಿಗಳು ರಸ್ತೆ ದಾಟಲು ಸಹಾಯವಾಗಲಿ ಎಂದು ಇರಬಹುದು. ಕೆಂಪುದೀಪ ಬಂದಾಗ ನಾನು ಕಾರ್‌ ನಿಲ್ಲಿಸಿದೆ. ಆದರೆ ಹಿಂದಿನಿಂದ ಸೂಮೋ/ಕಾಲಿಸ್‌ ಜೋರಾಗಿ ಹಾರ್ನ್‌ ಹೊಡೆಯೋಕ್ಕೆ ಶುರು ಮಾಡಿದ. ಗ್ರೀನ್‌ ಸಿಗ್ನಲ್‌ ಬಂದಮೇಲೆ ಕಾರನ್ನು ಮುಂದೆ ಚಲಿಸಿದೆ. ಆಮೇಲೆ ಓವರ್‌ಟೇಕ್‌ ಮಾಡಿ ಬಯತಾಇದ್ದಾನೆ ಅಲ್ಲೆಲ್ಲಾ ಯಾಕೆ ನಿಲ್ಲಿಸಿದೆ ಅಂತಾ!

ನನಗೆ ನಗೋದೋ ಅಳೋದೋ ಗೊತ್ತಾಗ್ಲಿಲ್ಲ. ನೀವು ಹೇಳಿದಂತೆ ದು:ಖದ ವಿಷಯವೆಂದರೆ ಇಂತಹ ತಪ್ಪುಗಳನ್ನು ಮಾಡುವವರು ಹೆಚ್ಚಾಗಿ ವಿದ್ಯಾವಂತರೇ ಆಗಿರುವುದು.

- ಮಾದ್ವ, ಬೆಂಗಳೂರು

*

Dear Sampigi Srinivasa,

I have gone through the article, Instead of telling a good article, this hurts me really. Be honest with you.

I will give u one example. One day we had party in our office. The entire top level officers were there in the party from sales and service department including director of the company. One point all were Indians Big and top people party means normally they arrange drinks (bear, alcohol) and the dinner.

One of the officers after having drinks he started to eat. While eating he took the paper napkin wiped his nose and mouth and he threw the napkin to the dust bin, unfortunately it fallen down from the dustbin and he went off with out noticing that.

The director of the company was observing all the people activity and this incident has fallen in eyes. He silently went there and took the paper napkin which was fallen down and put back into the dustbin. He spoke nothing in the party after the party is over he shook all the officers’ hand and went back to his house. The entire officers were shocked.

The next day the concerned officer, who has done the mistake, apologized for that.

That’s all I can tell we are developing..

- Prasad, Srilanka

ಮುಖಪುಟ / ಅಂಕಣಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+