• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆ ಕನಸು ಕೂಡ ದೋಚಿಕೊಳುವ ದೊರೆಗಳೇತಕೆ?

By ಸ ರಘುನಾಥ, ಕೋಲಾರ
|

ಒಳ್ಳೆಯ ಸಾಹಿತ್ಯ, ಅದಕ್ಕೆ ಅನುರೂಪವಾದ ಸಂಗೀತ ಕೂಡಿ ಬಂದಾಗ ಹಾಡಿಗೆ ಬಹಳ ಕಾಲ ನೆನಪಿನಲ್ಲುಳಿಯುವ ಶಕ್ತಿ ಒದಗಿಬಿಡುತ್ತದೆ. ಇದು ಇಂಪಾಗಿದ್ದರಂತೂ ಅದರ ಜೀವಿತ ಕಾಲ ದೀರ್ಘವಾದುದು. ಆದುದರಿಂದಲೇ ಅಂತಹ ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆ, ರಂಗಗೀತೆ ಇವುಗಳಲ್ಲಿ ಅನೇಕ ಗೀತೆಗಳು ಶತಮಾನದುದ್ದಕ್ಕೂ ಉಳಿದುಕೊಂಡಿವೆ. ಜನಪ್ರಿಯತೆಯೂ ಉಳಿದಿದೆ.

ಗೀತೆ ಅಥವಾ ಹಾಡುಗಳ ಆಯುಷ್ಯವನ್ನು ಸಂಗೀತ ಹೆಚ್ಚಿಸುತ್ತದೆ. ಇಂಥ ಹಾಡುಗಳು ಜಗತ್ತಿನ ಎಲ್ಲ ನುಡಿಗಳಲ್ಲಿಯೂ ಇರುವುವೇ ಆಗಿವೆ. ಅಂತಹ ಹಾಡುಗಳಲ್ಲಿ ಸಂಗೀತ ಸಾಹಿತ್ಯ ಸಮಲಂಕೃತವಾದ, ಸುಮಧುರ ಹಾಡುಗಳಿರುವ 'ಮೂಗಮನಸುಲು' ತೆಲುಗು ಸಿನೆಮಾ ಒಂದು. ಇದರಲ್ಲಿನ 'ಪಾಡುತಾ ತೀಯಗ' ಹಾಡು ತನ್ನೆಲ್ಲಾ ಗುಣಗಳಿಂದ ಮನಸ್ಸನ್ನು ಹಿಡಿಯುತ್ತದೆ.

ಜೇನಾಗಿ ನಿನ್ನ ಬಳಿ ಬರುವೆನೆಂಬ ಮಾತು ಒಪ್ಪಿ ಬೆಪ್ಪನಾದೆನೇ ಶಕುಂತಲಾ!

'ಮನಸುಕವಿ'ಯೆಂದು ತೆಲುಗು ರಾಜ್ಯಗಳಲ್ಲಿ ಹೆಸರಾದ ಆಚಾರ್ಯ ಆತ್ರೇಯರ ರಚನೆಗೆ ಶ್ರೇಷ್ಠರ ಸಾಲಿನಲ್ಲಿರುವ ಸಂಗೀತ ನಿರ್ದೇಶಕ ಕೆ.ವಿ.ಮಹದೇವನ್ ರಾಗ ಸಂಯೋಜಿದ್ದಾರೆ. ವಿಶೇಷಣಗಳ ಹಂಗೇ ಬೇಡದ ಘಂಟಸಾಲ ಹಾಡಿದ್ದಾರೆ. ಇದರ ಜನಪ್ರಿಯತೆಗೆ ಐವತ್ತೈದು ವರುಷಗಳು!

ಚಿತ್ರದ ಸನ್ನಿವೇಶಕ್ಕೆ ತಕ್ಕಹಾಗೆ ಸಿನೆಮಾ ಗೀತೆಗಳು ರಚನೆಯಾಗುತ್ತವೆ. ಆದರೂ ಹಲವು ಗೀತೆಗಳು ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡು ಜನರು ಅವುಗಳೊಂದಿಗೆ ತಮ್ಮ ನೋವು- ನಲಿವುಗಳಿಗೆ ಸಹಸ್ಪಂದನೆಯನ್ನು ಕಂಡುಕೊಂಡು ತಮಗೆ ಅನ್ವಯಿಸಿಕೊಳ್ಳುತ್ತಾರೆ. ಈ ಮಿಡಿತವೇ ಸಾಹಿತ್ಯ-ಸಂಗೀತದೊಂದಿಗೆ ಏರ್ಪಡುವ ಅನುಬಂಧ.

ಇದು ಸಾಂತ್ವನ ಗೀತೆ. ವಿಧವೆಯಾಗಿ ಬಂದ ನಾಯಕಿಗೆ (ಮಹಾನಟಿ ಸಾವಿತ್ರಿ) ನಾಯಕ (ಎ.ನಾಗೇಶ್ವರರಾವ್) ಸಮಾಧಾನಗೊಳಿಸುವ ಸಂಧರ್ಭದಲ್ಲಿ ಚಿತ್ರೀಕರಿಸಲಾದ ಗೀತೆ. ನುಡಿನುಡಿಯೂ ನೋವು- ವಿಷಾದದಲ್ಲಿ ಅದ್ದಿ ತೆಗೆದಂತಿದೆ. ಧೈರ್ಯ ತುಂಬುವಂತಿದೆ. ಸ್ನೇಹದ ಗಟ್ಟಿತನವನ್ನು ತೋರುತ್ತದೆ. ಬಾಳಿನ ಆಸೆಗೆ ಆಸರೆ ನೀಡುತ್ತದೆ. ಹಾಗಾಗಿಯೇ ಇದು ಚಿತ್ರದ ಸನ್ನಿವೇಶದಿಂದ ಹೊರಬಂದು ಬಾಳಿಲ್ಲಿ ದುಃಖಿತರಾದವರಿಗೆ ಅರ್ದ್ರತೆಯಿಂದ ಸಮಾಧಾನ ಹೇಳುತ್ತದೆ.

ಶಕುಂತಲೇ, ನಿನ್ನ ಕಾಗದದ ಪದಪದ ವಿರಹ ತಾಪವನ್ನು ಹೆಚ್ಚಿಸುತ್ತಿದೆ

ಗೀತೆಯಲ್ಲಿನ ಪ್ರತಿ ನುಡಿಯೂ ಕಷ್ಟದಲ್ಲಿರುವವರಿಗೆ ಆತ್ಮೀಯರು ಹೇಳುವ ಮಾತುಗಳಿಂದ ಕೂಡಿದೆ. ಅಲ್ಲದೆ ಅಷ್ಟೇ ಸರಳವಾಗಿದೆ. ದುಃಖದ ಮನಸ್ಸನ್ನು ಅರಿತವರು ಹೀಗಲ್ಲದೆ ಮತ್ತೆ ಹೇಗೆ ಸಮಾಧಾನ ಪಡಿಸಲು ಸಾದ್ಯ? ತೀವ್ರ ದುಃಖದ ಖಿನ್ನತೆಯಲ್ಲಿರುವವರನ್ನು ನಿದ್ದೆ ಮಾಡುವಂತೆ ಒತ್ತಾಯಿಸುವುದು ಸಾಮಾನ್ಯ. ಮನೋವೈದ್ಯರೂ ಇದನ್ನೇ ಹೇಳುವುದು. ಮನಸ್ಸಿನ ಉದ್ರಿಕ್ತತೆ ಶಮನಗೊಳ್ಳಲು ಕೊಡುವ ಔಷಧಗಳೂ ನಿದ್ದೆ ಬರಿಸುತ್ತವೆ.

ಇಲ್ಲಿ ಆರುದ್ರರು ನುಡಿಗಳ ಮೂಲಕ ಮಾಡಿರುವುದೂ ಅದನ್ನೇ. ವೈದ್ಯರ ಸಲಹೆಗಳ ಮಿತಿಗಳನ್ನು ದಾಟಿ, ಸಾಮಾಜಿಕತೆ, ಸಂಬಂಧ, ಸ್ನೇಹದ ಶಾಶ್ವತತೆಯ ಎಳೆಗಳನ್ನು ನೇಯ್ದು ಗೀತೆಯಾಗಿಸಿದ್ದಾರೆ. ಇದು ಕವಿಯಿಂದಲೇ ಸಾಧ್ಯವಾಗುವುದು ತಾನೆ. ಮೇಲಾಗಿ ಆರುದ್ರ ಮನಸುಕವಿಯಲ್ಲವೆ.

ಅಳುವೂ ಒಂದು ಚಿಕಿತ್ಸೆಯೇ. ಅದು ಎದೆಯ ಬೆಂಕಿಯನ್ನು ಆರಿಸುವ ಮಾನಸಿಕ ಸಾಧನ. 'ಎದೆಯ ಉರಿಯ ಆರಿಸುವ ತಣ್ಣೀರೆ ಕಣ್ಣೀರು' ಕವಿ ಕಟ್ಟಲು ಸಾಧ್ಯವಾಗುವ ರೂಪಕವಿದು. 'ಕನಸೆ ನಮಗೆ ಉಳಿದುಬಿಡುವ ಸಿರಿಯು ಅಂತ್ಯಕೆ/ ಆ ಕನಸು ಕೂಡ ದೋಚಿಕೊಳುವ ದೊರೆಗಳೇತಕೆ' ಅಲ್ಲವೆ? ಇಲ್ಲಿಯ 'ದೊರೆ' ಮನುಷ್ಯರೂ ಹೌದು, ವಿಧಿ, ದೈವವೂ ಹೌದು. ಇಂತಹ ಗೀತೆಯ ಪ್ರಯೋಜನವೇನೆಂದರೆ ದುಃಖಿತರಿಗೆ 'ಸಾಂತ್ವನ.' ಇದರ ಮೌಲ್ಯವೂ ಇದೆ ಆಗಿದೆ.

ಆಕಾಶದ ನಕ್ಷತ್ರಗಳನ್ನೆಲ್ಲಾ ಬಾಚಿ ಸೆರಗಿನಲ್ಲಿ ಕಟ್ಟಿಕೊಂಡಂತೆ!

ಹಾಡುವೆ ಸವಿಯಾಗಿ ತಂಪಾಗಿ

ಹಸುಗೂಸಂತೆ ನಿದುರಿಸು ಅಮ್ಮನೆ ಚೆಂದದಮ್ಮನೆ

ನಿದಿರೆ ಮಾಡೆ ಮನಸು ಕೊಂಚ ಹಗುರಗೊಳುವುದು

ಹಗುರಗೊಂಡ ಮನಸು ಸವಿಯ ಕನಸು ಕಾಂಬುದು

ಕನಸೆ ನಮಗೆ ಉಳಿದುಬಿಡುವ ಸಿರಿಯು ಅಂತ್ಯಕೆ

ಆ ಕನಸು ಕೂಡ ದೋಚಿಕೊಳುವ ದೊರೆಗಳೇತಕೆ

ಎದೆಯ ಉರಿಯ ಆರಿಸುವ ತಣ್ಣೀರೆ ಕಣ್ಣೀರು

ಇರು ಎಂದರು ಇರದುದಮ್ಮ ಬಹಳ ದಿನಗಳು

ಹೋದವರು ಎಲ್ಲರು ಒಳ್ಳೆ ಜನಗಳು

ಇದ್ದವರು ಹೋದವರ ಮಧುರ ಸ್ಮೃತಿಗಳು

ಮನುಷ ಹೋದ ಮಾತ್ರಕೇನು ಮನಸು ಇರುವುದು

ಮನಸಿನೊಡನೆ ಮನಸೆಂದಿಗು ಬೆರೆತು ಇರುವುದು

ಸಾವು ಹುಟ್ಟು ಇರದುದಮ್ಮ ಸ್ನೇಹವೆಂಬುದು

ಜನುಮ ಜನುಮಕದು ಮತ್ತೆ ಗಟ್ಟಿಗೊಳುವುದು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Why we need a king who even steal our dreams? It is a beautiful line express various feelings. Oneindia columnist Sa Raghunatha explains beauty of Telugu film song literature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more