ಮಾತಂಗಿಯ ನಾಗಬಂಧದಲ್ಲಿ ನರಸಿಂಗರಾಯನಿಗೆ ಮೊದಲ ಸ್ವಪ್ನಸ್ಖಲನ
ಎಂದೂ ಇಲ್ಲದ್ದು, ಅದೂ ಮುಸ್ಸಂಜೆ ಹೊತ್ತಲ್ಲಿ ನರಸಿಂಗ ಹಾಗೆ ಅಂಗಳದಲ್ಲಿ ಬಿದ್ದಿದ್ದಕ್ಕೆ ಅಮ್ಮ ಆತಂಕಗೊಂಡಳು. ಒಡನೆಯೇ ಆ ಜಾಗವನ್ನು ಸಾರಿಸಿ, ರಂಗೋಲೆ ಚೌಕ ಬಿಡಿಸಿ, ಹಿತ್ತಲಿಂದ ಗನ್ನೆರು(ಕಣಿಗಲೆ) ಹೂಗಳನ್ನು ತಂದು ಪೂಜೆ ಮಾಡಿದಳು. ಅಲ್ಲಿನ ಮಣ್ಣಿನ ಧೂಳನ್ನು ಎಡಗೈ ಉದ್ದ ಬೆರಳಿಗೆ ಮೆತ್ತಿ ತಂದು ಬೇಡವೆಂದರೂ ಕೇಳದೆ, ಗದರಿಸಿ ನರಸಿಂಗರಾಯನ ಹಣೆಗೆ ಬೊಟ್ಟಿಟ್ಟು ನಿಟ್ಟುಸಿರು ಬಿಟ್ಟಳು.
ನರಸಿಂಗರಾಯ ಗೆಳೆಯರೊಂದಿಗೆ ಹರಟೆ ಹೊಡೆದು ಬರುವ ಹೊತ್ತಿಗೆ ಅಪ್ಪಯ್ಯ ಮಲಗಿಯಾಗಿತ್ತು. ವರಾಂಡದಲ್ಲಿ ನಾಗಿಣಿ... ಮಾತಂಗಿ ಮಲಗಿದ್ದಳು. ಅವಳ ಪಕ್ಕ ಇನ್ನೊಬ್ಬ ಹೆಂಗಸು. ಊಟ ಮಾಡುತ್ತ ನರಸಿಂಗರಾಯ ಅವರ ಬಗ್ಗೆ ವಿಚಾರಿಸಿದ. 'ಅವಳು ಲಚ್ಚಿ. ಈ ಊರಿನೋಳೇ. ಮೂರು ವರ್ಷದ ಹೆಣ್ಣು ಕೂಸನ್ನು ಸೊಂಟದಲ್ಲಿಟ್ಟು ಊರು ಬಿಟ್ಟು ಬಾವನಳ್ಳಿ ಸೇರಿ ಹದಿನೈದು ವರ್ಷವೇ ಆಯಿತೇನೊ. ಆ ಕೂಸೇ ಈ ಮಾತಂಗಿ. ಇವಳ ಗುಣ ನೆಟ್ಟಗಿಲ್ಲ ಅಂತ ಬಡಿದು ಓಡಿಸಿದ್ದರು.
'ಆಗ ಬಿಟ್ಟು ಹೋಗಿದ್ದ ಮನೆಗಾಗಿ ಬಂದಿದ್ದಾಳೆ. ಅದೀಗ ಅವಳ ಮೈದನ ವಶದಲ್ಲಿದೆ. ಅವನು ಮೊದಲೇ ಗುರಮಘಾತುಕ. ಕೊಡ್ತಾನ? ಇವಳು ಕೇಳೋಕಂತಲೇ ಹೋಗಿದ್ದಳು. ಅವನು ಊರಿನಲ್ಲಿಲ್ಲವಂತೆ. ಬಂದ ಮೇಲೆ ಪಂಚಾಯ್ತಿ ನಡೀಬೋದು. ಪರದೇಸಿ ಮುಂಡೆಗೆ ಯಾರು ತುತ್ತು ಹಾಕ್ತಾರೆ? ಇಲ್ಲೇ ಬಂದು ಒಂದು ತುತ್ತು ನುಂಗಿ ಮಲಗು ಎಂದು ಹೇಳಿದ್ದೆ' ಎಂದು ಹೇಳಿದಳು ಅಮ್ಮ.

ನರಸಿಂಗರಾಯನಿಗೆ ತಾಳೆ, ಹಿಪ್ಪೆ ಹೂವಿನ ಗಮಲಿನ ಅಮಲು. ಅಮಲಿನ ಅರೆಮಬ್ಬಿನಲ್ಲಿ ಮಿಣಗುಟ್ಟುವ ಕಪ್ಪು. ಮಿಂಚು ಕಣ್ಣುಗಳು. ಪೊರೆಯಂತೆ ಮೈಗಂಟಿದ ಬಿಳಿ ಸೀರೆ. ಮುಂಭಾರವಾಗಿ ಮುಗ್ಗರಿಸುವಳೇನೋ ಅನ್ನಿಸುವಂತೆ ಎದೆ. ನವಿರಾದ ಸಣ್ಣ ನಡು. ಅಮಾಸ್ಯೆಯ ಇರುಳೇ ಕಿರಿದಾದಂತೆ ಹೊಕ್ಕುಳು. ಇರುಳ ಕಡಲಲೆಯ ಉಬ್ಬಿನಂತಹ ಪಿರ್ರೆಗಳು. ಮಳೆ ಬರುವಾಗ ನೆಲದತ್ತ ಇಳಿವ ಮೋಡದ ಕಾಲುಗಳಂತಹ ಕೂದಲು. ನಾಗಿಣಿ... ಮಾತಂಗಿ.
ನಾಗಿಣಿಯೇ ಮಾತಂಗಿಯಾಗಿ ಬಂದಿದ್ದಾಳೆ. ನನಗಾಗಿಯೇ ಬಂದಿದ್ದಾಳೆ. ನನ್ನವಳಾಗಲು ಬಂದಿದ್ದಾಳೆ... ಕತ್ತಲು. ಕತ್ತಲಲ್ಲೂ ಹೊಳೆವ ಕಣ್ಣುಗಳು. ಆ ಕಂಗಳ ಬೆಳಕು ತನ್ನ ಕಣ್ಣಿಗೂ ಬಂದು ಕಾಣುತ್ತಿದೆ. ನಾಗಿಣಿ, ಅಲ್ಲ ಮಾತಂಗಿ ತೆವಳಿ ತೆವಳಿ ಬರುತ್ತಿದ್ದಾಳೆ. ಕೊಂಚವೂ ಶಬ್ದವಿಲ್ಲ, ಸಪ್ಪಳವಿಲ್ಲ. ಅವಳು ತೆವಳಿ ಬಂದು ಮೇಲೆ ಮಲಗಿ ಅಪ್ಪಿಕೊಂಡಳು. ಬುಸುಗುಡುತ್ತಿದ್ದಳು.
ನಿನಗಾಗಿ ಕಾದು ಕಾದು ಕಾವೇರಿದ್ದೆ. ಈಗ ಸಿಕ್ಕಿದೆ. ಈ ಮೈಯನ್ನು ತಂಪು ಮಾಡು. ಸುಖದ ನರಳಿಕೆ ಹೊರಬರದಂತೆ ನಿನ್ನ ತುಟಿಗಳಿಂದ ಹೀರಿಬಿಡು. ಹೊಕ್ಕುಳಲ್ಲಿ ನಡುಕ ಹುಟ್ಟಿಸು. ಮೈಯೆಲ್ಲ ಬೆವರಿನ ಬುಗ್ಗೆ ಉಕ್ಕಬೇಕು. ನಿನ್ನ ಬೆವರಿನ ಅಭಿಷೇಕ ನನಗಾಗಲಿ. ದಣಿಸು ಈ ಮೈಯನ್ನು. ಮಾತಂಗಿಯದು ಉಸಿರುಗಟ್ಟಿಸುವ ನಾಗಬಂಧ. ಇವಳು ಮಾತಂಗಿಯಲ್ಲ. ನಾಗಿಣಿ.
ಮಾತಂಗಿ ಅಪ್ಪಿದಳು. ತನ್ನ ಉಸಿರನ್ನು ನನ್ನದಾಗಿಸಿದಳು. ನನ್ನ ಉಸಿರನ್ನು ಅವಳದಾಗಿಸಿಕೊಂಡು ಕಡೆಗೆ 'ಉಸ್' ಉಸಿರು ಬಿಟ್ಟು ಹೊರಳಿ, ಮೇಲೆ ಬಂದು ಅವುಚಿಕೊಂಡು ಮಲಗಿದಳು. ತಾಳೆ, ಹಿಪ್ಪೆ ಹೂ ಪರಿಮಳ ಬೆವರಿನಲ್ಲಿ ಕರಗಿ ಒಂದು ವಿಶಿಷ್ಟ ಸೌಗಂಧವಾಗಿ ಬೀರತೊಡಗಿತು. ಕಾಮಕಸ್ತೂರಿ ಪರಿಮಳವೆಂದರೆ ಇದೇ ಇರಬೇಕು ಅನ್ನಿಸಿತು. ಆ ರಾತ್ರಿ ನರಸಿಂಗರಾಯನಿಗೆ ಯೌವನ ಬಂದ ನಂತರ ಪ್ರಥಮ ಸ್ವಪ್ನಸ್ಖಲನವಾಗಿತ್ತು.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications