109196ravi belagereದೇವೇಗೌಡರ ಹೆಗಲ ಮೇಲಿಂದ ಜ್ಞಾನಪೀಠಿ ಕೈ ತೆಗೆಯಲಿ!/column/ravibelagere/2008/1229-ur-ananthamurthy-voices-against-mining.htmlನಾಡಿನ ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಮೊನ್ನೆ ಗಂಭೀರವಾದ ವಿಷಯವೊದನ್ನು ಪ್ರಸ್ತಾಪಿಸಿದ್ದಾರೆ. ಗಣಿಗಾರಿಕೆ ಅನ್ನುವುದೇ ಮುಲತಃ ಅವ್ಯವಹಾರ. ಹೀಗಾಗಿ ಈ ಗಣಿಗಾರಿಕೆ ಕೆಲಸ ಏನಿದೆ? ಅದರ ವಿರುದ್ಧವೇ ಹೋರಾಡಬೇಕು ಅನ್ನುವುದು ಅವರ ಕಥೆ. ನಿಜ, ಅವರ ಮಾತಿನ ಹಿನ್ನೆಲೆಯಲ್ಲಿರುವ ಉದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಇವತ್ತು ಗಣಿಗಾರಿಕೆ ಮೂಲಕ ತೆಗೆಯುತ್ತಿರುವ ಕಬ್ಬಿಣದ ಅದಿರೇನಿದೆ? ಈ ಅದಿರನ್ನು 33750http://kannada.oneindia.com/img/2008/12/29-ura5.jpg109196ravi belagereಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg109196ravi belagereಇಮೇಲಿನಲ್ಲಿ ಪತ್ರಕರ್ತ ರವಿಬೆಳಗೆರೆ ಬಂಧನ/column/ravibelagere/2009/0119-here-is-ravi-belagere-email-id.htmlನೀವು ಪತ್ರಿಕೆಯಲ್ಲಿ ನಿಮ್ಮ ಮೊಬೈಲ್ ನಂಬರೂ ಹಾಕುವುದಿಲ್ಲ. ಆಫೀಸಿನ ಫೋನಿಗೂ ಸಿಕ್ಕುವುದಿಲ್ಲ. ಕಡೇ ಪಕ್ಷ mail-id ಕೊಡುತ್ತೀರಾ ಅಂತ ನೋಡಿದರೆ, ಅದೂ ಇಲ್ಲ. ಇದೆಂಥ ನಿಗೂಢ ಪತ್ರಿಕೋದ್ಯಮ ಅಂತ ಕೆಲವರು ಬೇಜಾರು ಮಾಡಿಕೊಳ್ಳುತ್ತಿದ್ದಾರೆ.ಆಫೀಸಿನ ಫೋನಿಗೆ ನಾನು ಭಾನುವಾರಗಳಲ್ಲಿ ಸಾಮಾನ್ಯವಾಗಿ ಸಿಗುತ್ತೇನೆ: ಊರಲ್ಲಿದ್ದರೆ. 080-26790805ಗೆ ಯಾವ ಭಾನುವಾರ ಬೇಕಾದರೂ ಮಾಡಬಹುದು. ಉಳಿದಂತೆ ಎಸ್ಸೆಮ್ಮೆಸ್ ಕಳಿಸಲಿಕ್ಕೆಂದೇ 99166 74753 ನಂಬರಿನ 34151http://kannada.oneindia.com/img/2009/01/19-ravibelegere4.jpg109196ravi belagereಇಸ್ಕಂಡ ಸಂಪಂಗಿ ಎಂಬ ಕೋಡಂಗಿ/column/ravibelagere/2009/0203-sampangi-the-rotten-kgf-mla.htmlಶಾಸಕ ಸಂಪಂಗಿ ಅಕ್ಕ ಪಕ್ಕದವರ ಮುಖಕ್ಕೆ ಮಸಿ ಬಳಿದು ತಾನು ಅಮೇಧ್ಯದ ಡ್ರಮ್ಮಿನಲ್ಲೇ ಮುಳುಗಿ ಜೈಲು ತಲುಪಿಕೊಂಡಿದ್ದಾನೆ. ಇಷ್ಟು ದಿನ 'ಆಪರೇಷನ್ ಕಮಲ' ಅನ್ನುತ್ತಿದ್ದವರು 'ಆಪರೇಷನ್ ಮಲ' ಅನ್ನತೊಡಗಿದ್ದಾರೆ. ದಲಿತನೆಂಬ ಯಾವ ರಿಯಾಯಿತಿಯನ್ನೂ ಕೊಡದೆ ಶಾಸಕ ಸಂಪಂಗಿಯನ್ನು ಕ್ಯಾಕರಿಸಿ ಆಚೆಗಟ್ಟಬೇಕು. ಲೋಕಾಯುಕ್ತ ಸಂತೋಷ್ ಹೆಗ್ಗಡೆ ಮತ್ತು ಅವರ ಸಿಬ್ಬಂದಿಯವರು ದೊಡ್ಡ ಬೇಟೆ ಆಡಿದ್ದಾರೆ. ಗುಮಾಸ್ತರಿಗಷ್ಟೇ ಸೀಮಿತವಾಗಿದ್ದ ನೇಣು 34449http://kannada.oneindia.com/img/2009/02/03-sampangi-y2e.jpg109196ravi belagereಮುತಾಲಿಕರ ಪುಂಡಾಟಿಕೆ ಮತ್ತು ವ್ಯಾಲಂಟೈನ್ ಮನಸುಗಳು/column/ravibelagere/2009/0209-who-is-pramod-mutalik-to-stop-valentines-day.htmlಕಾಲ ಬದಲಾಗಿದೆ. ಹುಡುಗ ಹುಡುಗಿಯರು ಪ್ರೇಮ ನಿವೇದನೆ ಮಾಡಿಕೊಳ್ಳುವುದು, ಬಾಳ ಸಂಗಾತಿಯನ್ನು ಹುಡುಕಿಕೊಳ್ಳುವುದು ಅವರವರಿಗೆ ಬಿಟ್ಟ ವಿಚಾರ. ವೈಯಕ್ತಿಕ ಸ್ವಾತಂತ್ರ್ಯ ಹರಣವಾಗುವುದನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ಹುಡುಗ ಹುಡುಗಿಯರು ಸಾರ್ವಜನಿಕವಾಗಿ ಅಸಹ್ಯವಾಗಿ ವರ್ತಿಸುತ್ತಿದ್ದರೆ ಅವರನ್ನು ದಾರಿಗೆ ತರಲು ಬೇಕಾದಷ್ಟು ಮಾರ್ಗಗಳಿವೆ, ಆದರೆ ಪುಂಡಾಟಿಕೆಯಿಂದಲ್ಲ. ಇದನ್ನು ಮುತಾಲಿಕ್ ಮತ್ತು ಅವರ ಶ್ರೀರಾಮಸೇನೆ ಅರಿತುಕೊಳ್ಳುವುದು ಉತ್ತಮ.* ರವಿ ಬೆಳಗೆರೆ"ಹುಡುಗ ಹುಡುಗಿ ಒಟ್ಟಿಗಿರುವುದನ್ನು 34554http://kannada.oneindia.com/img/2009/02/09-velentines1.jpg109197soorya shikariದೇವೇಗೌಡರ ಹೆಗಲ ಮೇಲಿಂದ ಜ್ಞಾನಪೀಠಿ ಕೈ ತೆಗೆಯಲಿ!/column/ravibelagere/2008/1229-ur-ananthamurthy-voices-against-mining.htmlನಾಡಿನ ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಮೊನ್ನೆ ಗಂಭೀರವಾದ ವಿಷಯವೊದನ್ನು ಪ್ರಸ್ತಾಪಿಸಿದ್ದಾರೆ. ಗಣಿಗಾರಿಕೆ ಅನ್ನುವುದೇ ಮುಲತಃ ಅವ್ಯವಹಾರ. ಹೀಗಾಗಿ ಈ ಗಣಿಗಾರಿಕೆ ಕೆಲಸ ಏನಿದೆ? ಅದರ ವಿರುದ್ಧವೇ ಹೋರಾಡಬೇಕು ಅನ್ನುವುದು ಅವರ ಕಥೆ. ನಿಜ, ಅವರ ಮಾತಿನ ಹಿನ್ನೆಲೆಯಲ್ಲಿರುವ ಉದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಇವತ್ತು ಗಣಿಗಾರಿಕೆ ಮೂಲಕ ತೆಗೆಯುತ್ತಿರುವ ಕಬ್ಬಿಣದ ಅದಿರೇನಿದೆ? ಈ ಅದಿರನ್ನು 33750http://kannada.oneindia.com/img/2008/12/29-ura5.jpg109197soorya shikariಇಮೇಲಿನಲ್ಲಿ ಪತ್ರಕರ್ತ ರವಿಬೆಳಗೆರೆ ಬಂಧನ/column/ravibelagere/2009/0119-here-is-ravi-belagere-email-id.htmlನೀವು ಪತ್ರಿಕೆಯಲ್ಲಿ ನಿಮ್ಮ ಮೊಬೈಲ್ ನಂಬರೂ ಹಾಕುವುದಿಲ್ಲ. ಆಫೀಸಿನ ಫೋನಿಗೂ ಸಿಕ್ಕುವುದಿಲ್ಲ. ಕಡೇ ಪಕ್ಷ mail-id ಕೊಡುತ್ತೀರಾ ಅಂತ ನೋಡಿದರೆ, ಅದೂ ಇಲ್ಲ. ಇದೆಂಥ ನಿಗೂಢ ಪತ್ರಿಕೋದ್ಯಮ ಅಂತ ಕೆಲವರು ಬೇಜಾರು ಮಾಡಿಕೊಳ್ಳುತ್ತಿದ್ದಾರೆ.ಆಫೀಸಿನ ಫೋನಿಗೆ ನಾನು ಭಾನುವಾರಗಳಲ್ಲಿ ಸಾಮಾನ್ಯವಾಗಿ ಸಿಗುತ್ತೇನೆ: ಊರಲ್ಲಿದ್ದರೆ. 080-26790805ಗೆ ಯಾವ ಭಾನುವಾರ ಬೇಕಾದರೂ ಮಾಡಬಹುದು. ಉಳಿದಂತೆ ಎಸ್ಸೆಮ್ಮೆಸ್ ಕಳಿಸಲಿಕ್ಕೆಂದೇ 99166 74753 ನಂಬರಿನ 34151http://kannada.oneindia.com/img/2009/01/19-ravibelegere4.jpg109197soorya shikariದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರ್/column/ravibelagere/2009/0223-gopal-hosur-mangaluru-igp.htmlಬೆಂಗಳೂರು ಕಂಡ ದಕ್ಷ ಮತ್ತು ನಿಸ್ಪೃಹ ಅಧಿಕಾರಿಗಳಲ್ಲಿ ಗೋಪಾಲ್ ಹೊಸೂರ್ ಒಬ್ಬರು. ಪ್ರಸ್ತುತ ಅಪರಾಧಗಳ ಬೀಡಾಗಿರುವ ಮಂಗಳೂರಿಗೆ ಐಜಿಪಿಯಾಗಿ ಹೋಗಿರುವ ಹೊಸೂರ್ ಅವರ ವೃತ್ತಿಜೀವನದ ಮೆಲುಕು ಹಾಕಿದ್ದಾರೆ ರವಿ ಬೆಳಗೆರೆ. ಕೊಲೆ, ದರೊಡೆ, ಸುಲಿಗೆ ಮಾಡಿ ಸಿಕ್ಕಿಬೀಳುವ ಕೊಲೆಗಡುಕರು, ಕಳ್ಳಕಾಕರು ಟೀವಿ, ಪತ್ರಿಕೆಗಳಲ್ಲಿ ರಾರಾಜಿಸುವ ಬದಲು ಇಂಥ ಪೊಲೀಸ್ ಅಧಿಕಾರಿಗಳೂ ಕಾಣಿಸಿಕೊಳ್ಳುವಂತಾಗಲಿ.'ಶಂಕರಣ್ಣ' ಅಂತಲೇ ಕರೆಯುತ್ತೇನೆ ಶಂಕರ ಮಹದೇವ 34816http://kannada.oneindia.com/img/2009/02/23-gopal-hosur1.jpg109197soorya shikariಐವತ್ತರ ಇಳಿಜಾರಲ್ಲಿ ಹೆಜ್ಜೆ ಹುಶಾರು ಸರ್!/column/ravibelagere/2009/0309-be-careful-when-you-cross-fifty.htmlಹತ್ತುವುದು ಸುಲಭ. ಪರ್ವತವೊಂದಷ್ಟೇ ಅಲ್ಲ: ಬದುಕಿನ ಏಣಿ ಹತ್ತುವುದೂ ಸುಲಭ. ಮೇಲಿರುವವರು ಯಾರೋ ಕೈಯ್ಯಾಸರೆ ಕೊಟ್ಟು ಎಳೆದುಕೊಂಡು ಬಿಡುತ್ತಾರೆ. ಕೆಳಗಿನವರು ಯಾವುದೋ ಪ್ರೀತಿಗೆ ಬಿದ್ದು ಮೇಲಕ್ಕೆ ಎತ್ತುತ್ತಾರೆ. ಹತ್ತಿದ ಸುಸ್ತು ಗೊತ್ತಾಗುವುದರೊಳಗಾಗಿ ಮೇಲಕ್ಕೆ ತಲುಪಿ ಬಿಡುತ್ತೇವೆ. ಹತ್ತಿದ್ದು ನಾನೇನಾ ಅಂತ ಆಶ್ಚರ್ಯವಾಗುವಂಥ ಯಮ ಎತ್ತರಗಳಿಗೆ ಹತ್ತಿಬಿಟ್ಟಿರುತ್ತೇವೆ. ನಾನಂತೂ ಸಮುದ್ರದ ಮಟ್ಟಕ್ಕಿಂತ ತುಂಬ ಕೆಳಗಿರುವ ಮೋರಿಯ ಆಳದಿಂದ ಮೇಲೆ 35102http://kannada.oneindia.com/img/2009/03/09-couple-aged1.jpg109197soorya shikariಅಷ್ಟು ಪ್ರೀತಿ ಪಡೆದ ನಾನು ಅಂದೇ ಸತ್ತುಹೋಗಬೇಕಿತ್ತು!/column/ravibelagere/2009/0826-my-dear-you-wont-find-better-lover-than-me.htmlಅಷ್ಟು ಪ್ರೀತಿಯಿಂದ ನೀನು ಯಾವತ್ತೂ ಉಣಬಡಿಸಿರಲಿಲ್ಲವೇನೋ? ಬೆರಳ ತುದಿಯಲ್ಲಿ ಮೊಸರಕೆನೆ ನೆಕ್ಕಿಸಿದವಳು ಯಾವಾಗ ಜೇನು ಬೆರೆಸಿದ್ದೆಯೋ? ನೀನು ಒಂದೊಂದಾಗಿ ಕಿಟಕಿಯ ಪರದೆಗಳನ್ನು ಹಾಕುತ್ತ ಬಂದೆ. ಅದು ಮೇಘ ಮಂಥನದ ಆಹ್ವಾನ. ನನ್ನೊಳಗಿನ ನಾಭಿಯಾಳದಲ್ಲಿ ಪ್ರಾಣ ಬಂದಿತ್ತು. ನಿನ್ನ ಮೈಯ ಘಮದಲ್ಲಿ ಈಸು ಬಿದ್ದ ಘಳಿಗೆ, ನನ್ನನ್ನು ನಾನು ಇಡಿಯಾಗಿ ಮರೆತಿದ್ದೆ.* ನಿನ್ನವನುಒಂದ್ನಿಮಿಷ! ಹೊರಡುವ ನಿನ್ನ ಸಡಗರಕ್ಕೆ ನಾನು 38844http://kannada.oneindia.com/img/2009/08/26-beautiful-eyes1.jpg283822veerappanದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರ್/column/ravibelagere/2009/0223-gopal-hosur-mangaluru-igp.htmlಬೆಂಗಳೂರು ಕಂಡ ದಕ್ಷ ಮತ್ತು ನಿಸ್ಪೃಹ ಅಧಿಕಾರಿಗಳಲ್ಲಿ ಗೋಪಾಲ್ ಹೊಸೂರ್ ಒಬ್ಬರು. ಪ್ರಸ್ತುತ ಅಪರಾಧಗಳ ಬೀಡಾಗಿರುವ ಮಂಗಳೂರಿಗೆ ಐಜಿಪಿಯಾಗಿ ಹೋಗಿರುವ ಹೊಸೂರ್ ಅವರ ವೃತ್ತಿಜೀವನದ ಮೆಲುಕು ಹಾಕಿದ್ದಾರೆ ರವಿ ಬೆಳಗೆರೆ. ಕೊಲೆ, ದರೊಡೆ, ಸುಲಿಗೆ ಮಾಡಿ ಸಿಕ್ಕಿಬೀಳುವ ಕೊಲೆಗಡುಕರು, ಕಳ್ಳಕಾಕರು ಟೀವಿ, ಪತ್ರಿಕೆಗಳಲ್ಲಿ ರಾರಾಜಿಸುವ ಬದಲು ಇಂಥ ಪೊಲೀಸ್ ಅಧಿಕಾರಿಗಳೂ ಕಾಣಿಸಿಕೊಳ್ಳುವಂತಾಗಲಿ.'ಶಂಕರಣ್ಣ' ಅಂತಲೇ ಕರೆಯುತ್ತೇನೆ ಶಂಕರ ಮಹದೇವ 34816http://kannada.oneindia.com/img/2009/02/23-gopal-hosur1.jpg283822veerappanರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ/movies/controversy/2009/04/05-money-paid-to-rajkumar-release-shivrajkumar.htmlಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಖಾಕ್ಕಿಳಿಯಲಿದ್ದಾರೆ ಎನ್ನುವ ಗಾಳಿ ಸುದ್ದಿ ಠುಸ್ ಆಗುವ ಮುನ್ನವೇ ಸ್ವತಃ ಶಿವರಾಜ್ ಕುಮಾರ್ ದೊಡ್ಡದೊಂದು ಅಣು ಬಾಂಬ್ ಎಸೆದಿದ್ದಾರೆ. ನರಹಂತಕ ವೀರಪ್ಪನ್ ಕಪಿಮುಷ್ಟಿಯಿಂದ ಡಾ.ರಾಜ್ ಕುಮಾರ್ ಅವರನ್ನು ಬಿಡಿಸಿಕೊಂಡ ಬರಲು ಹಣ ಕೊಟ್ಟಿದ್ದು ನಿಜ ಎಂದು ಶಿವಣ್ಣ ಅವರು ಬಹಿರಂಗಪಡಿಸಿದ್ದಾರೆ. ಅಪ್ಪಾಜಿ ಅವರನ್ನು ಬಿಡಿಸಿಕೊಂಡು ಬರಲು 35737http://kannada.oneindia.com/img/2009/04/05-rajkumar-kidnap1.jpg283822veerappanಬಿಸಿಲ ಹೊತ್ತು ಪಾರ್ವತಮ್ಮ ರಾಂಗಾದರು!/movies/controversy/2009/04/12-parvathamma-irked-by-shivaraj-statement.htmlಮಾತು ಆಡಿದರೆ ಹೋಯ್ತು. ಮುತ್ತು ಒಡೆದರೆ ಹೋಯ್ತು ಎನ್ನುವ ಮಾತು ಗೊತ್ತಲ್ಲ! ಈ ನಾಣ್ಣುಡಿ ನಟ ಶಿವರಾಜ್‌ಕುಮಾರ್‌ಗೆ ಗೊತ್ತೋ ಇಲ್ಲವೋ ತಿಳಿದಿಲ್ಲ. ಆದರೆ, ಅಂಥ ಅನುಭವ ಅವರಿಗೆ ಹೊಸದೇನೂ ಅಲ್ಲ. ಸಿನಿಮಾದಿಂದ ಸಮಾಜ ಸುಧಾರಣೆ ಸಾಧ್ಯವಿಲ್ಲ. ಜನ ಸಿನಿಮಾ ನೋಡಿ ಏನನ್ನೂ ಕಲಿಯೊಲ್ಲ ಎಂದು ಬಿಡುಬೀಸಾಗಿ ಹೇಳಿದ್ದ ಶಿವಣ್ಣ ಆಮೇಲೆ ಕೈಕೈ ಹಿಸುಕಿಕೊಂಡಿದ್ದರು. ನಂತರದ ದಿನಗಳಲ್ಲಿ ಪತ್ರಕರ್ತರಿಗೆ 35889http://kannada.oneindia.com/img/2009/04/12-parvathamma3.jpg283822veerappanವೈಎಸ್ಆರ್ : ಭೂತದಂತೆ ಕಾಡುತ್ತಿರುವ ಪ್ರಶ್ನೆಗಳು!/response/2009/0904-ysr-rajasekhara-reddy-unanswered-questions.html* 24 ಗಂಟೆಗಳೊಳಗೆ ವೈ‌ಎಸ್‌ಆರ್ ದೇಹ ಪತ್ತೆಯಾಯಿತು. ವರ್ಷಗಳ ಕಾಲ ಪ್ರಯತ್ನಿಸಿದರೂ ವೀರಪ್ಪನ್ ಯಾಕೆ ಪತ್ತೆಯಾಗಲಿಲ್ಲ?* ಮುಖ್ಯಮಂತ್ರಿಗಳನ್ನೇ ಪ್ರತಿಕೂಲ ಹವಾಮಾನದಲ್ಲಿ ಅಸುರಕ್ಷಿತ ವಾಹನ ಹತ್ತಿಸುವ ನಮ್ಮ ವ್ಯವಸ್ಥೆಯು ಶ್ರೀಸಾಮಾನ್ಯರಿಗೆ ಇನ್ನೇನು ರಕ್ಷಣೆ ನೀಡೀತು?* ಸ್ವಯಂ ತಮಗೇ ಮುಳುವಾಗಬಹುದಾದ ಪ್ರತಿಕೂಲ ಹವಾಮಾನವನ್ನಾಗಲೀ ತಮ್ಮ ವಾಹನದ ಸ್ಥಿತಿಯನ್ನಾಗಲೀ ಗಮನಿಸದ ಜನನಾಯಕರು ಜನರ ರಕ್ಷಣೆಯನ್ನು ಅದೆಷ್ಟರಮಟ್ಟಿಗೆ ಗಮನಿಸಿಯಾರು?* ಬದುಕಿದ್ದಾಗ 'ಸ್ವಾರ್ಥಿ, ಪಕ್ಷಪಾತಿ, 39008http://kannada.oneindia.com/img/2009/09/04-ysr3.jpgnews"> ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರ್ | Gopal Hosur | Police Commissioner | Ravi Belagere - ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರ್ - Kannada Oneindia

ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರ್

Gopal Hosur, Mangaluru IGP
ಬೆಂಗಳೂರು ಕಂಡ ದಕ್ಷ ಮತ್ತು ನಿಸ್ಪೃಹ ಅಧಿಕಾರಿಗಳಲ್ಲಿ ಗೋಪಾಲ್ ಹೊಸೂರ್ ಒಬ್ಬರು. ಪ್ರಸ್ತುತ ಅಪರಾಧಗಳ ಬೀಡಾಗಿರುವ ಮಂಗಳೂರಿಗೆ ಐಜಿಪಿಯಾಗಿ ಹೋಗಿರುವ ಹೊಸೂರ್ ಅವರ ವೃತ್ತಿಜೀವನದ ಮೆಲುಕು ಹಾಕಿದ್ದಾರೆ ರವಿ ಬೆಳಗೆರೆ. ಕೊಲೆ, ದರೊಡೆ, ಸುಲಿಗೆ ಮಾಡಿ ಸಿಕ್ಕಿಬೀಳುವ ಕೊಲೆಗಡುಕರು, ಕಳ್ಳಕಾಕರು ಟೀವಿ, ಪತ್ರಿಕೆಗಳಲ್ಲಿ ರಾರಾಜಿಸುವ ಬದಲು ಇಂಥ ಪೊಲೀಸ್ ಅಧಿಕಾರಿಗಳೂ ಕಾಣಿಸಿಕೊಳ್ಳುವಂತಾಗಲಿ.

'ಶಂಕರಣ್ಣ' ಅಂತಲೇ ಕರೆಯುತ್ತೇನೆ ಶಂಕರ ಮಹದೇವ ಬಿದರಿಯವರನ್ನ. ಅದು ನನ್ನ ಮತ್ತು ಅವರ ನಡುವಿನ ಆತ್ಮೀಯತೆ. ನಾನು ಹಾಗೆ ಪ್ರೀತಿಯಿಂದ ಮಾತನಾಡಿಸುವ ಕೇಲವೇ ಕೆಲವು ಪೊಲೀಸ್ ಅಧಿಕಾರಿಗಳು ರಾಜ್ಯದಲ್ಲಿದ್ದಾರೆ. ನಾನು ಪತ್ರಿಕೋದ್ಯಮಕ್ಕೆ ಬಂದ ಹೊಸತರಲ್ಲಿ ಅಧಿಕಾರಿಗಳಾಗಿದ್ದವರಲ್ಲಿ ಅನೇಕರು ಈಗ ನಿವೃತ್ತರು. ಕೆಲವರು ಗತಿಸಿಯೂ ಹೋಗಿದ್ದಾರೆ. ಕೆಲವರು ಅತ್ಯುನ್ನತ ಸ್ಥಾನಗಳಿಗೆ ತಲುಪಿಕೊಂಡಿದ್ದಾರೆ. ಮೊನ್ನೆ ಡಿಜಿಪಿ ಆಗಿ ನಿವೃತ್ತರಾದ ಆರ್. ಶ್ರೀಕುಮಾರ್ ನನ್ನ ಅಂತರಂಗದ ಮಿತ್ರರಾಗಿದ್ದವರು. ಈಗಿನ ಡಿಜಿಪಿ ಅಜಯ್ ಕುಮಾರ್ ಸಿಂಗ್ ಅವರು ಎಂಥ ನಿಸ್ಪೃಹರೆಂದರೆ, ನಾನು ಅವರ ಅಭಿಮಾನಿ.

ಹಾಗಂತ ನಾನು ಪೊಲೀಸ್ ಪಡೆಯ ಬಗ್ಗೆ ಯಾವತ್ತೂ ಅಂಥ ಬೆರಗು, ಆಕರ್ಷಣೆ ಇಟ್ಟುಕೊಂಡವನಲ್ಲ. ತುಂಬ ಹೊತ್ತು ಪೊಲೀಸರೊಂದಿಗೆ ಕಳೆದವನೂ ಅಲ್ಲ. ಬಿಕೆ ಶಿವರಾಂರಂತಹ ಮಿತ್ರರು ನನಗೆ ಬೇರೆಯದೇ ಕಾರಣಕ್ಕೆ ಆತ್ಮೀಯರಾದವರು. ಪೊಲೀಸ್ ಅಧಿಕಾರಿಗಳ ಜೊತೆಗೆ ಹಗಲೂ ರಾತ್ರಿ ಓಡಾಟ, ಒಡನಾಟ ಇಟ್ಟುಕೊಂಡುಬಿಟ್ಟರೆ ಏನೇನು ಅನಾಹುತಗಳಾಗುತ್ತವೆ ಎಂಬುದನ್ನು ನಾನು ನಮ್ಮ ವರದಿಗಾರರಿಗೆ ಎಚ್ಚರಿಸಿ ಹೇಳುತ್ತಿರುತ್ತೇನೆ. ಈ ಹುಡುಗರು, ಅದರಲ್ಲೂ ಕ್ರೈಂ ರಿಪೋರ್ಟರುಗಳು ಕ್ರಮೇಣ ಪೊಲೀಸರವೇ ಮ್ಯಾನರಿಸಂಗಳನ್ನು ಕಲಿಯುತ್ತಾರೆ. ಅವರಂತೆಯೇ ಮಾತನಾಡತೊಡುತ್ತಾರೆ. ಶೈಲಿ ಅತಿರಂಜಕವಾಗಿಬಿಡುತ್ತದೆ. ಒಬ್ಬ ಪತ್ರಕರ್ತನಿಗೆ ಇವೆಲ್ಲ ಕ್ರಮೇಣ ವ್ಯಸನಗಳಾಗಿ, ಲಿಮಿಟೇಶನ್ನುಗಳಾಗಿ ಪರಿಣಮಿಸಿಬಿಡುತ್ತವೆ. ಪತ್ರಕರ್ತ ಬ್ಲಾಟಿಂಗ್ ಪೇಪರಿನಂತಾಗಬಾರದು. ದೂರ ನಿಂತು ವಾಚ್ ಮಾಡುವ, ಗೇಜ್ ಮಾಡುವ, ಇದು ಇಷ್ಟೇ ಎಂದು ತೀರ್ಮಾನ ಮಾಡುವ, ಹೀಗೂ ಇರಬಹುದಾ ಅಂತ ಅನುಮಾನ ಪಡುವ ಮೆಚ್ಯೂರಿಟಿ ಅವನದಾಗಿರಬೇಕು. ಒಬ್ಬ ಅಧಿಕಾರಿಯನ್ನು ವರ್ಷಗಟ್ಟಲೆ ಟ್ರ್ಯಾಕ್ ಮಾಡಬೇಕು. ಆತನ ಸಾಧನೆ, ನಿಲುವು, ಸ್ವಭಾವ, ಆಸ್ತಿ, ಜನಪ್ರಿಯತೆ, ಜನಪರತೆ ಎಲ್ಲವನ್ನೂ ಮನನ ಮಾಡಿಕೊಳ್ಳಬೇಕು. ಕೇಳಿದರೆ, ಅರ್ಧಗಂಟೆಯಲ್ಲಿ ಅಧಿಕಾರಿಯದೊಂದು ವ್ಯಕ್ತಿಚಿತ್ರ ಬರೆದುಕೊಡುವಂತಿರಬೇಕು.

ನಾನು ಸುಮಾರು ಇಪ್ಪತ್ತೈದು ವರ್ಷಗಳಿಂದ ಹಾಗೆ ಟ್ರ್ಯಾಕ್ ಮಾಡಿದ ಅಧಿಕಾರಿಯ ಹೆಸರು ಗೋಪಾಲ್ ಹೊಸೂರ್. ಮೊನ್ನೆ ಮೊನ್ನೆಯತನಕ ಬೆಂಗಳೂರೆಂಬ ದುರ್ಗಮ ಕೋಟೆಯನ್ನು ಕಾಯ್ದ ಜಾಯಿಂಟ್ ಕಮೀಶನರ್ ಹೊಸೂರ್ ಅವರು ಮಂಗಳೂರಿಗೆ ಐಜಿಪಿಯಾಗಿ ಹೋಗಿದ್ದಾರೆ. ಇಂಗ್ಲಿಷಿನಲ್ಲಿ unassuming ಎಂಬ ಶಬ್ದವೊಂದಿದೆ. ಅದಕ್ಕೆ ಹೇಳಿ ಮಾಡಿಸಿದವರು ಗೋಪಾಲ ಹೊಸೂರ್. ಪ್ರಚಾರಪ್ರಿಯರಲ್ಲ: ಆದರೆ ಪತ್ರಕರ್ತರಿಗೆ ವ್ಯಕ್ತಿಗತ ಮಟ್ಟದಲ್ಲಿ ಆಪ್ತರು. ಯಾವ ರಾಜಕಾರಣಿಗೂ, ಯಾವ ಅಧಿಕಾರಿಗೂ ಅಂಗಲಾಟಿ ಕಾಣಿಸಿಕೊಂಡವರಲ್ಲ. ಆದರೆ ಬೆಂಗಳೂರು ಕಂಡ ಒಂಬತ್ತು ಮಂದಿ ಪೊಲೀಸ್ ಕಮೀಷನರುಗಳ ಪಾಲಿಗೆ ಅತ್ಯಂತ ಸಂಬಿಗಸ್ಥ, ಆತ್ಮೀಯ blue eyed boy ಆಗಿದ್ದವರು.

ನಾನು ಹೊಸೂರ್ ಅವರ ಹೆಸರನ್ನು ಮೊದಲ ಬಾರಿಗೆ ಕೇಳಿದ್ದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಅವರು ಡಿವೈಎಸ್ಪಿ ಆಗಿದ್ದಾಗ. ಅದಕ್ಕೆ ಮುಂಚೆಯಾಗಲೇ ಅವರು ಅರಸೀಕೆರೆಯಲ್ಲಿ ಇದ್ದು ಬಂದಿದ್ದರು. ಚಿತ್ರದುರ್ಗದಲ್ಲಿ ಜೀಜಾ ಹರಿಸಿಂಗ್ ಮತ್ತು ಶಂಕರ ಬಿದರಿಯವರ ಕೈಕೆಳಗೆ ದುಡಿದು ಪಳಗಿದ್ದರು. ಇವರು ಹೊಸಪೇಟೆಯಲ್ಲಿದ್ದಾಗ ಸರಣಿ ಹತ್ಯೆಗಳಾಗತೊಡಗಿದ್ದವು. ಆದರೆ ಸತ್ತವರ್ಯಾರೂ ಶ್ರೀಮಂತರಲ್ಲ. ಕೆಲವು ಕಡೆ ಸತ್ತವರ ಪರವಾಗಿ ಕಂಪ್ಲೇಂಟು ಕೊಡುವವರೂ ದಿಕ್ಕಿರುತ್ತಿರಲಿಲ್ಲ. ಹೆಚ್ಚಿನವರು ಯಲ್ಲಮ್ಮ ದೇವಿಯ ಕೊಡ ಹೊತ್ತು ತಿರುಗುವ ಜೋಗತಿಯರು. ಆದರೆ ಹೊಸೂರ್ ಅದೊಂದು ದಿನ ವಡ್ಡರ ಸುಂಕ ಎಂಬ ಹಂತಕನನ್ನು ಬಂಧಿಸಿ ತಂದೇಬಿಟ್ಟರು. ಜೋಗಿತಿಯರನ್ನು ಕರೆದೊಯ್ದು ಕೊಲೆ ಮಾಡುವುದು ಅವನ ಪಾಲಿಗೆ ವ್ಯಸನವಾಗಿತ್ತು. ನ್ಯಾಯಾಲಯದಲ್ಲಿ ಸುಂಕನಿಗೆ ಮರಣದಂಡನೆ ಆಗುವತನಕ ಹೊಸೂರ್ ಕೇಸಿನ ಬೆನ್ನು ಬಿಟ್ಟಿರಲಿಲ್ಲ.

ಆಗಲೇ ಪತ್ರಕರ್ತ ಮಿತ್ರರಿಗೆ ಹೊಸೂರ್ ಬಗ್ಗೆ ವಿಶ್ವಾಸ ಮೂಡತೊಡಗಿದ್ದು. ಮುಂದೆ ಕೆಲಕಾಲ ಬೆಂಗಳೂರಿನಲ್ಲಿ ಎಸಿಪಿಯಾಗಿದ್ದ ಹೊಸೂರ್ ಎಂಥ ಉತ್ಸಾಹಿಯೆಂದರೆ, ವೀರಪ್ಪನ್‌ನನ್ನು ಬಂಧಿಸಲು STF ರಚನೆಯಾದಾಗ ಸ್ವಯಂಪ್ರೇರಿತರಾಗಿ ಸರ್ಕಾರವನ್ನು ವಿನಂತಿಸಿ, ಕಾಡಿಗೆ ಹೋದರು. ಆಗ ವೀರಪ್ಪನ್‌ನ ಪೈಶಾಚಿಕತೆ ಪರಮಾವಧಿ ಮುಟ್ಟಿತ್ತು. ಹರಿಕೃಷ್ಣ ಎಂಬ ಅಧಿಕಾರಿ STF ಪಡೆಯ ಮುಖ್ಯಸ್ಥರಾಗಿದ್ದರು. ವೀರಪ್ಪನ್ ವಿರುದ್ಧ ಯಾವ ರೀತಿಯ ಕಾರ್ಯಾಚರಣೆ ಮಾಡಬೇಕು ಎಂಬ ವಿಷಯದಲ್ಲಿ ಹರಿಕೃಷ್ಣ ಮತ್ತು ಹೊಸೂರ್ ಮಧ್ಯೆ ಭಿನ್ನಾಭಿಪ್ರಾಯಗಳು ಬಂದವು. ಹರಿಕೃಷ್ಣ ದಿಟ್ಟ ಅಧಿಕಾರಿಯೇ ಆದರೂ ವಿಪರೀತ ಹುಂಬತನ ಅವರಲ್ಲಿತ್ತು. ಅವರೊಂದಿಗೆ ಹಾಕ್ಯಾಡಿ ಪ್ರಯೋಜನವಿಲ್ಲವೆಂದು ತೀರ್ಮಾನಿಸಿ ಗೋಪಾಲ ಹೊಸೂರ್ ಮಲೆಮಹದೇಶ್ವರ ಬೆಟ್ಟದಿಂದ ಹಿಂತಿರುಗಿಬಿಟ್ಟರು. ಅತ್ತ ಹರಿಕೃಷ್ಣ ತಾವೂ ಹತರಾದರಲ್ಲದೆ ತಮ್ಮ ಸಿಬ್ಬಂದಿಯ್ನೂ ಬಲಿ ಕೊಟ್ಟರು.

ಗೋಪಾಲ ಹೊಸೂರ್ ಅವರು ಹುಬ್ಬಳ್ಳಿ-ಧಾರವಾಡದ ಕಮೀಶನರ್ ಆಗಿದ್ದ ಕಾಲ, ಅದು ಅವಳಿ ನಗರಗಳ ಪಾಲಿಗೆ ಸುವರ್ಣ ಕಾಲ. ಜನಪರವಾದ ಅನೇಕ ಕೆಲಸಗಳನ್ನು ಮಾಡಿದ ಹೊಸೂರ್ ತಮ್ಮ ನಿಸ್ಪೃಹತೆಗೂ ಹೆಸರಾದರು. ಮುಂದೆ ಹೊಸೂರ ಮತ್ತು ಶಂಕರ ಬಿದರಿ ಜೋಡಿ STFನ ಬಾವುಟ ಹಿಡಿದು ಮತ್ತೆ ಮಲೆಮಹದೇಶ್ವರ ಬೆಟ್ಟ ಹತ್ತಿತ್ತು. ವೀರಪ್ಪನ್ ಮತ್ತೂ ವ್ಯಗ್ರನಾಗಿದ್ದ. ಅವನ ಬಲಗೈ ಬಂಟನಾಗಿದ್ದ ಗುರುನಾಥನನ್ನು ಹತ್ಯೆ ಮಾಡುವುದರಲ್ಲಿ ಗೋಪಾಲ ಹೊಸೂರ್‌ರ ಪಾತ್ರವಿತ್ತು. ಇದರಿಂದ ವೀರಪ್ಪನ್ ಎಷ್ಟು ವ್ಯಗ್ರನಾದನೆಂದರೆ, ಅದೊಂದು ದಿನ ಪೊಲೀಸ್ ಪಡೆಯ ಮೇಲೆಯೇ ಅನಾಹುತಕಾರಿ ರೀತಿಯಲ್ಲಿ ಮುರಕೊಂಡುಬಿದ್ದ. ಒಂದು ಗುಂಡು ಗೋಪಾಲ ಹೊಸೂರ ಅವರ ಕುತ್ತಿಗೆಗೆ ಹೊಕ್ಕಿತ್ತು. ಆಗ ಅವರು ಬದುಕುಳಿದದ್ದು ದೊಡ್ಡ ಪವಾಡ. ಗುಂಡು ಬಿದ್ದ ನಂತರವೂ ಹೊಸೂರ್ ಶತ್ರುವಿನತ್ತ ಫೈರ್ ಮಾಡುತ್ತಲೇ ಇದ್ದರು.

"ಎಲ್ಲ ಸರಿ ಸ್ವಾಮೀ, ಈ ಹನ್ನೆರಡು ಜನ ಮಹಿಳಾ ಇನ್ಸ್‌ಪೆಕ್ಟರುಗಳನ್ನು ಹೇಗೆ ಸಂಭಾಳಿಸುತ್ತೀರಿ" ಅಂತ ನಾವು ತಮಾಷೆ ಮಾಡುತ್ತಿದ್ದುದು, ವರದಕ್ಷಿಣೆ ವಿರೋಧಿ ದಳಕ್ಕೆ ಅವರು ಮುಖ್ಯಸ್ಥರಾಗಿದ್ದಾಗ! ಬೇರೆ ಯಾರಕೈಗಾದರೂ ಕೇಸು ಕೊಡಿ. ಈ ಮಹಿಳಾ ಇನ್ಸ್‌ಪೆಕ್ಟರುಗಳ ಕೈಗೆ ನಮ್ಮನ್ನು ಒಪ್ಪಿಸಬೇಡಿ ಎಂದು ಅನೇಕ ಗಂಡಸರು ಹೊಸೂರ್ ಅವರಿಗೆ ಮೊರೆಯಿಡುತ್ತಿದ್ದ ಕಾಲವದು. ಆದರೆ ಹೊಸೂರ್ ತುಂಬ ಜನಪರ ಕಾಳಜಿ ಪ್ರಕಟಪಡಿಸಿದ್ದು, ಅವರು ಬಳ್ಳಾರಿಗೆ ಮತ್ತೆ ಎಸ್ಪಿ ಆಗಿ ಬಂದಾಗ. ತುಂಗಭದ್ರಾ ನದಿಯನ್ನು ಪರಿಸರ ಮಾಲಿನ್ಯದಿಂದ ರಕ್ಷಿಸಲು ಈ ಅಧಿಕಾರಿ ಬಡಿದಾಡತೊಡಗಿದಾಗ BBCಯಂತಹ ಜಾಗತಿಕ ಮಟ್ಟದ ಸುದ್ದಿ ಸಂಸ್ಥೆ ಹೊಸರ್‌ರನ್ನು ಸಂದರ್ಶಿಸಿತ್ತು.

ಆಮೇಲೆ ಹೊಸೂರ್ ದಾವಣಗೆರೆಗೆ ಹೋದರು. ಬೆಂಗಳೂರಿಗೆ ಬಂದರು. ಬೆಂಗಳೂರಿಗೆ ಅವರು ಮಾಡಿದ ಸೇವೆ ದೊಡ್ಡದು. ಹೊಟೇಲ್ ಅಶೋಕಾದಲ್ಲಿ ಫಾರಿನ್ ಎಕ್ಸ್‌ಚೇಂಜ್ ಏಜೆಂಟರೊಬ್ಬರನ್ನು ಕೊಂದು ಪರಾರಿಯಾಗಿದ್ದ ಅತಿ ಚಾಣಾಕ್ಷ ಹಂತಕ ಭಸಕ್‌ನನ್ನು ಇವರು ಕಲ್ಕತ್ತಾದಿಂದ ಹಿಡಿದು ತಂದಾಗ ಊರೇ ನಿಬ್ಬೆರಗಾಗಿತ್ತು. ಇವತ್ತಿಗೂ ಭಸಕ್ ಬೆಂಗಳೂರು ಜೈಲಿನಲ್ಲೇ ಇದ್ದಾನೆ. ಕೇಸನ್ನು ಅಷ್ಟು ಪಕ್ಕಾಗ ರೀತಿಯಲ್ಲಿ ಸಿದ್ದಪಡಿಸಿ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದರು ಹೊಸೂರ್. ಆಮೇಲೇನಿದೆ, ಬೆಂಗಳೂರಿನಲ್ಲಿ ಸುಮಾರು ಐವತ್ತು ಅತ್ಯಂತ ಸೆನ್ಸೇಷನಲ್ ಹತ್ಯೆಗಳಾದವು. ಪ್ರತಿ ಪ್ರಕರಣದಲ್ಲೂ ಹೊಸೂರ್ ಆಸಕ್ತಿವಹಿಸಿದರು. ಚೆಮ್ಮನೂರು ಜ್ಯುಯೆಲರಿ ದರೊಡೆಯಾಗಿ ಕೇಜಿಗಟ್ಟಲೆ ಬಂಗಾರ ಹೋಯಿತು. ಆ ಪ್ರಕರಣದಲ್ಲೂ ಹೊಸೂರ್ ದರೊಡೆಕೋರರನ್ನು ಹಿಡಿದು ತಂದರು. ಎಲ್ಲಕ್ಕಿಂತ ಹೆಚ್ಚು, ಕಿಡ್‌ನ್ಯಾಪಿಂಗ್‌ಗಳಾದಾಗ ಹೊಸೂರ್ ವಹಿಸುತ್ತಿದ್ದ ಮುಂಜಾಗರೂಕರೆ ಮತ್ತು ಕೈಕೆಳಗಿನ ಅಧಿಕಾರಿಗಳಿಗೆ ನೀಡುತ್ತಿದ್ದ ಮಾರ್ಗದರ್ಶನ ಗಮನಾರ್ಹವಾಗಿರುತ್ತಿದ್ದವು.

ಇಷ್ಟು ಸುದೀರ್ಷ ಅನುಭವವಿರುವ ಹೊಸೂರ್, ಈಗ ನಾಲ್ಕು ಜಿಲ್ಲೆಗಳಿಗೆ ಅಧಿಪತಿಯಾಗಿ ಮಂಗಳೂರಿಗೆ ಹೋಗಿದ್ದಾರೆ. ಅಲ್ಲಿ ಸಮಸ್ಯೆಗಳ ಬೆಟ್ಟವೇ ಇದೆ. ಹಿಂದೂ-ಮುಸ್ಲಿಂ ಪುಂಡರು ಸಮಸಂಖ್ಯೆಯಲ್ಲಿದ್ದಾರೆ. ಮುಂಬಯಿಯ ಅಂಡರ್‌ವರ್ಲ್ಡ್‌ಗೆ ಮಂಗಳೂರು ಬ್ರ್ಯಾಂಚ್ ಆಫೀಸು. ಪಾಕಿಸ್ತಾನದ ಕೈಗಳು ಕರಾವಳಿಯ ತನಕ ಹಬ್ಬಿವೆ. ಪಶ್ಚಿಮ ಘಟ್ಟದ ಬೆಟ್ಟಗಳಲ್ಲಿ ನೊಂದ ಬಡವರ ಮಧ್ಯೆ ಸಕ್ಸಲರಿದ್ದಾರೆ. ಅಂತೆಯೇ ಜಯಂತ್ ಶೆಟ್ಟಿ, ರವಿ ನಾರಾಯಣ್‌ರಂತಹ ಡಿಪೆಂಡೇಬಲ್ ಅಧಿಕಾರಿಗಳೂ ಇದ್ದಾರೆ.

ಗೋಪಾಲ ಹೊಸೂರ್ ಉಳಿದೆಲ್ಲ ಕಡೆ ಸಾಧಿಸಿದ್ದನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಮಂಗಳೂರಿನಲ್ಲಿ ಸಾಧಿಸಲಿ.

(ಸ್ನೇಹಸೇತು : ಹಾಯ್ ಬೆಂಗಳೂರು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+