ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಐನೂರು ರೂಪಾಯಿ ಉಳಿಸಿ ಫ್ರಾನ್ಸ್‌ಗೆ ಪ್ರಯಾಣ ಬೆಳೆಸಿ!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಸ್ಥಳ ಯಾವುದೇ ಇರಲಿ, ಪ್ರವಾಸ ಹೊರಡುವುದೆಂದರೆ ಒಂಥರಾ ಖುಷಿ. ಅದಕ್ಕೆ ಕಾರಣ ಪ್ರತಿ ಟ್ರಿಪ್ ಒಂದು ಹೊಸ ಅನುಭವ ಕಟ್ಟಿ ಕೊಡುತ್ತೆ. ನೆನಪಿನ ಬುತ್ತಿಯ ಮತ್ತಷ್ಟು ಹಿಗ್ಗಿಸುತ್ತೆ. ಬದುಕಲ್ಲಿ ಕೊನೆ ತನಕ ನಮ್ಮ ಜೊತೆ ಬರುವುದು ನಮ್ಮ ನೆನಪುಗಳು ಮಾತ್ರ ಎಂದು ಅಚಲವಾಗಿ ನಂಬಿರುವ ನನಗೆ ಪ್ರತಿ ಪ್ರಯಾಣ/ಪ್ರವಾಸ ಒಂದು ಹೊಸ ಬದುಕು! ಮತ್ತು ಆ ಬದುಕ ಬದುಕಲು ಒಂದು ಹೊಸ ಆಯಾಮ ಒದಗಿಸುತ್ತೆ.

ದೇಶ ಕೋಶ : ವಿಶ್ವ ಪರ್ಯಟನೆಯ ಹೊಸ ಅಂಕಣ ಆರಂಭದೇಶ ಕೋಶ : ವಿಶ್ವ ಪರ್ಯಟನೆಯ ಹೊಸ ಅಂಕಣ ಆರಂಭ

ಈಗ ನಾನು ಹೇಳ ಹೊರಟಿರುವುದು ಈಸ್ಟ್ರನ್ ಫ್ರಾನ್ಸ್ ನ ಲೋದ್ಸ್ (Lods) ಎನ್ನುವ ಪುಟಾಣಿ ಹಳ್ಳಿಯ ಬಗ್ಗೆ,. 250 ಜನ ವಾಸಿಸುವ ಈ ಹಳ್ಳಿಯಲ್ಲಿ ಎರಡು ಹೋಟೆಲ್ ಇವೆ, ಒಂದು ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿ ಇದೆ. ಒಂದು ದಿನದಲ್ಲಿ ಇಡಿ ಹಳ್ಳಿಯನ್ನು ಎರಡು ಸಲ ಬರಿಕಾಲಿನಲ್ಲಿ ಸುತ್ತಿಬಿಡಬಹದು! ಅಷ್ಟು ಪುಟ್ಟಪುಟಾಣಿ ಹಳ್ಳಿ.

Lods, the picturesque village in France

ಹಾಗಾದರೆ ಇಲ್ಲಿ ಟೈಮ್ ಪಾಸ್ ಕತೆ ಏನು ಅಂದಿರಾ? ಹಳ್ಳಿಯ ಸುತ್ತ ಓಡಾಡುತ್ತ, ಟೆನಿಸ್, ಮೀನು ಹಿಡಿಯುತ್ತಾ ಕಾಲ ಕಳೆಯಬಹುದು. ಅಂದಹಾಗೆ Loue ನದಿ ತೀರದಲ್ಲಿ ಇರುವ ಈ ಹಳ್ಳಿ most picturistic village ಎಂದು ಪ್ರಸಿದ್ದಿ ಪಡೆದಿದೆ.

ಈ ಹಳ್ಳಿಯ ಜನ ಕೃಷಿ, ಹೈನುಗಾರಿಕೆ ಮತ್ತು ಟೂರಿಸಂ ನಂಬಿ ಜೀವನ ಸಾಗಿಸುತ್ತಾರೆ. ಇವರ ಬೇಕುಗಳು ಕಡಿಮೆ ಇರುವುದರಿಂದ ಸಂತೃಪ್ತ ಜೀವನ ಇವರದಾಗಿದೆ. ಯಾವುದೇ ಗಡಿಬಿಡಿಯಿಲ್ಲದ ಶಾಂತ ಜೀವನ ಇವರದು. ವೇಳೆ ಕೂಡ ಎಲ್ಲಿಗೂ ಹೋಗಿ ವಿರಮಿಸುತ್ತಿದೆ ಎನ್ನುವಷ್ಟು ನಿರಾಳ ವಾತಾವರಣ ಇಲ್ಲಿಯದು. ಬೆಳಕಿನ ಹುಳಗಳಂತೆ ನಗರ ಜೀವನಕ್ಕೆ ಹೊಂದಿಕೊಂಡವರಿಗೆ ಇಲ್ಲಿನ ಪ್ರಶಾಂತತೆ ಇಷ್ಟವಾಗದೆ ಇರಬಹುದು, ಅಂಥವರಿಗೆ ಪ್ಯಾರಿಸ್ ಇದ್ದೆ ಇದೆ.

ಮಾಯೆ 2 : ನದಿಗಳ ಸಂಗಮ ಮತ್ತು ಸಂಗೀತ ಸಂಭ್ರಮ!ಮಾಯೆ 2 : ನದಿಗಳ ಸಂಗಮ ಮತ್ತು ಸಂಗೀತ ಸಂಭ್ರಮ!

ನೀವು ಫ್ರಾನ್ಸ್ ಗೆ ಪ್ರವಾಸ ಹೋಗುವವರಿದ್ದರೆ ಮುಂಚಿತವಾಗಿ ಹೋಟೆಲ್, ಏರ್ ಟಿಕೆಟ್ ಬುಕ್ ಮಾಡಿಕೊಳ್ಳುವುದು ಒಳ್ಳೆಯದು. ಬಹಳ ಸರಳವಾಗಿ ಲೆಕ್ಕ ಹೇಳಿಬಿಡುತ್ತೇನೆ- ಬೆಂಗಳೂರಿನಲ್ಲಿ ನೀವು ಹೇಗೆ ಜೀವಿಸುತ್ತಿದ್ದೀರಿ ಅದೇ ದರ್ಜೆಯ ಬದುಕು ಬದುಕಲು 8 ರಿಂದ 10 ಪಟ್ಟು ಹೆಚ್ಚು ಹಣ ವ್ಯಯಿಸಬೇಕು. ಹೀಗಾಗಿ ಮುಂಗಡ ಕಾಯ್ದಿರಿಸುವುದು ಬಹಳ ಒಳ್ಳೆಯದು. ಒಂದಷ್ಟು ಉಳಿತಾಯವು ಆಗುತ್ತದೆ.

ಬೆಂಗಳೂರಿನಿಂದ ಪ್ಯಾರಿಸ್ ನಗರಕ್ಕೆ ಐವತ್ತು ಸಾವಿರ ರೂಪಾಯಿಯಲ್ಲಿ ಹೋಗಿಬರಲು ವಿಮಾನ ಶುಲ್ಕ ತಗಲುತ್ತದೆ. ನೀವು ಯಾವ ವಿಮಾನ ಸಂಸ್ಥೆಯಲ್ಲಿ ಟಿಕೆಟ್ ಖರೀದಿಸುತ್ತೀರಿ ಎನ್ನುವುದರ ಮೇಲೆ ಇದು ನಿರ್ಧಾರವಾಗುತ್ತೆ. ಸಾಮಾನ್ಯವಾಗಿ ಏರ್ ಫ್ರಾನ್ಸ್ ಅಥವಾ ಏರ್ ಇಂಡಿಯಾದಲ್ಲಿ ಕಡಿಮೆ ದರವಿರುತ್ತದೆ. ಹಾಗೆಯೇ ಹೋಟೆಲ್ ನಲ್ಲಿ ತಂಗುವ ಬದಲು ಅಪಾರ್ಟ್ ಹೋಟೆಲ್, ಅಂದರೆ ಸುಸಜ್ಜಿತ ಅಪಾರ್ಟ್ಮೆಂಟ್ ಅನ್ನು ವಾರಕ್ಕೆ ಅಥವಾ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಕಾಯ್ದಿರಿಸಬಹದು. ಹೋಟೆಲ್ಗಿಂತ 20/30 ಪ್ರತಿಶತ ಉಳಿತಾಯದ ಜೊತೆಗೆ ಅಡುಗೆ ಮನೆಯ ವ್ಯವಸ್ಥೆ ಕೂಡ ಇರುವುದರಿಂದ ಒಂದು ಹೊತ್ತಾದರೂ ಅಡುಗೆ ಮಾಡಿ ತಿನ್ನಬಹದು. ಅಲ್ಲಿಯೂ ಸ್ವಲ್ಪ ಉಳಿತಾಯವಾಗುತ್ತೆ ಜೊತೆಗೆ ಸಸ್ಯಾಹಾರಿಯಾಗಿದ್ದರೆ ಯೂರೋಪಿನಲ್ಲಿ ಬೇರೆ ದಾರಿಯೂ ಇಲ್ಲ!

ಫ್ರಾನ್ಸ್ ದೇಶವನ್ನ schengen ವೀಸಾ ಅಡಿಯಲ್ಲಿ ಸೇರಿಸಲಾಗಿದೆ. ಹೀಗಾಗಿ ಒಮ್ಮೆ ಫ್ರಾನ್ಸ್ ದೇಶದ ವೀಸಾ ಪಡೆದರೆ ಷನ್ಗೆನ್ ದೇಶದ ಪಟ್ಟಿಯಲ್ಲಿ ಬರುವ ಎಲ್ಲಾ 26 ಯೂರೋಪಿನ ದೇಶಗಳನ್ನೂ ಮುಕ್ತವಾಗಿ ಸಂಚರಿಸಬಹದು. ಇದಕ್ಕಾಗಿ ಬೇರೆ ಬೇರೆ ವೀಸಾದ ಅವಶ್ಯಕತೆ ಇರುವುದಿಲ್ಲ.

ಒಬ್ಬ ಮನುಷ್ಯ ವಾರದಿಂದ ಹತ್ತು ದಿನದವರೆಗೆ ಇದ್ದು ಬರಲು ಒಂದು ಲಕ್ಷ ಎಪ್ಪತೈದು ಸಾವಿರದಿಂದ ಎರಡು ಲಕ್ಷ ರೂಪಾಯಿ ಬೇಕಾಗುತ್ತದೆ. ನಮ್ಮ ಮನೆಯಲ್ಲಿದ್ದ ಸುಖ ಬಯಸದೆ ದೇಹದಲ್ಲಿ ಶಕ್ತಿ ಇರುವ ಜನ ಹಾಸ್ಟೆಲ್ ಅಥವಾ ಕಡಿಮೆ ದರದ ಕೇವಲ ಮಲಗಲು ಮತ್ತು ನಿತ್ಯ ಕ್ರಿಯೆ ಮುಗಿಸಲು ಮಾತ್ರ ಇರುವ ಸ್ಥಳಗಳನ್ನ ಬಳಸಿದರೆ ಇನ್ನೂ ಕಡಿಮೆ ಬಜೆಟ್ ನಲ್ಲಿ ದೇಶ ಸುತ್ತಬಹುದು.

ಸುತ್ತಾಡಬಯಸುವವರಿಗೆ ಈ ಸ್ಥಳದ ಕುರಿತು ಇನ್ನಷ್ಟು ಮಾಹಿತಿ...

ಪ್ರವಾಸಿ ಸ್ಥಳ : ಪೂರ್ವ ಫ್ರಾನ್ಸ್
ಭಾಷೆ : ಫ್ರೆಂಚ್
ನಾಣ್ಯ : ಯುರೋ
ವಿನಿಮಯ : 77 ರೂಪಾಯಿ ಒಂದು ಯುರೋಗೆ ಸಮ
ವೇಳೆ ವ್ಯತ್ಯಾಸ : ಮಾರ್ಚ್ - ಅಕ್ಟೋಬರ್ 3 ಗಂಟೆ 30 ನಿಮಿಷ ನಮಗಿಂತ ಹಿಂದೆ. ಅಕ್ಟೋಬರ್ ಕೊನೆಯಿಂದ ಮಾರ್ಚ್ ಕೊನೆವರೆಗೆ 4 ಗಂಟೆ 30 ನಿಮಿಷ ಹಿಂದೆ.
ಎಲ್ಲಿಂದ : ಬೆಂಗಳೂರು, ಕರ್ನಾಟಕ
ಹೋಗಲು ಸೂಕ್ತ ಸಮಯ : ಜುಲೈ, ಆಗಸ್ಟ್, ಸೆಪ್ಟೆಂಬರ್
ವಾತಾವರಣ : ಚಳಿ ದೇಶ, ಜುಲೈ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳು ಬೇಸಿಗೆ
ಬಜೆಟ್ : ಒಂದು ಲಕ್ಷ ಐವತ್ತರಿಂದ ಎರಡು ಲಕ್ಷ, ವ್ಯಕ್ತಿಗೆ ಹತ್ತು ದಿನಕ್ಕೆ

English summary
Desha Kosha : Destination Lods, a village in France with just two hotels. The picturesque village has museum and art gallery too. Personal travelogue by Rangaswamy Mookanahalli, a chartered accountant in Barcelona, Spain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X