ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪ್ಯಾನಿಷ್ ಜನತೆಯ ಬದುಕನ್ನೇ ಬದಲಾಯಿಸಿದ ಆ ಒಂದು ಗಂಟೆ !

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಇಂದಿಗೆ ಸ್ಪೇನ್ ಕ್ಯಾಥೊಲಿಕ್ ದೇಶ , 711 ಇಸವಿಯಲ್ಲಿ ಮುಸ್ಲಿಂ ಸುಲ್ತಾನರು ಸ್ಪೇನ್ ದೇಶವನ್ನು ಆಕ್ರಮಿಸಿದರು , 1491ರ ತನಕ ಸ್ಪೇನ್ ಮುಸ್ಲಿಂ ಸುಲ್ತಾನರ ಕಂಟ್ರೋಲ್ ನಲ್ಲಿ ಇತ್ತು , ಕೊನೆಗೆ ಗೆರ್ರಾ ಸಾಂತ ನೆಡೆದು , ಮುಸ್ಲಿಂ ದೊರೆಗಳಿಂದ ಸ್ಪೇನ್ ಸ್ವತಂತ್ರ ಪಡೆಯಿತು , ಭಾರತದಂತೆ ಡೆಮಾಕ್ರಸಿ ಇದೆ ಆದರೆ ರಾಜ , ಇಂದಿಗೂ ಸೂಪರ್ ಪವರ್ , ಅದಕ್ಕೆ ಕಿಂಗ್ಡಮ್ ಆಫ್ ಸ್ಪೇನ್ ಎಂದೇ ಜಗತ್ತಿನಲ್ಲಿ ಕರೆಯಲಾಗುತ್ತದೆ .

ಮುಸ್ಲಿಂ ಆಳ್ವಿಕೆಯ ದ್ಯೋತಕವಾಗಿ , ಅಂದಲುಸಿಯಾ ರಾಜ್ಯದ ಗ್ರನಡ (granda ) ಎಂಬ ನಗರದಲ್ಲಿ Alhambra ಎನ್ನುವ ಸುಂದರ ಅರಮನೆ ಇದೆ . unesco ದಿಂದ World Heritage Site ಎಂದು ಮಾನ್ಯತೆ ಪಡೆದಿದೆ . al hamara ಎನ್ನುವ ಅರೆಬ್ಬಿ ಪದದಿಂದ ಇದು alhambra ಎಂದು ಸ್ಪ್ಯಾನಿಷ್ ಜನರ ಬಾಯಿಯಲ್ಲಿ ರೂಪಾಂತರ ಗೊಂಡಿದೆ . al hamara ಎಂದರೆ ಕೆಂಪು ಎನ್ನುವ ಅರ್ಥ ಅರಬ್ಬಿಯಲ್ಲಿ , el rojo ಸ್ಪ್ಯಾನಿಷ್ ಸಮಾನರ್ಥಕ ಪದ .

ಮೈಸೂರು ದಸರಾ-ಬಾರ್ಸಿಲೋನಾದ ಕ್ರಿಸ್ಮಸ್; ದೀಪದ ಜಾತಿ ಒಂದೇ !!ಮೈಸೂರು ದಸರಾ-ಬಾರ್ಸಿಲೋನಾದ ಕ್ರಿಸ್ಮಸ್; ದೀಪದ ಜಾತಿ ಒಂದೇ !!

2011ರಲ್ಲಿ ಸ್ಪೇನ್ ನಲ್ಲಿ ಅತಿ ಹೆಚ್ಚು ಯಾತ್ರಿಗಳನ್ನು ಪಡೆದ ಹೆಗ್ಗಳಿಕೆ ಇದರದು , ನೀವು ಇದನ್ನು ವಿಸಿಟ್ ಮಾಡುವ ಇರಾದೆ ಇದ್ದರೆ , 5/6 ತಿಂಗಳು ಮುಂಚೆ ಇಂಟರ್ನೆಟ್ ನಲ್ಲಿ ಬುಕ್ ಮಾಡುವುದು ಲೇಸು ! ಜಗತ್ತಿನ 7 ಅದ್ಭುತ ಗಳಲ್ಲಿ ಸ್ಥಾನ ಪಡೆಯಲು ಸ್ವಲ್ಪದರಲ್ಲಿ ಸೋತಿತು , ಜಗತ್ತು ನೆನೆಪಿಡುವುದು ಗೆದ್ದವರನ್ನು ಮಾತ್ರ , ಬಟ್ ದ್ವಿತೀಯ , ಪ್ರಥಮ ನಷ್ಟೇ ಸಮರ್ಥ ಎನ್ನುವುದು ಇತಿಹಾಸ ದಾಖಲಿಸುವುದಿಲ್ಲ.

Barcelona Memories Column By Rangaswamy Mookanahalli Part 53

ಜಗತ್ತು ಇಂದಿಗೂ ಗೆದ್ದವರನ್ನ ಮಾತ್ರ ಆರಾಧಿಸುತ್ತದೆ. ಗಮನಿಸಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದವರನ್ನೇ ಜಗತ್ತು ನೆನಪಿನಲ್ಲಿ ಇಟ್ಟು ಕೊಳ್ಳುವುದಿಲ್ಲ ಎಂದ ಮೇಲೆ , ಉಳಿದ ಸ್ಥಾನ ಪಡೆದವರ ಅಥವಾ ಸ್ಥಳಗಳ ಪಾಡೇನು? ಅದೇನೇ ಇರಲಿ , ಜಗತ್ತು ಹೇಗೆ ವ್ಯವಹರಿಸಲಿ , ನೀವು ಮಾತ್ರ ಸ್ಪೇನ್ ದೇಶಕ್ಕೆ ಬರುವರಿದ್ದರೆ ಇದನ್ನ ನೋಡಲು ಮರೆಯಬೇಡಿ. ಹಸಿರು ಮನೆ, ಅಥವಾ ಸಸ್ಯಗಳನ್ನು ಬೆಳೆಸುವ ಗಾಜಿನ ಮನೆಗೆ ಇಂಗ್ಲಿಷ್ನಲ್ಲಿ ಗ್ರೀನ್ ಹೌಸ್ ಅನ್ನುತ್ತಾರೆ.

ಸ್ಪ್ಯಾನಿಷ್ ನಲ್ಲಿ ಅದಕ್ಕೆ 'ಇನ್ವೆರನದೆರೋ ' ಎನ್ನುತ್ತಾರೆ . ಯಾಕೆ ಈ ಮಾತು ಬಂತೆಂದರೆ, 1980ರಿಂದ ಸ್ಪೇನ್ ದೇಶದ ರಾಜ್ಯ ಅಂದಲುಸಿಯಾದ ಒಂದು ನಗರ ಅಲ್ಮೆರಿಯ ಸಮೀಪ ಸರಿ ಸುಮಾರು 26ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಗ್ರೀನ್ ಹೌಸ್ ಗಳನ್ನ ನಿರ್ಮಿಸಲಾಗಿದೆ. ಎಲ್ಲವೂ ಪ್ಲಾಸ್ಟಿಕ್ ಕವರ್ ನಿಂದ ನಿರ್ಮಿತ. ಇಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತೆ. ಯೂರೋಪಿನ ಅರ್ಧಕ್ಕೂ ಹೆಚ್ಚು ಹಣ್ಣು ತರಕಾರಿಯ ಬೇಡಿಕೆಯನ್ನು ಇಲ್ಲಿಂದ ಪೂರೈಸಲಾಗುತ್ತದೆ.

ಸ್ಪೇನ್ ಪ್ರವಾಸ ಕಥನ: ಹೆಸರಲ್ಲೇನಿದೆ ? ಅಥವಾ ಹೆಸರಲ್ಲಿ ಎಲ್ಲವೂ ಇದೆಯೇ !?ಸ್ಪೇನ್ ಪ್ರವಾಸ ಕಥನ: ಹೆಸರಲ್ಲೇನಿದೆ ? ಅಥವಾ ಹೆಸರಲ್ಲಿ ಎಲ್ಲವೂ ಇದೆಯೇ !?

ಅರ್ಥಾತ್, ಇಲ್ಲಿ ಉತ್ಪಾದನೆ ಆಗುವ ತರಕಾರಿ ಮತ್ತು ಹಣ್ಣು ಎಷ್ಟು ಟನ್ ತೂಗಬಹುದು? ತೂಕ ನಿಖರವಾಗಿ ಗೊತ್ತಿಲ್ಲ. ಆದರೆ ಹಣದ ಮೂಲಕ ವಹಿವಾಟು ಹೇಳುವುದಾದರೆ ಒಂದೂವರೆ ಇಂದ ಎರಡು ಬಿಲಿಯನ್ ಅಮೆರಿಕ ಡಾಲರ್ ನಷ್ಟು. 35ವರ್ಷಗಳ ಕೆಳೆಗೆ ಈ ಜಾಗವನ್ನು ಬಂಜರು, ಒಣ ನೆಲ ಎಂದು ವರ್ಗೀಕರಿಸಿದ್ದನ್ನು ಗಮನಿಸಿದರೆ, ಇಂದಿನ ವಹಿವಾಟಿಗೆ 'ಭೇಷ್' ಎನ್ನಲೇಬೇಕು.
ಸ್ಪೇನ್ ನಲ್ಲಿ, ಅಂದಲುಸಿಯಾ ರಾಜ್ಯ ಅತಿ ಹೆಚ್ಚು ಸೆಖೆ ಪ್ರದೇಶ.

ಆಫ್ರಿಕಾ ಖಂಡಕ್ಕೆ ಸಮೀಪದಲ್ಲಿ ಇರುವುದು, ಜೊತೆಗೆ ಸಮುದ್ರದ ತೀರದಲ್ಲಿ ಇರುವುದು ಸೇರಿ ಇಲ್ಲಿ 45ರಿಂದ ಹಲವೊಮ್ಮೆ 50ಡಿಗ್ರಿವರೆಗೂ ಉಷ್ಣಾಂಶ ಹೆಚ್ಚುತ್ತದೆ. ಹೀಗಾಗಿ ವರ್ಷಕ್ಕೆ 200ಮಿಲಿ ಮೀಟರ್ ಗಿಂತ ಕಡಿಮೆ ಮಳೆ ಆಗುತಿತ್ತು. ಇಲ್ಲಿ ಯಾವುದೇ ಬೆಳೆ ಬೆಳೆಯಲು ಯೋಗ್ಯವಲ್ಲ ಎಂದು ನಿರ್ಧಾರ ಮಾಡಿಯಾಗಿತ್ತು. 1963ರಲ್ಲಿ ಪ್ರಾಯೋಗಿಕವಾಗಿ ಪ್ಲಾಸ್ಟಿಕ್ ನಿಂದ ಮನೆ ನಿರ್ಮಿಸ ಹಣ್ಣು ತರಕಾರಿ ಬೆಳೆಯಲು ಶುರು ಮಾಡಿದರು.

ಅಲ್ಲಿ ಸಿಕ್ಕ ಸಣ್ಣ ಯಶಸ್ಸು ಸರಕಾರ, ಯೂನಿವರ್ಸಿಟಿ ಗಳ ಸಹಯೋಗ, ಖಾಸಗಿ ಕಂಪನಿಗಳ ಸಹಭಾಗಿತ್ವ ಎಲ್ಲವುಗಳ ಮಿಲನದಿಂದ ಇಂದು ಈ ಜಾಗ ' ಮಾರ್ ದೇ ಪ್ಲಾಸ್ಟಿಕೊ' ( ಪ್ಲಾಸ್ಟಿಕ್ ಸಾಗರ ) ಎಂದು ಪ್ರಸಿದ್ಧಿ ಪಡೆದಿದೆ. ಇದು ಜಗತ್ತಿನ ಅತಿ ದೊಡ್ಡ ಗ್ರೀನ್ ಹೌಸ್ ಕೂಡ. ಈ ಪ್ರಯೋಗದಿಂದ ಬರಿ ಹಣಕಾಸು ಗಳಿಸಿದ್ದಷ್ಟೇ ಹೆಗ್ಗಳಿಕೆ ಅಲ್ಲ. ಅದಕ್ಕೂ ಮೀರಿದ ಲಾಭ ಏನೆಂದರೆ ಕಳೆದ ಹತ್ತು ವರ್ಷದಲ್ಲಿ ಇಲ್ಲಿನ ಉಷ್ಣಾಂಶ ಕೂಡ ಬೇರೆಡೆಗೆ ಹೋಲಿಸಿದರೆ ಕಡಿಮೆ ಆಗಿದೆ.

ಗ್ಲೋಬಲ್ ವಾರ್ಮಿಂಗ್ ಎನ್ನುವ ಪೆಡಂಭೂತಕ್ಕೆ ಗ್ರೀನ್ ಹೌಸ್ 'ಮದ್ದು' ಎನ್ನುವುದು ಅಲ್ಮೆರಿಯ ಯೂನಿವರ್ಸಿಟಿ ಪ್ರೊಫೆಸರ್ ಗಳ ಅಂಬೋಣ. ಬೆಳಕಿನ ಕೆಳಗೆ ಕತ್ತಲೆ ಎನ್ನುವ ಒಂದು ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ. ಹಾಗೆ ಇಷ್ಟೆಲ್ಲಾ ಒಳಿತುಗಳ ನಡುವೆ ಇಲ್ಲಿಯೂ ಒಂದು ಕಪ್ಪು ಚುಕ್ಕೆ ಇದೆ. ಸೆಖೆಯ ಕಾರಣ ಈ ಗ್ರೀನ್ ಹೌಸ್ ನಲ್ಲಿ ಕೆಲಸ ಮಾಡಲು ಯಾವ ಸ್ಪ್ಯಾನಿಷ್ ಪ್ರಜೆಯು ರೆಡಿ ಇಲ್ಲ.

ಹೀಗಾಗಿ ಆಫ್ರಿಕಾದಿಂದ ಬಂದ ವಲಸೆ ಕಾರ್ಮಿಕರು, ಅಕ್ರಮ ವಲಸಿಗರು ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುತ್ತಾರೆ. 'ನಮಗೆ ಸ್ಪ್ಯಾನಿಷ್ ಪ್ರಜೆಗಳಿಗೆ ಸಿಗುವ ಸವಲತ್ತು, ಸಂಬಳ ಕೊಡುವುದಿಲ್ಲ. ಹೀಗಾಗಿ ಅವರ ವ್ಯವಹಾರ ಲಾಭದಾಯಕ ಆಗಿರುವುದರಲ್ಲಿ ಅತಿಶಯ ಏನು?' ಎನ್ನುವುದು ಬಡ ಕೂಲಿಕಾರರ ಪ್ರಶ್ನೆ. ಜಗತ್ತು ಕೆಟ್ಟವರಾಗಿರಲಿ ಅಥವಾ ಒಳ್ಳೆಯವರಾಗಿರಲಿ ಅವರು ಪ್ರಬಲರಾಗಿದ್ದರೆ ಮಾತ್ರ ನೆನಪಿಟ್ಟು ಕೊಳ್ಳುತ್ತದೆ.

ಈ ಮಾತನ್ನ ಪುಷ್ಟೀಕರಿಸಲು ಒಂದು ವಿಷಯದ ಬಗ್ಗೆ ಮೊದಲು ತಿಳಿದುಕೊಳ್ಳೋಣ. ಮಾರ್ಚ್ ತಿಂಗಳ ಕೊನೆಯ ಶನಿವಾರ ರಾತ್ರಿ , ಒಂದು ಘಂಟೆ ಮುಂದಕ್ಕೆ ಹಾಕುತ್ತಾರೆ , ಅಂದರೆ ಶನಿವಾರ ಬೆಳಿಗ್ಗೆ ಎದ್ದಾಗ ಆರು ಘಂಟೆ , ಭಾನುವಾರ ಏಳು ಘಂಟೆ , ಸೆಪ್ಟೆಂಬರ್ ತಿಂಗಳ ಕೊನೆಯ ಶನಿವಾರ ಒಂದು ಘಂಟೆ ಹಿಂದಕ್ಕೆ ಹಾಕುತ್ತಾರೆ . ಏಪ್ರಿಲ್ ನಿಂದ ಸೆಪ್ಟೆಂಬರ್ ಭಾರತ-ಸ್ಪೇನ್ ನುಡುವಿನ ವೇಳೆಯ ಅಂತರ ಮೂರುವರೆ ಘಂಟೆ , ಅಕ್ಟೋಬರ್ ನಿಂದ ಮಾರ್ಚ್ , ನಾಲ್ಕೂವರೆ ಘಂಟೆ . ಈ ಕ್ರಿಯೆಗೆ ಡೇ ಲೈಟ್ ಸೇವಿಂಗ್ ಅನ್ನುತ್ತಾರೆ .

ನಮ್ಮ ದೀಪಾವಳಿಯ ತಮ್ಮ, ಸ್ಪೇನ್ನ ಮೆರ್ಸೆ (merce) ಹಬ್ಬ !! ನಮ್ಮ ದೀಪಾವಳಿಯ ತಮ್ಮ, ಸ್ಪೇನ್ನ ಮೆರ್ಸೆ (merce) ಹಬ್ಬ !!

ಇಂಗ್ಲೆಂಡ್ , ಪೋರ್ಚುಗಲ್ , ಕ್ರಮವಾಗಿ ನಾಲ್ಕೂವರೆ ಘಂಟೆ , ಹಾಗು ಐದುವರೆ ಘಂಟೆ .., ಹಾಗೆ ನೋಡಿದರೆ ಭೂಪಟದಲ್ಲಿ , ಸ್ಪೇನ್ ಕೂಡ ಇಂಗ್ಲೆಂಡ್ , ಪೋರ್ಚುಗಲ್ ಗೆರೆಯಲ್ಲೇ ಇದೆ, ಆದರೆ ಸ್ಪೇನ್ , ಜರ್ಮನಿ ವೇಳೆ ಏಕೆ ಫಾಲೋ ಮಾಡ್ತಾ ಇದೆ ? ಎನ್ನುವ ಪ್ರಶ್ನೆಗೆ ಉತ್ತರ ಇತಿಹಾಸದಲ್ಲಿ ಅಡಗಿದೆ . ಹಿಟ್ಲರ್ ಅಂದ ತಕ್ಷಣ , ನೋಣದ ಮೀಸೆ ., ಚಾರ್ಲಿಚಾಪ್ಲಿನ್ ದೇಹ .., ಸ್ವಸ್ತಿಕ್ ಚಿನ್ಹೆ .., ಜ್ಞಾಪಕ ಬಂತು ಅಲ್ವಾ ? ಜನರಲ್ ಫ್ರಾಂಕ್ ಎನ್ನುವ ಹೆಸರು ಕೇಳಿದ ತಕ್ಷಣ ಏನಾದರೂ ನೆನಪಿಗೆ ಬಂತಾ? ಖಂಡಿತ ನೆನಪಿಗೆ ಬರುವುದಿಲ್ಲ ಏಕೆಂದರೆ ನಿಮಗೆ ಮಾತ್ರ ಅಲ್ಲ ಬಹಳ ಜನರಿಗೆ ಗೊತ್ತಿರುವುದು ಸಾಧ್ಯವಿಲ್ಲ.

ನಾನು ಸ್ಪೇನ್ ದೇಶಕ್ಕೆ ಬರದೆ ಹೋಗಿದ್ದರೆ ನನಗೂ ಈತನ ಬಗ್ಗೆ ತಿಳಿಯುತ್ತಿರಲಿಲ್ಲ. ಇರಲಿ ,ಜನೆರಲ್ ಫ್ರಾಂಕ್ 11939ರಿಂದ 1975ಆತನ ಸಾವಿನವರೆಗೆ ಸ್ಪೇನ್ ನ ಸರ್ವಾಧಿಕಾರಿ ಆಗಿದ್ದ . ಫ್ರಾನ್ಸಿಸ್ಕೋ ಫ್ರಂಕೋ ಪೂರ್ಣ ಹೆಸರು . ಹಿಟ್ಲರ್ ನೊಂದಿಗೆ ಇತನದು ಗಳಸ್ಯ -ಕಂಠಸ್ಯ .., ಹೀಗಾಗಿ ಜರ್ಮನಿ ಯಾವ ವೇಳೆಯನ್ನ ಅನುಸರಿಸುತ್ತಿದೆ ಅದನ್ನೇ ಅನುಸರಿಸೋಣ ಎನ್ನುವ ಫರ್ಮಾನು ಹೊರಡಿಸುತ್ತಾನೆ. ಮೊದಲೇ ಸರ್ವಾಧಿಕಾರಿ ಅವನ ಮಾತನ್ನ ಮೀರಿ ಬದುಕಲು ಸಾಧ್ಯವೇ ? ಅವನ ಅಣತಿಯನ್ನ ವಿರೋಧಿಸುವ ತಾಕತ್ತು ಯಾರಿಗಿತ್ತು ? ಹೀಗಾಗಿ ಎಲ್ಲಾ ಲಾಜಿಕ್ಗಳನ್ನ ಬದುಕಿಗಿಟ್ಟು ಜರ್ಮನಿಯ ವೇಳೆಯನ್ನ ಸ್ಪೇನ್ ಅಪ್ಪಿಕೊಂಡಿತು.

ಈ ಒಂದು ಘಂಟೆ ವ್ಯತ್ಯಾಸ ಜನರ ಬದುಕುವ ರೀತಿಯನ್ನೇ ಬದಲಿಸಿ ಬಿಟ್ಟಿತು ! ಇಂಗ್ಲೆಂಡ್ ನಂತೆ ಬೆಳಿಗ್ಗೆ 8 ರಿಂದ ಸಾಯಂಕಾಲ 9, ಅಥವಾ ಬೆಳಿಗ್ಗೆ 9ರಿಂದ ಸಾಯಂಕಾಲ 4ವರೆಗೆ ಕೆಲಸ ಮಾಡುವ ಬದಲು ಇಲ್ಲಿಬೆಳಿಗ್ಗೆ 9 ರಿಂದ ಮಧ್ಯಾಹ್ನ 1.30 ಆ ನಂತರ ಸಾಯಂಕಾಲ 4 ರಿಂದ ರಾತ್ರಿ 7.30ರ ವರೆಗೆ ಕೆಲಸ. ಹೀಗಾಗಿ ಮಧ್ಯಾಹ್ನ ಮಲಗುವ ಪರಿಪಾಠ ಸ್ಪ್ಯಾನಿಷ್ ಜನತೆ ಕಲಿತು ಬಿಟ್ಟಿತು. ಸ್ಪ್ಯಾನಿಷ್ ಸಿಯಾಸ್ತ ಎನ್ನುವುದು ಇಂದಿಗೆ ಜಗತ್ ಪ್ರಸಿದ್ಧ. ಹೀಗಾಗಿ ಜನರಲ್ ಫ್ರಾಂಕ್ ಕೂಡ ಮರೆಯಲಾಗದೆ ಇತಿಹಾಸದಲ್ಲಿ ಉಳಿದುಕೊಂಡು ಬಿಟ್ಟ.

ಫ್ರಾನ್ಸ್ , ಜರ್ಮನಿ ಗಳಂತೆ ಕೈಗಾರಿಕೆಗೆ ಸ್ಪೇನ್ ತೆರೆದುಕೊಳ್ಳಲಿಲ್ಲ. ಜನ ಆರಾಮಾಗಿರುವುದನ್ನ ಅಭ್ಯಾಸ ಮಾಡಿಕೊಂಡು ಬಿಟ್ಟರು. ಇತರ ದೇಶಗಳಲ್ಲಿ ಇರುವ ಕೆಲಸದ ಕ್ಷಮತೆಯನ್ನ ನೋಡಿ ಇದೀಗ ವೇಳೆ ಬದಲಾವಣೆ ಮಾಡಿ ಎನ್ನುವ ಕೂಗು ಚಿಂತಕರ ಚಾವಡಿ ಇಂದ ಬಂದಿದೆ , ಆದರೆ ಬದಲಾವಣೆಗೆ ಯಾರು ಕೂಡ ಅಷ್ಟು ಬೇಗ ಒಪ್ಪುವುದಿಲ್ಲ ಅಲ್ವಾ ? ಹೀಗೆ ಹೇಳಲು ಕಾರಣ, ಈ ಬದಲಾವಣೆಯ ಕೂಗಿಗೆ ದಶಕಗಳ ಇತಿಹಾಸವಿದೆ.

ಆದರೂ ಯಾವ ಸರಕಾರವೂ ಈ ವೇಳೆಯನ್ನ ಬದಲು ಮಾಡುವ ಮನಸ್ಸು ಮಾಡಿಲ್ಲ. ಇದಕ್ಕೆ ಕಾರಣವೂ ಸರಳ. ಜನರ ಸೆಂಟಿಮೆಂಟಿಗೆ ವಿರುದ್ಧ ಹೋದರೆ , ಎಲೆಕ್ಷನ್ ಗೆಲ್ಲುವುದು ಹೇಗೆ ? ಜಗತ್ತಿನ ಎಲ್ಲಾ ಭಾಗದಲ್ಲೂ ಒಂದಲ್ಲ ಒಂದು ರೀತಿಯ ಓಲೈಕೆ ರಾಜಕಾರಣ ಕೂಡ ಇದ್ದೆ ಇರುತ್ತದೆ. ಕಾರಣಗಳು , ಸನ್ನಿವೇಶಗಳು ಮಾತ್ರ ಬದಲಾಗುತ್ತವೆ. ಅಂದಲುಸಿಯಾ ರಾಜ್ಯದಲ್ಲಿ ಓಡಾಡುವಾಗ ಒಂದು ರೀತಿಯ ಹಿತಾನುಭವ ಕೂಡ ಆಗುತ್ತದೆ.

ಇಲ್ಲಿನ ಜನರು ಅತ್ಯಂತ ಸ್ನೇಹಪರರು. ಅತಿಯಾದ ಸೋಷಿಯಲಿಸ್ಟ್ ಗಳು , ಹೀಗಾಗಿ ಇಲ್ಲಿ ಉದ್ದಿಮೆಗಳು , ಕಾರ್ಖಾನೆಗಳು ಅಷ್ಟಕಷ್ಟೇ , ಹೀಗಾಗಿ ಇಲ್ಲಿನ ಬಹಳಷ್ಟು ಯುವಕರು ಉತ್ತಮ ಬದುಕನ್ನ ಅರಸಿ ಬಾರ್ಸಿಲೋನಾ , ಮ್ಯಾಡ್ರಿಡ್ , ಲಂಡನ್ ಇತರ ನಗರಗಳ ಕಡೆಗೆ ಮುಖ ಮಾಡುತ್ತಾರೆ. ಕರ್ನಾಟಕದಲ್ಲಿ ಎಲ್ಲರೂ ಬೆಂಗಳೂರಿನ ಕಡೆಗೆ ಮುಖ ಮಾಡಿದಂತೆ , ಮಹಾರಾಷ್ಟ್ರದಲ್ಲಿ ಮುಂಬೈ , ಪುಣೆ ಕಡೆಗೆ ಮುಖ ಮಾಡಿದಂತೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ವ್ಯವಸ್ಥೆ ಹೆಚ್ಚು ಕಡಿಮೆ ಸೇಮ್.

ಕೆಲವೊಂದರಲ್ಲಿ ನಮಗಿಂತ ಉತ್ತಮ , ಕೆಲವು ವಿಷಯಗಳಲ್ಲಿ ನಮಗಿಂತ ಅಧಮ. ಒಟ್ಟಿನಲ್ಲಿ ಎಲ್ಲವೂ ಸರಿಯಾಗಿರುವ ಪರ್ಫೆಕ್ಟ್ ರಾಮರಾಜ್ಯವಂತೂ ನನ್ನ ಕಣ್ಣಿಗೆ , ಇಲ್ಲಿಯವರೆಗೆ ಬಿದ್ದಿಲ್ಲ. ಸಿಕ್ಕರೆ ಅದರ ಬಗ್ಗೆಯೂ ಹಂಚಿಕೊಳ್ಳುವೆ. ಮತ್ತೆ ಸಿಕ್ಕೋಣ.

English summary
Barcelona Memories Column By Rangaswamy Mookanahalli Part 53,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X