• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಲಸ ಎನ್ನುವುದು ಕೊರಳಿಗೆ ಬಿಗಿದ ನೇಣಿನ ಕುಣಿಕೆಯಾಗಬಾರದು! ಸಿಯಂಪ್ರೆ ಆಯ್ ಮನ್ಯಾನ !!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಸ್ಪೇನ್ ಜನತೆ ಬಹಳ ಸಹಿಷ್ಣುಗಳು. ವಲಸಿಗರನ್ನ ಬಹಳ ಪ್ರೀತಿಯಿಂದ ಕಾಣುವ ಸಮಾಜವಿದು. ಇಲ್ಲಿಯ ಜನರ ಬಾಯಲ್ಲಿ ನಾನು ಸಾಕಷ್ಟು ಬಾರಿ ಕೇಳಿರುವ ಪದ ' ಅಕಿ ಕಾವೇಮೊಸ್ ತೋದೊಸ್ ' ಎನ್ನುವುದು. ಅಂದರೆ ನಾವೆಲ್ಲರೂ ಇಲ್ಲಿರಲು ಸಾಕಷ್ಟು ಜಾಗವಿದೆ ಎಂದರ್ಥ , ಡಿಕ್ಷನರಿ ಅರ್ಥವನ್ನ ನೋಡುವುದಾದರೆ ನಾವೆಲ್ಲರೂ ಇಲ್ಲಿ ಹಿಡಿಸುವಷ್ಟು ಜಾಗವಿದೆ ಎನ್ನುತ್ತದೆ . ಒಟ್ಟಿನಲ್ಲಿ ಸರಳವಾಗಿ ಹೇಳುವುದಾದರೆ ಇಲ್ಲಿನ ಸಮಾಜಕ್ಕೆ ಹೊಂದಿಕೊಂಡು ನಡೆದರೆ ಸಾಕು ಇಲ್ಲಿನ ಜನ ವಲಸಿಗರನ್ನ ತಮ್ಮಲ್ಲಿ ಒಬ್ಬ ಎಂದು ಒಪ್ಪಿಕೊಳ್ಳುತ್ತಾರೆ. ಮುಕ್ಕಾಲು ಪಾಲು ಜನರು ಇರುವುದು ಹೀಗೆ , ಅಲ್ಲೊಂದು, ಇಲ್ಲೊಂದು ಅಪವಾದಗಳು ಕೂಡ ಇದ್ದೆ ಇರುತ್ತದೆ.

ಸ್ಪೇನ್ ದೇಶದ ಮಹಿಳೆಯರು ಜಪಾನಿಗರ ನಂತರ ಅತಿ ಹೆಚ್ಚು ಜೀವಿತಾವಧಿ ಹೊಂದಿದವರು ಎನ್ನುವ ಹೆಗ್ಗಳಿಕೆಯನ್ನ ಹೊಂದಿದ್ದಾರೆ. ಪುರಷರು ಕೂಡ ಕಡಿಮೆಯೇನಿಲ್ಲ , ಹೆಂಗಸಿರಿಗಿಂತ ನಾಕು ವರ್ಷ ಕಡಿಮೆ ಬದುಕುತ್ತಾರೆ ಅಷ್ಟೇ ! , ಹೀಗೆ ಮಹಿಳೆಯರ ಸರಾಸರಿ ಆಯಸ್ಸು 83/85 ಆದರೆ ಪುರಷರು 79/80 ಎನ್ನುತ್ತದೆ ಅಂಕಿಅಂಶ. ಮೆಡಿಟೇರಿಯನ್ ವಾತಾವರಣ ಮತ್ತು ಊಟ ತಿಂಡಿ ಜೊತೆಗೆ ದೈಹಿಕವಾಗಿ ಆಕರ್ಷಕವಾಗಿ ಕಾಣಬೇಕು ಎಂದು ಕಸರತ್ತು ಮಾಡುವ ಇಲ್ಲಿನ ಜನರ ಮನಸ್ಥಿತಿ ಇದಕ್ಕೆ ಕಾರಣ.

ಬದಲಾವಣೆ ಜಗದ ನಿಯಮ! ಮೇಲೇರಿದ್ದು ಕೆಳಗೆ ಬರಲೇ ಬೇಕಲ್ಲವೇ?ಬದಲಾವಣೆ ಜಗದ ನಿಯಮ! ಮೇಲೇರಿದ್ದು ಕೆಳಗೆ ಬರಲೇ ಬೇಕಲ್ಲವೇ?

ಸ್ಪೇನ್ ದೇಶ ಯೂರೋಪಿನ ಇತರ ದೇಶಗಳಿಗಿಂತ ಭಿನ್ನವಾಗಿ ನಿಲ್ಲುವುದು ಎರಡು ಪ್ರಮುಖ ಕಾರಣಗಳಿಂದ , ಎಲ್ಲಕ್ಕೂ ಮೊದಲನೆಯದಾಗಿ ಜನರನ್ನ , ಅವರು ಯಾರೇ ಆಗಿರಲಿ ಇದ್ದಹಾಗೆ ಒಪ್ಪಿಕೊಳ್ಳುವುದು , ಇದಕ್ಕೆ ಅವರು ಬಳಸುವ ಪದ ಕೂಡ ಸಾವಿರಾರು ಬಾರಿ ಕೇಳಿದ ಅನುಭವ ನನ್ನದು. 'ಕಾದ ಉನೋ ಈಸ್ ಕೊಮೋ ಈಸ್' ಎನ್ನುವುದು ಆ ಪದ. ಅಂದರೆ 'ಎಲ್ಲರೂ ಅವರರವರಂತೆ ಇರುತ್ತಾರೆ' ಎನ್ನುವುದು , ಅಥವಾ ಒಬ್ಬರಂತೆ ಒಬ್ಬರಿಲ್ಲ ಹೀಗಾಗಿ ಯಾರು ಹೇಗಿರುತ್ತಾರೆ ಅವರನ್ನ ಹಾಗೆ ಗೌರವಿಸಬೇಕು , ಸ್ವೀಕರಿಸಬೇಕು ಎನ್ನುವುದು ಮತ್ತು ಎರಡನೆಯದಾಗಿ ಕೆಲಸ ಯಾವುದೇ ಇರಲಿ , ಯಾರು ಎಷ್ಟೇ ಒತ್ತಡ ತರಲಿ , ಇಲ್ಲಿನ ಜನ ಮಾತ್ರ ಬಹಳ ಕೂಲ್ !

'ಸಿಯಂಪ್ರೆ ಆಯ್ ಮನ್ಯಾನ' ಎನ್ನುವುದು ಇವರ ಧ್ಯೇಯವಾಕ್ಯ ! ಅಂದರೆ ನಾಳೆ ಎನ್ನುವುದು ಇದ್ದೆ ಇರುತ್ತದೆ ಇಂದು ಕೆಲಸವಾಗಲಿಲ್ಲ ಎಂದು ಬಹಳ ತಲೆ ಕೆಡಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲ ಎನ್ನುವುದು ಇವರ ಫಿಲಾಸಫಿ . ಇದರ ಅರ್ಥ ಇವರು ಕೆಲಸವನ್ನ ಮುಂದೂಡುತ್ತಾರೆ ಎನ್ನುವುದಲ್ಲ ಬದಲಿಗೆ ಒತ್ತಡಕ್ಕೆ ಮಣಿದು ಕುಳಿತು ಕೊಳ್ಳುವುದಿಲ್ಲ , ತಮ್ಮ ಕೈಲಾದ ವೇಗದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಾರೆ. ಇವತ್ತು ಮುಗಿಯದಿದ್ದರೆ ಏನಾಯ್ತು ನಾಳೆ ಇದ್ದೆ ಇದೆಯಲ್ಲ ಎನ್ನುವುದು ಒತ್ತಡವನ್ನ ಕಡಿಮೆ ಮಾಡುತ್ತದೆ.

ಸ್ಪ್ಯಾನಿಷ್ ಭಾಷೆ ಮತ್ತು ಇಲ್ಲಿನ ಸಂಸ್ಕೃತಿ ಕೂಡ ಜಗತ್ತಿನ ಇತರ ದೇಶಗಳಿಗಿಂತ ಬಹಳ ವಿಶೇಷವಾಗಿದೆ. ಇದಕ್ಕೆ ಸಾಕಷ್ಟು ಉದಾಹರೆಣೆಯನ್ನ ನೀಡಬಹದು. ಎಲ್ಲಕ್ಕೂ ಮೊದಲಿಗೆ ಇಲ್ಲಿ ನಾವು ಸ್ಪ್ಯಾನಿಷ್ ಭಾಷೆಯನ್ನ ಸ್ಪಷ್ಟವಾಗಿ ಮಾತನಾಡದಿದ್ದರೆ ಇಲ್ಲಿನ ಜನ ಎಂದಿಗೂ ನಮ್ಮನ್ನ ಅವಹೇಳನ ಮಾಡಿ ನಗುವುದಿಲ್ಲ , ಬದಲಿಗೆ ನೀನು ಚನ್ನಾಗಿ ಮಾತನಾಡುತ್ತಿದೀಯಾ ಎಂದು ಪ್ರೋತ್ಸಾಹದ ನುಡಿಗಳನ್ನ ಆಡುತ್ತಾರೆ. ಇಂಗ್ಲಿಷ್ ಭಾಷೆಯ ವಿಷಯದಲ್ಲಿ ನನಗಾದ ಅನುಭವ ಬೇರೆಯದು.

ವೃತ್ತಿಯ ಸಲುವಾಗಿ ಪ್ರಥಮ ದಿನಗಳು ಇಂಗ್ಲೆಂಡ್ ದೇಶದ ಲಂಡನ್ ನಗರದಲ್ಲಿ ಕೂಡ ಸಾಕಷ್ಟು ದಿನ ಇದ್ದು ಕೆಲಸ ಮಾಡಿದ ಅನುಭವ ನನ್ನದು. ಅಲ್ಲಿನವರ ಇಂಗ್ಲಿಷ್ ಅರ್ಥವಾಗದೆ ' ಸಾರೀ' ಅಂತಲೋ 'ಎಕ್ಸ್ಕ್ಯೂಸ್ ಮೀ ' ಅಂತಲೂ ಕೇಳುವುದು ಸಾಮಾನ್ಯವಾಗಿತ್ತು . ಜಗತ್ತನ್ನ ಆಳಿದವರು ನಾವು ಎನ್ನುವ ಹುಮ್ಮ ಇನ್ನು ಆ ಜನರಲ್ಲಿ ಇಳಿದಿಲ್ಲ. ನಮಗೆ ಇಂಗ್ಲಿಷ್ ಸರಿಯಾಗಿ ಮಾತನಾಡಲು ಬಾರದೆ ಇದ್ದರೆ ಇಲ್ಲಿನ ಜನ ಸರಿಯಾಗಿ ಸ್ಪಂದಿಸುವುದಿಲ್ಲ.

ಇನ್ನು ಫ್ರೆಂಚರ ಕಥೆ ಕೂಡ ಇದಕ್ಕಿಂತ ವಿಭಿನ್ನವೇನಲ್ಲ , ಆ ದೃಷ್ಟಿಯಲ್ಲಿ ಸ್ಪ್ಯಾನಿಶರು ಉದಾರಿಗಳು , ಅಕಿ ಕಾವೇಮೂಸ್ ತೋದೋಸ್ ಎಂದು ಖುಷಿಯಾಗಿ ಎಲ್ಲರನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಇನ್ನೊಂದು ಉದಾಹರೆಣೆ ನೋಡಿ , ಇಲ್ಲಿನ ಭಾಷೆಯಲ್ಲಿ ಗುಡ್ ಇವಿನಿಂಗ್ ಪದಕ್ಕೆ ಪರ್ಯಾಯವಿಲ್ಲ . ಗುಡ್ ನೈಟ್ ಗೆ ಸಮವಾಗಿ ಬಳಸುವ ಬೋನಸ್ ನೋಚೇಸ್ ಎನ್ನುವ ಪದವನ್ನ ಗುಡ್ ಇವಿನಿಂಗ್ಗೆ ಕೂಡ ಬಳಸುತ್ತಾರೆ.

 ಮುಜೆ ಔರ್ ತೋಡಾ 'ಗಟ್ಟಿ ಚಟ್ನಿ' ಚಾಯಿಯೇ ! ಕನ್ನಡ ಉಳಿಸುವುದು ನಮ್ಮ ಕೈಲಿದೆ !! ಮುಜೆ ಔರ್ ತೋಡಾ 'ಗಟ್ಟಿ ಚಟ್ನಿ' ಚಾಯಿಯೇ ! ಕನ್ನಡ ಉಳಿಸುವುದು ನಮ್ಮ ಕೈಲಿದೆ !!

ಅಂದರೆ ಗಮನಿಸಿ ನೀವು ಇಂಗ್ಲೆಂಡ್ ದೇಶದಲ್ಲಿ ಸಾಯಂಕಾಲ ಸಿಕ್ಕ ಯಾರಿಗಾದರೂ ' ಹಾಯ್ ಗುಡ್ ನೈಟ್ ' ಎಂದರೆ ಅದು ಅಭಾಸವಾಗುತ್ತದೆ. ಬೀಳ್ಕೊಡುಗೆಯ ಸಮಯದಲ್ಲಿ ಗುಡ್ ನೈಟ್ ಹೇಳುತ್ತಾರೆ. ಸಿಕ್ಕಾಗ ಗುಡ್ ನೈಟ್ ಹೇಗೆ ಹೇಳುವುದು ? ಆದರೆ ಸ್ಪ್ಯಾನಿಷ್ ಸಂಸ್ಕೃತಿಯಲ್ಲಿ ಗುಡ್ ಇವಿನಿಂಗ್ ಜಾಗ ಪಡೆದಿಲ್ಲ , ಇಲ್ಲೇನಿದ್ದರೂ ನೀವು ಸಾಯಂಕಾಲ ಸಿಕ್ಕರೂ ' ಓಲಾ ಬೋನಸ್ ನೋಚೇಸ್' ( ಹಲೋ ಗುಡ್ ನೈಟ್ ) ಎನ್ನುವುದು ಸಂಪ್ರದಾಯ. ಇಂಗ್ಲೆಂಡ್ ನಲ್ಲಿ ಭಾವಿಸಿದಂತೆ ಇಲ್ಲಿ ಭಾವಿಸುವುದಿಲ್ಲ , ಹೀಗಾಗಿ ಇಲ್ಲಿ ಸಾಯಂಕಾಲ ಸಿಕ್ಕಾಗ ಗುಡ್ ನೈಟ್ ಎನ್ನುವ ಪದ ಬಳಸಿದರೆ ಇಲ್ಲಿ ಅಭಾಸ ಎನ್ನಿಸುವುದಿಲ್ಲ. ಪ್ರದೇಶದಿಂದ ಪ್ರದೇಶಕ್ಕೆ ಭಾಷೆ , ಸಂಸ್ಕಾರಗಳು ಬದಲಾಗುವ ರೀತಿ ಅಚ್ಚರಿ ಹುಟ್ಟಿಸುತ್ತದೆ.

ಇಲ್ಲಿನ ಸಂಸ್ಕೃತಿಯ ಅನಾವರಣ ಮಾಡಲು ಇನ್ನೊಂದು ಘಟನೆಯನ್ನ ಉದಾಹರಿಸುವೆ , ಅದು ನನ್ನ ಮೊದಲ ತಿಂಗಳುಗಳು , ಇಲ್ಲಿನ ಜನರ ನಯ , ವಿನಯ ಮತ್ತು ಭೂತದಯೆಗಳಿಗೆ ಮಾರುಹೋಗಿದ್ದೆ. ನಮಗೆ ಪರಿಚಯವಿರುವ ಜನರು ನಮ್ಮನ್ನ ಚನ್ನಾಗಿ ಕಾಣುವುದು ಸಹಜ, ಊಟ ಅಥವಾ ತಿಂಡಿ ತಿನ್ನುವ ಸಮಯದಲ್ಲಿ ಕಂಡರೆ ' ನಿಧಾವಾಗಿ ಆಗಲಿ ' ಅಥವಾ 'ಸಾವಧಾನವಾಗಿ ಮಾಡಿ' ಎನ್ನುವುದು ಸಾಮಾನ್ಯ. ಅದು ಕೂಡ ಯಾವುದಾದರೂ ಸಭೆ ಅಥವಾ ಸಮಾರಂಭದಲ್ಲಿ ಇದು ಸಹಜ .

ಉಳಿದಂತೆ ನಿತ್ಯದ ಬದುಕಿನಲ್ಲಿ ನಮ್ಮಲ್ಲಿ ಇದು ಇಲ್ಲವಾಗಿದೆ. ಆದರೆ ಇಲ್ಲಿನ ಜನರು ಬದುಕುವ ರೀತಿಯೇ ಬೇರೆ , ನಿಮಗೆ ಪರಿಚಯವಿರಲಿ ಬಿಡಲಿ , ನೀವು ಊಟ ಅಥವಾ ತಿಂಡಿ ಸೇವಿಸುತ್ತಾ ಕುಳಿತ್ತಿದ್ದರೆ ನಿಮ್ಮ ದೃಷ್ಟಿ ಒಂದಾದರೆ ಸಾಕು ತಕ್ಷಣ ' ಬೊನ್ಪ್ರವೇಚ್ಛೆ ' ಅಥವಾ ' ಅಪ್ಪ್ರವೇಚ್ಛೆ ' ಎನ್ನುವ ಪದವನ್ನ ಹೇಳಿ ಮುಂದೆ ಸಾಗಿ ಹೋಗುತ್ತಾರೆ. ಅಂದರೆ ಒಳ್ಳೆಯ ಊಟ ಸಾಗಲಿ , ಆಸ್ವಾದಿಸಿ ಕೊಂಡು ಮೆಲ್ಲಗೆ ತಿನ್ನಿ ಎನ್ನುವ ಅರ್ಥವನ್ನ ನೀಡುತ್ತದೆ. ಸಹಜವಾಗಿ ತಿನ್ನುತ್ತಾ ಕುಳಿತವರು ' ಗ್ರಾಸಿಯಾಸ್ ' ಅಂದರೆ ಧನ್ಯವಾದ ಎಂದು ಹೇಳುತ್ತಾರೆ.

ಸ್ಪ್ಯಾನಿಷ್ ಸಂಸ್ಕೃತಿಯ ಇನ್ನೊಂದು ಉತ್ತಮ ಮತ್ತು ನನಗೆ ಅತ್ಯಂತ ಇಷ್ಟವಾಗುವ ಅಂಶವೆಂದರೆ ' ಬದುಕಲಿಕ್ಕೆ ದುಡ್ಡು ಬೇಕು ಆದರೆ ದುಡ್ಡಿಗಾಗಿ ಬದುಕು ಆಗಬಾರದು ' ಎನ್ನುವ ಜೀವನಪರಿ. ದೂರದೂರಿನಲ್ಲಿ ಅಥವಾ ಹತ್ತಾರು ಕಿಲೋಮೀಟರ್ ದೂರದಲ್ಲಿ ದುಪಟ್ಟು ಹಣ ಕೊಡುತ್ತೇನೆ ಎಂದರೂ ಇವರು ಅಲ್ಲಾಡುವುದಿಲ್ಲ. ಅವರಿಗೆ ಅವರ 'ಬಾರಿಯೋ' (ಬಡಾವಣೆ ) ಸ್ವರ್ಗ . ಅಲ್ಲಿಂದ ಅಲುಗಾಡುವುದು ಸ್ವಲ್ಪ ಕಷ್ಟ. ಇನ್ನು ಕೆಲಸ ಬದಲಾವಣೆ ಬಗ್ಗೆಯೂ ಇವರ ನಿಲುವು ಇದೆ ಆಗಿದೆ.

ಸಾಮಾನ್ಯವಾಗಿ ಸ್ಪ್ಯಾನಿಶರು ಕೂಡ ಜಪಾನಿಯರಂತೆ ಒಂದು ಕೆಲಸಕ್ಕೆ ಸೇರಿದರೆ ಹತ್ತಾರು ವರ್ಷ ಅದೇ ಸಂಸ್ಥೆಗೆ ಬದ್ಧರಾಗಿ ದುಡಿಯುತ್ತಾರೆ. ತೀರಾ ಇತ್ತೀಚಿಗೆ ಹೊಸ ತಲೆಮಾರು ಇದರಿಂದ ದೂರವಾಗುತ್ತಿದೆ. ಇಲ್ಲಿ ಸ್ಪ್ಯಾನಿಶರ ನಿಲುವು ಸರಳ , ಕೆಲಸ ಯಾವುದೇ ಇರಲಿ , ಬಾಸ್ ಅಥವಾ ಮಾಲೀಕ (ಸ್ಪ್ಯಾನಿಷ್ ಭಾಷೆಯಲ್ಲಿ ಹೇಫೆ ) ಮಾತ್ರ ಸೇಮ್ . ಹೆಸರು ಬದಲಾಗುತ್ತದೆ ಆದರೆ ಮಾಲೀಕರ ಗುಣಗಳು ಮಾತ್ರ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ ಎನ್ನುವುದು ಇವರ ಅಭಿಮತ.

ಇದನ್ನ ಸ್ಪಾನಿಶರು Es el mismo perro con diferente collar (ಈಸ್ ಎಲ್ ಮಿಸ್ಮೋ ಪೆರ್ರೋ ಕೋನ್ ಡಿಫರೆಂತೆ ಕೊಯರ್ ) ಎನ್ನುತ್ತಾರೆ. 'ಅದೇ ನಾಯಿ ಬದಲಾದ ಕತ್ತಿನಪಟ್ಟಿ ' ಎನ್ನುವುದು ಯಥಾವತ್ತು ಅನುವಾದ . ನೀವು ಕೆಲಸ ಮಾಡುವ ಕಂಪನಿಯ ಹೆಸರು ಬದಲಾಯಿತು ನಿಮ್ಮ ಜೀವನದಲ್ಲಿ ನಿಜವಾಗಿ ಬದಲಾವಣೆ ಸಿಕ್ಕಿತೇ ? ಎನ್ನುವುದು ಪ್ರಶ್ನೆ. ಹೀಗಾಗಿ ಇಲ್ಲಿನ ಜನರು ಬದುಕನ್ನ ಪೂರ್ಣ ಪ್ರಮಾಣದಲ್ಲಿ ಆಸ್ವಾದಿಸಲು ಬಯಸುತ್ತಾರೆ. ಕೆಲಸ ಎನ್ನುವುದು ಸುಂದರವಾದ ಬದುಕನ್ನ ಜೀವಿಸಲು ಸಹಾಯವಾಗಬೇಕೇ ಹೊರತು ಅದು ಕೊರಳಿಗೆ ಬಿಗಿದ ನೇಣಿನ ಕುಣಿಕೆಯಾಗಬಾರದು ಎನ್ನುವುದು ಇಲ್ಲಿನ ಬಹುತೇಕರ ಅಭಿಪ್ರಾಯ.

ಬಯಕೆಗಳಿಗೆ ಬಡವರಿಲ್ಲ ಎನ್ನುವುದು ಎಷ್ಟು ಸರಳವಾದ ಮತ್ತು ಸಹಜವಾದ ಮಾತು . ಜಗತ್ತಿನ ಸಖಲ ಜೀವಿಗಳೂ ತಮ್ಮ ಮಿತಿಯಲ್ಲಿ ಎನ್ನನ್ನಾದರೂ ಬಯಸುವುದು ಸಹಜ . ಗಮನಿಸಿ ನೋಡಿ ಇಲ್ಲಿ ಬಡವ ಶ್ರೀಮಂತ ಎನ್ನುವ ಭೇದಭಾವ ವಷ್ಟೇ ಅಳಿಯುವುದಿಲ್ಲ ಜೊತೆಗೆ ವಯಸ್ಸು ಮತ್ತು ಲಿಂಗದ ನಡುವೆ ಉಂಟಾಗುವ ತಾರತಮ್ಯ ಕೂಡ ದೊರವಾಗುತ್ತದೆ . ಹುಟ್ಟಿದ ಮಗುವಿನಿಂದ ಹಿಡಿದು ನಾಳೆ ಮಣ್ಣು ಸೇರುವವರೆಗೆ ಬಯಕೆಗಳು ಯಾರನ್ನು ಬಿಟ್ಟಿಲ್ಲ , ಬಿಡುವುದೂ ಇಲ್ಲ .

 ಬದುಕೆಂದರೆ ಹೀಗೆ ಅಲ್ವಾ ? ಗೊತ್ತಿಲ್ಲದೇ ಬಾಂಧ್ಯವ್ಯಗಳು ಬೆಸೆದು ಕೊಂಡು ಬಿಡುತ್ತವೆ ಬದುಕೆಂದರೆ ಹೀಗೆ ಅಲ್ವಾ ? ಗೊತ್ತಿಲ್ಲದೇ ಬಾಂಧ್ಯವ್ಯಗಳು ಬೆಸೆದು ಕೊಂಡು ಬಿಡುತ್ತವೆ

ಹಾಗೆ ನೋಡಲು ಹೋದರೆ ಬಯಕೆಗಳು ಇರದಿದ್ದರೆ ಬದುಕೇ ಇರುತ್ತಿರಲಿಲ್ಲ . ಹೀಗಾಗಿ ಬಯಕೆಯೇ ಬದುಕು ಎನ್ನಬಹುದು . ಬಯಕೆಗಳಿಗೆ ಸಮಾಜದಲ್ಲಿ ಒಂದು ಬೌಂಡರಿ ನಿರ್ಮಿಸಿದ್ದಾರೆ . ಬಯಸಿದ್ದೆಲ್ಲಾ ಮಾಡಲು ಸಾಧ್ಯವಿಲ್ಲ ಎನ್ನುವ ಮಾತನ್ನ ಹಿರಿಯರು ಕಿರಿಯರ ತಲೆಗೆ ತುಂಬಿಬಿಡುತ್ತಾರೆ . ಜೀವನದಲ್ಲಿ ಹೊಂದಾವಣಿಕೆ ಬಹಳ ಮುಖ್ಯ , ಅಂದುಕೊಂಡದ್ದು ,ಬಯಲಿಸಿದ್ದೆಲ್ಲಾ ನೆರೆವೇರುವುದಿಲ್ಲ ಎನ್ನುವುದು ಸಾಧಾರಣವಾಗಿ ನಮ್ಮಲ್ಲಿ ತುಂಬಿಬಿಡುತ್ತಾರೆ .

ಬಯಕೆಗಳು ಬದುಕನ್ನ ಹಸನಾಗಿಸುತ್ತವೆ , ಜೋತೆಗೆ ಸಹಜವಲ್ಲದ ಬಯಕೆಗಳು ಬದುಕನ್ನ ಬರಡಾಗಿಸುತ್ತವೆ ಕೂಡ . ಹೀಗಾಗಿ ಸಮಾಜದಲ್ಲಿ ಬಯಕೆಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಸಾಕಷ್ಟು ಕಟ್ಟುಕಟ್ಟಳೆಗಳಿವೆ . ಇಂದಿನ ದಿನದಲ್ಲಿ ತಮಗೇನು ಬೇಕು ಎನ್ನುವುದರ ಬಗ್ಗೆ ಜನ ಹೆಚ್ಚು ಹೆಚ್ಚಾಗಿ ಮಾತನಾಡಲು ಶುರು ಮಾಡಿದ್ದಾರೆ . ಬಯಕೆ ಇರದಿದ್ದರೆ ಬದುಕು ಇಂದಿನಷ್ಟು ಸುಂದರವಾಗಂತೂ ಇರುತ್ತಿರಲಿಲ್ಲ .

ಬಯಕೆ ಎನ್ನುವುದು ಒಂಥರಾ ಇಂಧನವಿದ್ದ ಹಾಗೆ , ಬದುಕೆಂಬ ಬಂಡಿ ಸಾಗಲು ಬಯಕೆ ಬೇಕೇ ಬೇಕು . ಬಯಕೆಗಳು ಇಲ್ಲದಿದ್ದರೆ ಬದುಕಿಲ್ಲ , ಎಲ್ಲವೂ ನಿಂತು ಹೋಗಿಬಿಡುತ್ತದೆ . ನಾಳೆ ನಾನು ಬಯಸಿದ್ದು ಸಾಧಿಸುತ್ತೇನೆ ಅಥವಾ ನನ್ನ ಬಯಕೆ ಪೂರ್ಣಗೊಳ್ಳುತ್ತದೆ ಎನ್ನುವ ನಂಬಿಕೆ ಬದುಕಿಗೆ ಇನ್ನೊಂದು ಇಂಧನ . ಬೇಕುಗಳಿಲ್ಲದ ಬದುಕನ್ನ ಊಹಿಸಿಕೊಳ್ಳುವುದು ಕಷ್ಟ . ಬೇಕು ಎನ್ನುವುದು ಹಿತವಾಗಿರಬೇಕು , ಮಿತವಾಗಿರಬೇಕು ., ಒಟ್ಟಿನಲ್ಲಿ ಬೇಕು ಎನ್ನುವುದು ಬೇಕೇ ಬೇಕು .!

ಇದನ್ನ ಸ್ಪಾನಿಶರು El querer es todo en nuestra vida. (ಎಲ್ ಕೆರೇರ್ ಈಸ್ ತೊದೊ ಎನ್ ನ್ಯೂಸ್ತ್ರ ವಿದಾ) ಎನ್ನುತ್ತಾರೆ . ಬಯಕೆಗಳೆ ನಮ್ಮ ಜೀವನ ಎನ್ನುವ ಅರ್ಥ ಕೊಡುತ್ತದೆ . ಕೆರೇರ್ ಎಂದರೆ ವಾಂಟ್ , ಬೇಕು ಅಥವಾ ಬಯಕೆ ಎನ್ನುವ ಅರ್ಥದ ಜೊತೆಗೆ ಪ್ರೀತಿ , ಲವ್ ಎನ್ನುವ ಅರ್ಥವನ್ನ ಸಹ ಕೊಡುತ್ತದೆ. ಕೆರೇರ್ ಎನ್ನುವುದು ಕೇವಲ ಪ್ರೀತಿ ಎನ್ನುವ ಅರ್ಥಕ್ಕೆ ಸೀಮಿತವಾಗುವಿದಿಲ್ಲ , ಬಯಕೆ ಎನ್ನುವುದು ವಿಶಾಲ ಅರ್ಥ ಕೊಡುತ್ತದೆ .

ಅದು ಪರೀಕ್ಷೆ ಪಾಸಾಗುವ ಬಯಕೆಯಿರಬಹದು , ಹೊಸ ಕೆಲಸ ಗಳಿಸುವ ಬಯಕೆ ಹೀಗೆ, ಅದು ಕೇವಲ ಪ್ರೀತಿಗಷ್ಟೇ ಏಕೆ ಸೀಮಿತವಾಗಬೇಕು ? ಭಾಷೆಯಲ್ಲಿ ಕೂಡ ಕೆರೇರ್ ಎಂದರೆ ಪ್ರೀತಿ ಎಂದಷ್ಟೇ ಅರ್ಥವೇನಿಲ್ಲ , ಹೀಗಾಗಿ ಸ್ಪಾನಿಷ್ ಜನರು ಕೂಡ ಈ ಮಾತನ್ನ ವಿಶಾಲ ಅರ್ಥದಲ್ಲಿ ಬಳಸಿದ್ದಾರೆ ಆದರೆ ದೇಹಕ್ಕೆ , ಮತ್ತು ದೈಹಿಕ ಕ್ರಿಯೆಗೆ ಹೆಚ್ಚು ಮನ್ನಣೆ ನೀಡುವ ಪ್ರಕ್ರಿಯೆ ಯೂರೋಪಿನಲ್ಲಿ ಹೆಚ್ಚಾಗಿರುವುದರಿಂದ ಈ ಮಾತು ಸೀಮಿತ ಅರ್ಥದಲ್ಲಿ ಉಪಯೋಗಿಸಲ್ಪಡುತ್ತಿದೆ . ಹೀಗೆ ಸ್ಪ್ಯಾನಿಶರು ಮಾತ್ರ ಯೂರೋಪಿನಲ್ಲಿ ಇದ್ದೂ ಅವರಿಗಿಂತ ವಿಶೇಷವಾಗಿ ನಿಲ್ಲುತ್ತಾರೆ.

English summary
Barcelona Memories Column By Rangaswamy Mookanahalli Part 45
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X