• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಪ್ಪು ಬಿಳುಪು ಸುಂದರಿ : ನಮ್ಮ ಮಾನಸ!

By * ಮಾ.ವೆಂ.ಸ. ಪ್ರಸಾದ್
|
Namma Manasa, Women magazine
ಮೊದಲ ಮಾತು : ನಮ್ಮೂರಿನ ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ'ಕ್ಕೆ 22 ಪತ್ರಿಕೆಗಳು, ಆಯಾ ಪತ್ರಿಕೆಗಳ ಸಂಪಾದಕರ/ಪ್ರಕಾಶಕರ ಉದಾರ ಕೊಡುಗೆಯಾಗಿ ಸಿಗುತ್ತಿವೆ. ಕೆಲವು ಪತ್ರಿಕೆಗಳಂತೂ ನಾವು ಮನವಿ ಸಲ್ಲಿಸುವ ಮುನ್ನವೇ ಪ್ರತಿಯನ್ನು ಕಳಿಸಿಕೊಡುತ್ತಿವೆ. ಈ ಉಚಿತ ಪತ್ರಿಕೆಗಳಲ್ಲಿ ಪರಿಚಯಿಸಲೇಬೇಕಾದ ಒಂದು ಪತ್ರಿಕೆ ನಮ್ಮ ಮಾನಸ'.

ಇವತ್ತು ಮಾರುಕಟ್ಟೆಯಲ್ಲಿ ಸಿಗುವ ಮಹಿಳಾ ಪತ್ರಿಕೆಗಳು ಹೇರಳ. ನಿಮ್ಮ ಗಂಡನನ್ನು ಒಲಿಸಿಕೊಳ್ಳುವುದು ಹೇಗೆ, ಅನಗತ್ಯ ರೋಮ ನಿವಾರಣೋಪಾಯ ಮುಂತಾದ ಎಳಸು - ಜೊಳ್ಳು ಲೇಖನಗಳ ಒಣ ಉಪದೇಶಗಳ ಮಹಿಳಾ ಪತ್ರಿಕೆಗಳಿಗೆ ಓದುಗರೂ ಹೆಚ್ಚು! ಬಹುಶಃ ಚೆಂದದ, ಅರೆನಗ್ನ ಚೆಲುವೆಯರ ವರ್ಣದ ಫೋಟೋಗಳಿಂದ ಮಿಂಚುವ ಗೃಹಶೋಭಾ, ಪ್ರಿಯಾಂಕಗಳನ್ನಂತೂ ಮಹಿಳೆಯರಿಗಿಂತ ಪುರುಷರೇ ಹೆಚ್ಚು ನೋಡುತ್ತಾರೇನೋ?!

ಸಂಪೂರ್ಣವಾಗಿ ಮಹಿಳೆಯರ ಸಂಪಾದಕೀಯ ಬಳಗವಿರುವ ಮತ್ತು ಸ್ತ್ರೀ ವಿಚಾರದಲ್ಲಿ ಗಂಭೀರ, ಚಿಂತನೀಯ ಲೇಖನಗಳನ್ನು ಪ್ರಕಟಿಸುವ ಕಪ್ಪು ಬಿಳುಪು ಸುಂದರಿಯೇ ನಮ್ಮ ಮಾನಸ' ಮಾಸಿಕ. ಆರಂಭದ 1985ರ ದಿನಗಳಲ್ಲಿ ಮಾನುಷಿ'ಯಾಗಿ, ತದನಂತರ ಮಾನಸ'ಳಾಗಿ ಈಗ ನಮ್ಮ ಮಾನಸವಾಗಿರುವ ಪತ್ರಿಕೆಗೆ ಮೂರೂಮುಕ್ಕಾಲು ವರ್ಷ ಪ್ರಾಯ. ರಾಜೇಶ್ವರಿ ಎಚ್.ಎಸ್. ಪತ್ರಿಕೆಯ ಸಂಪಾದಕರು, ಮುದ್ರಕರು ಮತ್ತು ಪ್ರಕಾಶಕರು.

22ರಿಂದ 30 ಪುಟ ಹೊಂದಿರುವ ನಮ್ಮ ಮಾನಸದ ಲೇಖನಗಳೆಲ್ಲ ಅರ್ಥಪೂರ್ಣ. ಸ್ತ್ರೀ ಹಕ್ಕು, ಮಹಿಳಾ ದೃಷ್ಟಿಕೋನದಲ್ಲಿ ಸಾಮಾಜಿಕ, ರಾಜಕೀಯ ಪಲ್ಲಟಗಳು, ಸ್ತ್ರೀ ಸಬಲತೆ... ಹೀಗೆ ಹತ್ತಾರು ಉದ್ದೇಶಗಳೊಂದಿಗೆ ಪ್ರಕಟವಾಗುತ್ತಿದೆ. ಕವನಗಳು, ಅನುಭವ ಕಥಾನಕಗಳು ಕೂಡ ಇಲ್ಲಿವೆ. ಸಾಧಕ ಮಹಿಳೆಯರ, ಮಹಿಳಾ ಬರಹಗಾರರ ಪುಸ್ತಕಗಳ ಪ್ರಾಮಾಣಿಕ ಪರಿಚಯಗಳನ್ನು ಕಾಣುತ್ತೇವೆ. ಪ್ರಸಿದ್ಧರ ಬರಹಗಳ ಕನ್ನಡ ಅನುವಾದವೂ ಇಲ್ಲಿರುವುದರಿಂದ ಮಹಿಳೆಯರ ಬುದ್ಧಿ ಮೊಳಕಾಲು ಕೆಳಗೆ ಎಂಬ ತುಚ್ಛ ಮಾತಿಗೆ ಸಡ್ಡು ಹೊಡೆಯುವ ಪ್ರಯತ್ನವಿದು.

ಲೇಖನಗಳತ್ತ ಕಣ್ಣು ಹಾಯಿಸಿದರೆ ಅಚ್ಚರಿಯೇ ಎದುರಾಗುತ್ತದೆ. ಧನಸಹಾಯ ಅತ್ಯಾಚಾರಕ್ಕೆ ಪರಿಹಾರವೇ? ಅನೈತಿಕ ಸರ್ಕಾರದ ವಿರುದ್ಧ ನೈತಿಕ ಹೋರಾಟ, ನಾನು ಅವನಲ್ಲ... ಅವಳು...! ಇತ್ಯಾದಿ ಮೆದುಳಿಗೆ ಆಹಾರ ಪೂರೈಸಬಲ್ಲ ಲೇಖನಗಳು ಇದರಲ್ಲಿದೆ. ಸಾರಿ, ಬಣ್ಣದ ನಗ್ನ ಚಿತ್ರಗಳಾಗಲಿ, ಮೊದಲ ರಾತ್ರಿ ಸೆಕ್ಸ್ ಎಂಬ ಅಸಡ್ಡಾಳ ಲೇಖನಗಳಾಗಲಿ ಇದರಲ್ಲಿಲ್ಲ. ಮಹಿಳೆ ಎಂದಾಕ್ಷಣ ಲಿಪ್‌ಸ್ಟಿಕ್, ಅಡುಗೆ, ಧಾರಾವಾಹಿ ಎಂಬ ಅನಿಸಿಕೆಯನ್ನು ಸುಳ್ಳು ಮಾಡುವ ಮಾನಸಕ್ಕೆ ಸಲಾಂ.

ಕೃಷ್ಣಸುಂದರಿಯ ವಿಳಾಸ : ನಮ್ಮ ಮಾನಸ, 114/5, 9ನೇತಿರುವು, ಎರಡನೇ ಮುಖ್ಯರಸ್ತೆ, ಚಾಮರಾಜ ಪೇಟೆ, ಬೆಂಗಳೂರು - 560 018. ವಿಳಾಸಕ್ಕೆ ಚಂದಾ ಹಣ ಕಳುಹಿಸಬೇಕು. ಪತ್ರಿಕೆಯ ಬಿಡಿ ಪ್ರತಿ ಬೆಲೆ 8 ರೂ. ವಾರ್ಷಿಕ ಚಂದಾ 100 ರೂ.ನಲ್ಲಿ ವಿಶೇಷ ಸಂಚಿಕೆಯೂ ಸೇರಿದೆ. ರಾಜೇಶ್ವರಿಯವರು 94493 45698 ಮೊಬೈಲ್ ನಂ.ನಲ್ಲಿ ಸಂಪರ್ಕಕ್ಕೆ ಲಭ್ಯ. ಸಂಪಾದಕೀಯ ಬಳಗದಲ್ಲಿ ಇರುವ ಮಹಿಳೆಯರನ್ನು ಸುಮ್ಮನೆ ಎಣಿಸಿದರೆ ಸಿಕ್ಕ ಸಂಖ್ಯೆ ಒಂದು ಡಜನ್!

ಕೊನೆ ಮಾತು : ಮಾರುಕಟ್ಟೆಯಲ್ಲಿ ಈ ಪತ್ರಿಕೆ ಬಹುಶಃ ಲಭ್ಯವಿಲ್ಲ. ಗೊಂದಲ ಬೇಡ, ಪುಸ್ತಕಗಳ ಅಂಗಡಿಯಲ್ಲಿ ಸಿಗುವುದು. ಕೆ.ಗಣೇಶ್ ಕೋಡೂರು ಸಂಪಾದಕೀಯದ ನಿಮ್ಮೆಲ್ಲರ ಮಾನಸ' ಎಂಬ ಬೇರೆಯದೇ ಪತ್ರಿಕೆ ಇದೆ. ಅದರ ಬಗ್ಗೆ ಇನ್ನೊಮ್ಮೆ...

ಲೇಖಕರ ವಿಳಾಸ : ಮಾ.ವೆಂ.ಸ.ಪ್ರಸಾದ್, ಮಾವಿನಸರ, ಪೋಸ್ಟ್-ಎಡಜಿಗಳೇಮನೆ. ಸಾಗರ ತಾ. ಶಿವಮೊಗ್ಗ ಜಿ. 577401 ಫೋನ್-08183 236068, 98864 07592 ಇ ಮೇಲ್ : mavemsa@rediffmail.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more