ಮೇ : ಪಂಚಾಂಗ, ದಿನದ ವಿಶೇಷ ಮತ್ತು ಸುಭಾಷಿತ

ನಮ್ಮ ಜೀವನ, ನಮ್ಮ ಬಂಧುಗಳ ಜೀವನ ಎಂದೆಂದೂ ಸುಭಿಕ್ಷವಾಗಿರಬೇಕು, ಕನಿಷ್ಠಪಕ್ಷ ನಮಗೆ ಒಳತಾಗಬೇಕು ಎಂದು ಮನಸ್ಸು ಯಾವತ್ತೂ ಹಾತೊರೆಯುತ್ತಿರುತ್ತದೆ. "ನಿಮ್ಮದು ಒಳ್ಳೆಯ ಮನಸು, ನೀವು ತುಂಬಾ ಹೃದಯವಂತರು, ನಿಮ್ಮಂಥವರಿದ್ದಿದ್ದಕ್ಕೇ ಮಳೆಬೆಳೆಯೆಲ್ಲ ಕಾಲಕಾಲಕ್ಕೆ ಆಗುತ್ತಿರುತ್ತದೆ" ಎಂದು ಯಾರಾದರೂ ನಮ್ಮ ಬಗ್ಗೆ ಹೇಳಿದರೆ ಮನಸ್ಸು ಅರಳುತ್ತದೆ.

ತಮ್ಮ ಜೀವನವನ್ನೇ ಸಮಾಜದ ಉದ್ಧಾರಕ್ಕಾಗಿ ಧಾರೆಯೆರೆದ ಮಹಾನ್ ಜೀವಿಗಳ ಜಾಣ್ನುಡಿಗಳು, ಅಮೃತ ಪದಗಳು, ಸುಭಾಷಿತಗಳು, ಸೂಕ್ತಿಗಳು, ಜನಪದದಿಂದ ಹರಿದುಬಂದ ಸ್ಫೂರ್ತಿಯುತ ಮಾತುಗಳು, ಹಿರಿಯರ ಹಾರೈಕೆಗಳು, ಶ್ರೀಸಾಮಾನ್ಯರ ಬಾಯಿಂದ ತೇಲಿಬಂದ ನುಡಿಗಳು ಪ್ರತಿದಿನ ಕೇಳುತ್ತಿದ್ದರೆ, ಓದುತ್ತಿದ್ದರೆ, ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದರೆ ಒಂದು ಬಗೆಯ ಸಾರ್ಥಕ ಭಾವ ಮೂಡುತ್ತದೆ.

ಹಾಗೆಯೆ, ದಿನನಿತ್ಯದ ಪಂಚಾಂಗದ ಜೊತೆ ಪ್ರತಿದಿನದ ವಿಶೇಷ ಆಚರಣೆಗಳು, ಕರ್ನಾಟಕದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಉತ್ಸವಗಳು, ರಾಷ್ಟ್ರೀಯ ಅಂತಾರಾಷ್ಟ್ರೀಯ ಚಟುವಟಿಕೆಗಳತ್ತ ಒಂದು ನೋಟ ಈ ಪುಟಗಳು ಚೆಲ್ಲಲಿವೆ. ಸಮೃದ್ಧ ಮಾಹಿತಿ ಇರುವ ಈ ಪುಟಗಳು ನಿಮಗಾಗಿ.

ಮೇ 31, ಶನಿವಾರ - ವಿಶ್ವ ತಂಬಾಕು ರಹಿತ ದಿನ

ಮೇ 31, ಶನಿವಾರ - ವಿಶ್ವ ತಂಬಾಕು ರಹಿತ ದಿನ

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ತದಿಗೆ ತಿಥಿ, ಆರ್ದ್ರಾ ನಕ್ಷತ್ರ,ರಾಹುಕಾಲ 09.00 ರಿಂದ 10.30.

ದಿನದ ವಿಶೇಷ : ವಿಶ್ವ ತಂಬಾಕು ರಹಿತ ದಿನ, ಐ ಕ್ವಿಟ್ ಫೇಸ್ ಬುಕ್ ದಿನ, ಕೈವಾರ ತಾತಯ್ಯ ಆರಾಧನೆ.

ಸುಭಾಷಿತ : ಜೀವನವೆಲ್ಲಾ ಬೇವು-ಬೆಲ್ಲ, ಸವಿದವನೇ ಕವಿ ಮಲ್ಲ! - ಕುವೆ೦ಪು.

ಗುರುವಾರ, ಮೇ 22 - ಶ್ರೀರಾಮ ಪಟ್ಟಾಭಿಷೇಕ

ಗುರುವಾರ, ಮೇ 22 - ಶ್ರೀರಾಮ ಪಟ್ಟಾಭಿಷೇಕ

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷ, ನವಮಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ 13.30 ರಿಂದ 15.00.

ದಿನದ ವಿಶೇಷ : ಶ್ರೀರಾಮ ಪಟ್ಟಾಭಿಷೇಕ, ಹುಲಗಿ-ಹುಲಿಗೆಮ್ಮ ರಥ, ಶ್ರೀವಿದ್ಯಾ ರತ್ನಾಕರ ತೀರ್ಥ ಆರಾಧನೆ.

ಸುಭಾಷಿತ : ಒಳ್ಳೆಯ ನೆಲದಲ್ಲಿ ಬಿತ್ತಿದ ಬೀಜ, ಒಳ್ಳೆಯ ಮಗನಲ್ಲಿ ಇಟ್ಟಿದ್ದು ಹಾಗೂ ಕೊಟ್ಟಿದ್ದು ಎ೦ದೂ ಹಾಳಾಗುವುದಿಲ್ಲ.

ಮಂಗಳವಾರ, ಮೇ 13 : ಲಕ್ಷ್ಮೀನೃಸಿಂಹ ಜಯಂತಿ

ಮಂಗಳವಾರ, ಮೇ 13 : ಲಕ್ಷ್ಮೀನೃಸಿಂಹ ಜಯಂತಿ

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ಚತುರ್ದಶಿ ತಿಥಿ, ಚಿತ್ರಾ ನಕ್ಷತ್ರ, ರಾಹುಕಾಲ 15.00 ರಿಂದ 16.30

ದಿನದ ವಿಶೇಷ : ಶ್ರೀಕೂರ್ಮಾ ಜಯಂತಿ, ಶ್ರೀನರಸಿಂಹ ಜಯಂತಿ, ನೇರಳಕಟ್ಟೆ ಉತ್ಸವ, ಹಜರತ್ ಅಲಿ ಜನ್ಮದಿನ, ಗೋರೂರು ಯೋಗಾನರಸಿಂಹ ಜಯಂತಿ.

ಸುಭಾಷಿತ : ತಪ್ಪನ್ನು ಮಾಡುವ ಮೊದಲೇ ಆಕ್ಷೇಪಿಸುವುದು ಹಾಗೂ ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುವುದು ಮಾನವನ ಸಹಜ ಗುಣ!

ಭಾನುವಾರ, ಮೇ 11 : ವಿಶ್ವ ಅಮ್ಮಂದಿರ ದಿನ

ಭಾನುವಾರ, ಮೇ 11 : ವಿಶ್ವ ಅಮ್ಮಂದಿರ ದಿನ

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ಉತ್ತರಾ ನಕ್ಷತ್ರ, ರಾಹುಕಾಲ 16.30 ರಿಂದ 18.00.

ದಿನದ ವಿಶೇಷ : ವಿಶ್ವ ಅಮ್ಮನ ದಿನ, ರಾಷ್ಟ್ರೀಯ ತಂತ್ರಜ್ಞಾನ ದಿನ, ಶಂಕರಾಚಾರ್ಯರ ಆರಾಧನೆ, ಹರಿವಾಸರ, ಶ್ರೀವೇದವ್ಯಾಸ ಜಯಂತಿ, ಉಡುಪಿ ವಸಂತೋತ್ಸವ, ಶ್ರೀವಿದ್ಯಾಮಾನ್ಯರ ಆರಾಧನಾ ಮಹೋತ್ಸವ, ವೃಶ್ಚಿಕೇಷ

ಸುಭಾಷಿತ : ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುವಿನ ಹಣೆಗಿಂತಲೂ ಸ್ವಚ್ಛವಾದದ್ದು ಈ ಪ್ರಪಂಚದಲ್ಲಿ ಮತ್ತೇನೂ ಇಲ್ಲ . ಬ್ರಹ್ಮ ಕೂಡ ಅದುವರೆವಿಗೂ ಆ ಹಣೆಯ ಮೇಲೆ "ಬರಹ" ಬರೆದಿರುವುದಿಲ್ಲ
-ಯಂಡಮೂರಿ ವೀರೇಂದ್ರನಾಥ

ಶನಿವಾರ, ಮೇ 10 - ಬಿಳಿಗಿರಿ ರಂಗನಾಥ ಸ್ವಾಮಿ ರಥ

ಶನಿವಾರ, ಮೇ 10 - ಬಿಳಿಗಿರಿ ರಂಗನಾಥ ಸ್ವಾಮಿ ರಥ

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ಏಕಾದಶಿ ತಿಥಿ, ಉತ್ತರಾ ನಕ್ಷತ್ರ,ರಾಹುಕಾಲ 09.00 ರಿಂದ 10.30.

ದಿನದ ವಿಶೇಷ : ಮೋಹಿನಿ ಏಕಾದಶಿ, ಬಿಳಿಗಿರಿ ರಂಗನಾಥ ಸ್ವಾಮಿ ರಥ, ತಲಕಾಡು ಕೀರ್ತಿನಾರಾಯಣಸ್ವಾಮಿ ರಥ, ಕಲ್ಲಿಕೋಟೆ ಭಜನೋತ್ಸವ.

ಸುಭಾಷಿತ : ಮನಸ್ಸು, ಭಾವನೆ ಶುದ್ಧವಾಗಿದ್ದರೆ ಮನುಷ್ಯನಿಗೆ ರೋಗರುಜಿನಗಳ ಬಾಧೆ ಇರುವುದಿಲ್ಲ - ಸ್ವಾಮಿ ವಿವೇಕಾನಂದ.
ಬುಧವಾರ, ಮೇ 7 - ರವೀಂದ್ರನಾಥ ಟ್ಯಾಗೋರ್ ಜನ್ಮದಿನ

ಬುಧವಾರ, ಮೇ 7 - ರವೀಂದ್ರನಾಥ ಟ್ಯಾಗೋರ್ ಜನ್ಮದಿನ

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ಅಷ್ಠಮಿ ತಿಥಿ, ಆಶ್ಲೇಷಾ ನಕ್ಷತ್ರ, ರಾಹುಕಾಲ 12.00 ರಿಂದ 13.30.

ದಿನದ ವಿಶೇಷ : ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಜನುಮದಿನ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ರಥ, ಶೇಷದಾಸರ ಆರಾಧನೆ.

ಸುಭಾಷಿತ : ಒಬ್ಬ ಶಿಕ್ಷಕ ತಾನು ಕಲಿಯದೆ ಇನ್ನೊಬ್ಬರಿಗೆ ಕಲಿಸಲಾರ. ತಾನು ಉರಿಯದ ದೀಪ ಇನ್ನೊಂದುದೀಪವನ್ನು ಬೆಳಗಿಸಲಾರದು - ರವೀಂದ್ರನಾಥ್ ಟ್ಯಾಗೋರ್
ಮಂಗಳವಾರ, ಮೇ 6 - ಗಂಗೋತ್ಪತ್ತಿಯಾದ ದಿನ

ಮಂಗಳವಾರ, ಮೇ 6 - ಗಂಗೋತ್ಪತ್ತಿಯಾದ ದಿನ

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ಸಪ್ತಮಿ ತಿಥಿ, ಪುಷ್ಯ ನಕ್ಷತ್ರ, ರಾಹುಕಾಲ 15.00 ರಿಂದ 16.30

ಸುಭಾಷಿತ : ಭಗವಂತ ನಮ್ಮನ್ನು ಕಷ್ಟಗಳ ಆಳದ ನೀರಿಗೆ ಕರೆದೊಯ್ಯವುದು ನಮ್ಮನ್ನು ಮುಳುಗಿಸುವುದಕ್ಕಲ್ಲ, ಚೆನ್ನಾಗಿ ತೊಳೆದು ಶುದ್ದವಾಗಿಸಲು ಅಷ್ಟೇ.

ದಿನದ ವಿಶೇಷ : ಗಂಗೋತ್ಪತ್ತಿ, ಗಂಗಾ ಉತ್ಸವ, ಹೆಜಮಾಡಿ ಲಕ್ಷ್ಮೀನಾರಾಯಣ ಉತ್ಸವ, ನಾರಾಯಣಪೇಟೆ ಬ್ರಹ್ಮಾನಂದ-ಸರಸ್ವತಿ ಆರಾಧನೆ.

ಮೇ 5, ಸೋಮವಾರ - ವಿಶ್ವ ಸೂಲಗಿತ್ತಿಯರ ದಿನ

ಮೇ 5, ಸೋಮವಾರ - ವಿಶ್ವ ಸೂಲಗಿತ್ತಿಯರ ದಿನ

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ಷಷ್ಠಿ ತಿಥಿ, ಪುನರ್ವಸು ನಕ್ಷತ್ರ, ರಾಹುಕಾಲ 07.30 ರಿಂದ 09.00.

ದಿನದ ವಿಶೇಷ : ವಿಶ್ವ ಸೂಲಗಿತ್ತಿಯರ ದಿನ, ಯರಗೋಳ (ಯಾದಗಿರಿ) ರಾಮಚಂದ್ರತೀರ್ಥರ ಆರಾಧನೆ, ರಾಮಾನುಜ ಜಯಂತಿ, ಚಿಟ್ಪಾಡಿ, ಕುಂಜೂರು, ಮಧೂರು ರಥ.ಸುಭಾಷಿತ : ಯಾವ ಒತ್ತಡವೂ ಇಲ್ಲದೆ, ಯಾರೊಂದಿಗೂ ಘರ್ಷಣೆ ಇಲ್ಲದೆ, ಯಾವ ರಸಸ್ಪೂರ್ತಿಯು ಇಲ್ಲದೆ ಬದುಕುವುದು ಒಂದು ಬದುಕೇ ಅಲ್ಲ.
ಭಾನುವಾರ (ಮೇ 4) - ವಿಶ್ವ ನಗೆ ದಿನ

ಭಾನುವಾರ (ಮೇ 4) - ವಿಶ್ವ ನಗೆ ದಿನ

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಆರ್ದ್ರಾ ನಕ್ಷತ್ರ, ರಾಹುಕಾಲ ಸಾಯಂಕಾ 4.58 ರಿಂದ 6.33.

ದಿನದ ವಿಶೇಷ : ವಿಶ್ವ ನಗೆ ದಿನ, ಕಾರ್ಕಳ ವೆಂಕಟರಮಣ, ಸಾಲಿಗ್ರಾಮ ಯೋಗಾ-ನೃಸಿಂಹ ರಥ, ಬೆಂಗಳೂರು ಕೆ.ಆರ್. ಪುರಂ ಜಾತ್ರೆ, ಕೋಲಾರ ವರದರಾಜ ಸ್ವಾಮಿ ಗರುಡೋತ್ಸವ.

ಶನಿವಾರ (ಮೇ 03)

ಶನಿವಾರ (ಮೇ 03)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಮಾಸ, ಶುಕ್ಲ ಪಕ್ಷ, ಚೌತಿ ತಿಥಿ, ಮೃಗಶಿರಾ ನಕ್ಷತ್ರ, ರಾಹುಕಾಲ 09.00 ರಿಂದ 10.30.

ದಿನದ ವಿಶೇಷ : ವಿಶ್ವ ಪತ್ರಿಕಾ ಸ್ವಾತಂತ್ರ್ಯದಿನ, ಮೇಲುಕೋಟೆ, ಭಾಷ್ಯಕಾರ ರಥ, ಕೂಡ್ಲಿ ಆರಾಧನೆ, ನರಸಿಂಹಸ್ವಾಮಿಗಳ ಆರಾಧನೆ.

ಸುಭಾಷಿತ : ಒಳ್ಳೆಯ ನೆಲದಲ್ಲಿ ಬಿತ್ತಿದ ಬೀಜ, ಒಳ್ಳೆಯ ಮಗನಲ್ಲಿ ಇಟ್ಟಿದ್ದು ಹಾಗೂ ಕೊಟ್ಟಿದ್ದು ಎ೦ದೂ ಹಾಳಾಗುವುದಿಲ್ಲ.
ಶುಕ್ರವಾರ (ಮೇ 02)

ಶುಕ್ರವಾರ (ಮೇ 02)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಮಾಸ, ಶುಕ್ಲ ಪಕ್ಷ, ತದಿಗೆ ತಿಥಿ, ರೋಹಿಣಿ ನಕ್ಷತ್ರ, ರಾಹುಕಾಲ ಬೆಳಿಗ್ಗೆ 10.30 ರಿಂದ 12.00.

ದಿನದ ವಿಶೇಷ : ಬಸವ ಜಯಂತಿ, ಅಕ್ಷಯ ತೃತೀಯ, ಪರುಶರಾಮ ಜಯಂತಿ.ಸುಭಾಷಿತ : ಕಾಲವು ಎಲ್ಲರಿಗೂ/ಎಲ್ಲದಕ್ಕೂ ಉತ್ತರ ನೀಡುತ್ತದೆ..
ಗುರುವಾರ (ಮೇ 01)

ಗುರುವಾರ (ಮೇ 01)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಮಾಸ, ಶುಕ್ಲ ಪಕ್ಷ, ಬಿದಿಗೆ ತಿಥಿ, ಕೃತ್ತಿಕ ನಕ್ಷತ್ರ, ರಾಹುಕಾಲ 13.30 ರಿಂದ 15.00.

ದಿನದ ವಿಶೇಷ : ಕಾರ್ಮಿಕರ ದಿನಾಚರಣೆ, ತ್ರೇತಾ ಯುಗಾದಿ, ಬಲ್ಮಂಜ ರಥ, ಹಂಪಿ ವಿದ್ಯಾರಣ್ಯರ ಆರಾಧನೆ.

ಸುಭಾಷಿತ : ಜೀವನದಲ್ಲಿ ದೊಡ್ಡ ಕೆಲಸ, ಕಾರ್ಯವೆಂಬುದು ಇಲ್ಲವೇ ಇಲ್ಲ. ದೊಡ್ಡ ಪ್ರೀತಿಯಿಂದ ಮಾಡಿದ ಎಷ್ಟೇ ಸಣ್ಣ ಕೆಲಸವಾದರೂ ಅದು ದೊಡ್ಡ ಕೆಲಸ, ಕಾರ್ಯವೇ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+