• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಕಷ್ಟದ ಸಮಯದಲ್ಲಿ ಮುಂದಾಳುತನದ ಕ್ಷೋಭೆ- ಏಕೆ-ಹೇಗೆ?

By ಮನೋವೈದ್ಯ ಡಾ. ಅ. ಶ್ರೀಧರ
|

ಮುಂದಾಳು, ಮುಖಂಡ, ಲೀಡರ್‌ ಎನ್ನುವಂತಹ ಪದಗಳು ದಿನಬಳಕೆಯದ್ದೇ ಆಗಿದ್ದರೂ ಮನೋವಿಜ್ಞಾನದ ದೃಷ್ಟಿಯಿಂದ ಇವುಗಳು ವಿಶಿಷ್ಟ ನಡೆನುಡಿಗಳನ್ನು ಸಂಕೇತಿಸುವ ವ್ಯಕ್ತಿತ್ವದ ರೀತಿಯಾಗಿರುವುದು. ಹುಟ್ಟಿನಿಂದಲೇ ವ್ಯಕ್ತಿತ್ವದ ಲಕ್ಷಣಗಳಲ್ಲಿ ನಾಯಕತ್ವದ ಗುಣಗಳು ವ್ಯಕ್ತಗೊಳ್ಳುವುದು ಅಪರೂಪ. ಹದಿಹರೆಯದ ನಂತರದ ಬೆಳವಣಿಗೆಯಲ್ಲಿ ಉಂಟಾಗುವ ವ್ಯಕ್ತಿತ್ವದ ವಿಕಾಸದಲ್ಲಿ ಮುಂದಾಳುವಿನ ಲಕ್ಷಣಗಳು ಪ್ರಕಟಗೊಳ್ಳುವುದು ಸಾಮಾನ್ಯ.

   ಬೆಂಗಳೂರಿನ ಶ್ರೀನಗರದಲ್ಲಿ ಕೊರೊನಾ ವೈರಸ್ ಭಯ ಇಲ್ಲ | Srinagara | No Fear Corona | Oneindia kannada

   ಏಕೆಂದರೆ, ಆ ಸಮಯದಲ್ಲಿ ಸಾಮಾಜಿಕ ಒಡನಾಡಿತನ, ಸಾಹಸ, ಮನ್ನಣೆ ಮತ್ತು ಸಂಗಡಿಗರ ಮಧ್ಯೆ ಎದ್ದು ಕಾಣಿಸಿಕೊಳ್ಳುವ ಹಂಬಲ ಮನದಾಳದ ಬಲವಾಗಿ ಪ್ರಕಟಗೊಳ್ಳುವ ಹವಣಿಕೆಯಲ್ಲಿರುವುದು. ಹೀಗೆಯೇ ಮುಂದುವರೆದು ಅವಕಾಶ, ಅವಲೋಕನದ ಸಾಮರ್ಥ್ಯ ಮತ್ತು ಕೆಲವು ಸೂಕ್ಷ್ಮ ಮಾನಸಿಕ ಲಕ್ಷಣಗಳ ಕ್ರಿಯಾಶೀಲತೆಗೊಂಡು ಹೊರಬರುತ್ತದೆ. ಮುಖ್ಯವಾಗಿ ಸಮಸ್ಯೆಗಳಿಗೆ ಕ್ಷಿಪ್ರವಾಗಿ ಒದಗಿಸುವ ಸಾಮರ್ಥ್ಯ ಪ್ರದರ್ಶಿಸುವವರು ನಾಯಕತ್ವದ ಹಾದಿಯನ್ನು ತುಳಿಯಲು ಮುಂದಾಗಿರುತ್ತಾರೆ.ಮುಂದಾಳುವಿನ ಮಾನಸಿಕ ಶಕ್ತಿಗಳು ಇತರರಿಗೆ ನೆಮ್ಮದಿ, ಮಾರ್ಗದರ್ಶನ, ಮತ್ತು ಸಮಸ್ಯಾ ಪರಿಹಾರಕ್ಕೆ ನೆರವು ನೀಡುವುದರ ಕಡೆಯೇ ಸದಾ ಹರಿದಾಡುತ್ತಿದ್ದು ಇತರರ ಗಮನಕ್ಕೆ ಬರುವ ರೀತಿಯಲ್ಲಿ ಈ ಲಕ್ಷಣಗಳು ಪ್ರದರ್ಶಿತವಾಗುತ್ತದೆ.

   ಕೊರೊನಾದಿಂದ 40 ಕೋಟಿ ಕಾರ್ಮಿಕರು ಮತ್ತಷ್ಟು ಬಡತನದ ಕೂಪಕ್ಕೆ!

   ಈ ನಡೆನುಡಿಗಳು ಕೇವಲ ತೋರಿಕೆದ್ದಾಗಿರದೇ ಇತರರ ಸಮಸ್ಯೆ, ಸಂತೃಪ್ತಿಗಳನ್ನು ಮಾಪಿಸುವ ಬಲ ಹೊಂದಿರುತ್ತದೆ. ಹೀಗಾಗಿದು ಇತರರ ಮಾನಸಿಕ ಬೆಳವಣಿಗೆಗೂ ಪೂರಕವೆನ್ನುವಂತಹ ಭಾವಗಳನ್ನು ಮೂಡಿಸುತ್ತದೆ. ಈ ಕಾರಣದಿಂದ ಮುಂದಾಳುವು ಸದಾಕಾಲ ಹೊಸ ಕ್ರಮಗಳನ್ನು , ಮಾರ್ಗಗಳನ್ನು ಕಂಡುಕೊಳ್ಳುವುದಕ್ಕೆ ಪ್ರಯತ್ನಗಳನ್ನು ಮಾಡುತ್ತಲೇ ಇರುವುದು ಸಾಮಾನ್ಯ. ಹೊಸ ಹೊಸ ವಿಧಾನದಲ್ಲಿ ಸಮಸ್ಯೆಗಳನ್ನು ಅಂದಾಜಿಸುವ, ಎದುರಿಸುವ ಮತ್ತು ಪರಿಹಾರ ಹುಡುಕುವ ಪ್ರಯುತ್ನಗಳು ಮುಂದುವರೆಯುತ್ತಿರುವುದರ ಫಲವಾಗಿ ಹೊಸ ಸಂಘರ್ಷ, ಸವಾಲು ಮತ್ತು ಸಮಸ್ಯೆಗಳನ್ನು ವೈಯಕ್ತಿಕ ಮಟ್ಟದಲ್ಲಿಯೇ ಎದುರಿಸುತ್ತಿರುತ್ತಾರೆ.

   ಮುಂದಾಳುತ್ವಕ್ಕೆ ಸದಾ ಸಮಸ್ಯೆಗಳು

   ಮುಂದಾಳುತ್ವಕ್ಕೆ ಸದಾ ಸಮಸ್ಯೆಗಳು

   ಆದುದರಿಂದಲೇ ಮುಂದಾಳುತ್ವಕ್ಕೆ ಸದಾ ಸಮಸ್ಯೆಗಳು ಎದುರಾಗುತ್ತಲೇ ಇರುವುದು. ಇಂದು ಇಡೀ ವಿಶ್ವವೇ ವೈರಾಣುವೊಂದರ ಹಾವಳಿಗೆ ಸಿಕ್ಕಿಕೊಂಡಿದ್ದು ಅದರ ವ್ಯಾಪಕ ಮತ್ತು ಕ್ಷಿಪ್ರ ಹರಡುವಿಕೆಯಿಂದ ಅಂದಾಜಿಗೆ ಸಿಗದಂತಹ ಸಮಸ್ಯೆಗಳು ಕ್ಷಣಕ್ಷಣಕ್ಕೂ ಏರುತ್ತಲೇ ಇದು. ಬಹುಶಃ ಇತಿಹಾಸದ ಪುಟಗಳಲ್ಲಿ ಇಂತಹದೊಂದು ಪರಿಸ್ಥಿತಿ, ಅಂದರೇ ನಾಯಕತ್ವದ ಸಾಮರ್ಥ್ಯ ಮತ್ತು ನೈತಿಕ ಬಲಗಳನ್ನು ಪರೀಕ್ಷಿಸುವಂತಹದ್ದು, ಹಿಂದೆಂದೂ ಕಂಡಂತ್ತಿಲ್ಲ.

   ಸಮರ, ಕ್ಷಾಮ, ಡಾಮರು, ನೆರೆಹಾವಳಿಗಳಿಗಿಂತಲೂ ವಿಭಿನ್ನವಾಗಿರುವಂತಹ ಸಮಸ್ಯೆಗಳನ್ನು ಈ ರೋಗದ ಸ್ಥಿತಿಯು ವಿಶ್ವದ ಪ್ರತಿಯೊಂದು ದೇಶದ ನಾಯಕನ ಮನಸನ್ನು ತಲ್ಲಿಣಿಸುವಂತದ್ದಾಗಿದೆ. ಈ ಕಾರಣದಿಂದಲೇ ದರ್ಪ, ದಬ್ಬಾಳಿಕೆಯನ್ನು ಹೋಲುವಂತಹ ನಿಯಮ, ಆಚರಣೆಗಳು ಪ್ರಶ್ನೆ, ಪರೀಕ್ಷೆಗೆ ಒಳಪಡದೆ ಜಾರಿಗೆ ಬಂದಿದೆ. ಈ ಕ್ರಿಯೆಗಳೆಲ್ಲವು ರೋಗದ ಭೀತಿ, ಬದುಕಿನ ತಲ್ಲಣಗಳಿಂದ ನೊಂದ ಅಪಾರ ನಾಗರೀಕರ ವಿರುದ್ಧವೇ ಆಗಿದ್ದು ನಿತ್ಯ ಬದುಕಿನ ಯಾತನೆಗಳನ್ನು ಕೇಳುವವೇ ಇಲ್ಲವೇನೋ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ. ಈ ಮಾದರಿಯ ಪರಿಸ್ಥಿತಿಯನ್ನು ಸುಗಮವಾಗಿ ಮತ್ತು ಆತ್ಮವಿಶ್ವಾಸದಿಂದ ಎದುರಿಸುತ್ತಿರುವ ನಾಯಕರು ಈ ಕಾಲಘಟ್ಟದಲ್ಲಿ ಇಲ್ಲವೆಂದೇ ಹೇಳಬಹುದು.

   ಕೊರೊನಾ ವಿರುದ್ಧ ಹೋರಾಟ: ಅಮೆರಿಕ, ಚೀನಾ ಒಗ್ಗಟ್ಟಿಗೆ WHO ಕರೆ

   ಹುಂಬುತನವನ್ನು ಸಂಕೇತಿಸುವ ವರ್ತನೆ

   ಹುಂಬುತನವನ್ನು ಸಂಕೇತಿಸುವ ವರ್ತನೆ

   ಉದಾಹರಣೆಗೆ ಹೇಳುವುದಾದರೇ ಅಮೆರಿಕದ ಅಧ್ಯಕ್ಷ ಇತ್ತೀಚಿಗೆ ಆಡಿದ ...ನೀವೇನಾದರೂ ನಾವು ಕೇಳಿರುವ ಔಷಧಿಗಳನ್ನು ಕೊಡದಿದ್ದರೇ ಪರಿಣಾಮಗಳನ್ನು ಎದುರಿಸಬೇಕಾಗುವುದು ಎನ್ನುವ ಮಾತು ಅಸಹಾಯಕತೆ ಮತ್ತು ಹುಂಬುತನವನ್ನು ಸಂಕೇತಿಸುವ ವರ್ತನೆಯೆನ್ನಬಹುದು. ಈ ಪ್ರತಿಕ್ರಿಯೆಗಳನ್ನು ಗಮನಿಸಿದರೆ ವಿಶ್ವದ ಪ್ರಬುದ್ಧ ಪ್ರಜಾಪ್ರಭುತ್ವದ ರಾಷ್ಟ್ರದ ನಾಯಕನಲ್ಲಿ ಇರಬೇಕಾದಂತಹ ಉತ್ತಮ ಮಟ್ಟದ ಸಾಮರ್ಥ್ಯಗಳ ಕೊರತೆಯೆನ್ನುವುದರೊಂದಿಗೆ ಸಂಕಷ್ಟದ ಸಮಯದಲ್ಲಿ (ಅಪಕ್ವ)ನಾಯಕರುಗಳ ಮಾನಸಿಕ ಸಾಮರ್ಥ್ಯವೂ ಕುಸಿದಿರುತ್ತದೆ.

   ಈ ಸನ್ನಿವೇಶದಲ್ಲಿ ವಿಶ್ವದ ಬಹುತೇಕ ನಾಯಕರು ತಮ್ಮ ನೆಚ್ಚಿನ ದೇಶಪ್ರಜೆಗಳೊಂದಿಗೆ ಈ ನಮೂನೆಯಲ್ಲಿಯೇ ವರ್ತಿಸುತ್ತಿರುವುದು ಸ್ಪಷ್ಟ. ಸಂಪೂರ್ಣವಾಗಿ ಕುಸಿದಿರುವ ಮಾನಸಿಕ ಬಲಗಳನ್ನು ಮತ್ತಷ್ಟು ಕುಸಿಯುವಂತೆ ಮಾಡುವುದು, ಜನರಲ್ಲಿ ಭೀತಿ ಹೆಚ್ಚಿಸುವಂತಹ ನಡೆನುಡಿಗಳು, . ಜನ ಸಾಮಾನ್ಯರ ನಡುವಿನ ಸಾಮರಸ್ಯತೆಯನ್ನು ಕದುಡುವಂತಹ ಮಾತು, ಕೃತಿಗಳ ಮೂಲಕ ಜನಮನದಲ್ಲಿ ಭಯಂಕರ ತಲ್ಲಣಗಳನ್ನು ಮೂಡಿಸುತ್ತಿರುವ ನಿದರ್ಶನಗಳಿಂದು ಹೇರಳವಾಗಿ ಗೋಚರಿಸುತ್ತಿದೆ.

   ಲಾಕ್ ಡೌನ್ ಮತ್ತು ಹಾಟ್‌ ಸ್ಪಾಟ್‌ಗಳಿಗಿರುವ ವ್ಯತ್ಯಾಸವೇನು?

   ನಾಯಕತ್ವದ ವೈಫಲ್ಯತೆ

   ನಾಯಕತ್ವದ ವೈಫಲ್ಯತೆ

   ಆದುದರಿಂದಲೇ ನಾಯಕರುಗಳಲ್ಲಿಯೂ ಈ ಸಮಯದಲ್ಲಿ ಮನೋಕ್ಷೋಭೆ ಉಂಟಾಗುತ್ತಿರುವುದನ್ನು ಸೂಚಿಸುವುದೇನೆಂದರೆ ನಾಯಕತ್ವದ ವೈಫಲ್ಯತೆ. ಹೀಗಿದ್ದಾಗ ರೋಗದಿಂದ ಹುಟ್ಟುತ್ತಿರುವ ಭೀಕರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವಷ್ಟು ವ್ಯವಧಾನ, ಜನ ವ್ಯವಹಾರದ ನೈಪುಣ್ಯತೆ ಇರದಿರುವವರು ಎದುರಾಗುತ್ತಿರುವ ಸಮಸ್ಯೆಗಳಿಂದ ಜನರನ್ನು ರಕ್ಷಿಸಬಲ್ಲರೆ ಎನ್ನುವುದು. ಹೀಗಿದ್ದಾಗ್ಯೂ ಕೆಲವೊಂದು ರಾಷ್ಟ್ರಗಳ ನಾಯಕರುಗಳು ವೈರಾಣುವಿನಿಂದು ಉಂಟಾಗುತ್ತಿರುವ ಅಸಹಜ ಪರಿಸ್ಥಿತಿಗಳನ್ನು ಎದುರಿಸುವ ಮನೋಬಲ ಮತ್ತು ಜನಬಲವನ್ನು ಒಗ್ಗೂಡಿಸುವ ಪ್ರಯತ್ನಗಳು ಅಲ್ಲೊಂದು, ಇಲ್ಲೊಂದು ರಾಷ್ಟ್ರಗಳಲ್ಲಿ ಕಂಡುಬಂದಿದೆ. ಗಂಭೀರವೆನ್ನುವ ರೋಗದ ಪರಿಸ್ಥಿತಿಯನ್ನು ತಕ್ಷಣದಲ್ಲಿ ತಿಳಿದು ಸರಿಪಡಿಸಿಕೊಳ್ಳುವಂತಹ ನಾಯಕತ್ವದ ಲಕ್ಷಣಗಳನ್ನು ಪ್ರದರ್ಶಿಸಿರುವ ದೇಶಗಳಲ್ಲಿ ನ್ಯೂಜಿಲ್ಯಾಂಡ್‌, ಜಪಾನ್‌, ಕೊರಿಯದ ಸಮಸ್ಯಾ ಪರಿಹಾರದ ವಿಧಾನಗಳು ನಾಯಕತ್ವದ ಪಂಡಿತರ ಮೆಚ್ಚುಗೆಗೆ ಪಾತ್ರವಾಗಿದೆ.

   ಈ ಸಮಯದಲ್ಲಿ ಜನರ ಚಲನವಲನಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರುವುದು ಅನಿವಾರ್ಯವೆನ್ನುವಂತಹ ಸ್ಥಿತಿಯೇ ಇದ್ದರೂ ಅವುಗಳನ್ನು ಕಾರ್ಯರೂಪಕ್ಕೆ ತರುವ ವಿಧಾನದಲ್ಲಿ ಉತ್ತಮ ಒಳನೋಟವಿರದಿರುವುದು ವಿಶ್ವದ ಅನೇಕ ದೇಶದ ನಾಯಕರುಗಳಲ್ಲಿ ಕಂಡುಬರುತ್ತಿದೆ. ಹಾಗೆ ನೋಡಿದರೆ. ಆದರೆ ಈ ವಿಷಯಕ್ಕೆ ಹೊರತು ಎನ್ನುವಂತಹ ಉದಾಹರಣೆ ಎಂದರೆ ನ್ಯೂಜಿಲೆಂಡಿನ ಪ್ರಧಾನಿ ಜಸಿಂದ ಆರ್ಡರನ್ಸ್‌. ಕೋವಿಡ್-19 ವೈರಾಣುವು ವ್ಯಾಪಕವಾಗಿ ಹರಡುತ್ತಿದ್ದಂತಹ ಸಮಯಲ್ಲಿ ಅತಿಸೂಕ್ಷ್ಮ ಮತ್ತು ಕಠಿಣವೆನ್ನುವಂತಹ ನಿರ್ಧಾರವನ್ನು ತೆಗೆದುಕೊಂಡ ರೀತಿಯು ವಿಶ್ವದಾದ್ಯಂತ ಚಿಂತಕರ ಮೆಚ್ಚುಗೆಯನ್ನು ಪಡೆದಿದೆ. ಆಕೆ ತನ್ನ ಸಮಯಪ್ರಜ್ಞೆಯನ್ನು ಚುರುಕಾಗಿಸಿಕೊಂಡು ಸಮಸ್ಯೆಯನ್ನು ವಿಶ್ಲೇಷಿಸಿದ ಪರಿಯಲ್ಲಿ ಜನರ ನೆಮ್ಮದಿ, ಆರೋಗ್ಯ ಮತ್ತು ಸಹಕಾರದ ಆಯಾಮಗಳನ್ನು ಅತ್ಯಂತ ಜಾಗರೂಕತೆಯಿಂದ ಬಳಸಿಕೊಂಡಿದ್ದರು.

   ನ್ಯೂಜಿಲೆಂಡ್ ಪ್ರಧಾನಿಗಿರುವ ಒಳನೋಟ

   ನ್ಯೂಜಿಲೆಂಡ್ ಪ್ರಧಾನಿಗಿರುವ ಒಳನೋಟ

   ಕೋಟ್ಯಾನುಕೋಟಿ ಜನರ ನಿತ್ಯಜೀವನದ ವಿಧಾನವನ್ನೇ ಬದಲಾಯಿಸ ಬೇಕಾದಂತಹ ನಿರ್ಧಾರವು ಅದಾಗಿದ್ದರೂ ಜನಸಾಮಾನ್ಯರ ಬವಣೆಗಳ ಬಗ್ಗೆ ಆಕೆಗೆ ಇದ್ದಂತಹ ಒಳನೋಟ ಮೆಚ್ಚಿಕೊಳ್ಳಬೇಕಾದುದ್ದೇ ದೇಶವಾಸಿಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ, ತಜ್ಞರ ಸಲಹೆ, ಮಾರ್ಗದರ್ಶನವನ್ನು ಪಾಲಿಸುವುದು, ಸಹೋದ್ಯೋಗಿಗಳೊಂದಿಗೆ ಸಮಸ್ಯೆಗಳ ಬಗ್ಗೆ ನಿತ್ಯ ಚರ್ಚೆ, ಕಾರ್ಯಯೋಜನೆಯ ಅನುಷ್ಠಾನಗಳ ಬಗ್ಗೆ ಉಪಾಯಗಳನ್ನು ಸಂಬಂಧಪಟ್ಟವರೊಂದಿಗೆ ಮುಚ್ಚು ಮರೆಯಲ್ಲಿದೆ ಹಂಚಿಕೊಳ್ಳುವುದು ಆಕೆಯ ಪ್ರಬಲ ವ್ಯಕ್ತಿತ್ವ ಲಕ್ಷಣವಾಗಿದ್ದು ಮಾನವೀಯ ಮುಂದಾಳು ಎನಿಸಿಕೊಂಡಿದಾರೆ. ಮಾನವೀಯತೆಯೇ ಪ್ರಧಾನವಾಗಿರುವಂತಹವರಲ್ಲಿ ಕಠಿಣ ನಿರ್ಧಾರಗಳು ಏಕಾಏಕಿ, ಏಕಮುಖಿಯಾಗಿರದೇ ಇತರರ ಅಭಿಪ್ರಾಯ, ಸಹಮತಗಳ ಮೂಲಕ ನೆರವರೇರುವಂತಹದ್ದಾಗಿರುತ್ತದೆ.

   ಕೊರೊನಾ ಕದನದ ನಡುವೆ 2ನೇ ವಿಶ್ವಯುದ್ಧದ ಲಸಿಕೆ ಟ್ರೆಂಡ್

   ಲಾಕ್‌ ಡೌನ್‌ ಎನ್ನುವುದು ಒಂದು ರೋಗ ಚಿಕಿತ್ಸಾ ವಿಧಿ

   ಲಾಕ್‌ ಡೌನ್‌ ಎನ್ನುವುದು ಒಂದು ರೋಗ ಚಿಕಿತ್ಸಾ ವಿಧಿ

   ಇಂದಿನ ಪರಿಸ್ಥಿತಿಯು ಕೇವಲ ಒಬ್ಬ ವ್ಯಕ್ತಿಯ ನಾಯಕತ್ವದ ಲಕ್ಷಣಗಳಿಂದ ಬಗೆಹರಿಸುವುದಿರಿಲಿ, ಗ್ರಹಿಸುವುದಕ್ಕೂ ಸಾಧ್ಯವಾಗದು. ಸಮಸ್ಯೆಯನ್ನು ಅಂದಾಜಿಸುವ, ಎದುರಿಸುವ ಮತ್ತು ಪರಿಹರಿಸುವ ಕ್ರಮವು ಜನಸಾಮಾನ್ಯರ ಸಹಕಾರ, ಸಮ್ಮತಿಸುವಿಕೆಯನ್ನು ಶುದ್ಧ ಮನಸಿನಿಂದ ಒಪ್ಪಿಕೊಳ್ಳುವಂತಹ ಮಾದರಿಯದ್ದಾಗಿರಬೇಕು. ಜನರಿಂದ ದೂರಸರಿದಿದ್ದು, ಕೆಳ ಹಂತದ ಕಾನೂನು ಪಾಲಕರ ಕಾರ್ಯಕ್ಷಮತೆಗೆ ಸಮಸ್ಯಾ ಪರಿಹಾರದ ವಿಧಿಗಳನ್ನು ಬಿಟ್ಟಾಗ ನೊಂದ ಜನರಿಗೆ ಮತ್ತಷ್ಟು ಆಘಾತವಷ್ಟೇ ಸಿಗುವುದು. ಜನರ ಮನಸ್ಸಿಗೆ ನೆಮ್ಮದಿ, ಭರವಸೆ ನೀಡುವಂತಹ ನಾಯಕರ ಮಾತುಗಳು ನಮ್ಮಲ್ಲಿ ಕೇಳಿಬರುತ್ತಿರುವುದು ಅಪರೂಪ. ಹೊಡಿ, ಜೈಲಿಗೆ ತಳ್ಳು, ಅಡ್ಡಾಡುವರನ್ನು ಒದ್ದು ಉರಳಿಸು ಎನ್ನುವ ವರ್ತನೆಗಳ ಹಿಂದೆ ನಾಯಕರ ವಿರುದ್ಧದ ಆಕ್ರೋಶವೂ ಸೇರಿರುತ್ತದೆ.

   ಇಂದಿನ ರೋಗದ ಪರಿಸ್ಥಿತಿಯಲ್ಲಿ ಲಾಕ್‌ ಡೌನ್‌ ಎನ್ನುವುದು ಒಂದು ರೋಗ ಚಿಕಿತ್ಸಾ ವಿಧಿ ಎಂದೇ ಪರಿಗಣಿಸಿ ಅದರಿಂದ ಜನಸಾಮಾನ್ಯರ ಸಂವೇದನಶೀಲತೆಯನ್ನು ಹೆಚ್ಚಿಸುವಂತಹ ಪ್ರಯತ್ನಗಳು ಸತತವಾಗಿ ಆಗುತ್ತಲೇ ಇರಬೇಕು. ನಾಗರೀಕರ ಮನವೊಲಿಸುವ ಕಾರ್ಯದಲ್ಲಿ ದರ್ಪ, ಆಹಂಕಾರ, ಸಾಂಕೇತಿಕ ಆಚರಣೆಗಳೊಂದಿಗೆ ಮಾನವೀಯತೆಯನ್ನು ಬಿಂಬಿಸುವ ಗುಣಗಳು ನಾಯಕರ ಪ್ರತಿಯೊಂದು ನಡೆನುಡಿಯಲ್ಲಿಯೂ ಎದ್ದು ಕಾಣಿಸುತ್ತಿರಬೇಕು. ನಮ್ಮ ದೇಶದಲ್ಲಿ ಇಂದಿಗೂ ಇಂತಹ ನಡೆನುಡಿಗಳು ಅಪರೂಪವಾಗಿರುವುದರಿಂದ ಇವುಗಳು ಹೊರತರುವುದರತ್ತ ಪ್ರಬಲ ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಗಮನ ಹರಿಸುವ ಅಗತ್ಯವಿದೆ.

   ಕೊರೊನಾಕ್ಕೆ ಔಷಧಿ: ರಾಮಾಯಣ ಉಲ್ಲೇಖಿಸಿದ ಬ್ರೆಜಿಲ್ ಅಧ್ಯಕ್ಷ..!

   English summary
   Opinion: Lack of Leadership during the crunch situation Why? How? an explainary article by Psychiatrist Dr. A Sridhar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X