ಈ ಕ್ಷಣದಿಂದಲೇ ಸಿಗರೇಟು ಸೇದೋದು ಬಿಡಿ

* ಅವಳು' ಕಾರಣವಿಲ್ಲದೆಯೇ ಕೈ' ಕೊಡುತ್ತಾಳೆ.
* ಡಿಗ್ರಿ ಕಡೆಯ ವರ್ಷದ ಫಲಿತಾಂಶ ಶೇ.42ಕ್ಕೆ ಬಂದು ನಿಂತಿರುತ್ತದೆ.
* ಬದುಕಿಗೆ ಒಂದು ಭದ್ರತೆ ಒದಗಿಸಿದ್ದ ನೌಕರಿ ಇದ್ದಕ್ಕಿದ್ದಂತೆ ಕೈ ತಪ್ಪಿ ಹೋಗುತ್ತದೆ.
* ತುಂಬ ಪ್ರೀತಿಸುತ್ತಿದ್ದ ಅಮ್ಮ ಅದೊಂದು ಮುಂಜಾನೆ ದಿಢೀರ್ ಸತ್ತು ಹೋಗುತ್ತಾಳೆ.
* ಆಕಸ್ಮಿಕವಾಗಿ ಕೈ ಹಿಡಿದ ಯಶಸ್ಸಿನಿಂದಾಗಿ ಜೇಬಿನ ತುಂಬಾ ದುಡ್ಡು ಸೇರಿರುತ್ತದೆ.
ಇಂಥ ಸಂದರ್ಭದಲ್ಲೆಲ್ಲ ನೋವು ಮರೆಯಲು ಹೆಚ್ಚಿನ ಯುವಕರು ಒಂದು ಅಭ್ಯಾಸ'ಕ್ಕೆ ಮುಂದಾಗುತ್ತಾರೆ: ಅದೇ-ಸಿಗರೇಟು ಸೇದುವುದು! ಸಿಗರೇಟೆಂಬುದು ಕೆಲವರ ಪಾಲಿಗೆ ಹಾಬಿ. ಕೆಲವರ ಪಾಲಿಗೆ ಅದೊಂದು ಶೋಕಿ. ಒಂದಿಷ್ಟು ಮಂದಿಗೆ ಸಿಗರೇಟು ಎಂಬುದು ಚಟ. ಮತ್ತೊಂದಿಷ್ಟು ಮಂದಿಯ ಪಾಲಿಗೆ ಅದು-ನೋವು ನಿವಾರಕ ಮದ್ದು! ರಜನಿಕಾಂತ್‌ಗೆ ಮಾತ್ರ ಸಿಗರೇಟ್ ಎಂಬುದು ಐಡೆಂಟಿಟಿ. ಅದೊಂದು ಸ್ಟೈಲು. ಸಿಗರೇಟು ಸೇದುತ್ತಲೇ ನೌಕರಿ ಮಾಡುವ ಜನರ ಪಾಲಿಗೆ, ಅದು ಸೂರ್ತಿ ದೇವತೆ! ಹೀಗೆ, ಯಾವುದೋ ಒಂದು ಕಾರಣದಿಂದ ಆಕಸ್ಮಿಕವಾಗಿ ಸಿಗರೇಟಿನ ಹುಚ್ಚು ಅಂಟಿಸಿಕೊಂಡವರು, ನಂತರದ ವರ್ಷಗಳಲ್ಲಿ ಅದನ್ನು ಬಿಟ್ಟು ಬದುಕಲಾರದ' ಸ್ಥಿತಿ ತಲುಪಿಬಿಡುತ್ತಾರೆ. ಇದು ಕೆಟ್ಟ ಚಟ ಕಣ್ರೀ. ಆದಷ್ಟು ಬೇಗ ಬಿಟ್ಟುಬಿಡಿ. ಇದರಿಂದ ಆರೋಗ್ಯ ಹಾಳಾಗುತ್ತೆ' ಎಂದು ಯಾರಾದರೂ ಬುದ್ಧಿ ಹೇಳಿದರೆ- ಒಂದು ಹೊತ್ತಿನ ಊಟ ಬೇಕಾದ್ರೂ ಬಿಡ್ತೀನಿ. ಆದ್ರೆ ಸಿಗರೇಟು ಬಿಡೋಕಾಗಲ್ಲ' ಎನ್ನುತ್ತಾರೆ. ಸಿಗರೇಟು ಚಟದವರ ಅಂತರಂಗದ ಪಿಸುಮಾತನ್ನೇ ಕವಿ ಬಿ.ಆರ್. ಲಕ್ಷ್ಮಣರಾವ್ ಅವರು ತಮ್ಮ ಪದ್ಯವೊಂದರಲ್ಲಿ ಹೀಗೆ ಹೇಳಿದ್ದಾರೆ:
ಬಿಡಲಾರೆ ನಾ ಸಿಗರೇಟು
ಹುಡುಗಿ, ನಿನ್ನಂತೆ ಅದು ಥೇಟು
ಬಿಡಬಲ್ಲೆನೆ ನಾ ನಿನ್ನ ಚಿನ್ನ
ಹಾಗೆಯೇ ಸಿಗರೇಟನ್ನ!
ಹೀಗೆ, ಯಾರನ್ನು ಬಿಟ್ಟರೂ, ಏನನ್ನು ಬಿಟ್ಟರೂ ಸಿಗರೇಟನ್ನು ಬಿಡಲಾರೆ ಎನ್ನುತ್ತಾರಲ್ಲ? ಅಂಥವರ ಪೈಕಿ ಹೆಚ್ಚಿನವರಿಗೆ- ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ' ಎಂದು ಗೊತ್ತಿರುತ್ತದೆ. ಅತಿಯಾದ ಸಿಗರೇಟು ಸೇವನೆಯಿಂದ ಕಣ್ಣಿಗೆ ತೊಂದರೆಯಿದೆ. ಕರುಳಿಗೂ ಕಂಟಕವಿದೆ. ವಿಪರೀತ ಸಿಗರೇಟು ಸೇದುವುದರಿಂದ ಕಿಡ್ನಿಗೂ ಅಪಾಯವಿದೆ. ತುಂಬ ಮುಖ್ಯವಾಗಿ ಕ್ಯಾನ್ಸರ್ ಬರುತ್ತದೆ. ಸಿಗರೇಟಿನಲ್ಲಿರುವ ವಿಷಕಾರಕ ರಾಸಾಯನಿಕಗಳಿಂದ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. ಗಂಟಲು ನಾಳ ಕಟ್ಟಿಕೊಳ್ಳುತ್ತದೆ. ಇಂಥ ಸಂದರ್ಭ ಎದುರಾದರೆ ತಿಂಡಿ ತಿನ್ನುವುದಿರಲಿ; ನೀರು ಕುಡಿಯುವುದಕ್ಕೂ ಕಷ್ಟವಾಗುತ್ತದೆ ಎಂದೂ ಗೊತ್ತಿರುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಸಿಗರೇಟು ಸೇವನೆಯಿಂದ ಹತ್ತಾರು ಬಗೆಯ ಕಾಯಿಲೆಗಳಿಗೆ ತುತ್ತಾದವರು; ನರಳುತ್ತಲೇ ಬದುಕಿದವರು, ಕ್ಯಾನ್ಸರ್‌ಗೆ ಬಲಿಯಾದವರು ಪ್ರತಿ ಊರಿನಲ್ಲೂ; ಹುಡುಕಿದರೆ- ಚಟಗಾರ'ರಿಗೆ ಪ್ರತಿ ಬೀದಿಯಲ್ಲೂ ಸಿಗುತ್ತಾರೆ. ಆದರೆ, ಸಿಗರೇಟಿನಿಂದ ಉದ್ಧಾರವಾದ ಒಂದೇ ಒಂದು ಜೀವ- ಭೂತಕನ್ನಡಿ ಹಾಕಿ ಹುಡುಕಿದರೂ ಸಿಗುವುದಿಲ್ಲ!
ಸ್ವಾರಸ್ಯವೆಂದರೆ- ಸಿಗರೇಟು ಸೇವನೆಯಿಂದ ಆಗುವ ಅಪಾಯದ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಹಾಗಿದ್ದೂ ಅವರು- ಅಯ್ಯೋ, ಹಾಗೆ ಆದಾಗ ನೋಡಿಕೊಂಡರಾಯ್ತು. ಈಗೇನು? ಎಲ್ಲ ಕಾಯಿಲೆಗೂ ಮಾತ್ರೆ, ಟಾನಿಕ್ ಬಂದಿದೆ. ಇವತ್ತಲ್ಲ ನಾಳೆ, ಕಾನ್ಸರ್‌ಗೂ ಸುಲಭ ಚಿಕಿತ್ಸೆ ಬಂದೇ ಬರುತ್ತೆ. ಆಗ ಟ್ರೀಟ್‌ಮೆಂಟ್ ತಗೊಂಡ್ರಾಯ್ತು. ಸದ್ಯಕ್ಕೆ ಒಂದು ಸಿಗರೇಟು ಸೇದೋಣ' ಎಂದು ಕಡ್ಡಿ ಗೀರಿಯೇ ಬಿಡುತ್ತಾರೆ! ಮುಂದೊಂದು ದಿನ, ಕ್ಯಾನ್ಸರ್ ವಾಸಿಮಾಡುವಂಥ ಔಷ ಇಲ್ಲ ಎಂದು ಅವರಿಗೆ ಗೊತ್ತಾಗುತ್ತದೆ ನಿಜ. ಆದರೆ ಆಗ ತುಂಬಾ ತಡವಾಗಿರುತ್ತದೆ!
ಅಲ್ಲ, ಗಾತ್ರದಲ್ಲಿ ನಮ್ಮ ಕಿರುಬೆರಳಿಗಿಂತ ಚಿಕ್ಕದಿರುವ ಸಿಗರೇಟಿಗೆ ಒಂದು ಜೀವವನ್ನೇ ಬಲಿ ತೆಗೆದುಕೊಳ್ಳುವಂಥ ಶಕ್ತಿ ಇದೆಯಾ? ಸಿಗರೇಟು ಸೇವನೆ ಎಂಬ ಚಟ, ನಮ್ಮನ್ನು ಸೀದಾ ಚಟ್ಟಕ್ಕೇ ಹತ್ತಿಸುವಂಥ' ಶಕ್ತಿ ಹೊಂದಿದೆಯಾ? ಎಂಬ ಪ್ರಶ್ನೆಗೆ ಉತ್ತರಿಸುವ ಮುನ್ನ, ಸಿಗರೇಟಿನಲ್ಲಿ ಯಾವ್ಯಾವ ಹಾನಿಕಾರಕ ವಸ್ತುಗಳನ್ನು ಸೇರಿಸಲಾಗಿದೆ ಎಂದು ತಿಳಿಯಬೇಕು. ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗ ಪಡಿಸಿರುವ ವರದಿಯ ಪ್ರಕಾರ- ಸಿಗರೇಟಿನ ಪುಡಿಯಲ್ಲಿ 4000 ರಾಸಾಯನಿಕಗಳ ಮಿಶ್ರಣವಿರುತ್ತದಂತೆ. ಈ ಮಿಶ್ರಣದ ಪಟ್ಟಿಯಲ್ಲಿ ಇಲಿ ಪಾಷಾಣ, ಡಿಡಿಟಿ, ಮೀಥೆನಾಲ್, ಬ್ಯೂಟೇನ್ ರಾಸಾಯನಿಕಗಳು ಹಾಗೂ ಟಾಯ್ಲೆಟ್ ತೊಳೆಯಲು ಬಳಸುವ ಆಸಿಡ್ ಕೂಡ ಸೇರಿರುತ್ತದೆ! ಇಷ್ಟೆಲ್ಲಾ ದೇಹ ಸೇರಿದ ಮೇಲೆ ಕ್ಯಾನ್ಸರ್ ಬಾರದೇ ಇರುತ್ತದೆಯೇ?
ನೆನಪಿಡಿ: ಸುದೀರ್ಘ ಕಾಲದವರೆಗೆ ಸಿಗರೇಟು ಸೇದುವ ಕಾರಣದಿಂದಲೇ ಗಂಟಲಿನಲ್ಲಿ ಗಂಟು ಕಾಣಿಸಿಕೊಳ್ಳಬಹುದು. ಮುಂದೆ, ಅದೇ ಕಾರಣದಿಂದ ಸ್ವರ ಹೊರಡಿಸುವ ಧ್ವನಿ ಪೆಟ್ಟಿಗೆಯೇ ಒಡೆದು ಹೋಗಬಹುದು. ಹೀಗಾದ ಮರುಕ್ಷಣವೇ, ಮಾತು ಬಿದ್ದು ಹೋಗುತ್ತದೆ. ಅಯ್ಯಯ್ಯೋ, ಇದೇನಾಗಿ ಹೋಯ್ತು' ಎಂದುಕೊಂಡು ವೈದ್ಯರ ಬಳಿಗೆ ಹೋದರೆ- ಧ್ವನಿಪೆಟ್ಟಿಗೆ ಒಡೆದು ಹೋಗಿದೆ ಎಂಬುದರ ಜತೆಗೆ, ನಿಮ್ಮನ್ನು ಕ್ಯಾನ್ಸರ್ ಎಂಬ ಮಾರಿ ಅಮರಿಕೊಂಡಿದೆ ಎಂಬ ಇನ್ನೊಂದು ವಿಷಯವೂ ಬಹಿರಂಗವಾಗುತ್ತದೆ.
ಸರ್ಫುದ್ದಿನ್ ಕಥೆ ಸಿಗರೇಟ್ ಪ್ರೇಮಿಗಳಿಗಾಗಿ ಮಾತ್ರ »
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications