• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಕ್ತದಾನದ ಬಗ್ಗೆ ಇಷ್ಟು ತಿಳಿದ ಮೇಲೆ ನಾವಾಗಿಯೇ ರಕ್ತ ದಾನ ಮಾಡದಿದ್ದರೆ ಹೇಗೆ?

|

ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಪರಿಚಯದವರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೂರ್ತಿ ಮಾವ ಕರೆ ಮಾಡಿ "ಮೇಘು ಅಲ್ಲಿ ನಿಮ್ಮ ಮನೆ ಹತ್ತಿರ ಬ್ಲಡ್ ಬ್ಯಾಂಕ್ ಇದ್ಯಲ್ಲ ಅಲ್ಲಿ ಎ ಪಾಸಿಟಿವ್ ರಕ್ತ ಇದ್ಯಾ ನೋಡಿಕೊಂಡು ಬಾ, ನಾ ಅಷ್ಟರಲ್ಲಿ ಬರ್ತೀನಿ" ಅಂತ ಹೇಳಿ ಫೋನ್ ಇಟ್ಟರು.

ಮೊದಲ ಬಾರಿ ನಾನು ಬ್ಲಡ್ ಬ್ಯಾಂಕ್ ಒಳಗೆ ಕಾಲಿಟ್ಟದ್ದು. ಅಲ್ಲಿ ಬೇರೆ ಪ್ರಪಂಚವೇ ಕಾಣಿಸಿತ್ತು. ಹೊರಗಡೆ ರೋಗಿಗಳ ಸಂಬಂಧಿಗಳು, ಅವರಿಗೆ ಬೇಕಾದ ರಕ್ತದ ಗುಂಪು, ಅದರಲ್ಲಿ ಪ್ಲೇಟ್ಲೆಟ್ಸ್ ಬೇಕಾ ? ಎಲ್ಲದರ ಮಾಹಿತಿ ಹಿಡಿದುಕೊಂಡು ನಿಂತಿದ್ದರು. ಕೆಲವೊಮ್ಮೆ ಅದು ಸಿಗ್ತಿತ್ತು, ಕೆಲವೊಮ್ಮೆ ಸಿಗುತ್ತಿರಲಿಲ್ಲ. ಅವರ ಆತಂಕಗಳನ್ನೆಲ್ಲಾ ಒಮ್ಮೆ ನೋಡಿ ಭಯವಾಯಿತು.

ಚಿಕ್ಕ ಹುಡುಗಿ ಎಂದು ನನ್ನನ್ನ ಆ ಸರತಿ ಸಾಲಿನಲ್ಲಿ ಮುಂದೆ ಬಿಟ್ಟರು. ನಾನು ಎಲ್ಲವನ್ನು ಹೇಳಿದ ನಂತರ ಇದೆ, ಆ ಕಡೆ ಹೋಗಿ ತೆಗೆದುಕೊಂಡು ಹೋಗಿ, ರೀಪ್ಲೇಸ್ಮೆಂಟಿಗೆ ನಿಮ್ಮ ಮನೆಯಲ್ಲಿ ದೊಡ್ಡವರಿಗೆ ಹೇಳು ಎಂದರು. ನನಗೇನೂ ಅರ್ಥವಾಗಲಿಲ್ಲ. ಅಷ್ಟೊತ್ತಿಗೇ ಮೂರ್ತಿ ಮಾವ ಬಂದು ಮಾತಾಡಿ ಮತ್ತೊಬ್ಬರನ್ನು ಕರೆದುಕೊಂಡು ಬಂದು ರಕ್ತ ಕೊಡೋದಕ್ಕೆ ಹೇಳಿದ್ದರು.

ತನ್ನ ಮದುವೆಯಂದು ರಕ್ತದಾನ ಶಿಬಿರ ಏರ್ಪಡಿಸಿದ ಕೋಲ್ಕತ್ತದ ವಧು!

ನಂದೂ ಎ ಪಾಸಿಟಿವ್ ಎಂದು ಹೇಳಿದಾಗ ಸ್ವಲ್ಪ ದೊಡ್ಡೋಳಾದ ಮೇಲೆ ಕೊಡಬಹುದು. ಆರಾಮಾಗಿರು ಅಂದ್ರು. ಹಾಗೆ ಯಾವತ್ತೋ ಅದರ ಬಗ್ಗೆ ಮರೆತುಹೋಗಿದ್ದೆ. ಕಾಲೇಜಿಗೆ ಬಂದಾಗ ಒಮ್ಮೆ ನಮ್ಮ ಕಾಲೇಜಿರುವ ಮುಖ್ಯರಸ್ತೆಯಲ್ಲಿ ಒಂದು ದೊಡ್ಡ ಆಪಘಾತವಾಗಿತ್ತು. ಅಲ್ಲಿ ಅಂತೂ ಎಲ್ಲರೂ ಅಯ್ಯೋ ಎಷ್ಟೊಂದು ರಕ್ತ ಹೋಗ್ತಿದೆ ಎಂದು ಬಡಬಡಿಸುತ್ತಿದ್ದರು. ಹತ್ತಿರವಿದ್ದ ಆಸ್ಪತ್ರೆಯಲ್ಲಿ ರಕ್ತ ಕೊರತೆಯೇನೆಂದೂ ಜನ ಹೇಳುತ್ತಿದ್ದರು.

Blood donation day: Must know facts about blood donation

ಆರು ತಿಂಗಳಿಗೊಮ್ಮೆ ರಕ್ತದಾನ ಏಕೆ ಮಾಡಲ್ಲ?

ನಮ್ಮ ದೇಶದಲ್ಲಿ ಅವರಾಗವರೇ ಯಾರೂ ಹೋಗಿ ರಕ್ತದಾನ ಮಾಡುವುದಿಲ್ಲ ಎಂಬ ಸತ್ಯವನ್ನ ತಿಳಿದು ಬಹಳ ವಿಚಲಿತಳಾದೆ. ಒಂದು ಯೂನಿಟ್ ಅಂದರೆ ಮೂನ್ನೂರಾ ಐವತ್ತು ಮಿಲೀ ಲೀಟರ್ ರಕ್ತವನ್ನು ಸಹ ಆರು ತಿಂಗಳಿಗೊಮ್ಮೆ ಕೊಡುವ ಮನಸ್ಸು ನಮಗ್ಯಾಕಿಲ್ಲ ಎಂದು ಬೇಜಾರಾಯಿತು.

ಇದರ ಬಗ್ಗೆ ಒಂದಷ್ಟು ಓದುತ್ತಿರುವಾಗ ನಮ್ಮ ದೇಶದ ಒಂದಷ್ಟು ಅಂಕಿ ಅಂಶಗಳು ಗೊತ್ತಾಯಿತು. ಒಂದು ಹೃದಯ ಶಸ್ತ್ರಚಿಕಿತ್ಸೆಗೆ ಆರು ಯೂನಿಟ್ ರಕ್ತ ಬೇಕಾಗುತ್ತದೆ. ವರ್ಷಕ್ಕೆ ನಮ್ಮ ದೇಶದಲ್ಲಿ ಮೂರು ಲಕ್ಷಕ್ಕಿಂತಲೂ ಹೆಚ್ಚು ಈ ಶಸ್ತ್ರಚಿಕಿತ್ಸೆಗಳು ಆಗುತ್ತಿರುತ್ತದೆ. ಅಂಗಾಂಗ ಕಸಿಗೆ ನಲವತ್ತು ಯುನಿಟ್ ರಕ್ತ ಬೇಕು, ನಲವತ್ತೊಂಬತ್ತು ಸಾವಿರ ಕಸಿ ಚಿಕಿತ್ಸೆಗಳು ನಡೆಯುತ್ತದೆ.

ರಕ್ತಕ್ಕೆ ಯಾವುದೇ ಜಾತಿಯಿಲ್ಲ, ರಕ್ತದಾನ ಮಾಡಿ, ಜೀವ ಉಳಿಸಿ

ಇನ್ನು ಆಕ್ಸಿಡೆಂಟ್ ಗೆ ಐವತ್ತು ಯೂನಿಟ್, ವರ್ಷಕ್ಕಂತೂ ನಲವತ್ತರಿಂದ ಐವತ್ತು ಸಾವಿರ ಅಪಘಾತಗಳಾಗುತ್ತದೆ. ಇನ್ನು ಬೋನ್ ಮ್ಯಾರೊ ಕಸಿಗಂತೂ ಇಪ್ಪತ್ತು ಯೂನಿಟ್ ಬೇಕು. ಅದು ಮೂವತ್ತು ಸಾವಿರ ಕಸಿ ಆಗುತ್ತಿರುತ್ತದೆ. ಸರಿಸುಮಾರು ವರ್ಷಕ್ಕೆ ಅರವತ್ತು ಟ್ಯಾಂಕರ್ ಗಳಷ್ಟು ರಕ್ತದ ಅವಶ್ಯಕತೆ ಭಾರತಕ್ಕಿದೆ.

ದೇಶದಲ್ಲಿ ಒಂದು ಮಿಲಿಯನ್ ಯೂನಿಟಿನಷ್ಟು ರಕ್ತದ ಕೊರತೆಯಿದೆ

ಒಂದು ಟ್ಯಾಂಕರ್ ನಲ್ಲಿ ಹನ್ನೊಂದು ಸಾವಿರ ಲೀಟರಿನಷ್ಟು ರಕ್ತ ಹಿಡಿಸುತ್ತದೆ. ಈಗ ಲೆಕ್ಕ ಗೊತ್ತಾಯಿತಲ್ಲ ಎಷ್ಟು ರಕ್ತದ ಅವಶ್ಯಕತೆಯಿದೆ ಎಂದು. ಹೋದ ವರ್ಷ ಡಬ್ಲ್ಯೂ ಎಚ್ ಒ ಪ್ರಕಾರ ಭಾರತದಲ್ಲಿ ಒಂದು ಮಿಲಿಯನ್ ಯೂನಿಟಿನಷ್ಟು ರಕ್ತದ ಕೊರತೆಯಿದೆ. ನಮ್ಮ ಮನೆಯವರು, ನಮ್ಮ ಗೆಳೆಯರು ಆಸ್ಪತ್ರೆಗೆ ಸೇರಿದಾಗ ಮಾತ್ರ ನಮಗೆ ಇವರ ಕಷ್ಟ ಅರಿವಾಗೋದು, ಇಲ್ಲದಿದ್ದಲ್ಲಿ ನಮ್ಮ ಪಾಡಿಗೆ ಆದಾಗ ನೋಡಿಕೊಳ್ಳೋಣ ಎಂದು ಸುಮ್ಮನಿರುತ್ತೇವೆ.

ರಕ್ತದಾನವನ್ನು ಹದಿನೆಂಟು ವರ್ಷದಿಂದ ಅರವತ್ತೈದು ವರ್ಷದೊಳಗಿರುವ ಆರೋಗ್ಯವಂತರೆಲ್ಲರೂ ಮಾಡಬಹುದು. ನಿಮಗ್ಯಾವ ಕಮ್ಯುನಿಕೇಬಲ್ ರೋಗಗಳಿರಬಾರದು. ನಾರ್ಮಲ್ ಬಿಪಿ ಇರಬೇಕು. ಜ್ವರವಿರಬಾರದು, ಹೆಣ್ಣುಮಕ್ಕಳಿಗೆ ರಕ್ತದಾನ ಮಾಡುವ ಸಮಯದಲ್ಲಿ ಮುಟ್ಟಾಗಿರಬಾರದು. ರಕ್ತ ಬಹಳ ಲಾಸ್ ಆಗುವ ಪರಿಣಾಮ ಆ ಐದು ದಿವಸಗಳು ಮಾಡಬಾರದು.

ಯಾರು ರಕ್ತದಾನ ಮಾಡುವಂತಿಲ್ಲ?

ಸಕ್ಕರೆ ಕಾಯಿಲೆ, ಕ್ಯಾನ್ಸರ್ ರೋಗದವರು ಸಹ ರಕ್ತದಾನ ಮಾಡಬಾರದು. ಯಾವುದೇ ಆಂಟಿಬಯಾಟಿಕ್ ಅಥವಾ ಅಲರ್ಜಿ ಮಾತ್ರಗಳನ್ನ ತೆಗೆದುಕೊಳ್ಳುತ್ತಿದ್ದರೆ ಡಾಕ್ಟರಿಗೆ ತಿಳಿಸಿ, ರಕ್ತದಾನ ಮಾಡುವುದು ಒಳಿತು.

ಪ್ರತಿ ಆರು ತಿಂಗಳಿಗೊಮ್ಮೆ ನಾವು ರಕ್ತದಾನ ಮಾಡಬಹುದು. ನಾನು ಪ್ರತಿ ಹುಟ್ಟುಹಬ್ಬದ ವಾರದಲ್ಲಿಯೂ ರಕ್ತದಾನ ಮಾಡುತ್ತೇನೆ. ಇದನ್ನ ಶುರು ಮಾಡಿ ಹತ್ತು ವರ್ಷವಾಯಿತು. ಒಂದು ಹುಟ್ಟುಹಬ್ಬದ ವಾರದಲ್ಲಿ ನಮ್ಮ ಸ್ನೇಹಿತರೆಲ್ಲ ರಕ್ತದಾನ ಮಾಡುವಾಗ ಯಾರಿಗೋ ಅರ್ಜಿಂಟ್ ರೀಪ್ಲೇಸ್ ಮೆಂಟ್ ಬೇಕಿತ್ತು. ಒಂದು ಅಜ್ಜ ಬಂದು ತೆಗೆದುಕೊಂಡು ಹೋದರು.

ನೀವೂ ರಕ್ತದಾನ ಮಾಡಬೇಕಾ? ಹಾಗಾದರೆ ಇವುಗಳನ್ನು ನೆನಪಿಡಿ

ತದ ನಂತರ ಗೆಳತಿಯ ನಂಬರ್ ತೆಗೆದುಕೊಂಡು ಹೋದರು. ಅವಳಿಗೆ ಪ್ರತಿ ವರ್ಷ ಹುಟ್ಟು ಹಬ್ಬದ ಶುಭಾಶಯಗಳನ್ನ ಕಳಿಸುತ್ತಾರೆ. ಅವರ ಹೆಂಡತಿಯ ಪ್ರಾಣ ಉಳಿದಿದ್ದಕ್ಕೆ. ಜೂನ್ ಹದಿನಾಲ್ಕು ವಿಶ್ವ ರಕ್ತದಾನ ದಿವಸ. ಈಗಲಾದರೂ ಮನಸ್ಸು ಮಾಡಿ, ಬೇರೆಯವರಿಗೆ ನಿಮ್ಮ ಸಹಾಯ ಕೇಳದೆಯೇ ಆಗುತ್ತದೆ.

ಹುಟ್ಟುಹಬ್ಬಗಳನ್ನ ಹೀಗೂ ಆಚರಣೆ ಮಾಡೋಣವಲ್ಲವೇ....

English summary
World blood donation day June 14th. Here is the must know facts about blood donation explained by Oneindia columnist Meghana Sudheendra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more