ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗ್ ಬಾಸ್ ನಲ್ಲಿ ರಾಜಕಾರಣಿಗಳು: ಈ ಎಲ್ಲ ಸ್ಪರ್ಧಿಗಳಿದ್ದರೆ ಹೇಗೆ?

|
Google Oneindia Kannada News

Recommended Video

ಬಿಗ್ ಬಾಸ್ ನಲ್ಲಿ ಈ ಎಲ್ಲಾ ರಾಜಕಾರಣಿಗಳು ಇದ್ರೆ ಹೇಗಿರತ್ತೆ?

ಕನ್ನಡ ಬಿಗ್ ಬಾಸ್ ನ ಐದನೇ ಸೀಸನ್ ನಡೆಯುತ್ತಿದೆ. ಆ ಮನೆಯೊಳಗಿನವರ ನಡವಳಿಕೆ, ಅಲ್ಲಿನ ಟಾಸ್ಕ್ ಗಳಲ್ಲಿ ಸ್ಪರ್ಧಿಗಳು ಪಾಲ್ಗೊಳ್ಳುವ ರೀತಿ, ಸಣ್ಣ ಪುಟ್ಟ ಜಗಳಗಳು, ವಿಪರೀತ ಎನಿಸುವಷ್ಟು ವಾದ, ನಾಟಕೀಯತೆ ಇವೆಲ್ಲವನ್ನೂ ಎಲ್ಲ ವರ್ಗದ ನೋಡುಗರೂ ಇಷ್ಟಪಡ್ತಾರಾ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಆದರೆ, ಇಂಥದ್ದೊಂದು ಪೊಲಿಟಿಕಲ್ ಬಿಗ್ ಬಾಸ್ ಮಾಡಿದರೆ, ಅದರಲ್ಲಿ ಸ್ಪರ್ಧಿಗಳಿಗೆ ಇವರೆಲ್ಲ ಇದ್ದರೆ ಹೇಗಿರುತ್ತದೆ ಎಂಬ ಸಣ್ಣದೊಂದು ಕುತೂಹಲ ನಮ್ಮದು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಒಂದೇ ಮನೆಯಲ್ಲಿ ಇದ್ದು, ಸ್ಪರ್ಧೆ ಅಂತ ಮಾಡಿದರೆ ನೋಡುಗರು ಹೇಗೆ ತೆಗೆದುಕೊಳ್ಳಬಹುದು ಎಂಬ ಬಗ್ಗೆಯೂ ಪ್ರಶ್ನೆ ಇದೆ.

ಬಿಗ್ ಬಾಸ್ ನಲ್ಲಿ ಗಾಯತ್ರಿ ಮಂತ್ರಕ್ಕೆ ಅವಮಾನ, ಬ್ರಾಹ್ಮಣರ ಆಕ್ರೋಶಬಿಗ್ ಬಾಸ್ ನಲ್ಲಿ ಗಾಯತ್ರಿ ಮಂತ್ರಕ್ಕೆ ಅವಮಾನ, ಬ್ರಾಹ್ಮಣರ ಆಕ್ರೋಶ

ಕನಿಷ್ಠ ಪಕ್ಷ ಒಂದು ಇಡೀ ದಿನವಾದರೂ ಇಂಥ ಸ್ಪರ್ಧೆ ಯಾರಾದರೂ ಆಯೋಜಿಸಿದರೆ ಹೇಗಿರುತ್ತದೆ? ಬಿಡಿ, ಕುತೂಹಲ ಹಾಗೂ 'ರೆ'ಗಳಿಗೆ ಕೊನೆಯೇ ಇಲ್ಲ. 'ಒನ್ಇಂಡಿಯಾ' ಕನ್ನಡದ ಓದುಗರು ಏನೆಂದು ಕೊಳ್ಳುತ್ತಾರೆ ಎಂಬುದಂತೂ ತಿಳಿದುಕೊಳ್ಳುವ ಕುತೂಹಲ ಇದ್ದೇ ಇದೆ. ಇಲ್ಲಿ ನಾವು ಹೆಸರಿಸಿರುವ ಸ್ಪರ್ಧಿಗಳನ್ನು ಹೊರತುಪಡಿಸಿಯೂ ಯಾರನ್ನಾದರೂ ಸೂಚಿಸುವುದಿದ್ದರೆ ಕಾಮೆಂಟ್ ಮಾಡಿ.

ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ

ಸಂಸದೆ ಶೋಭಾ ಅವರಿಗೆ ಕಾಂಗ್ರೆಸ್ ಮೇಲಿನ ಸಿಟ್ಟು ಕೊತಕೊತ ಎನ್ನುತ್ತಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವೆಯಾಗಿ ಕೆಲಸ ಮಾಡಿದವರು. ಪಕ್ಷದೊಳಗಿನ ಸವಾಲುಗಳನ್ನು ಎದುರಿಸಿಯೂ ಗಟ್ಟಿಯಾಗಿ ನಿಂತವರು. ಇಂತಹವರು ಬಿಗ್ ಬಾಸ್ ಮನೆಯೊಳಗೆ ಹೋದರೆ ಹೇಗಿರುತ್ತದೆ ಎಂಬ ಕುತೂಹಲ ಇದ್ದೇ ಇರುತ್ತದೆ ಅಲ್ಲವೆ?

ಉಮಾಶ್ರೀ

ಉಮಾಶ್ರೀ

ಸಿನಿಮಾಗಳಲ್ಲಿ ನಾವು ನೋಡಿದ ಉಮಾಶ್ರೀ ಅವರಿಗೂ ಈಗ ಸಚಿವೆ ಆದ ನಂತರವೂ ಬಹಳ ವ್ಯತ್ಯಾಸ ಇದೆ. ಆದರೆ ಆಕೆ ಒಬ್ಬರು ಎಂಟರ್ ಟೇನರ್ ಎಂಬುದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್ ಸರಕಾರದಲ್ಲಿ ಸಚಿವೆಯಾಗಿರುವ ಉಮಾಶ್ರೀ ಅವರಿಂದ ಮನರಂಜನೆಗಂತೂ ಮೋಸ ಆಗಲಾರದು.

ಅನಿತಾ ಕುಮಾರಸ್ವಾಮಿ

ಅನಿತಾ ಕುಮಾರಸ್ವಾಮಿ

ಮೃದು ಭಾಷಿಯಾದ ಅನಿತಾ ಕುಮಾರಸ್ವಾಮಿ ಅವರು ಸಾರ್ವಜನಿಕವಾಗಿ ಸಿಟ್ಟಾಗಿದ್ದು ಅಥವಾ ತುಂಬ ದೊಡ್ಡ ಮಟ್ಟದ ನಾಯಕತ್ವದ ಪ್ರದರ್ಶನ ಮಾಡಿದ್ದು ಕಡಿಮೆಯೇ. ಆದರೆ ಟಿವಿ ಸಂಸ್ಥೆಯೊಂದನ್ನು ನಡೆಸುತ್ತಿರುವ ಅವರ ನಿರ್ಧಾರದ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನವಿಲ್ಲ. ಅವರನ್ನು ಬಿಗ್ ಬಾಸ್ ನಂಥ ಸ್ಪರ್ಧೆಯಲ್ಲಿ ನೋಡುವುದೇ ಒಂದು ರೀತಿಯ ಕುತೂಹಲ.

ಭಾವನಾ

ಭಾವನಾ

ಕಾಂಗ್ರೆಸ್ ನಲ್ಲಿರುವ ಭಾವನಾ ಕೆಲವು ಸಂದರ್ಭದಲ್ಲಿ ಭಾವನಾತ್ಮಕವಾಗಿ ವರ್ತಿಸಿದ್ದಿದೆ. ಅವರಲ್ಲಿ ಈಗಲೂ ಚಂದ್ರಮುಖಿ- ಪ್ರಾಣಸಖಿ ಸಿನಿಮಾದಲ್ಲಿರುವಂಥ ಚೇಷ್ಟೆ, ಹುಡುಗಾಟ ಇದೆಯೇ ಎಂಬ ಬಗ್ಗೆ ಪ್ರಶ್ನೆಯಿದೆ. ಆದರೆ ಸ್ಪರ್ಧೆಗಂತೂ ಮೋಸವಾಗಲಾರದೇನೋ!

ತಾರಾ

ತಾರಾ

ಉಮಾಶ್ರೀ ಅವರಷ್ಟೇ ಅಥವಾ ಅವರಿಗೆ ಸ್ಪರ್ಧೆ ನೀಡುವಂಥ ಮನರಂಜನೆ ಕೊಡಲು ಸಾಧ್ಯವಿದ್ದರೆ ಅದು ತಾರಾ ಅವರಿಗೆ ಮಾತ್ರ. ಬಿಜೆಪಿಗೆ ಸೇರಿದ ನಂತರ ಅಲ್ಲಲ್ಲಿ ಗುಡುಗಿ, ಮಿಂಚು ಹರಿಸಿದ ತಾರಾ ಅವರು ಕೂಡ ಒಳ್ಳೆ ಎಂಟರ್ ಟೈನರ್.

ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಹೀಗೆ ಪ್ರತಿಪಕ್ಷಗಳ ವಿರುದ್ಧ ಮುರಿದುಕೊಂಡು ಬೀಳುವುದರಲ್ಲಿ ದಿನೇಶ್ ಗುಂಡೂರಾವ್ ಮುಂಚೂಣಿಯಲ್ಲಿರುತ್ತಾರೆ. ಆಕರ್ಷಕ ವ್ಯಕ್ತಿತ್ವದ ದಿನೇಶ್ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಮಿಸ್ ಮಾಡಿಕೊಂಡರೆ ಹೇಗೆ?

ಉಗ್ರಪ್ಪ

ಉಗ್ರಪ್ಪ

ವಿ.ಎಸ್.ಉಗ್ರಪ್ಪ ಅವರು 'ಬ್ರದರ್' ಅಂತಲೇ ಮಾತನಾಡುತ್ತಾರಾದರೂ ನಾಲಗೆ ಖಾರ ಖಾರ. ಇತಿಹಾಸ- ವರ್ತಮಾನವನ್ನು ಸಮೀಕರಿಸಿ ವಿರೋಧ ಪಕ್ಷದವರ ಮೇಲೆ ಹರಿಹಾಯುವುದನ್ನು ನೋಡಿದವರಿಗೆ ಇವರ ಸಾಮರ್ಥ್ಯದ ಬಗ್ಗೆ ಪರಿಚಯಿಸುವ ಅಗತ್ಯವಿಲ್ಲ.

ಸಿ.ಟಿ.ರವಿ

ಸಿ.ಟಿ.ರವಿ

ಅಭಿಪ್ರಾಯ ತಿಳಿಸುವುದರಲ್ಲಿ, ವಿರೋಧ ಪಕ್ಷದವರ ಮಾತಿಗೆ ಬದಲು ಕೊಡುವುದರಲ್ಲಿ ಬಿಜೆಪಿಯ ಸಿ.ಟಿ.ರವಿ ಎತ್ತಿದ ಕೈ. ಪರ- ವಿರೋಧ ಮಾತುಗಳು ಕೇಳಿಬರುವ ಕಡೆ ಸಿ.ಟಿ.ರವಿ ಇಲ್ಲದಿದ್ದರೆ ಏನೋ ಕಳೆದುಕೊಂಡ ಹಾಗೆ. ಆದ್ದರಿಂದ ಪೊಲಿಟಿಕಲ್ ಬಿಗ್ ಬಾಸ್ ಗೆ ಇವರು ಬಹಳ ಮುಖ್ಯ.

ಪ್ರತಾಪ ಸಿಂಹ

ಪ್ರತಾಪ ಸಿಂಹ

ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರ ಹೆಸರನ್ನು ಬಿಗ್ ಬಾಸ್ ಗೆ ಅಂತ ತೆಗೆದುಕೊಂಡಿದ್ದೀವಿ ಅಂದರೆ ಅವರು ಸಿಟ್ಟಾಗಬಹುದು. ಆದರೆ ಏನು ಮಾಡ್ತೀರಿ, ಇಂಥ ಸ್ಪರ್ಧೆಯಲ್ಲಿ ಅವರಿದ್ದರೆ ‌ಚೆಂದ ಅನಿಸಿದ್ದರಿಂದ ಹೆಸರು ತೆಗೆದುಕೊಂಡಿದ್ದೀವಿ.

ಪ್ರಜ್ವಲ್ ರೇವಣ್ಣ

ಪ್ರಜ್ವಲ್ ರೇವಣ್ಣ

ಜೆಡಿಎಸ್ ನ ಹೊಸ ಫೈರ್ ಬ್ರ್ಯಾಂಡ್ ಪ್ರಜ್ವಲ್ ರೇವಣ್ಣ. ತಮ್ಮ ಮಾತಿನ ಮೂಲಕ, ಆ ನಂತರ ಮಾತನಾಡದ ಮೂಲಕ, ಮತ್ತೆ ಇನ್ನೊಂದು ಸಲ ಮಾತನಾಡಿ ಸುದ್ದಿಯಾದವರು. ಇವರಿದ್ದರೆ ಒಳ್ಳೆ ಎಂಟರ್ ಟೈನ್ ಮೆಂಟ್ ಅನ್ನೋದು ನಮ್ಮ ಅನಿಸಿಕೆ.

ವೈ.ಎಸ್.ವಿ.ದತ್ತಾ

ವೈ.ಎಸ್.ವಿ.ದತ್ತಾ

ಮೇಷ್ಟ್ರು ದತ್ತಾ ಅವರಿದ್ದರೆ ಶಿಸ್ತಿಗೆ, ಸಮನ್ವಯಕ್ಕೆ ಒಂದು ಕೊಂಡಿಯಂತೆ ಇರುತ್ತಾರೆ. ಸ್ಪರ್ಧೆಗೊಂದು ಗಾಂಭೀರ್ಯ, ತೂಕ ತರುತ್ತಾರೆ ಅನ್ನೋದು ನಮ್ಮ ಲೆಕ್ಕಾಚಾರ. ಅದೆಂಥ ಮನೆಯಾದರೂ ಇಂಥವರೊಬ್ಬರಿರಬೇಕು.

ರವಿಕೃಷ್ಣಾ ರೆಡ್ಡಿ

ರವಿಕೃಷ್ಣಾ ರೆಡ್ಡಿ

ಪರಸ್ಪರ ಜಗಳ ಆಗಬಹುದು ಎಂಬ ಸೂಚನೆ ಇರುವ ಕಡೆ ಎಲ್ಲರ ಬಗ್ಗೆಯೂ ವಿಮರ್ಶಾತ್ಮಕವಾಗಿ ಇರಬಹುದಾದ ವ್ಯಕ್ತಿತ್ವ ಇಲ್ಲದಿದ್ದರೆ ಹೇಗೆ? ಆ ಕಾರಣಕ್ಕೆ ರವಿಕೃಷ್ಣಾರೆಡ್ಡಿ ಅವರಿರಬೇಕು.

ಜಮೀರ್ ಅಹ್ಮದ್

ಜಮೀರ್ ಅಹ್ಮದ್

ಜೆಡಿಎಸ್ ಭಿನ್ನಮತೀಯ ಶಾಸಕ, ಕಾಂಗ್ರೆಸ್ ಪಾಳಯದಲ್ಲಿ ಈಗಾಗಲೇ ಒಂದು ಹೆಜ್ಜೆಯಿಟ್ಟಿರುವ ಜಮೀರ್ ಅಹ್ಮದ್ ರ ಮಾತು- ವಾದ ಬಹಳ ಚುರುಕು. ಇತ್ತೀಚೆಗಂತೂ ಜೆಡಿಎಸ್ ವಿರುದ್ಧ ಹರುಹಾಯ್ದು ಬಹಳ ಫೇಮಸ್ಸಾಗಿದ್ದಾರೆ.

ಪ್ರತಿಕ್ರಿಯೆಗಾಗಿ ನೋಡಬೇಕು

ಪ್ರತಿಕ್ರಿಯೆಗಾಗಿ ನೋಡಬೇಕು

ಮಾಜಿ ಸಚಿವ ಜನಾರ್ದನ ರೆಡ್ಡಿ ಖಾಸಗಿಯಾಗಿ ಅಥವಾ ಒಬ್ಬರೇ ಇರುವಾಗ ಹೇಗಿರಬಹುದು, ಇನ್ನೊಬ್ಬರ ಮಾತು ಕೇಳಲೇಬೇಕು, ಸಣ್ಣ-ಪುಟ್ಟ ತಮಾಷೆಯ ಶಿಕ್ಷೆ ಅನುಭವಿಸಬೇಕು, ಉಪವಾಸ ಇರಬೇಕು, ಇಷ್ಟೇ ಗಂಟೆ ನಿದ್ದೆ ಮಾಡಬೇಕು ಅಂದಾಗೆಲ್ಲ ಹೇಗೆ ಪ್ರತಿಕ್ರಿಯಿಸಬಹುದು ಅನ್ನೋದನ್ನು ನೋಡುವುದಕ್ಕಾದರೂ ಅವರು ಸ್ಪರ್ಧೆಯಲ್ಲಿರಬೇಕು.

ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್

ಮಾಗಿ, ಪಳಗಿದ ಆಟಗಾರರಂತಾಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ಟ್ರಾಟೆಜಿಸ್ಟ್ ಅನ್ನೋದರಲ್ಲಿ ಅನುಮಾನವೇ ಇಲ್ಲ. ಆಟದಲ್ಲಿ ಶ್ರಮ-ಪ್ರಯತ್ನ- ಸಾಮರ್ಥ್ಯ ಏನೇ ಇದ್ದರೂ ತಂತ್ರಗಾರಿಕೆ ಇಲ್ಲದಿದ್ದರೆ ಹೇಗೆ? ಅದಕ್ಕೋಸ್ಕರ ಇವರು ಭಾಗವಹಿಸಬೇಕು.

ತೇಜಸ್ವಿನಿ ಗೌಡ

ತೇಜಸ್ವಿನಿ ಗೌಡ

ಕಾಂಗ್ರೆಸ್ ನಿಂದ ಹಾರಿ ಬಿಜೆಪಿಗೆ ಬಂದಿರುವ ತೇಜಸ್ವಿನಿ ಗೌಡ ಅವರಿಗೆ ರಾಜಕಾರಣಿ ಹಾಗೂ ಪತ್ರಕರ್ತೆ ಎಂಬ ಎರಡೆರಡು ಕೋಟಾ ಇದೆ. ತಮ್ಮ ಪರವಾಗಿ ವಾದ ಮಂಡಿಸುವ ಅವರ ವೈಖರಿ ಬಹಳ ಚೆನ್ನಾಗಿರುತ್ತದೆ.

ರೇಣುಕಾಚಾರ್ಯ

ರೇಣುಕಾಚಾರ್ಯ

ರೇಣುಕಾಚಾರ್ಯ ಅವರ ಹೇಳಿಕೆಗಳು, ವರ್ಣರಂಜಿತ ವ್ಯಕ್ತಿತ್ವದ ಕಾರಣಕ್ಕೆ ಒಳ್ಳೆ ಎಂಟರ್ ಟೈನರ್ ಆಗುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಚನ್ನಗಿರಿಯ ಕಡೆಯ ಅವರ ಮಾತಿನ ಶೈಲಿ ಕೂಡ ಚೆನ್ನಾಗಿರುತ್ತದೆ.

ಸಿ.ಎಂ.ಇಬ್ರಾಹಿಂ

ಸಿ.ಎಂ.ಇಬ್ರಾಹಿಂ

ವಚನ, ರಾಮಾಯಣ, ಮಹಾಭಾರತ, ಕುರಾನ್, ಪಂಚ ಡೈಲಾಗ್ ಹೀಗೆ ಒಳ್ಳೆ ಮಾತುಗಾರರಾದ ಸಿ.ಎಂ.ಇಬ್ರಾಹಿಂ ಅವರನ್ನು ಮಿಸ್ ಮಾಡಿಕೊಂಡರೆ ಹೇಗೆ?

English summary
If Bigg Boss program done for politicians in Kannada. Who are all will be the contestants? Here is our suggestion. Reader can also suggest names.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X