• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಸೆಯ ದೋಸೆ ತಿನ್ನಲು ಹೋಗಿ ಮಣ್ಣಾದ ಮೀಸೆ!

By Super
|

ಆಗೊಮ್ಮೆ-ಈಗೊಮ್ಮೆ ನಾನು ಅವಳನ್ನು ನೋಡ್ತಾ ಇದೆ. ಅವಳು ನನ್ನ ಕಡೆ ನೋಡಿದ ಕೂಡಲೇ ಬೇರೆ ಕಡೆಗೆ ನೋಟ. ಹಾಗೆಯೇ ಅವಳು ನನ್ನ ಮೇಲೆ ಕಣ್ಣು ಹಾಯಿಸ್ತಾ ಇದ್ದಳು. ನಾನು ನೋಡಿದ ಕೂಡಲೇ ನೋಟ ಬೇರೆಡೆಗೆ ಪಲಾಯನ. ಹೀಗೆ, ನನ್ನ-ಅವಳ ಕಣ್ಣುಗಳು ಆಗಾಗ ಸಂಪರ್-ಕಿಸ್-ಉತ್ತಿದವು. ಇಷ್ಟೆಲ್ಲಾ ಕಣ್ಣಲ್ಲಿ ನಡೆಯುತ್ತಿದ್ದಾಗ...

* ಕಿರಣ ಕಾಟವಾ, ಬೆಂಗಳೂರು

ಪಿ.ಯು.ಸಿ 2ನೇ ವರ್ಷ. ನಾನು, ವಿಜಯ್ ಮಸಾಲೆ ದೋಸೆ ತಿನ್ನಲು ಹೋಟೆಲ್‌ಗೆ ಹೋಗಿದ್ದೆವು. ಅದು-ಇದು ಅಂತ ಮಾತಾಡುತ್ತಿದಂತೆ ಟೇಬಲ್‌ಗೆ ಘಮಘಮಿಸುವ ಎರಡು ಮಸಾಲೇ ದೋಸೆ ಹಾಜರ್. ಮಸಾಲೆ ದೋಸೆಯನ್ನು ತಿನ್ನುವ ವಿಶೇಷ ಪದ್ಧತಿಯನ್ನು ವಿಜಯ್ ಅಂದು ನನಗೆ ತೋರಿಸಿದ. ದೋಸೆಗೆ ಮಸಾಲೆ (ಆಲೂಗಡ್ಡೆ ಪಲ್ಲೆ, ಶೇಂಗಾ ಚಟ್ನಿ) ಹಾಕಿ ಸುತ್ತಿಕೊಟ್ಟಿರುತ್ತಾರೆ. ಅದನ್ನು ಉದ್ದವಾಗಿ ಎದ್ದು ನಿಲ್ಲಿಸಿದಾಗ ಮಸಾಲೆ ತಟ್ಟೆಗೆ ಬೀಳುತ್ತದೆ. ಎದ್ದು ನಿಲ್ಲಿಸಿದ, ಆದರೆ ಇನ್ನೂ ಸುತ್ತಿರುವ, ಮಸಾಲೆ ದೋಸೆಯನ್ನು ಮತ್ತೆ ತಟ್ಟೆಗೆ ಅಡ್ಡವಾಗಿ ಮೊದಲಿನ ಹಾಗೇ ಇಟ್ಟು, ಮೇಲಿನಿಂದ ಒತ್ತಿದ. ಆಗ ಅದು ಪದರು-ಪದರುಗಳಾಗಿ ಮುರಿಯಿತು. ಆ ಪದರುಗಳಲ್ಲಿ, ಮೇಲ್ಪದರಿನಿಂದ ತುಂಡು-ತುಂಡಾಗಿ ಮಾಡುತ್ತಾ, ಮಸಾಲೆಯನ್ನು ಹಚ್ಚಿ ತಿನ್ನಬೇಕು. ಈ ತರಹ ದೋಸೆ ತಿನ್ನುವ ಪದ್ಧತಿಯನ್ನು ಎಂದೂ ಕಂಡಿರದ ನಾನು ಅವಾಕ್ಕಾಗಿದ್ದೆ. ಹೀಗೂ ದೋಸೆ ತಿನ್ನಬಹುದಾ ಅಂತ ಕಣ್ಣರಳಿಸಿದ್ದೆ.

ವರ್ಷಗಳು ಉರುಳಿದವು. ನಾನು ಇಂಜಿನಿಯರಿಂಗೆ ಮೈಸೂರ್ ಸೇರಿದೆ. ಇಂಜಿನಿಯರಿಂಗ್‌ನ ಕೊನೆಯ ವರ್ಷವದು. ಸುಮಾರು 20-21ರ ಹರೆಯ. ಸುಂದರ ಹುಡುಗಿ ಒಮ್ಮೆ ಕಣ್ಣು ಇತ್ತ ತಿರುಗಿಸಿ, ತುಟಿಯಂಚಿನಲ್ಲಿ ಸಣ್ಣ, ತುಂಟ ನಗೆ ಕೊಟ್ಟರೆ, ಜಗತ್ತೇ ಮರೆತು ಹೋಗುವಂಥ ಹುಚ್ಚುಖೋಡಿ ವಯಸ್ಸು. ಮನಸ್ಸಿನ ಚಂಚಲತೆಗೆ ನಾನೂ ಹೊರತಾಗಿರಲಿಲ್ಲ. ಚಿಗುರು ಮೀಸೆಯ ಮೇಲ್ಭಾಗದಲ್ಲಿಯೇ ಆಸೆಯ ಕಂಗಳು!

ನಾನು ಹಾಗು ಇನ್ನೂ ಮೂರು ಗೆಳೆಯರು ಸೇರಿ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೊನೆಯ ವರ್ಷದ ಪ್ರೊಜೆಕ್ಟ್ ಕೆಲಸವನ್ನು ಕೈಗೆತ್ತಿಕೊಂಡಿದ್ದೆವು. ವಾರಾಂತ್ಯಕ್ಕೆ ಮೈಸೂರಿನಿಂದ-ಬೆಂಗಳೂರಿಗೆ ಪ್ರಯಾಣ. ಮುಂಜಾನೆ 6 ಗಂಟೆಗೆ ಹೊರಟು ಬೆಂಗಳೂರಿಗೆ ಸುಮಾರು 9 ಗಂಟೆಗೆ ಬಂದು ತಲುಪುತ್ತಿದ್ದೆವು. ಇಳಿದ ಕೂಡಲೇ ಹತ್ತಿರದ ಹೋಟೆಲ್‌ನಲ್ಲಿ ತಿಂಡಿ.

ಹೀಗೆಯೇ ಒಂದು ದಿನ. ಹೋಟೆಲ್‌ಗೆ ಹೋದಾಗ ಒಂದು ಟೇಬಲ್‌ನಲ್ಲಿ ನಾವು ನಾಲ್ವರು ಕುಳಿತೆವು. ನಾನು ಯಥಾಪ್ರಕಾರ ಮಸಾಲೆ ದೋಸೆಯನ್ನೇ ಆರ್ಡ್‌ರ್ ಮಾಡಿದೇ. ನನ್ನ ಪಕ್ಕದ ಟೇಬಲ್‌ನ ಮುಂದಿನ ಟೇಬಲ್ ಖಾಲಿಯಿತ್ತು. ನೋಡುತ್ತಿದ್ದಂತೆಯೇ, ಅಲ್ಲಿಗೆ ಯುವಕ-ಯುವತಿಯರಿಬ್ಬರು ಬಂದು ಕುಳಿತರು. ಅವರು ಕುಳ್ಳಿತಿದ್ದುದು ಹೇಗಿತ್ತೆಂದರೆ, ಆ ಯುವತಿ-ನಾನು ಮುಖಾ-ಮುಖಿಯಾಗಿದ್ದೆವು. ಮನಸು ಆಗಲೇ ಆಸೆಯ ಮಸಾಲೆ ದೋಸೆ ಹುಯ್ಯಲು ಪ್ರಾರಂಭಿಸಿದ್ದು, ಅರೆನಿದ್ದೆ ಕಣ್ಣಿನಿಂದ ಎಚ್ಚೆತ್ತಿದ್ದು.

ಆಗೊಮ್ಮೆ-ಈಗೊಮ್ಮೆ ನಾನು ಅವಳನ್ನು ನೋಡ್ತಾ ಇದೆ. ಅವಳು ನನ್ನ ಕಡೆ ನೋಡಿದ ಕೂಡಲೇ ಬೇರೆ ಕಡೆಗೆ ನೋಟ. ಹಾಗೆಯೇ ಅವಳು ನನ್ನ ಮೇಲೆ ಕಣ್ಣು ಹಾಯಿಸ್ತಾ ಇದ್ದಳು. ನಾನು ನೋಡಿದ ಕೂಡಲೇ ನೋಟ ಬೇರೆಡೆಗೆ ಪಲಾಯನ. ಹೀಗೆ, ನನ್ನ-ಅವಳ ಕಣ್ಣುಗಳು ಆಗಾಗ ಸಂಪರ್-ಕಿಸ್-ಉತ್ತಿದವು. ಇಷ್ಟೆಲ್ಲಾ ಕಣ್ಣಲ್ಲಿ ನಡೆಯುತ್ತಿದ್ದಾಗ, ಪಿ.ಯು.ಸಿ.ಯಲ್ಲಿ ಮಸಾಲೆ ದೋಸೆ ತಿಂದದ್ದು ತಲೆಯಲ್ಲಿ ಓಡ್ತಾ ಇತ್ತು. ಅದೇ ರೀತಿಯಲ್ಲಿ ನಾನು ಈಗ ಇವಳೇದುರೂ ದೋಸೆ ತಿಂದರೆ, ಫುಲ್ ಇಂಪ್ರೆಸ್ ಜಮಾಯಿಸಬಹುದು ಅನ್ನೋ ಖಾತ್ರಿ ಬರ್‍ತಾಇತ್ತು.

ಅಷ್ಟರಲ್ಲಿ ನನ್ನ ದೋಸೆ ಟೇಬಲ್‌ಗೆ ಬಂತು. ಅದನ್ನು ನೋಡುತ್ತಿದ್ದಂತೆ, ನನ್ನ ಕತೆಯಲ್ಲಿ ಟ್ವಿಸ್ಟ್ ಕೂಡಾ ಬಂತು! ದುರಾದೃಷ್ಟವಶಾತ್, ಆ ನನ್ನ ದೋಸೆ ಚಪ್ಪಟೆಯಾಗಿ-ತ್ರಿಕೋಣಾಕೃತಿಯಲ್ಲಿತ್ತು! ಆವತ್ತಿನಂತೆ ದೋಸೆ ಸುತ್ತಿದಹಾಗಿಲ್ಲವೆಂದು ಒಂದು ಕ್ಷಣ ನಿರಾಸೆಯಾದರೂ, ಹುಡುಗಿಯನ್ನು ಇಂಪ್ರೆಸ್ ಮಾಡೋ ಆಸೆ ಮಾತ್ರ ಹೋಗಲಿಲ್ಲಾ. ಇವೆಲ್ಲದರ ಮಧ್ಯೆ ನನ್ನ-ಅವಳ ಕಣ್ಣುಗಳು ಒಬ್ಬರನ್ನೊಬ್ಬರ ಕುಶಲ-ಕ್ಷೇಮ ವಿಚಾರಿಸುತ್ತಲೇ ಇದ್ದವು.

ಆ ದೋಸೆಯ ಮೇಲ್ಭಾಗದಲ್ಲಿ ಹಾಗೆಯೇ ದುಂಡಾಗಿ ಹರಿದೆ. ಅವಳ ಕಣ್ಣುಗಳಲ್ಲಿಯೂ ಕುತೂಹಲ ಮೂಡತೊಡಗಿತು. ಆ ದೋಸೆಯ ಮೂರು ಕೊನೆಗಳಲ್ಲಿ ಎರಡು ಕೊನೆಗಳನ್ನು ಹಿಡಿದು, ಮೂರನೇಯ ಕೊನೆಯನ್ನು ಚೆಲ್ಲಿ ಹೋಗದಂತೆ ನಿಧಾನವಾಗಿ ಎತ್ತಿ, ದೋಸೆಯನ್ನು ತಿರುಗಿ ಹಾಕಿದರೆ ಮಸಾಲೆಯಲ್ಲಾ ತಟ್ಟೆಗೆ ಬರುತ್ತದೆ. ದೋಸೆಯನ್ನು ಮತ್ತೇ ಮೊದಲಿನ ಹಾಗೆಯೇ ಇಟ್ಟು, ಮೇಲಿನಿಂದ ಒತ್ತಿ, ಪದರುಗಳಾಗಿ ಮಾಡಿ, ಹರಿದು ತಿನೋಣ್ಣಾ ಅಂದು ಕೊಂಡೆ. ಹಾಗೇಯೆ ಶುರು ಮಾಡಿದೆ. ಎರಡು ಕೊನೆಗಳನ್ನು ಹಿಡಿದು ಮೂರನೇಯ ಕೊನೆಯನ್ನು ಮೇಲೆ ಎತ್ತುತ್ತಿದ್ದೆ. ಅವಳ ಕಣ್ಣುಗಳು ಮಿಟುಕದೇ ನನ್ನ ತಟ್ಟೆಯಲ್ಲೇ ನೆಟ್ಟಿದ್ದವು.

ಅದೃಷ್ಟ ಇಲ್ಲಿಯೂ ಕೈ ಕೊಟ್ತು! ಆ ಮೂರನೇ ಕೊನೆಯನ್ನು ತಿರುಗಿಸಿ ಹಾಕುವಲ್ಲಿ, ಆ ದೋಸೆಯಲ್ಲಾ ಚೆಲ್ಲಾ-ಪಿಲ್ಲಿಯಾಗಿ ತಟ್ಟೆಗೆ ಬಿತ್ತು! ಅಷ್ಟೇ ಸಾಕು...ನಾನು ಪಟಕ್ಕನೇ ಅವಳೇಡೆ ನೋಡಿದೆ, ಅವಳು ಕಿಸಕ್ಕ್‌ನೇ ನಕ್ಕು ತಲೆ ಬಗ್ಗಿಸಿ ಬಿಟ್ಟಳು. ನನ್ನ ಸ್ಥಿತಿ ಹೇಳು-ಹೆಸರಿಲ್ಲದಂತಾಯಿತು. ಸುಮ್ಮನೇ ತಲೆ ಬಗ್ಗಿಸಿ ದೋಸೆ ತಿಂದೆ. ಮುಗಿಸಿ ಕೈತೊಳೆಯಲೆಂದು ಎದ್ದಾಗಲೇ ನನ್ನ ತಲೆ ಕೂಡಾ ಎದ್ದಿತು. ಅವಳು ಅಲ್ಲಿ ಇರಲೇ ಇಲ್ಲಾ! ಟೇಬಲ್ ಮೇಲೆ ಬಿಲ್, ಹಣ ಅಷ್ಟೇ ಇತ್ತು.

ಆ ಆಸೆಯ ದೋಸೆ ನನ್ನ ಮೀಸೆ ಮಣ್ಣು ಮಾಡಿತ್ತು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Once the author had gone to have masale dose with his friends. A beautiful girl was sitting opposite to him. Then what happened?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more