153697political satireಕನ್ನಡಕ್ಕೆ ಸ್ಥಾನಮಾನ:ವಿನಿವಿಂಕ್ ಸಂತಸ /column/majavani/2009/0112-viniv-inc-sastry-majavani-interview.htmlಬೆಂಗಳೂರು, ಜ.11:ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರಿಯ ಭಾಷೆ ಎಂದು ಘೋಷಿಸಿರುವುದನ್ನು ಕರ್ನಾಟಕದ ಸುಪ್ರಸಿದ್ಧ ಖೈದಿ ವಿನಿವಿಂಕ್ ಶಾಸ್ತ್ರಿಯವರು ಸ್ವಾಗತಿಸಿದ್ದಾರೆ. ನಗರದ ಕೇಂದ್ರ ಕಾರಾಗಾರದಲ್ಲಿ ಮಜಾವಾಣಿ ಪತ್ರಿಕೆಯ ವರದಿಗಾರರೊಂದಿಗೆ ಮಾತನಾಡಿದ ಶಾಸ್ತ್ರಿಯವರು, "ಸುದ್ದಿ ಮತ್ತು ಸ್ವಾರಸ್ಯ ಎರಡೂ ಹಳತಾದರೂ ನಿರ್ಭಿಡೆಯಿಂದ ವರದಿಮಾಡುವ ಮಜಾವಾಣಿ ಪತ್ರಿಕೆ ಈಗಲಾದರೂ ನನ್ನನ್ನು ಸಂಪರ್ಕಿಸಿರುವುದು ಶ್ಲಾಘನೀಯ. ಎಷ್ಟೋ ವರ್ಷಗಳ ಹೋರಾಟದ ನಂತರ ಕನ್ನಡವನ್ನು ಶಾಸ್ತ್ರಿಯ 34017http://kannada.oneindia.com/img/2009/01/12-vinivinc-shastri1e.jpg153697political satireದೇವೇಗೌಡರ ಹೊಸಾ ಡೀಲು/column/humor/2009/0401-deve-gowdas-new-political-game.html* ವೆಂಕಟೇಶ್ ದೊಡ್ಡಮನೆಆಗಲೇ, ದೇಶಪಾಂಡೆ ಕಾಂಗ್ರೆಸ್ ಅಧ್ಯಕ್ಷ ಅಂತ ನ್ಯೂಸ್ ಗೊತ್ತಾಗಿ ಕುಣುದಾಡ್ಬುಡೊ ಅಷ್ಟು ಸಂತೋಷ ಆಗಿತ್ತು ಗೌಡ್ರಿಗೆ. ಕುಮಾರ, ರೇವೂ ಪಾರ್ಟಿ ಆಪೀಸ್ನಾಗೆ ಪಟಾಕಿ ಹಚ್ಚಿ ಕುಸಿ ಮಾಡಿರ್ತಾರೆ ಅಂದ್ಕೊತನೆ ಇದ್ದವಾಗ, ಪರ್ಸನಲ್ ಶೆಕೆಟ್ರಿ YSV ದತ್ತು, "ಸಾರ್ ಮಸೀದಿ ಕಮಿಟಿಯವರು ನಿಮ್ಮನ್ನ ಇಫ್ತಾರ್ ಕೂಟಕ್ಕೆ ಕರೆಯೊದಕ್ಕೆ ಬಂದಿದಾರೆ" ಮುಂದಿನ ಡೆಸ್ಕಿಂದ ಫೋನ್ ಮಾಡಿ ಅಂದರು. 35649http://kannada.oneindia.com/img/2009/04/01-venkatesh-dodmane2.jpg153697political satireಇದೀಗ ತಾನೇ ಬಂದಂತಹ ನಗೆ ಸುದ್ದಿಗಳು/column/humor/2009/0401-humorous-political-news-bytes.htmlರಾಜಕೀಯದಲ್ಲಿ ಕಾಲು ಎಳೆಯುವುದು, ಕೆಸರೆರಚಾಟವಾಡುವುದು, ಕಟಕಿಯಾಡುವುದು ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟಿದಷ್ಟೇ ಸಹಜ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಾವೂ ನಮ್ಮ ರಾಷ್ಟ್ರೀಯ ಪ್ರತಿನಿಧಿಗಳ ಕಾಲೆಳಿಯೋಣ, ಮಿತಿ ಮೀರದಂತೆ. ಇಲ್ಲಿವೆ ನೋಡಿ ಎಚ್. ಆನಂದರಾಮ ಶಾಸ್ತ್ರೀಯವರ ಹಾಸ್ಯಲೇಪಿತ ರಾಜಕೀಯ ಸುದ್ದಿ ಸ್ವಾರಸ್ಯಗಳು.ವರುಣ್‌ಗೆ ಒಂದು ವರ್ಷ ಶಿಕ್ಷೆವರುಣ್ ಗಾಂಧಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. 35655http://kannada.oneindia.com/img/2009/04/01-anandram-shastri1.jpg153697political satireನ್ನನ್ನತ್ರ ಇನ್ನೂ ಐನಾತಿ ಟೈಲಾಗ್‌ಗಳಿವೆ/column/humor/2009/0402-political-satire-by-natesh-babu.htmlಮೇ ಮುಗ್ಯೋ ತನ್ಕ ನಮ್ ರಾಜ್‌ಕಾರುಣಿಗುಳ್ಗೆ ನಿದ್ದಿಲ್ಲ. ನಮುಗಿಲ್ಲದ್ ನಿದ್ದಿ ನಿಮಗ್ಯಾಕೆ ಅಂಥ, ಮತುದಾರುರ ನಿದ್ದಿಗೂ ಭಂಗ ತಂದವ್ರೆ. ಮತುದಾರ್ರಿಗೆ ಮೊಂಕುಬೂದಿ ಎರಚೋದು ಹೆಂಗೆ ಅಂಬೋ ಸಂಶೋದ್ನೆಗೆ ಇರೋಬರೊ ರಾಜ್ಕೀಯ ಪಕ್ಸುಗುಳು ಕಾಸು ಸುರಿದಿವ್ಯಂತೆ. ಚುನಾವಣೆ ಟೇಮಲ್ಲಿ ಬಿಸಿಬಿಸಿ ಸುದ್ದಿ ಮಧ್ಯೆ ಲೋಡುಗಟ್ಟಲೇ ಜಾಹೀರಾತು(ಥೂ) ಮಾರಿ ಜೇಬು ತುಂಬ್ಸಿಕೊಳ್ಳೋಕೆ ಪೇಪರ್‌ನೋರು, ಟೀವಿನೋರು ಐನಾತಿ ಪಿಲಾನು ಮಾಡವ್ರೆ ಅಂಬುತಾ 35674http://kannada.oneindia.com/img/2009/04/02-varun-gandhi1.jpg153697political satireಬಂಗಾರ-ಕುಮಾರ-ಮಧು-ಚಂದ್ರ-ಯಾನ/column/humor/2009/0406-madhu-kumar-bangarappa-unite.htmlರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಇಲ್ಲಿ ಸ್ನೇಹವೂ ಶಾಶ್ವತವಲ್ಲ, ವೈರತ್ವವೂ. ಅಧಿಕಾರ ಶಾಶ್ವತವಲ್ಲ, ಸಂಬಂಧವಂತೂ ಅಲ್ವೇಅಲ್ಲ, ಹಣ ಮತ್ತು ಕಳಂಕ ಹೊರತಾಗಿ. ಅಂದಿನ ಬದ್ಧ ವೈರಿಗಳು ಇಂದು ನಿನ್ನಂಥ ಅಪ್ಪ ಇಲ್ಲ, ನಿನ್ನಂಥ ಮಗನೂ ಇಲ್ಲ, ನಿನ್ನಂಥ ಬಂಧುವಿಲ್ಲ ಅಂತ ಅಪ್ಪಿಕೊಳ್ಳುವುದನ್ನು ನೋಡುವುದು ರಾಜಕೀಯದಲ್ಲಿ ಮಾತ್ರ ಸಾಧ್ಯ. ಅದನ್ನು ಸಾಧ್ಯವಾಗಿಸಿದವರು, ಕುಮಾರ್, ಮಧು ಮತ್ತು ಒನ್ ಅಂಡ್ ಓನ್ಲಿ 35761http://kannada.oneindia.com/img/2009/04/06-anandram-shastri2.jpg83806humorಮುದ್ದಾದ ಒಂದು ಹೆಸರಿನ ನಿತ್ಯ ಕಗ್ಗೊಲೆ/column/humor/2008/0917-how-they-spell-poornima-in-london.htmlಅಜ್ಜಿ ಇಟ್ಟ ಮುದ್ದಾದ ತನ್ನ ಹೆಸರು ನಿತ್ಯ ಕಗ್ಗೊಲೆ ಆಗುತ್ತಿರುವ ಕಥೆಗೆ ಹಾಸ್ಯದ ರವಿಕೆ ತೊಡಿಸಿದ ಹುಡುಗಿಯ ಹೆಸರು ನಿಮಗೆ ಗೊತ್ತಾ? ಅಣ್ಣತಮ್ಮಂದಿರೆ, ಅಕ್ಕತಂಗಿಯರೆ, ಲಂಡನ್ನಿನ ತರುಲತೆಗಳೆ ಒಮ್ಮೆಯಾದರೂ ನನ್ನನ್ನ ಬಾಯ್ತುಂಬ ಪೂರ್ಣಿ ಎಂದು ಕರೆಯುವಿರಾ ಎಂದು ಕನವರಿಸುತ್ತಿದ್ದಾರೆ. ಲಂಡನ್‌ಗೆ ಕೇಳಿಸುವ ಹಾಗೆ ನೀವೆಲ್ಲ ಪೂರ್ಣೀ..ಎಂದು ಇಲ್ಲಿಂದಲೇ ಜೋರಾಗಿ ಕೂಗಿ ಕರೆಯಿರಿ!! ಪೂರ್ಣಿಮಾ ಭಟ್ಟ ಸಣ್ಣಕೇರಿ, 788http://kannada.oneindia.com/img/2009/07/23-poornima-bhat1.jpg83806humorಕೊಳೆತ ಮಾರುಕಟ್ಟೆಯಲ್ಲಿ ಹೆಂಗಸರ ತಾಜಾ ರಾಜಕೀಯ/column/humor/2008/0506-fresh-politics-in-rotten-market.htmlಭಾನುವಾರ ಬೆಳಿಗ್ಗೆ ಸಂತೆ. ಹಣ್ಣು, ಹೂವು, ತರಕಾರಿ ಮಾರುವವರದೇ ಭರಾಟೆ. ತರಕಾರಿ ಹೆಸರನ್ನು ಹಿಡಿದುಕೊಂಡು ಗಿರಾಕಿಗಳನ್ನು ತಮ್ಮತ್ತ ಸೆಳೆಯುವವರದೇ ಚೀರಲು ಧ್ವನಿಗಳು. ಆದರೆ, ಒಂದು ಮೂಲೆಯಲ್ಲಿ ಈ ಎಲ್ಲ ಚೀರು ಧ್ವನಿಗಳನ್ನು ಮೀರಿ ರೋಷಾವೇಷದ ಮಾತುಗಳು ಕೇಳಿಬರುತ್ತಿತ್ತು. ಮಹಿಳಾಮಣಿಗಳದ್ದೇ ಅಬ್ಬರ. ಏನೋ ಮಜಾ ನಡೆದೈತಿ ಅಂತ ನನ್ನ ಅನುಮತಿಗೂ ಕಾಯದೇ ಡಿಬ್ಬಿ ಅತ್ತ ಎಳೆದುಕೊಂಡು ಹೋದ. ಯಶ್ 2596http://kannada.oneindia.com/img/2009/11/14-market1.jpg83806humorಪ್ರಮಿಳಾ ನೇಸರ್ಗಿಯೂ ಮಂತ್ರಿಸಿದ ನಿಂಬೆಹಣ್ಣೂ/column/humor/2008/0422-subbu-and-magical-lemon.htmlರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗಲ್ಲಿಗಲ್ಲಿಗಳಲ್ಲಿ ಜ್ಯೋತಿಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಚುನಾವಣೆ ಇಲ್ಲದಿದ್ದರೂ ಅವರು ಇದ್ದೇ ಇರುತ್ತಾರೆ. ಯಾವ ಪಕ್ಷ ಗೆಲ್ಲುತ್ತೆ? ಮುಮಂ ಯಾರು? ಮೊದಲು ಎಡಗಾಲಿಡಬೇಕೋ, ಬಲಗಾಲಿಡಬೇಕೋ ಅವರೇ ಹೇಳುತ್ತಾರೆ. ಅರಳುತ್ತಿರುವ ಜ್ಯೋತಿಷಿಗಳು ಮರುಳಾಗುತ್ತಿರುವ ರಾಜಕಾರಣಿಗಳ ಕುರಿತು ಒಂದು ವಿಡಂಬನೆ. * ಪ್ರಸಾದ ನಾಯಿಕ ಪಕ್ಕದ ಓಣಿಯಲ್ಲಿದ್ದ ಗೆಳೆಯ ಡಿಬ್ಬಿ ಹಳೆಯ ಕಾಲದ ಚಿತ್ರದಲ್ಲಿ ತಾಯ್ ನಾಗೇಶ್ 2738http://kannada.oneindia.com/img/2009/11/14-pramila-nesargi1e.jpg83806humorಶರಶೈಯೆಯಲ್ಲಿ ಪವಡಿಸಿದ ಭೀಷ್ಮ ಪ್ರತಿಜ್ಞೆ/column/humor/2009/0102-i-just-broke-my-new-year-resolution-2009.htmlಹೊಸವರ್ಷ ಉದಯವಾಗುವ ವೇಳೆ ಅನೇಕ ಜನ, ಥರಹೇವಾರಿ ಪ್ರತಿಜ್ಞೆಗಳನ್ನು ಮಾಡುವುದು ರೂಢಿ. ತಪ್ಪೇನಿಲ್ಲ ಬಿಡಿ. ಎಷ್ಟೋ ಜನ 2009ಕ್ಕೆ ಹೊಸ ರೆಸಲ್ಯೂಷನ್ ಗಳನ್ನು ಕೈಗೊಂಡಿದ್ದನ್ನು ನೀವು ಕೇಳಿರಬಹುದು. ಆ ಭೀಷ್ಮ ಪ್ರತಿಜ್ಞೆಗಳು ಇಷ್ಟುಹೊತ್ತಿಗಾಗಲೇ ಶರಶೈಯೆಯಲ್ಲಿ ಅಂಗಾತ ಮಲಗಿದ್ದರೆ ಖಂಡಿತ ಆಶ್ಚರ್ಯವಿಲ್ಲ * ರೇಖಾ ಹೆಗಡೆ ಬಾಳೇಸರ, ಓಲ್ಡ್‌ಸ್ಮಾರ್; ಫ್ಲಾರಿಡಾನೋಡನೋಡುತ್ತ ನೂತನ ವರ್ಷ ಬಂದಿದೆ. ನಿನ್ನಿನ ದಿನಕ್ಕೂ, ಇಂದಿನದಕ್ಕೂ 33835http://kannada.oneindia.com/img/2009/01/02-new-year-resolutions1e.jpg83806humorತಿರುಪತಿ ತಿಮ್ಮಪ್ಪನೂ, ಉಡುಪಿಯ ಹೋಟೆಲೂ/column/humor/2009/0130-tirupathi-timmappa-and-udupi-hotel.htmlಶಂಕರಪುರಂನಲ್ಲಿರುವ ಬ್ರಾಹ್ಮಣರ ಕಾಫಿ ಬಾರ್ ಯಡಿಯೂರಪ್ಪನವರ ಭೇಟಿಯಿಂದಾಗಿ ಇವತ್ತು ಸುದ್ದಿ ಕೇಂದ್ರಕ್ಕೆ ಬಂದಿರಬಹುದು, ವಿಶ್ವೇಶ್ವರ ಭಟ್ ಅವರು ಬರೆದ ಎಂಟಿಆರ್ ಹೋಟೆಲಿನ ಇತಿಹಾಸ ಮತ್ತು ಪರಂಪರೆಯ ಬಗೆಗೆ ಕನ್ನಡಿಗರು ಬೆನ್ನು ತಟ್ಟಿಕೊಳ್ಳುತ್ತಿರಬಹುದು, ತಟ್ಟಿಕೊಳ್ಳಿರಿ ತಟ್ಟಿಕೊಳ್ಳಿರಿ. ಆದರೆ ಕನ್ನಡಿಗರೇ ಒಂದು ವಿಷಯ ತಿಳಿಯಿರಿ. ಐದಾರು ಶತಮಾನಗಳ ಹಿಂದೆಯೇ ನಮ್ಮಲ್ಲಿ ಉಡುಪಿ ಹೋಟೆಲುಗಳಿದ್ದವು, ಅಲ್ಲಿ ರುಚಿರುಚಿಯಾದ ಇಡ್ಲಿ ದೋಸೆಗಳು ಬಿಕರಿಯಾಗುತ್ತಿದ್ದವು. 34371http://kannada.oneindia.com/img/2009/01/30-balaji3.jpg453938anandarama shastriಇದೀಗ ತಾನೇ ಬಂದಂತಹ ನಗೆ ಸುದ್ದಿಗಳು/column/humor/2009/0401-humorous-political-news-bytes.htmlರಾಜಕೀಯದಲ್ಲಿ ಕಾಲು ಎಳೆಯುವುದು, ಕೆಸರೆರಚಾಟವಾಡುವುದು, ಕಟಕಿಯಾಡುವುದು ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟಿದಷ್ಟೇ ಸಹಜ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಾವೂ ನಮ್ಮ ರಾಷ್ಟ್ರೀಯ ಪ್ರತಿನಿಧಿಗಳ ಕಾಲೆಳಿಯೋಣ, ಮಿತಿ ಮೀರದಂತೆ. ಇಲ್ಲಿವೆ ನೋಡಿ ಎಚ್. ಆನಂದರಾಮ ಶಾಸ್ತ್ರೀಯವರ ಹಾಸ್ಯಲೇಪಿತ ರಾಜಕೀಯ ಸುದ್ದಿ ಸ್ವಾರಸ್ಯಗಳು.ವರುಣ್‌ಗೆ ಒಂದು ವರ್ಷ ಶಿಕ್ಷೆವರುಣ್ ಗಾಂಧಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. 35655http://kannada.oneindia.com/img/2009/04/01-anandram-shastri1.jpg453938anandarama shastriಬಂಗಾರ-ಕುಮಾರ-ಮಧು-ಚಂದ್ರ-ಯಾನ/column/humor/2009/0406-madhu-kumar-bangarappa-unite.htmlರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಇಲ್ಲಿ ಸ್ನೇಹವೂ ಶಾಶ್ವತವಲ್ಲ, ವೈರತ್ವವೂ. ಅಧಿಕಾರ ಶಾಶ್ವತವಲ್ಲ, ಸಂಬಂಧವಂತೂ ಅಲ್ವೇಅಲ್ಲ, ಹಣ ಮತ್ತು ಕಳಂಕ ಹೊರತಾಗಿ. ಅಂದಿನ ಬದ್ಧ ವೈರಿಗಳು ಇಂದು ನಿನ್ನಂಥ ಅಪ್ಪ ಇಲ್ಲ, ನಿನ್ನಂಥ ಮಗನೂ ಇಲ್ಲ, ನಿನ್ನಂಥ ಬಂಧುವಿಲ್ಲ ಅಂತ ಅಪ್ಪಿಕೊಳ್ಳುವುದನ್ನು ನೋಡುವುದು ರಾಜಕೀಯದಲ್ಲಿ ಮಾತ್ರ ಸಾಧ್ಯ. ಅದನ್ನು ಸಾಧ್ಯವಾಗಿಸಿದವರು, ಕುಮಾರ್, ಮಧು ಮತ್ತು ಒನ್ ಅಂಡ್ ಓನ್ಲಿ 35761http://kannada.oneindia.com/img/2009/04/06-anandram-shastri2.jpg453938anandarama shastriಸ್ವರ್ಗ-ನರಕದಲ್ಲಿ ಪತ್ರಿಕಾಗೋಷ್ಠಿ!/column/humor/2009/0409-press-conference-in-hell-and-heaven.htmlಸ್ವರ್ಗ ಮತ್ತು ನರಕಗಳೆರಡರಲ್ಲಿಯೂ ಏಕಕಾಲಕ್ಕೆ ವಿಶೇಷ ಘಟಕಗಳನ್ನು ತೆರೆಯಲು ಈಚೆಗಷ್ಟೇ ನಿರ್ಧರಿಸಲಾಯಿತು. ಭೂಲೋಕದ ಮಾನವರಿಗಾಗಿ ಆ ಘಟಕಗಳಾದ್ದರಿಂದ ಆ ಬಗ್ಗೆ ಎರಡೂ ಕಡೆ ಪತ್ರಿಕಾಗೋಷ್ಠಿ ಏರ್ಪಡಿಸಿ ಭೂಲೋಕದ ಪತ್ರಕರ್ತರನ್ನು ಆಹ್ವಾನಿಸಲಾಯಿತು. ಪತ್ರಕರ್ತರಿಗಾಗಿ ಉಭಯ ಕಡೆಗಳಿಗೂ ದೇವೇಂದ್ರನ ಕಚೇರಿಯು ವಿಶೇಷ ಸಾರಿಗೆ ವ್ಯವಸ್ಥೆ ಮಾಡಿತ್ತು. ಕ್ಯಾಮೆರಾ, ಮೊಬೈಲ್ ಫೋನ್, ಕಂಪ್ಯೂಟರ್, ಚಿತ್ರಗ್ರಾಹಕ ಯಂತ್ರಗಳು ಹಾಗೂ ಧ್ವನಿಮುದ್ರಕ ಯಂತ್ರಗಳನ್ನು ನಿಷೇಧಿಸಲಾಗಿತ್ತು. 35853http://kannada.oneindia.com/img/2009/04/09-anandram-shastri2.jpg453938anandarama shastriಇಂಥ ರಾಜಕಾರಣಿಗಳನ್ನು ಪಡೆದ ನಾವೇ ಧನ್ಯರು!/column/humor/2009/0413-honest-secular-polite-politicians-karnataka.htmlನಮ್ಮ ರಾಜಕಾರಣಿಗಳು ಪಾಪ ಏನೂ ಗಳಿಸಿರುವುದಿಲ್ಲ. ಇವರ ಹೆಂಡತಿ ಟೈಲರಿಂಗೋ ಮತ್ತೊಂದೋ ಕೆಲಸ ಮಾಡಿ ಒಂದು ಕೇಜಿ ಬಂಗಾರ, ಎರಡು ಕ್ವಿಂಟಲ್ ಬೆಳ್ಳಿ, ಮೂರು ಬಂಗಲೆ, ನಾಲ್ಕು ಕಾರು, ಐದು ಲಕ್ಷ ನಗದು, ಆರು ಕೋಟಿ ರೂ. ಶೇರ್ ಸರ್ಟಿಫಿಕೇಟು, ಏಳೆಕರೆ ತೋಟ, ಎಂಟು ಸೈಟು, ಒಂಭತ್ತು ಕಪಾಟುಭರ್ತಿ ಉಡುಪು ಮತ್ತು ಹತ್ತು ಜಾತಿನಾಯಿ ಮಾಡಿಕೊಂಡಿರುತ್ತಾರೆ, ಅಷ್ಟೆ.* 35908http://kannada.oneindia.com/img/2009/04/13-politician1.jpg453938anandarama shastriನಮ್ಮ ರಾಜಕಾರಣಿಗಳು ಎಂಥವರೆಂದರೆ.../news/2009/04/23/these-are-our-politicians.htmlಚುನಾವಣೆ ಬಂತೆಂದರೆ ಸಾಕು, 'ದಾಸನ ಮಾಡಿಕೊ ಎನ್ನ, ಸ್ವಾಮಿ, ಸಾಸಿರ ನಾಮದ ಪ್ರಿಯ ಮತದಾರ', ಎಂದು ಮತದಾರನನ್ನು ಪ್ರಾರ್ಥಿಸುವ ಇವರು ಚುನಾವಣೆ ಮುಗಿದ ಬೆನ್ನಿಗೇ, 'ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ವೋಟಿನ ಬಲವೊಂದ್ ಸಿಕ್ತಲ್ಲ, ಸಾಕೋ', ಎಂದು ಮತದಾರನಿಗೆ ಬೆನ್ನುಹಾಕಿ ತಮ್ಮ ದಂತಗೋಪುರಗಳೆಡೆಗೆ ಹೊರಟುಹೋಗುತ್ತಾರೆ.* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು ಅವನೊಬ್ಬ ವ್ಯಾಪಾರಿ. ಭಾರೀ ಶ್ರೀಮಂತ. ಆದರೂ 36157http://kannada.oneindia.com/img/2009/04/23-politician2.jpgnews"> ಇದೀಗ ತಾನೇ ಬಂದಂತಹ ನಗೆ ಸುದ್ದಿಗಳು | Funniest News Bytes | Anandarama Shasri | Humor festival - ಇದೀಗ ತಾನೇ ಬಂದಂತಹ ನಗೆ ಸುದ್ದಿಗಳು - Kannada Oneindia

ಇದೀಗ ತಾನೇ ಬಂದಂತಹ ನಗೆ ಸುದ್ದಿಗಳು

H Anandarama Shastri, Bengaluru
ರಾಜಕೀಯದಲ್ಲಿ ಕಾಲು ಎಳೆಯುವುದು, ಕೆಸರೆರಚಾಟವಾಡುವುದು, ಕಟಕಿಯಾಡುವುದು ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟಿದಷ್ಟೇ ಸಹಜ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಾವೂ ನಮ್ಮ ರಾಷ್ಟ್ರೀಯ ಪ್ರತಿನಿಧಿಗಳ ಕಾಲೆಳಿಯೋಣ, ಮಿತಿ ಮೀರದಂತೆ. ಇಲ್ಲಿವೆ ನೋಡಿ ಎಚ್. ಆನಂದರಾಮ ಶಾಸ್ತ್ರೀಯವರ ಹಾಸ್ಯಲೇಪಿತ ರಾಜಕೀಯ ಸುದ್ದಿ ಸ್ವಾರಸ್ಯಗಳು.

ವರುಣ್‌ಗೆ ಒಂದು ವರ್ಷ ಶಿಕ್ಷೆ

ವರುಣ್ ಗಾಂಧಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ಒಂದು ವರ್ಷದ ಶಿಕ್ಷೆ ಮುಗಿಯುತ್ತಲೇ ಇನ್ನಾವ ಕಾಯ್ದೆಯಡಿ ಆತನಿಗೆ ಇನ್ನಷ್ಟು ಜೈಲು ಶಿಕ್ಷೆ ವಿಧಿಸಬಹುದೆಂಬುದನ್ನು ತಿಳಿಯಲು ಸೋನಿಯಾ ಮತ್ತು ಮಾಯಾವತಿ ಪ್ರತ್ಯೇಕವಾಗಿ ಕಾನೂನು ತಜ್ಞರ ಉನ್ನತ ಮಟ್ಟದ ರಹಸ್ಯ ಸಭೆ ಕರೆದು ಈಗಾಗಲೇ ಸಮಾಲೋಚನೆಯಲ್ಲಿ ತೊಡಗಿದ್ದಾರೆಂದು ಬಲ್ಲ ಮೂಲೆಗಳಿಂದ ತಿಳಿದುಬಂದಿದೆ. ಈ ನಡುವೆ ಯಡಿಯೂರಪ್ಪನವರು ಶಿವಮೊಗ್ಗದ ಚುನಾವಣಾ ರ‌್ಯಾಲಿಯಲ್ಲಿ ಮಾತನಾಡುತ್ತ, ವರುಣ್ ಜೈಲು ಶಿಕ್ಷೆಯು ಸೋನಿಯಾ ತನ್ನ ಮಗನಿಗೆ ಮುಂದೆ ಎದುರಾಗಬಹುದಾದ ಆತಂಕವನ್ನು ಇಂದೇ ನಿವಾರಿಸಲು ಮತ್ತು ಮಾಯಾವತಿಯು ಅಲ್ಪಸಂಖ್ಯಾತರ ವೋಟುಗಳನ್ನು ಸಮಾಜವಾದಿ ಪಕ್ಷದ ಕೈಯಿಂದ ಕಸಿದುಕೊಳ್ಳಲು ಹೂಡಿರುವ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಅದೇ ವೇಳೆ, ಈ ರೀತಿ ಆರೋಪ ಮಾಡುವ ಮೂಲಕ ಯಡಿಯೂರಪ್ಪನವರು ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಾರೆಂದು ಡಿ.ಕೆ. ಶಿವಕುಮಾರ್ ಮತ್ತು ಉಗ್ರಪ್ಪ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಕೋಟಿ ರಾಮು ಚಿತ್ರ

"ಕಿರಣ್ ಬೇಡಿ" ಚಿತ್ರದ ಮೂಲಕ ಪತ್ನಿ ಮಾಲಾಶ್ರೀಗೆ ಬೆಳ್ಳಿ ತೆರೆಮೇಲೆ ಮರುಹುಟ್ಟು ನೀಡಿರುವ ನಿರ್ಮಾಪಕ ಕೋಟಿ ರಾಮು ಅವರು ತಮ್ಮ ಮುಂದಿನ ಚಿತ್ರಕ್ಕಾಗಲೇ ನಾಮಕರಣ ಮಾಡಿದ್ದಾರೆ. "ಅತ್ತೆಗಿಂತ ಒಂದು "ಕೈ" ಮಿಗಿಲಾದ ಸೊಸೆ" ಎಂಬ ಇಷ್ಟುದ್ದದ ಹೆಸರು ಹೊತ್ತು ನಿರ್ಮಾಣವಾಗಲಿರುವ ಆ ಚಿತ್ರದ ವಿಶೇಷವೆಂದರೆ ಅದರಲ್ಲಿ ಅತ್ತೆಯ ಪಾತ್ರವೇ ಇಲ್ಲ! ಇಂದಿರಾಗಾಂಧಿಯನ್ನು ಹೋಲುವ ಭಾವಚಿತ್ರಗಳಿಂದಲೇ ಅತ್ತೆಯ ಪಾತ್ರವನ್ನು ಬಿಂಬಿಸಲಾಗುವುದು. ಸೊಸೆಯ ಪಾತ್ರದ ಮೂಲಕ ಸಂಸದೆ ತೇಜಸ್ವಿನಿ ಗೌಡ ಅವರು ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ. 'ಕಿರಣ್ ಬೇಡಿ' ಯಶಸ್ಸಿನಿಂದ ಸ್ಫೂರ್ತಿಹೊಂದಿ ನೀವಿನ್ನು 'ಸಾಂಗ್ಲಿಯಾನಾ ಭಾಗ-4' ತೆಗೆಯುವಿರಾ ಎಂಬ ಪತ್ರಕರ್ತರೋರ್ವರ ಪ್ರಶ್ನೆಗೆ ರಾಮು ಕೆರಳಿ ಕೆಂಡಾಮಂಡಲ ಆದರೆಂದು ವರದಿಯಾಗಿದೆ.

ರಾಹುಲ್‌ಗೆ ಪ್ರಶಸ್ತಿ

ಈ ಸಲದ ಇಂದಿರಾಗಾಂಧಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಯನ್ನು ರಾಹುಲ್ ಗಾಂಧಿಗೆ ನೀಡಲಾಗುವುದು. ಕಳೆದ ಒಂದು ವರ್ಷದಲ್ಲಿ ರಾಹುಲ್ ಗಾಂಧಿಯು ವಿಮಾನ, ಹೆಲಿಕಾಪ್ಟರ್ ಮತ್ತು ಕಾರಿನಲ್ಲಿ ದೇಶದ ಕೆಲವು ಸ್ಥಳಗಳಿಗೆ ಭೇಟಿಕೊಟ್ಟು ಒಂದಿಬ್ಬರು ಗುಡಿಸಲುವಾಸಿಗಳೊಡನೆ ಕ್ಯಾಮೆರಾಗಳಿಗೆ ಪೋಸು ಕೊಟ್ಟು ಹಾದಿಬದಿಯ ಡಾಬಾವೊಂದರಲ್ಲಿ ಚಾಯ್ ಕುಡಿದದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಕೊಡಲಾಗುವುದು. ಈ ಬಗ್ಗೆ ಪ್ರಕಟಣೆ ಹೊರಬೀಳುತ್ತಲೇ ರಾಹುಲ್‌ನನ್ನು ಮುತ್ತಿಕೊಂಡ ಪತ್ರಕರ್ತೆಯರೊಡನೆ ಮಾತನಾಡುತ್ತ ರಾಹುಲ್, 'ಈ ಪ್ರಶಸ್ತಿಗೆ ನನಗಿಂತ ನನ್ನ ಅಕ್ಕ ಹೆಚ್ಚುಅರ್ಹಳು. ಗೀತೋಪದೇಶೋಪದೇಶದ ಮೂಲಕ ರಾಷ್ಟ್ರಾದ್ಯಂತ ಭಾವೈಕ್ಯತೆಯ ಮಿಂಚಿನ ಸಂಚಾರ ಉಂಟುಮಾಡಿದ್ದಾಳೆ ಆಕೆ" ಎಂದಿದ್ದಾರೆ. ರಾಹುಲ್‌ನ ಈ ವಿನಯಪೂರ್ಣ ಮಾತಿಗಾಗಿ ಆತನಿಗೆ ಈ ಸಲದ ಇಂದಿರಾಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯನ್ನೂ ಕೊಡತಕ್ಕದ್ದೆಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ತೇಜಸ್ವಿನಿಯ ಮನಸ್ವಿ ಹೇಳಿಕೆಗಳು

ಡಿಕೆಶಿ ನನ್ನ ಗೆಲುವಿಗೆ ಶ್ರಮಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸುವ ಮೂಲಕ ತಮ್ಮ ಮತ್ತು ಡಿಕೆಶಿ ನಡುವಿನ ವೈಮನಸ್ಯಕ್ಕೆ ಸಂಸದೆ ತೇಜಸ್ವಿನಿಗೌಡ ಅವರು ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ರೀತಿ ಹೇಳಿಕೆ ನೀಡಿದ ತೇಜಸ್ವಿನಿ ಮುಂದುವರಿದು, "ನನ್ನ ಗೆಲುವಿಗಾಗಿ ಶ್ರಮಿಸುವಂತೆ ರಾಜ್ಯದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರಿಗೂ ದೇಶಪಾಂಡೆ ಆದೇಶ ನೀಡಲಿದ್ದಾರೆ, ನನ್ನ ಪರವಾಗಿ ಸೋನಿಯಾಜಿ, ರಾಹುಲ್‌ಜಿ, ಪ್ರಿಯಾಂಕಾಜಿ ಬಂದು ಪ್ರಚಾರ ಭಾಷಣ ಮಾಡಲಿದ್ದಾರೆ, ಸಂಸದೆಯಾಗಿ ನಾನು ಮಾಡಿರುವ ಸಾಧನೆಗಳ ಬಗ್ಗೆ ಬಿಬಿಸಿಯವರು ವಿಶೇಷ ಕಿರುಚಿತ್ರ ತೆಗೆದು ಟಿವಿಯಲ್ಲಿ ತೋರಿಸಲಿದ್ದಾರೆ, ಲಂಡನ್‌ನ "ಕಜ್ಜಿ ನೋವಾ" ವಿಶ್ವವಿದ್ಯಾಲಯವು ನನಗೆ ರೌರವ ಡಾಕ್ಟರೇಟ್ ನೀಡಲಿದೆ,...." ಎಂದೆಲ್ಲ ಬಡಬಡಿಸಿದ್ದಾರೆ. ಇನ್ನೂ ಅವರ ಹೇಳಿಕೆಯು ತುಂಬಾ ಇತ್ತು, ಆದರೆ, ಅಷ್ಟರಲ್ಲಾಗಲೇ ಪತ್ರಕರ್ತರು ಎದ್ದು ಹೊರಟುಹೋಗಿದ್ದರಿಂದಾಗಿ ಅದು ಇಷ್ಟಕ್ಕೇ ನಿಂತಿತು ಎಂದು ಅವರ ಆಪ್ತ ವಲಯದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ನಟರಾಜನಾದ ಶಂಕರ

ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಎಂ.ಎನ್.ವಿದ್ಯಾಶಂಕರ್ ಅವರು ಭರತನಾಟ್ಯ ಪ್ರವೀಣರು ಎಂಬ ಸ್ವಾರಸ್ಯಕರ ಸಂಗತಿ ಬಯಲಾಗಿದೆ. ಪತ್ರಿಕಾಗೋಷ್ಠಿಗಳಲ್ಲಿ ಅವರ ಹಾವಭಾವ ಕಂಡು ಅನುಮಾನಗೊಂಡ ಪತ್ರಕರ್ತನೊಬ್ಬ ವಿದ್ಯಾಶಂಕರ್ ಅವರನ್ನು ವಿಚಾರಿಸಿದಾಗ ಅವರೇ ಈ ಸಂಗತಿಯನ್ನು ಹೊರಗೆಡಹಿದ್ದಾರೆ. ಹೈಸ್ಕೂಲ್ ದಿನಗಳಿಂದಲೂ ತಾನು ಭರತನಾಟ್ಯ ಅಭ್ಯಾಸ ಮಾಡಿದುದಾಗಿಯೂ, ವಿದ್ಯಾಭ್ಯಾಸ, ಐಎಎಸ್ ತಯಾರಿ ಮತ್ತು ಉನ್ನತ ಅಧಿಕಾರಿಯಾಗಿ ಆಡಳಿತ ನಿರ್ವಹಣೆ ಈ ಒತ್ತಡಗಳ ದೆಸೆಯಿಂದಾಗಿ ತನಗೆ ನೃತ್ಯ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗಲಿಲ್ಲವೆಂದೂ, ಇಷ್ಟು ವರ್ಷ ತಾನು ಅದುಮಿಟ್ಟುಕೊಂಡ ಆ ಅಭಿಲಾಷೆಯು ಈಗ ಪತ್ರಿಕಾಗೋಷ್ಠಿಗಳಲ್ಲಿ ಆಂಗಿಕ ಅಭಿನಯ ಮತ್ತು ಹಾವಭಾವಗಳ ಮೂಲಕ ಪ್ರಕಟಗೊಳ್ಳುತ್ತಿದೆಯೆಂದೂ ವಿದ್ಯಾಶಂಕರ್ ಅವರು ಹೇಳಿದ್ದಾರೆ. ನೌಕರಿಯಿಂದ ನಿವೃತ್ತಿ ಹೊಂದಿದ ನಂತರ ತಾವು ಭರತನಾಟ್ಯ ಶಾಲೆಯೊಂದನ್ನು ತೆರೆಯಲಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕಿಸ್ಬಾಯಿ ರೋಗ

ಕಿಸ್ಬಾಯಿ ರೋಗ ಎಂಬ ಕಾಯಿಲೆಯು ದೇಶಾದ್ಯಂತ ವ್ಯಾಪಕವಾಗಿ ಹಬ್ಬಿದೆಯೆಂದು ಭಾರತೀಯ ವೈದ್ಯಕೀಯ ಮಂಡಳಿಯು ತನ್ನ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಚುನಾವಣಾ ಸಮಯದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಈ ರೋಗವು ಪುಢಾರಿಗಳಿಗೆ ಮಾತ್ರ ತಗುಲಿಕೊಳ್ಳುತ್ತದೆ. ಈ ರೋಗಪೀಡಿತರು ಸದಾಕಾಲ ಬಾಯಿ ಕಿಸಿದುಕೊಂಡೇ ಇರುತ್ತಾರೆ. ಮತದಾನ ಮುಗಿದ ತಕ್ಷಣ ಈ ಕಾಯಿಲೆಯು ತಂತಾನೇ ಹೇಳಹೆಸರಿಲ್ಲದಂತೆ ಮಾಯವಾಗಿಬಿಡುತ್ತದೆ. ದೇಶದಲ್ಲಿ ಎಲ್ಲೋ ಕೆಲವರಿಗೆ ಮಾತ್ರ ಕಿಸ್ಬಾಯಿ ರೋಗವು ಸದಾಕಾಲ ಇರುತ್ತದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಸದಾನಂದ ಗೌಡರು ಅಂಥವರಲ್ಲೊಬ್ಬರು. ರೋಗಿಗಳಿಗೆ ಈ ಕಾಯಿಲೆಯಿಂದ ಏನೂ ನಷ್ಟವಿಲ್ಲ, ಬದಲಾಗಿ ಲಾಭವಾಗುವ ಸಾಧ್ಯತೆ ಇದೆ! ಆದರೆ, ಕಿಸ್ಬಾಯಿ ರೋಗಿಗಳ ಎದುರಿರುವವರು ಮಾತ್ರ ಮೋಸವೆಂಬ ಹಾನಿಗೊಳಗಾಗುವ ಸಂಭವವಿದೆ ಎಂದು ವೈದ್ಯಕೀಯ ಮಂಡಳಿಯು ಎಚ್ಚರಿಸಿದೆ.

ಗೌಡರ ಮುದ್ದೆ

ಹಿಂದಿ ಭಾಷೆಯ ಅಜ್ಞಾನದಿಂದಾಗಿ ದೇವೇಗೌಡರು ಮುಜುಗರಕ್ಕೊಳಗಾದ ಪ್ರಕರಣ ಉತ್ತರಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ. ತೃತೀಯ ರಂಗದ ಚುನಾವಣಾ ಪ್ರಚಾರಕ್ಕಾಗಿ ಯು.ಪಿ.ಗೆ ಹೋಗಿದ್ದ ಗೌಡರು ಅಲ್ಲಿನ ಗ್ರಾಮವೊಂದರ ಸಭೆಯಲ್ಲಿ ಭಾಗವಹಿಸಿದ್ದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷನು ತನ್ನ ಭಾಷಣದಲ್ಲಿ, 'ಹಮಾರೇ ಸಾಮ್ನೆ ಅತ್ಯಂತ್ ಪ್ರಮುಖ್ ಮುದ್ದೆ ಹೈ.." ಎಂದಾಕ್ಷಣ ದೇವೇಗೌಡರು, "ಹೌದಾ? ಎಲ್ಲದೆ, ತತ್ತಾ, ಎಂದು ಕೈಚಾಚಿದರೆಂದು ವರದಿಯಾಗಿದೆ. ಇದರಿಂದಾಗಿ ಕಕ್ಕಾಬಿಕ್ಕಿಯಾದ ಆ ಹಳ್ಳಿಗನು ಒಂದು ಕ್ಷಣ ಏನೂ ತೋಚದೇ ಸುಮ್ಮನೆ ನಿಂತುಬಿಟ್ಟ. ಕೂಡಲೇ ಮಧ್ಯಪ್ರವೇಶಿಸಿದ ವೈ.ಎಸ್.ವಿ.ದತ್ತ ಉಭಯರಿಗೂ ಅರ್ಥ ವಿವರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸಭೆಯ ನಂತರ ತಮ್ಮತಮ್ಮೊಳಗೇ ದೇವೇಗೌಡರನ್ನು ಗೇಲಿಮಾಡಿ ಮಾತಾಡಿಕೊಳ್ಳುತ್ತಿದ್ದ ಪತ್ರಕರ್ತರತ್ತ ಧಾವಿಸಿದ ದತ್ತ, 'ಹಿಂದಿ ಭಾಷಿಕರಾದ ನೀವೇನು ಬಹುಭಾಷಾಪಂಡಿತರೇ? ಗೌಡ ಅನ್ನುವ ಬದಲು ನಿಮ್ಮಲ್ಲನೇಕರು ಘೋಡಾ ಅನ್ನುತ್ತೀರಲ್ಲ!" ಎಂದು ದಬಾಯಿಸಿ ಪತ್ರಕರ್ತರ ಬಾಯಿಮುಚ್ಚಿಸಿದ್ದಾಗಿ ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+